Sign In

By signing in or creating an account, you agree with Associated Broadcasting Company's Terms & Conditions and Privacy Policy.

Forbes Most Powerful Women 2023: ನಿರ್ಮಲಾ ಸೀತಾರಾಮನ್ ಭಾರತದ ಅತ್ಯಂತ ಪ್ರಬಲ ಮಹಿಳೆ; ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ವರು ಭಾರತೀಯ ನಾರಿಯರು

Nirmala Sitharaman Most Powerful Indian Women in 2023: ಸಚಿವೆ ನಿರ್ಮಲಾ ಸೀತಾರಾಮನ್ 2023ರಲ್ಲಿ ಭಾರತದ ಅತ್ಯಂತ ಪ್ರಬಲ ಮಹಿಳೆ ಎನಿಸಿದ್ದಾರೆ. ಫೋರ್ಬ್ಸ್ ಮ್ಯಾಗಝೀನ್ ಪ್ರಕಟಿಸಿದ ವಿಶ್ವದ 100 ಅತಿಪ್ರಬಲ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ 32ನೇ ಸ್ಥಾನ ಪಡೆದಿದ್ದಾರೆ. ಯೂರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವೋನ್ ಡರ್ ಲೆಯೆನ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

Forbes Most Powerful Women 2023: ನಿರ್ಮಲಾ ಸೀತಾರಾಮನ್ ಭಾರತದ ಅತ್ಯಂತ ಪ್ರಬಲ ಮಹಿಳೆ; ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ವರು ಭಾರತೀಯ ನಾರಿಯರು
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 06, 2023 | 2:26 PM

ನವದೆಹಲಿ, ಡಿಸೆಂಬರ್ 6: ಯೂರೋಪಿಯನ್ ಕಮಿಷನ್​ನ ಅಧ್ಯಕ್ಷೆಯಾಗಿರುವ ಜರ್ಮನ್ ಮೂಲದ ಉರ್ಸುಲಾ ವೋನ್ ಡೆರ್ ಲೆಯೆನ್ (Ursula Von Der Leyen) ಅವರು 2023ರ ವರ್ಷದಲ್ಲಿ ವಿಶ್ವದ ಅತ್ಯಂತ ಪ್ರಬಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಫೋರ್ಬ್ಸ್ ಮೋಸ್ಟ್ ಪವರ್​ಫುಲ್ ವುಮೆನ್ 2023 ಪಟ್ಟಿಯಲ್ಲಿ (Forbes Most Powerful Women 2023) 100 ಮಂದಿ ಅತಿ ಪ್ರಬಲ ಮಹಿಳೆಯರನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ನಾಲ್ವರು ಭಾರತೀಯ ಮಹಿಳೆಯರಿದ್ದಾರೆ. ಫೋರ್ಬ್ಸ್ ಪಟ್ಟಿ ಪ್ರಕಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತದ ಅತ್ಯಂತ ಪ್ರಬಲ ಮಹಿಳೆ ಎನಿಸಿದ್ದಾರೆ. ಈ ಪಟ್ಟಿಯಲ್ಲಿ ಅವರು 32ನೇ ಸ್ಥಾನ ಪಡೆದಿದ್ದಾರೆ. ಎಚ್​ಸಿಎಲ್ ಕಾರ್ಪೊರೇಷನ್​ನ ಸಿಇಒ ರೋಷನಿ ನಾದರ್ ಮಲ್ಹೋತ್ರಾ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥೆ ಸೋಮಾ ಮೊಂಡಲ್ (soma mondal) ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಷಾ ಅವರು ಈ ಪಟ್ಟಿಯಲ್ಲಿ ಇರುವ ಇತರ ಭಾರತೀಯ ಮಹಿಳೆ ಎನಿಸಿದ್ದಾರೆ.

ಫೋರ್ಬ್ಸ್ ಪ್ರಬಲ ಮಹಿಳೆಯರ ಪಟ್ಟಿಯಲ್ಲಿ ಭಾರತೀಯರು

  • ನಿರ್ಮಲಾ ಸೀತಾರಾಮನ್: 32ನೇ ಸ್ಥಾನ
  • ರೋಷನಿ ನಾದರ್ ಮಲ್ಹೋತ್ರಾ: 60ನೇ ಸ್ಥಾನ
  • ಸೋಮಾ ಮಂಡಲ್: 70ನೇ ಸ್ಥಾನ
  • ಕಿರಣ್ ಮಜುಮ್ದಾರ್ ಷಾ: 76ನೇ ಸ್ಥಾನ

ಇದನ್ನೂ ಓದಿ: ಅದಾನಿ ಗ್ರೂಪ್ ಕಂಪನಿಗಳಿಗೆ ಷೇರುಪೇಟೆಯಲ್ಲಿ ಸುಗ್ಗಿ; ವಿಶ್ವ ಶ್ರೀಮಂತರ ಟಾಪ್15 ಪಟ್ಟಿಯಲ್ಲಿ ಗೌತಮ್ ಅದಾನಿ

ಪ್ರಬಲ ಮಹಿಳೆಯರೆಂದು ಪರಿಗಣಿಸಲು ಏನು ಮಾನದಂಡ?

ಫೋರ್ಬ್ಸ್ ಮ್ಯಾಗಝೀನ್ ಪ್ರತೀ ವರ್ಷ ಇಂಥ ವಿವಿಧ ಪಟ್ಟಿಗಳನ್ನು ಪ್ರಕಟಿಸುತ್ತಿರುತ್ತದೆ. ಪ್ರಬಲ ಮಹಿಳೆಯರ ಪಟ್ಟಿಗೆ ಅದು ನಾಲ್ಕು ಮಾನದಂಡಗಳನ್ನು ಇಟ್ಟಿದೆ. ಹಣ, ಮಾಧ್ಯಮ, ಪ್ರಭಾವ ಮತ್ತು ವ್ಯಾಪ್ತಿ, ಈ ಅಂಶಗಳ ಮೂಲಕ ಒಬ್ಬ ಮಹಿಳೆಯ ಸಾಧನೆ ಮತ್ತು ಪ್ರಭಾವಳಿಯನ್ನು ಗುರುತಿಸಲಾಗುತ್ತದೆ.

ಈ ಪಟ್ಟಿಯಲ್ಲಿರುವ ನಾಲ್ವರು ಭಾರತೀಯರು ಸ್ವಂತವಾಗಿ ಬೆಳೆದು ತಮ್ಮದೇ ಛಾಪು ಮೂಡಿಸಿದ ಮಹಿಳೆಯರಾಗಿದ್ದಾರೆ.

ಫೋರ್ಬ್ಸ್ ಟಾಪ್-10 ಪ್ರಬಲ ಮಹಿಳೆಯರಿವರು

  1. ಉರ್ಸುಲಾ ವಾನ್ ಡರ್ ಲೆಯೆನ್, ಜರ್ಮನಿ
  2. ಕ್ರಿಸ್ಟಿನ್ ಲಗಾರ್ಡೆ, ಜರ್ಮನಿ
  3. ಕಮಲಾ ಹ್ಯಾರಿಸ್, ಅಮೆರಿಕ
  4. ಜಾರ್ಜಿಯಾ ಮೆಲೋನಿ, ಇಟಲಿ
  5. ಟೇಲರ್ ಸ್ವಿಫ್ಟ್, ಅಮೆರಿಕ
  6. ಕೇರನ್ ಲಿಂಚ್, ಅಮೆರಿಕ
  7. ಜೇನ್ ಫ್ರೇಸರ್, ಅಮೆರಿಕ
  8. ಅಬಿಗೇಲ್ ಜಾನ್ಸನ್, ಅಮೆರಿಕ
  9. ಮೇರಿ ಬಾರಾ, ಅಮೆರಿಕ
  10. ಮೆಲಿಂಡಾ ಗೇಟ್ಸ್, ಅಮೆರಿಕ

ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಸೆಬಿ 25 ಕೋಟಿ ರೂ ದಂಡ ವಿಧಿಸಿದ್ದು ಯಾಕೆ? ಕೋರ್ಟ್ ಇದನ್ನು ರದ್ದು ಮಾಡಿದ್ದು ಯಾಕೆ?

ಫೋರ್ಬ್ಸ್ ಪಟ್ಟಿಯಲ್ಲಿ ತೃತೀಯ ಜಗತ್ತಿನ ಪ್ರಬಲ ಮಹಿಳೆಯರು

  • ನಿರ್ಮಲಾ ಸೀತಾರಾಮನ್, 32ನೇ ಸ್ಥಾನ
  • ಶೇಖರ್ ಹಸೀನಾ, ಬಾಂಗ್ಲಾದೇಶ 46ನೇ ಸ್ಥಾನ
  • ಶ್ರೀ ಎಂ ಇಂದ್ರಾವತಿ, ಇಂಡೋನೇಷ್ಯಾ, 47ನೇ ಸ್ಥಾನ
  • ನಿಕಿ ವಿದ್ಯಾವತಿ, ಇಂಡೋನೇಷ್ಯಾ, 51ನೇ ಸ್ಥಾನ
  • ರೋಷನಿ ನಾದರ್ ಮಲ್ಹೋದ್ರಾ, 60ನೇ ಸ್ಥಾನ
  • ಹನಾ ಅಲ್ ರೋಸ್ತಾಮನಿ, ಯುಎಇ, 63ನೇ ಸ್ಥಾನ
  • ಸೋಮಾ ಮಂಡಲ್, ಭಾರತ, 70ನೇ ಸ್ಥಾನ
  • ಪೌಲಾ ಸ್ಯಾಂಟಿಲಿ, ಮೆಕ್ಸಿಕೋ, 71ನೇ ಸ್ಥಾನ
  • ಕಿರಣ್ ಮಜುಮ್ದಾರ್ ಷಾ, ಭಾರತ, 76ನೇ ಸ್ಥಾನ
  • ಗ್ಯೂಲರ್ ಸಬಾಂಚಿ, ಟರ್ಕಿ, 77ನೇ ಸ್ಥಾನ
  • ಎನ್​ಗೋಜಿ ಒಕೋಂಜೋ ಲಿಯಾಲಾ, ನೈಜೀರಿಯಾ, 87ನೇ ಸ್ಥಾನ
  • ಎಂಪುಮಿ ಮದಿಸಾ, ಸೌತ್ ಆಫ್ರಿಕಾ, 88ನೇ ಸ್ಥಾನ
  • ರಾಜ ಈಸಾ ಅಲ್ ಗುರ್ಗ್, ಯುಎಇ, 91ನೇ ಸ್ಥಾನ
  • ಸಮಿಯಾ ಸುಲುಹು ಹಸನ್, ತಾಂಜಾನಿಯಾ, 93ನೇ ಸ್ಥಾನ
  • ಕ್ಸಿಯೋಮಾರ ಕ್ಯಾಸ್ಟ್ರೋ, ಹೊಂಡುರಸ್, 94ನೇ ಸ್ಥಾನ
  • ಮೋ ಅಬುಡು, ನೈಜೀರಿಯಾ, 98ನೇ ಸ್ಥಾನ
  • ಮಿಯಾ ಮಾಟ್ಲಿ, ಬಾರ್ಬಡೋಸ್, 99ನೇ ಸ್ಥಾನ

ಕುತೂಹಲವೆಂದರೆ ಈ ಪಟ್ಟಿಯಲ್ಲಿ 100ನೇ ಸ್ಥಾನವನ್ನು ಬಾರ್ಬೀಗೆ ಕೊಡಲಾಗಿದೆ. ಬಾರ್ಬಿ ಎಂಬುದು ಬಹಳ ಜನಪ್ರಿಯವಾಗಿರುವ ವಿಶೇಷ ಶೈಲಿಯ ಗೊಂಬೆ. ಇದು ವಿಶ್ವಾದ್ಯಂತ ಸಾಕಷ್ಟು ಮಂದಿಯ ಮೇಲೆ ಪ್ರಭಾವ ಬೀರಿದೆ. ಅಂತೆಯೇ, ಬಾರ್ಬಿ ಗೊಂಬೆಗೂ ಈ ಪಟ್ಟಿಯಲ್ಲಿ ಸ್ಥಾನ ಕೊಡಲಾಗಿದೆ. ಹಾಗೆಯೇ, ಚೀನಾದ ನಾಲ್ಕೈದು ಮಂದಿ ಮಹಿಳೆಯರೂ ಫೋರ್ಬ್ಸ್ ಪಟ್ಟಿಯಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಅಮೆರಿಕ ಹಾಗೂ ಯೂರೋಪ್​ನವರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:23 pm, Wed, 6 December 23

ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ