ಚೆನ್ನೈನಲ್ಲಿ ಮಹಾಮಳೆ; ಐಫೋನ್ ಅಸೆಂಬ್ಲಿಂಗ್ ನಿಲ್ಲಿಸಿದ ಫಾಕ್ಸ್​ಕಾನ್, ಪೆಗಾಟ್ರಾನ್

|

Updated on: Dec 06, 2023 | 11:10 AM

iPhone manufacturing halted in Chennai: ಚೆನ್ನೈನಲ್ಲಿ ಚಂಡಮಾರುತದ ಪರಿಣಾಮ ಭಾರೀ ಮಳೆ ಬರುತ್ತಿರುವ ಪರಿಣಾಮ ಅಲ್ಲಿನ ಔದ್ಯಮಿಕ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿವೆ. ಆ್ಯಪಲ್​ನ ಐಫೋನ್ ತಯಾರಿಸುವ ಫಾಕ್ಸ್​ಕಾನ್ ಮತ್ತು ಪೆಗಾಟ್ರಾನ್ ಸಂಸ್ಥೆಗಳು ತಮ್ಮ ಚೆನ್ನೈ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಿವೆ. ಪೆಗಾಟ್ರಾನ್ ಬೆಂಕಿ ಅವಘಡದಿಂದಾಗಿ ಸೆಪ್ಟೆಂಬರ್​ನಲ್ಲಿಯೂ ಐಫೋನ್ ತಯಾರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಿತ್ತು.

ಚೆನ್ನೈನಲ್ಲಿ ಮಹಾಮಳೆ; ಐಫೋನ್ ಅಸೆಂಬ್ಲಿಂಗ್ ನಿಲ್ಲಿಸಿದ ಫಾಕ್ಸ್​ಕಾನ್, ಪೆಗಾಟ್ರಾನ್
ಐಫೋನ್ ತಯಾರಿಕೆ
Follow us on

ಚೆನ್ನೈ, ಡಿಸೆಂಬರ್ 6: ಚೆನ್ನೈನಲ್ಲಿ ಚಂಡಮಾರುತದ (cyclone) ಪರಿಣಾಮ ಭಾರೀ ಮಳೆ ಬರುತ್ತಿರುವ ಪರಿಣಾಮ ಅಲ್ಲಿನ ಔದ್ಯಮಿಕ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿವೆ. ಇಲ್ಲಿನ ಎರಡು ಐಫೋನ್ ತಯಾರಕಾ ಸಂಸ್ಥೆಗಳ ಘಟಕಗಳು (iPhone manufacturing units) ತಾತ್ಕಾಲಿಕವಾಗಿ ನಿಂತಿವೆ. ತೈವಾನ್ ಮೂಲದ ಫಾಕ್ಸ್​ಕಾನ್ ಮತ್ತು ಪೆಗಾಟ್ರಾನ್ ಸಂಸ್ಥೆಗಳು ಚೆನ್ನೈನಲ್ಲಿ ಐಫೋನ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿವೆ. ಪ್ರವಾಹ ಪರಿಸ್ಥಿತಿ ಸುಧಾರಿಸಿ ಉದ್ಯೋಗಿಗಳು ಕೆಲಸಕ್ಕೆ ಬರಲು ಸಾಧ್ಯವಾಗುವವರೆಗೂ ಘಟಕಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.

ಭಾರತದಲ್ಲಿ ಮೂರು ಕಂಪನಿಗಳು ಆ್ಯಪಲ್​ಗಾಗಿ ಐಫೋನ್ ತಯಾರಿಸಿಕೊಡುತ್ತವೆ. ಅದರಲ್ಲಿ ಫಾಕ್ಸ್​ಕಾನ್ ಮತ್ತು ಪೆಗಾಟ್ರಾನ್ ತೈವಾನ್ ಮೂಲದ ಕಂಪನಿಗಳಾಗಿದ್ದು ಎರಡೂ ಕೂಡ ಚೆನ್ನೈನಲ್ಲಿ ಘಟಕ ಹೊಂದಿವೆ. ವಿಸ್ಟ್ರಾನ್ ಕೂಡ ಐಫೋನ್ ತಯಾರಿಸುತ್ತಿತ್ತು. ಕೋಲಾರದಲ್ಲಿ ವಿಸ್ಟ್ರಾನ್ ಘಟಕ ಇದೆ. ಇತ್ತೀಚೆಗೆ ಟಾಟಾ ಗ್ರೂಪ್ ಈ ಘಟಕವನ್ನು ಮತ್ತು ಐಫೋನ್ ತಯಾರಿಕೆಯ ಬಿಸಿನೆಸ್ ಅನ್ನು ವಿಸ್ಟ್ರಾನ್​ನಿಂದ ಖರೀದಿಸಿದೆ.

ಇದನ್ನೂ ಓದಿ: Bengaluru Airport: ಹೆಚ್ಚಿನ ಭಾರತೀಯ ವಿಮಾನ ನಿಲ್ದಾಣಗಳು ನಷ್ಟದಲ್ಲಿ; ಬೆಂಗಳೂರು ಏರ್ಪೋರ್ಟ್ ಅತಿಹೆಚ್ಚು ಲಾಭದಾಯಕ

ಫಾಕ್ಸ್​ಕಾನ್ ಐಫೋನ್ ತಯಾರಿಸುವ ಅತಿದೊಡ್ಡ ಸಂಸ್ಥೆ. ಚೆನ್ನೈನ ಇದರ ಘಟಕಗಳಲ್ಲಿ 35,000 ಮಂದಿ ಕೆಲಸ ಮಾಡುತ್ತಾರೆ. ಇನ್ನು ಪೆಗಾಟ್ರಾನ್ ಕೂಡ ದೊಡ್ಡ ಸಂಸ್ಥೆಯಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಹೊಂದಿದೆ. ಇತ್ತೀಚಿನ ತಿಂಗಳಲ್ಲಿ ಪೆಟಾಟ್ರಾನ್ ಕೆಲಸ ಸ್ಥಗಿತಗೊಂಡಿದ್ದು ಇದು ಎರಡನೇ ಬಾರಿ. ಸೆಪ್ಟೆಂಬರ್ ತಿಂಗಳಲ್ಲಿ ಘಟಕದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐಫೋನ್ ತಯಾರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಇದೀಗ ಚೆನ್ನೈನ ಚಂಡಮಾರುತ ಮತ್ತು ಮಹಾಮಳೆಯ ಪರಿಣಾಮ ಐಫೋನ್ ಉತ್ಪಾದನೆ ನಿಂತಿದೆ. ಇದರಿಂದ ಈ ಎರಡೂ ಕಂಪನಿಗಳಿಗೆ ಎಷ್ಟು ನಷ್ಟ ಆಗುತ್ತದೆ ಎಂಬ ಮಾಹಿತಿ ತಿಳಿದುಬಂದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ