AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price on 07 December: ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2023, December 7th: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,670 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 78.20 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 57,450 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,725 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 07 December: ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
TV9 Web
| Edited By: |

Updated on: Dec 07, 2023 | 5:12 AM

Share

ಬೆಂಗಳೂರು, ಡಿಸೆಂಬರ್ 07: ಕಳೆದ ವಾರ ಹಾಗೂ ಈ ವಾರದ ಆರಂಭದಲ್ಲಿ ಸಖತ್ ಜಿಗಿತ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and silver Rates) ಮತ್ತೆ ಇಳಿದಿವೆ. ಇದರೊಂದಿಗೆ ಆಭರಣ ಪ್ರಿಯ ಭಾರತೀಯರು ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡಲು ನಿರ್ಧರಿಸಿದವರಿಗೆ ತುಸು ನಿರಾಳವಾಗಿದೆ. ಈ ಎರಡೂ ಲೋಹಗಳ ಬೆಲೆ ಗಣನೀಯವಾಗಿ ಇಳಿಯುತ್ತಿದೆ. ಚಿನ್ನದ ಬೆಲೆ ಗ್ರಾಮ್​ಗೆ 40 ರೂನಷ್ಟು ಇಳಿದರೆ, ಬೆಳ್ಳಿಗೆ ಬೆಲೆ ಗ್ರಾಮ್​ಗೆ 30 ಪೈಸೆ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,670 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,820 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,725 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 7ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,450 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,670 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 782 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,450 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,670 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 772.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 57,450 ರೂ
  • ಚೆನ್ನೈ: 58,150 ರೂ
  • ಮುಂಬೈ: 57,450 ರೂ
  • ದೆಹಲಿ: 57,600 ರೂ
  • ಕೋಲ್ಕತಾ: 57,450 ರೂ
  • ಕೇರಳ: 57,450 ರೂ
  • ಅಹ್ಮದಾಬಾದ್: 57,500 ರೂ
  • ಜೈಪುರ್: 57,600 ರೂ
  • ಲಕ್ನೋ: 57,600 ರೂ
  • ಭುವನೇಶ್ವರ್: 57,450 ರೂ

ಇದನ್ನೂ ಓದಿ: Post Office Fixed Deposit: ಪೋಸ್ಟ್ ಆಫೀಸ್ ಎಫ್​ಡಿ ಹಣ ಹಿಂಪಡೆಯುವ ಮುನ್ನ ಈ ಮಹತ್ವದ ನಿಯಮ ಬದಲಾವಣೆ ತಿಳಿದಿರಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,980 ರಿಂಗಿಟ್ (53,207 ರುಪಾಯಿ)
  • ದುಬೈ: 2,267.50 ಡಿರಾಮ್ (51,463 ರುಪಾಯಿ)
  • ಅಮೆರಿಕ: 620 ಡಾಲರ್ (51,675 ರುಪಾಯಿ)
  • ಸಿಂಗಾಪುರ: 847 ಸಿಂಗಾಪುರ್ ಡಾಲರ್ (52,648 ರುಪಾಯಿ)
  • ಕತಾರ್: 2,330 ಕತಾರಿ ರಿಯಾಲ್ (53,242 ರೂ)
  • ಸೌದಿ ಅರೇಬಿಯಾ: 2,340 ಸೌದಿ ರಿಯಾಲ್ (51,999 ರುಪಾಯಿ)
  • ಓಮನ್: 246.50 ಒಮಾನಿ ರಿಯಾಲ್ (53,368 ರುಪಾಯಿ)
  • ಕುವೇತ್: 194.50 ಕುವೇತಿ ದಿನಾರ್ (52,542 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,725 ರೂ
  • ಚೆನ್ನೈ: 8,100 ರೂ
  • ಮುಂಬೈ: 7,820 ರೂ
  • ದೆಹಲಿ: 7,820 ರೂ
  • ಕೋಲ್ಕತಾ: 7,820 ರೂ
  • ಕೇರಳ: 8,100 ರೂ
  • ಅಹ್ಮದಾಬಾದ್: 7,820 ರೂ
  • ಜೈಪುರ್: 7,820 ರೂ
  • ಲಕ್ನೋ: 7,820 ರೂ
  • ಭುವನೇಶ್ವರ್: 8,100 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ