ಅದಾನಿ ಗ್ರೂಪ್ ಕಂಪನಿಗಳಿಗೆ ಷೇರುಪೇಟೆಯಲ್ಲಿ ಸುಗ್ಗಿ; ವಿಶ್ವ ಶ್ರೀಮಂತರ ಟಾಪ್15 ಪಟ್ಟಿಯಲ್ಲಿ ಗೌತಮ್ ಅದಾನಿ

Gautam Adani Wealth Increase: ಇತ್ತೀಚಿನ ದಿನಗಳಲ್ಲಿ ಅದಾನಿ ಗ್ರೂಪ್​ನ ಕಂಪನಿಗಳು ಷೇರುಪೇಟೆಯಲ್ಲಿ ಭರ್ಜರಿ ಬೇಡಿಕೆ ಗಿಟ್ಟಿಸಿವೆ. ಗೌತಮ್ ಅದಾನಿ ಷೇರುಸಂಪತ್ತು ಭರ್ಜರಿಯಾಗಿ ಏರಿದ್ದು ವಿಶ್ವಶ್ರೀಮಂತರ ಪಟ್ಟಿಯಲ್ಲಿ 15-16ನೇ ಸ್ಥಾನಕ್ಕೆ ಏರಿದ್ದಾರೆ. ಒಂದು ವರ್ಷದ ಹಿಂದೆ ವಿಶ್ವದ ಟಾಪ್-3 ಶ್ರೀಮಂತರಲ್ಲಿ ಒಬ್ಬರೆನಿಸಿದ್ದ ಗೌತಮ್ ಅದಾನಿ ಹಿಂಡನ್ಬರ್ಗ್ ವರದಿ ಬಳಿಕ 35ನೇ ಸ್ಥಾನಕ್ಕೆ ಕುಸಿದಿದ್ದರು.

ಅದಾನಿ ಗ್ರೂಪ್ ಕಂಪನಿಗಳಿಗೆ ಷೇರುಪೇಟೆಯಲ್ಲಿ ಸುಗ್ಗಿ; ವಿಶ್ವ ಶ್ರೀಮಂತರ ಟಾಪ್15 ಪಟ್ಟಿಯಲ್ಲಿ ಗೌತಮ್ ಅದಾನಿ
ಗೌತಮ್ ಅದಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 06, 2023 | 12:52 PM

ಬೆಂಗಳೂರು, ಡಿಸೆಂಬರ್ 6: ಕಳೆದ ಒಂದು ವಾರದಿಂದ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಕಂಪನಿಗಳಿಗೆ (Adani Group) ಭರ್ಜರಿ ಸುಗ್ಗಿ ಆಗುತ್ತಿದೆ. ಅದರ ಪರಿಣಾಮವಾಗಿ ಗೌತಮ್ ಅದಾನಿ ಷೇರುಸಂಪತ್ತು (Gautam Adani wealth) ಮತ್ತೆ ಅತೀವವಾಗಿ ಏರತೊಡಗಿದೆ. ಕೆಲ ತಿಂಗಳ ಹಿಂದೆ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 30 ಆಸುಪಾಸಿನ ಸ್ಥಾನದಲ್ಲಿದ್ದ ಅದಾನಿ ಈಗ ಟಾಪ್ 20ಗೆ ಲಗ್ಗೆ ಇಟ್ಟಿದ್ದಾರೆ. ಹಿಂಡನ್ಬರ್ಗ್ ವರದಿಯನ್ನು ಅಮೆರಿಕ ಸರ್ಕಾರ ಉಪೇಕ್ಷಿಸಿದೆ ಎಂಬಂತಹ ಸುದ್ದಿ ಬಂದ ಬಳಿಕ ಅದಾನಿ ಕಂಪನಿಗಳ ಷೇರು ಮೌಲ್ಯ ಹೆಚ್ಚಳ ಇನ್ನಷ್ಟು ವೇಗ ಪಡೆದುಕೊಂಡಿದೆ. ವಿಶ್ವ ಶ್ರೀಮಂತರ ಫೋರ್ಬ್ಸ್ ಪಟ್ಟಿ ಪ್ರಕಾರ ಗೌತಮ್ ಅದಾನಿ 16ನೇ ಸ್ಥಾನದಲ್ಲಿದ್ದಾರೆ. ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಏರಿದ್ದಾರೆ. ಭಾರತದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿ ಅವರ ಷೇರುಸಂಪತ್ತಿಗೆ ಸಮೀಪವೇ ಹೋಗಿದ್ದಾರೆ ಅದಾನಿ. ಇವತ್ತೂ ಕೂಡ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಹೆಚ್ಚಿನ ಬೆಲೆಗೆ ಬಿಕರಿಯಾಗತೊಡಗಿವೆ.

ರಿಯಲ್​ಟೈಮ್ ಫೋರ್ಬ್ಸ್ ಪಟ್ಟಿ ಪ್ರಕಾರ ಗೌತಮ್ ಅದಾನಿ ಅವರ ಷೇರುಸಂಪತ್ತು ಡಿಸೆಂಬರ್ 6, ಮಧ್ಯಾಹ್ನದಂದು 76 ಬಿಲಿಯನ್ ಡಾಲರ್ ಇತ್ತು. ಪಟ್ಟಿಯಲ್ಲಿ ಅವರು 16ನೇ ಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ 96 ಬಿಲಿಯನ್ ಡಾಲರ್​ನೊಂದಿಗೆ 14ನೇ ಸ್ಥಾನದಲ್ಲಿದ್ದಾರೆ. ಫ್ರಾಂಕಾಯ್ಸ್ ಮೆಯೆರ್ಸ್ ಕುಟುಂಬ 94 ಬಿಲಿಯನ್ ಡಾಲರ್​ನೊಂದಿಗೆ ಅದಾನಿಗಿಂತ ಒಂದು ಸ್ಥಾನ ಮೇಲಿದ್ದಾರೆ.

ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಸೆಬಿ 25 ಕೋಟಿ ರೂ ದಂಡ ವಿಧಿಸಿದ್ದು ಯಾಕೆ? ಕೋರ್ಟ್ ಇದನ್ನು ರದ್ದು ಮಾಡಿದ್ದು ಯಾಕೆ?

ಇನ್ನು, ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಪಟ್ಟಿ ಪ್ರಕಾರ ಮುಕೇಸ್ ಅಂಬಾನಿ 91.4 ಬಿಲಿಯನ್ ಡಾಲರ್ ಷೇರುಸಂಪತ್ತಿನೊಂದಿಗೆ 13ನೇ ಸ್ಥಾನದಲ್ಲಿದ್ದಾರೆ. ಅಮಾನ್ಷಿಯೋ ಆರ್ಟೆಗಾ 83.6 ಬಿಲಿಯನ್ ಡಾಲರ್ ಹಾಗೂ ಗೌತಮ್ ಅದಾನಿ 82.5 ಬಿಲಿಯನ್ ಡಾಲರ್​ನೊಂದಿಗೆ ಕ್ರಮವಾಗಿ 14 ಮತ್ತು 15ನೇ ಸ್ಥಾನದಲ್ಲಿದ್ದಾರೆ. ಆರ್ಟೆಗಾ ಮತ್ತು ಅದಾನಿ ಷೇರುಸಂಪತ್ತಿನ ಮಧ್ಯೆ ಅಷ್ಟೇನೂ ವ್ಯತ್ಯಾಸ ಇಲ್ಲ. ಒಂದೆರಡು ದಿನದಲ್ಲಿ ಅದಾನಿ 14ನೇ ಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ.

ಫೋರ್ಬ್ಸ್ ಶ್ರೀಮಂತರ ಪಟ್ಟಿ

  1. ಇಲಾನ್ ಮಸ್ಕ್: 244.3 ಬಿಲಿಯನ್ ಡಾಲರ್
  2. ಬರ್ನಾರ್ಡ್ ಆರ್ನಾಲ್ಟ್: 191.3 ಬಿಲಿಯನ್ ಡಾಲರ್
  3. ಜೆಫ್ ಬೇಜೋಸ್: 169.2 ಬಿಲಿಯನ್ ಡಾಲರ್
  4. ಲ್ಯಾರಿ ಎಲಿಸನ್: 144.6 ಬಿಲಿಯನ್ ಡಾಲರ್
  5. ವಾರನ್ ಬಫೆಟ್: 117.9 ಬಿಲಿಯನ್ ಡಾಲರ್
  6. ಬಿಲ್ ಗೇಟ್ಸ್: 116.8 ಬಿಲಿಯನ್ ಡಾಲರ್
  7. ಮಾರ್ಕ್ ಜುಕರ್ಬರ್ಗ್: 112.8 ಬಿಲಿಯನ್ ಡಾಲರ್
  8. ಸ್ಟೀವ್ ಬಾಲ್ಮರ್: 113.3 ಬಿಲಿಯನ್ ಡಾಲರ್
  9. ಲ್ಯಾರಿ ಪೇಜ್: 110.5 ಬಿಲಿಯನ್ ಡಾಲರ್
  10. ಸೆರ್ಗೇ ಬ್ರಿನ್: 106.1 ಬಿಲಿಯನ್ ಡಾಲರ್
  11. ಕಾರ್ಲಸ್ ಸ್ಲಿಮ್ ಹೆಲು ಕುಟುಂಬ: 98.7 ಬಿಲಿಯನ್ ಡಾಲರ್
  12. ಅಮಾನ್ಷಿಯಾ ಓರ್ಟೆಗಾ: 96.7 ಬಿಲಿಯನ್ ಡಾಲರ್
  13. ಮೈಕೇಲ್ ಬ್ಲೂಂಬರ್ಗ್: 96.3 ಬಿಲಿಯನ್ ಡಾಲರ್
  14. ಮುಕೇಶ್ ಅಂಬಾನಿ: 96 ಬಿಲಿಯನ್ ಡಾಲರ್
  15. ಫ್ರಾಂಕಾಯ್ಸ್ ಬೆಟೆನ್​ಕೋರ್ಟ್ ಮೆಯೆರ್ಸ: 94.7 ಬಿಲಿಯನ್ ಡಾಲರ್
  16. ಗೌತಮ್ ಅದಾನಿ: 76 ಬಿಲಿಯನ್ ಡಾಲರ್

ಇದನ್ನೂ ಓದಿ: ಶ್ರೀಲಂಕಾದಲ್ಲಿ ಅದಾನಿ ಗ್ರೂಪ್​ಗೆ ಧನಸಹಾಯ ಕೊಡುವ ಮುನ್ನ ಹಿಂಡನ್ಬರ್ಗ್ ವರದಿ ಅವಲೋಕಿಸಿದ್ದ ಅಮೆರಿಕದ ಸರ್ಕಾರ

ಬ್ಲೂಮಬರ್ಗ್ ಬಿಲಿಯನೇರ್ಸ್ ಪಟ್ಟಿ

  1. ಇಲಾನ್ ಮಸ್ಕ್: 222 ಬಿಲಿಯನ್ ಡಾಲರ್
  2. ಜೆಫ್ ಬೇಜೋಸ್: 171 ಬಿಲಿಯನ್ ಡಾಲರ್
  3. ಬರ್ನಾರ್ಡ್ ಆರ್ನಾಲ್ಟ್: 169 ಬಿಲಿಯನ್ ಡಾಲರ್
  4. ಬಿಲ್ ಗೇಟ್ಸ್: 134 ಬಿಲಿಯನ್ ಡಾಲರ್
  5. ಲ್ಯಾರಿ ಎಲಿಸನ್: 129 ಬಿಲಿಯನ್ ಡಾಲರ್
  6. ಸ್ಟೀವ್ ಬಾಲ್ಮರ್: 129 ಬಿಲಿಯನ್ ಡಾಲರ್
  7. ವಾರನ್ ಬಫೆಟ್: 119 ಬಿಲಿಯನ್ ಡಾಲರ್
  8. ಲ್ಯಾರಿ ಪೇಜ್: 119 ಬಿಲಿಯನ್ ಡಾಲರ್
  9. ಮಾರ್ಕ್ ಜುಕರ್ಬರ್ಗ್: 115 ಬಿಲಿಯನ್ ಡಾಲರ್
  10. ಸೆರ್ಗೇ ಬ್ರಿನ್: 113 ಬಿಲಿಯನ್ ಡಾಲರ್
  11. ಕಾರ್ಲಸ್ ಸ್ಲಿಮ್: 96.3 ಬಿಲಿಯನ್ ಡಾಲರ್
  12. ಫ್ರಾನ್ಕಾಯ್ಸ್ ಬೆಟೆನ್​ಕೋರ್ಟ್ ಮೆಯೆರ್ಸ್: 94.9 ಬಿಲಿಯನ್ ಡಾಲರ್
  13. ಮುಕೇಶ್ ಅಂಬಾನಿ: 91.4 ಬಿಲಿಯನ್ ಡಾಲರ್
  14. ಅಮಾನ್ಷಿಯೋ ಆರ್ಟೆಗಾ: 83.6 ಬಿಲಿಯನ್ ಡಾಲರ್
  15. ಗೌತಮ್ ಅದಾನಿ: 82.5 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ