
ನವದೆಹಲಿ, ಜನವರಿ 18: ಕೇಂದ್ರ ಸರ್ಕಾರಿ ನೌಕರರಿಗೆ ಖುಷಿಯ ಸುದ್ದಿ ಇದು. ಒಂದೇ ಅಕೌಂಟ್ನಲ್ಲಿ ಬ್ಯಾಂಕಿಂಗ್, ಇನ್ಷೂರೆನ್ಸ್ ಮತ್ತು ಕಾರ್ಡ್ ಸಂಬಂಧಿತ ಅನುಕೂಲಗಳು ಒಟ್ಟಿಗೆ ಲಭ್ಯ ಇರುವ ಸಮಗ್ರ ಸ್ಯಾಲರ್ ಅಕೌಂಟ್ ಪ್ಯಾಕೇಜ್ ಅನ್ನು ಸರಕಾರ ಬಿಡುಗಡೆ ಮಾಡಿದೆ. ನೌಕರರ ಹಣಕಾಸು ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸಲು ಸ್ಯಾಲರಿ ಅಕೌಂಟ್ ಪ್ಯಾಕೇಜ್ ಅನ್ನು ಜಾರಿಗೆ ತರುವಂತೆ ಸರ್ಕಾರ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ತಿಳಿಸಿದೆ.
ಕೇಂದ್ರ ಸರ್ಕಾರಿ ಉದ್ಯೋಗಿಗಳ ಸ್ಯಾಲರಿ ಅಕೌಂಟ್ಗಳು ಎಸ್ಬಿಐ, ಯುಬಿಐ, ಪಿಎನ್ಬಿ ಇತ್ಯಾದಿ ಸರ್ಕಾರಿ ಬ್ಯಾಂಕುಗಳಲ್ಲೇ ಇರುತ್ತವೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಹಣಕಾಸು ಸೇವೆಗಳ ಇಲಾಖೆ (ಡಿಎಫ್ಎಸ್) ಈ ಸರ್ಕಾರಿ ಬ್ಯಾಂಕುಗಳಿಗೆ ಸ್ಯಾಲರಿ ಅಕೌಂಟ್ ಪ್ಯಾಕೇಜ್ ಸೌಲಭ್ಯ ಒದಗಿಸುವಂತೆ ತಿಳಿಸಿದೆ. ಕೇಂದ್ರ ಸರ್ಕಾರಿ ಸಂಸ್ಥೆಗಳ ಎ, ಬಿ ಮತ್ತು ಸಿ ಕೇಡರ್ಗಳ ಎಲ್ಲಾ ಉದ್ಯೋಗಿಗಳಿಗೂ ಈ ಸೌಲಭ್ಯ ಸಿಗುತ್ತದೆ.
ಇದನ್ನೂ ಓದಿ: ಗ್ರೀನ್ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ?
ಈ ಕಾಂಪೊಸಿಟ್ ಸ್ಯಾಲರಿ ಅಕೌಂಟ್ ಪ್ಯಾಕೇಜ್ನಲ್ಲಿ ವಿವಿಧ ಸೌಲಭ್ಯಗಳು ಒಳಗೊಂಡಿವೆ. ಝೀರೋ ಬ್ಯಾಲನ್ಸ್ ಅಕೌಂಟ್, ಆರ್ಟಿಜಿಎಸ್, ನೆಫ್ಟ್, ಯುಪಿಐ ಮೂಲಕ ಉಚಿತ ರೆಮಿಟೆನ್ಸ್ (ವಿದೇಶದಿಂದ ಭಾರತಕ್ಕೆ ಹಣ ರವಾನೆ) ಇತ್ಯಾದಿ ಇದರಲ್ಲಿ ಸೇರಿರುತ್ತವೆ. ಹೌಸಿಂಗ್ ಲೋನ್, ಎಜುಕೇಶನ್ ಲೋನ್, ವೆಹಿಕಲ್ ಲೋನ್ ಮತ್ತು ಪರ್ಸನಲ್ ಲೋನ್ಗಳಲ್ಲಿ ರಿಯಾಯಿತಿ ದರದ ಬಡ್ಡಿ, ಹಾಗು, ಲೋನ್ ಪ್ರೋಸಸಿಂಗ್ ಶುಲ್ಕದಲ್ಲಿ ಇಳಿಕೆ, ಲಾಕರ್ ಬಾಡಿಗೆಯಲ್ಲಿ ವಿನಾಯಿತಿ, ಫ್ಯಾಮಿಲಿ ಬ್ಯಾಂಕಿಂಗ್ ಸೌಲಭ್ಯ ಇತ್ಯಾದಿಯು ಸರ್ಕಾರಿ ನೌಕರರಿಗೆ ಸಿಗುತ್ತದೆ.
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ನೀಡಲಾಗುವ ಸ್ಯಾಲರಿ ಅಕೌಂಟ್ ಪ್ಯಾಕೇಜ್ನಲ್ಲಿ ಪರ್ಸನಲ್ ಆಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ 1.5 ಕೋಟಿ ರೂವರೆಗೆ ಇರುತ್ತದೆ. ಏರ್ ಆ್ಯಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ 2 ಕೋಟಿ ರೂವರೆಗೂ ಇರುತ್ತದೆ. ಅಷ್ಟೇ ಅಲ್ಲ, 20 ಲಕ್ಷ ರೂವರೆಗೆ ಟರ್ಮ್ ಲೈಫ್ ಇನ್ಷೂರೆನ್ಸ್ ಪ್ರೊಟೆಕ್ಷನ್ ಕೂಡ ಇರುತ್ತದೆ. ಇದಕ್ಕಿಂತ ಹೆಚ್ಚಿನ ಕವರೇಜ್ ಬೇಕೆಂದರೆ ಕಡಿಮೆ ಪ್ರೀಮಿಯಮ್ಗಳ ಅವಕಾಶವೂ ಇರುತ್ತದೆ. ಹೆಲ್ತ್ ಇನ್ಷೂರೆನ್ಸ್ ಕವರೇಜ್ ಕೂಡ ಇರುತ್ತದೆ.
ಇದನ್ನೂ ಓದಿ: ಸದ್ದಿಲ್ಲದೆ ಟ್ರಂಪ್ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ
ಡಿಜಿಟಲ್ ಹಾಗೂ ಕಾರ್ಡ್ ಸಂಬಂಧಿತ ಫೀಚರ್ಗಳೂ ಈ ಸ್ಯಾಲರಿ ಅಕೌಂಟ್ ಪ್ಯಾಕೇಜ್ನಲ್ಲಿ ಒಳಗೊಂಡಿವೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬೆನಿಫಿಟ್, ಏರ್ಪೋರ್ಟ್ ಲಾಂಜ್, ರಿವಾರ್ಡ್, ಕ್ಯಾಷ್ಬ್ಯಾಕ್, ಝೀರೋ ಮೈಂಟೆನೆನ್ಸ್ ಫೀ ಇತ್ಯಾದಿ ನಾನಾ ರಿಯಾಯಿತಿ, ಸೌಲಭ್ಯಗಳು ಸಿಗುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ