ನಮ್ಮ ಮಾರುಕಟ್ಟೆ ರಕ್ಷಿಸುವುದು ಹೇಗಂತ ಗೊತ್ತು; ವಿಶ್ವದ ಅತ್ಯಂತ ಪ್ರಬಲ ಮಹಿಳೆಯಿಂದ ಚೀನಾಗೆ ಎಚ್ಚರಿಕೆ

EU-China Summit 2023: ಚೀನಾ ಮತ್ತು ಯೂರೋಪಿಯನ್ ಯೂನಿಯನ್ ನಡುವಿನ 24ನೇ ಸಭೆ ಚೀನಾದ ಬೀಜಿಂಗ್​ನಲ್ಲಿ ಡಿಸೆಂಬರ್ 7ರಂದು ನಡೆಯಲಿದೆ. ಚೀನಾ ಮತ್ತು ಯೂರೋಪ್ ನಡುವೆ ಭಾರೀ ವ್ಯಾಪಾರ ಅಂತರ ಇರುವುದಕ್ಕೆ ಐರೋಪ್ಯ ಒಕ್ಕೂಟ ಅಸಮಾಧಾನದಲ್ಲಿದೆ. ತಮ್ಮ ಮಾರುಕಟ್ಟೆ ರಕ್ಷಣೆ ಮಾಡುವುದು ಹೇಗೆಂದು ಗೊತ್ತಿದೆ ಎಂದು ಇಯು ಮುಖ್ಯಸ್ಥೆ ಉರ್ಸುಲಾ ಅವರು ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಮಾರುಕಟ್ಟೆ ರಕ್ಷಿಸುವುದು ಹೇಗಂತ ಗೊತ್ತು; ವಿಶ್ವದ ಅತ್ಯಂತ ಪ್ರಬಲ ಮಹಿಳೆಯಿಂದ ಚೀನಾಗೆ ಎಚ್ಚರಿಕೆ
ಉರ್ಸುಲ ವೋನ್ ಡೆರ್ ಲೆಯೆನ್
Follow us
|

Updated on:Dec 06, 2023 | 4:38 PM

ಬೆಲ್ಜಿಯಂ, ಡಿಸೆಂಬರ್ 6: ಚೀನಾದ ಮಾರುಕಟ್ಟೆಯಲ್ಲಿ ವಿದೇಶೀ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ಇಲ್ಲದಿರುವುದು ಬಹಳಷ್ಟು ಪಾಶ್ಚಿಮಾತ್ಯ ದೇಶಗಳಿಗೆ ಇರಿಸುಮುರುಸು ತಂದಿದೆ. ಅದರಲ್ಲೂ ಯೂರೋಪ್ ದೇಶಗಳು ಚೀನಾ ಮಾರುಕಟ್ಟೆ ಪ್ರಾಬಲ್ಯದಿಂದ ಹತಾಶಗೊಂಡಿವೆ. ಈ ವಿಚಾರವು ಮುಂಬರುವ ಚೀನಾ ಮತ್ತು ಐರೋಪ್ಯ ಒಕ್ಕೂಟ (European Union) ವಾರ್ಷಿಕ ಸಭೆಯಲ್ಲಿ ಚರ್ಚೆಗೆ ಬರಲಿದೆ. ಚೀನಾದ ಬೀಜಿಂಗ್​ನಲ್ಲಿ ನಡೆಯಲಿರುವ 24ನೇ ಯೂರೋಪಿಯನ್ ಯೂನಿಯನ್ ಚೀನಾ ಮಹಾಸಭೆಗೆ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಐರೋಪ್ಯ ಒಕ್ಕೂಟದ ಮುಖ್ಯಸ್ಥೆ ಉರ್ಸುಲ ವೋನ್ ಡೆರ್ ಲೆಯೆನ್ (Ursula Von Der Leyen), ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಚೀನಾ ಜೊತೆಗಿನ ವ್ಯಾಪಾರ ಅಸಮತೋಲವನ್ನು ಯೂರೋಪ್ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಜರ್ಮನಿಯ ಮಾಜಿ ಸಚಿವೆಯೂ ಆದ ಉರ್ಸುಲ ಹೇಳಿದ್ದಾರೆ. ಐರೋಪ್ಯ ಒಕ್ಕೂಟದ ದೇಶಗಳು ವ್ಯಾಪಾರ ಸಮರಕ್ಕೆ ಬೀಳುವ ಬದಲು ಸಂಧಾನ ಬಯಸುತ್ತಾರೆ ಎಂದೂ ಯೂರೋಪಿಯನ್ ಕಮಿಷನ್​ನ ಅಧ್ಯಕ್ಷೆಯೂ ಆದ ಅವರು ಹೇಳಿದ್ದಾರೆ.

ಇದನ್ನೂ ಓದಿ: Forbes Most Powerful Women 2023: ನಿರ್ಮಲಾ ಸೀತಾರಾಮನ್ ಭಾರತದ ಅತ್ಯಂತ ಪ್ರಬಲ ಮಹಿಳೆ; ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ವರು ಭಾರತೀಯ ನಾರಿಯರು

ಫೋರ್ಬ್ಸ್ 2023 ಪಟ್ಟಿಯಲ್ಲಿ ವಿಶ್ವದ ಅತ್ಯಂತ ಪ್ರಬಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿರುವ ಉರ್ಸುಲಾ ವಾನ್ ಡರ್, ‘ನಮ್ಮ ಮಾರುಕಟ್ಟೆಯನ್ನು ರಕ್ಷಿಸುವ ಸಾಧನ ನಮ್ಮೊಂದಿಗೆ ಇದೆ. ಆದರೆ, ಸಂಧಾನದ ಮೂಲಕ ಪರಿಹಾರ ಪಡೆಯಲು ಇಚ್ಛಿಸುತ್ತೇವೆ,’ ಎಂದು ಸ್ಪಷ್ಟಪಡಿಸಿದ್ದಾರೆ.

‘ವ್ಯಾಪಾರ ಅಸಮತೋಲನ ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ ಎರಡು ವರ್ಷದಲ್ಲಿ ಈ ಅಸಮತೋಲನ ಎರಡು ಪಟ್ಟು ಹೆಚ್ಚಾಗಿ ಈಗ 400 ಬಿಲಿಯನ್ ಯೂರೋ ತಲುಪಿದೆ… ಈ ವ್ಯಾಪಾರ ಸಂಬಂಧದಲ್ಲಿ ದೀರ್ಘಕಾಲ ಅಸಮತೋಲನವನ್ನು ಐರೋಪ್ಯ ನಾಯಕರು ಒಪ್ಪುವುದಿಲ್ಲ’ ಎಂದು ಉರ್ಸುಲಾ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಅದಾನಿ ಗ್ರೂಪ್ ಕಂಪನಿಗಳಿಗೆ ಷೇರುಪೇಟೆಯಲ್ಲಿ ಸುಗ್ಗಿ; ವಿಶ್ವ ಶ್ರೀಮಂತರ ಟಾಪ್15 ಪಟ್ಟಿಯಲ್ಲಿ ಗೌತಮ್ ಅದಾನಿ

ಚೀನಾ ಪಾಲಿಗೆ ಯೂರೋಪ್ ಮಾರುಕಟ್ಟೆ ಬಹಳ ಮುಖ್ಯ. ಚೀನಾದ ಸಾಕಷ್ಟು ಹೂಡಿಕೆ ಮತ್ತು ರಫ್ತು ಇಲ್ಲಿಗೆ ಹರಿದುಬರುತ್ತವೆ. ನೇರವಾಗಿ ಮತ್ತು ಪರೋಕ್ಷವಾಗಿ ಸರ್ಕಾರದಿಂದ ಸಬ್ಸಿಡಿಗಳನ್ನು ಪಡೆಯುವುದರಿಂದ ಯೂರೋಪಿಯನ್ ಕಂಪನಿಗಳ ಪೈಪೋಟಿಯನ್ನು ಚೀನಾ ಕಂಪನಿಗಳು ಸುಲಭವಾಗಿ ಹಿಮ್ಮೆಟ್ಟಿಸುತ್ತವೆ ಎನ್ನಲಾಗಿದೆ. ಆದರೆ, ಚೀನಾ ಮಾರುಕಟ್ಟೆಯಲ್ಲಿ ಯೂರೋಪಿಯನ್ ಕಂಪನಿಗಳಿಗೆ ಮುಕ್ತ ಸ್ವಾತಂತ್ರ್ಯ ಇಲ್ಲ. ಹೀಗಾಗಿ, ಚೀನಾ ಮತ್ತು ಯೂರೋಪಿಯನ್ ಮಧ್ಯೆ ಭಾರೀ ವ್ಯಾಪಾರ ಅಂತರ (trade imbalance) ಹೆಚ್ಚಲು ಕಾರಣವಾಗಿದೆ. ಭಾರತದ ವಿಚಾರಕ್ಕೂ ಇದೇ ಅನ್ವಯ ಆಗುತ್ತದೆ.

ಡಿಸೆಂಬರ್ 7ರಂದು ಚೀನಾದ ಬೀಜಿಂಗ್​ನಲ್ಲಿ ಯೂರೋಪಿಯನ್ ಯೂನಿಯನ್ ಮತ್ತು ಚೀನಾ ಸಭೆ ನಡೆಯಲಿದೆ. ಇದು 24ನೇ ಸಮಿಟ್ ಆಗಿದೆ. 2019ರ ಬಳಿಕ ಮೊದಲ ಬಾರಿಗೆ ಇದರ ಭಾಗಿದಾರರು ಮುಖತಃ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು. ಮೂರು ವರ್ಷ ಆನ್​ಲೈನ್​ನಲ್ಲಿ ಈ ಸಮಿಟ್ ನಡೆದಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Wed, 6 December 23

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್