
ಚೆನ್ನೈ, ನವೆಂಬರ್ 28: ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಂಬಳ, ಬೋನಸ್ ಅಲ್ಲದೆ ಇನ್ನೂ ಕೆಲ ಪ್ರೋತ್ಸಾಹಕಗಳನ್ನು ನೀಡುವುದುಂಟು. ಕೆಲವರಿಗೆ ಕಾರುಗಳ ಗಿಫ್ಟ್ ಸಿಗುತ್ತದೆ, ಕೆಲವರಿಗೆ ಬೈಕುಗಳು ಸಿಗುತ್ತವೆ, ಕೆಲವರಿಗೆ ಚಿನ್ನದ ನಾಣ್ಯಗಳು ಉಡುಗೊರೆಯಾಗಿ ಸಿಗಬಹುದು. ಚೆನ್ನೈ ಮೂಲದ ಕೆಸಗ್ರ್ಯಾಂಡ್ (Casagrand) ಎನ್ನುವ ರಿಯಲ್ ಎಸ್ಟೇಟ್ ಡೆವಲಪರ್ ಕಂಪನಿಯು ಉದ್ಯೋಗಿಗಳಿಗೆ ಫಾರೀನ್ ಟ್ರಿಪ್ ಕಳುಹಿಸುತ್ತಿದೆ. ಹತ್ತೋ ಇಪ್ಪತ್ತೋ ಅಲ್ಲ, ಬರೋಬ್ಬರಿ 1,000 ಉದ್ಯೋಗಿಗಳನ್ನು ಒಂದು ವಾರ ಕಾಲ ಲಂಡನ್ಗೆ ಪ್ರವಾಸಕ್ಕೆ ಕಳುಹಿಸುತ್ತಿದೆ ಕಂಪನಿ.
ಕೆಸಗ್ರ್ಯಾಂಡ್ ಕಂಪನಿಯ ವಾರ್ಷಿಕ ಆದಾಯ ಹಂಚಿಕೆಯ ಭಾಗವಾಗಿ ಪ್ರತೀ ವರ್ಷವೂ ಉದ್ಯೋಗಿಗಳಿಗೆ ಈ ರೀತಿ ಗಿಫ್ಟ್ಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆಯಂತೆ. ಫಾರೀನ್ ಟ್ರಿಪ್ಗಳಿಗೆ ಕಳುಹಿಸುವುದೂ ಇದರ ಒಂದು ಭಾಗ. ಇಲ್ಲಿಯವರೆಗೆ ಈ ಕಂಪನಿಯ 6,000ಕ್ಕಿಂತ ಹೆಚ್ಚಿನ ಉದ್ಯೋಗಿಗಳು ಸಿಂಗಾಪುರ್, ಥಾಯ್ಲೆಂಡ್, ಮಲೇಷ್ಯಾ, ದುಬೈ, ಸ್ಪೇನ್ ಮೊದಲಾದ ದೇಶಗಳಿಗೆ ಪ್ರವಾಸ ಹೋಗಿ ಬಂದಿದ್ದಾರಂತೆ.
ಇದನ್ನೂ ಓದಿ: 4 ವರ್ಷದಿಂದ ನಂಬಿಸಿ, ಗೊತ್ತೇ ಆಗದಂತೆ 35 ಕೋಟಿ ರೂ ಎಗರಿಸಿಯೇ ಬಿಟ್ಟರು ಷೇರುಲೋಕದ ಖದೀಮರು
ಕಂಪನಿಯ ಏಳ್ಗೆಗಾಗಿ ಶ್ರಮಿಸಿದ ಕೆಲಸಗಾರರನ್ನು ಪ್ರತೀ ವರ್ಷ ಅವರಿಗೆ ಇಷ್ಟವಾಗುವ ರೀತಿಯಲ್ಲಿ ಖುಷಿಪಡಿಸುವುದು ಕೆಸಗ್ರ್ಯಾಂಡ್ನ ಗುರಿ ಎಂದು ಈ ಕಂಪನಿಯ ಸಂಸ್ಥಾಪಕರಾದ ಅರುಣ್ ಎಂಎನ್ ಹೇಳುತ್ತಾರೆ. ಈ ವರ್ಷ 1,000 ಉದ್ಯೋಗಿಗಳಿಗೆ ಆಯೋಜಿಸಲಾಗಿರುವ ಲಂಡನ್ ಟ್ರಿಪ್ನ ಸಂಪೂರ್ಣ ಖರ್ಚುವೆಚ್ಚವೆಲ್ಲಾ ಕಂಪನಿಯದ್ದೇ ಆಗಿದೆ.
ಈ ಟ್ರಿಪ್ ಆಯೋಜಿಸಲು ಒಂದು ತಂಡವೇ ತಿಂಗಳುಕಾಲ ಪ್ಲಾನಿಂಗ್ ಮಾಡಿದೆ. ಪ್ರಮುಖ ಏರ್ಲೈನ್ ಕಂಪನಿಗಳು, ಹೋಟೆಲ್ಗಳೊಂದಿಗೆ ಪಾರ್ಟ್ನರ್ಶಿಪ್ ಮಾಡಿಕೊಂಡಿದೆ.
ಭಾರತ ಹಾಗೂ ದುಬೈನಲ್ಲಿ ಕೆಲಸ ಮಾಡುತ್ತಿರುವ ಕಂಪನಿಯ ಉದ್ಯೋಗಿಗಳು ಈ ಟ್ರಿಪ್ಗೆ ಹೋಗುತ್ತಿದ್ದಾರೆ. ಅನೇಕರಿಗೆ ಇದು ಮೊದಲ ಫಾರೀನ್ ಟ್ರಿಪ್ ಅಂತೆ.
ಇದನ್ನೂ ಓದಿ: ಇದೇ ಮೊದಲ ಬಾರಿಗೆ 86,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಷೇರು ಮಾರುಕಟ್ಟೆಯ ಪಾಸಿಟಿವ್ ಓಟಕ್ಕೆ ಕಾರಣಗಳಿವು
ಕೆಸಗ್ರ್ಯಾಂಡ್ 2003ರಲ್ಲಿ ಸ್ಥಾಪನೆಯಾದ ರಿಯಲ್ ಎಸ್ಟೇಟ್ ಕಂಪನಿ. ಚೆನ್ನೈನಲ್ಲಿ ಮುಖ್ಯಕಚೇರಿ ಹೊಂದಿರುವ ಇದು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಅಪಾರ್ಟ್ಮೆಂಟ್, ಪ್ಲಾಟ್, ವಿಲ್ಲಾಗಳನ್ನು ನಿರ್ಮಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ