ಅಂಬಾನಿ ಮಕ್ಕಳಿಗೆ ಸಂಬಳ ಬೇಡ; ಮಂಡಳಿ ಸಭೆಯಲ್ಲಿ ಪಾಲ್ಗೊಂಡರೆ ಸಂಭಾವನೆ: ಆರ್​ಐಎಲ್ ನಿರ್ಣಯ

|

Updated on: Sep 27, 2023 | 6:33 PM

Mukesh Ambani's Children: ಮುಕೇಶ್ ಅಂಬಾನಿ ಅವರ ಮೂವರು ಮಕ್ಕಳನ್ನು ರಿಲಾಯನ್ಸ್ ಇಂಡಸ್ಟ್ರೀಸ್​ನ ಮಂಡಳಿಗೆ ನೇಮಕ ಮಾಡುವ ಪ್ರಯತ್ನವಾಗುತ್ತಿದೆ. ಅನಂತ್ ಅಂಬಾನಿ, ಇಶಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರನ್ನು ಕಂಪನಿ ಬೋರ್ಡ್​ಗೆ ನೇಮಕಾತಿ ಮಾಡಲು ಷೇರುದಾರರ ಅನುಮತಿ ಕೋರಲಾಗಿದೆ. ಈ ಬಗ್ಗೆ ಆರ್​ಐಎಲ್ ನಿರ್ಣಯ ಜಾರಿ ಮಾಡಿದೆ. ಬೋರ್ಡ್ ಡೈರೆಕ್ಟರ್​ಗಳಾಗಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ಕೋರಿ ಷೇರುದಾರರಿಗೆ ಪೋಸ್ಟಲ್ ಬ್ಯಾಲಟ್ ಮೂಲಕ ಅನುಮೋದನೆಗೆ ಅವಕಾಶ ಕಲ್ಪಿಸಲಾಗಿದೆ.

ಅಂಬಾನಿ ಮಕ್ಕಳಿಗೆ ಸಂಬಳ ಬೇಡ; ಮಂಡಳಿ ಸಭೆಯಲ್ಲಿ ಪಾಲ್ಗೊಂಡರೆ ಸಂಭಾವನೆ: ಆರ್​ಐಎಲ್ ನಿರ್ಣಯ
ಮುಕೇಶ್ ಅಂಬಾನಿ
Follow us on

ನವದೆಹಲಿ, ಸೆಪ್ಟೆಂಬರ್ 27: ಮುಕೇಶ್ ಅಂಬಾನಿ ಅವರ ಮೂವರು ಮಕ್ಕಳನ್ನು ರಿಲಾಯನ್ಸ್ ಇಂಡಸ್ಟ್ರೀಸ್​ನ ಮಂಡಳಿಗೆ (RIL Board of Directors) ನೇಮಕ ಮಾಡುವ ಪ್ರಯತ್ನವಾಗುತ್ತಿದೆ. ಅನಂತ್ ಅಂಬಾನಿ, ಇಶಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರನ್ನು ಕಂಪನಿ ಬೋರ್ಡ್​ಗೆ ನೇಮಕಾತಿ ಮಾಡಲು ಷೇರುದಾರರ ಅನುಮತಿ ಕೋರಲಾಗಿದೆ. ಈ ಬಗ್ಗೆ ಆರ್​ಐಎಲ್ ನಿರ್ಣಯ (resolution) ಜಾರಿ ಮಾಡಿದೆ. ರಿಲಾಯನ್ಸ್ ಇಂಡಸ್ಟ್ರೀಸ್​ನ ಹೆಮ್ಮರದ ವಿವಿಧ ರೆಂಬೆಗಳ ಜವಾಬ್ದಾರಿ ವಹಿಸಿಕೊಂಡಿರುವ ಈ ಮೂವರಿಗೆ ಸಂಬಳ ನೀಡಲಾಗುವುದಿಲ್ಲ. ಮಂಡಳಿ ಮತ್ತು ಸಮಿತಿ ಸಭೆಗಳಲ್ಲಿ ಪಾಲ್ಗೊಂಡರೆ ಶುಲ್ಕ ಮತ್ತಿತರ ಸಂಭಾವನೆಗಳನ್ನು ಮಾತ್ರ ಕೊಡಲು ನಿರ್ಣಯಿಸಲಾಗಿದೆ. ಬೋರ್ಡ್ ಡೈರೆಕ್ಟರ್​ಗಳಾಗಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ಕೋರಿ ಷೇರುದಾರರಿಗೆ ಪೋಸ್ಟಲ್ ಬ್ಯಾಲಟ್ ಮೂಲಕ ಅನುಮೋದನೆಗೆ ಅವಕಾಶ ಕಲ್ಪಿಸಲಾಗಿದೆ.

ಆರ್​ಐಎಲ್​ನ ಬೋರ್ಡ್​ನಲ್ಲಿ ಮುಕೇಶ್ ಅಂಬಾನಿ ಅವರ ಸಂಬಂಧಿಗಳಾದ ನಿಖಿಲ್, ಹಿತಲ್ ಮೊದಲಾದವರು ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಅವರಿಗೆಲ್ಲಾ ಸಂಬಳ, ಕಮಿಷನ್ ಮತ್ತಿತರ ಭತ್ಯೆಗಳು ಸಿಗುತ್ತವೆ. ಅಂಬಾನಿಯ ಮೂವರು ಮಕ್ಕಳಿಗೆ ಸಂಬಳ ಇಲ್ಲ. ಸ್ವತಃ ಮುಕೇಶ್ ಅಂಬಾನಿ ಅವರೇ ಕಳೆದ 2-3 ವರ್ಷಗಳಿಂದ ಸಂಬಳವನ್ನೇ ಪಡೆದಿಲ್ಲ. ಮುಂದಿನ ಐದು ವರ್ಷ ಅವರೇ ಛೇರ್ಮನ್ ಮತ್ತು ಸಿಇಒ ಆಗಿ ಮುಂದುವರಿಯುತ್ತಾರಾದರೂ ಸಂಬಳ ಪಡೆಯುವುದಿಲ್ಲ.

ಇದನ್ನೂ ಓದಿ: ಡೀಮ್ಯಾಟ್ ಅಕೌಂಟ್ ಇಲ್ಲದೇ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಸಾಧ್ಯವಾ? ಫೋಲಿಯೋ ಮೂಲಕ ಇನ್ವೆಸ್ಟ್ ಮಾಡಬಹುದಾ?

ಮುಕೇಶ್ ಅಂಬಾನಿ ತಾವು ವಿಸ್ತರಿಸಿರುವ ರಿಲಾಯನ್ಸ್ ಸಾಮ್ರಾಜ್ಯವನ್ನು ತಮ್ಮ ಮೂವರು ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ. 31 ವರ್ಷದ ಇಶಾ ಅಂಬಾನಿ ಅವರು ರೀಟೇಲ್ ಬಿಸಿನೆಸ್ ನೋಡಿಕೊಳ್ಳುತ್ತಾರೆ. 31 ವರ್ಷದ ಆಕಾಶ್ ಅಂಬಾನಿ ಟೆಲಿಕಾಂ ವಿಭಾಗದ ಚುಕ್ಕಾಣಿ ಹಿಡಿದಿದ್ದಾರೆ. ಇನ್ನು, ಕಿರಿಯವರಾದ 28 ವರ್ಷದ ಅನಂತ್ ಅಂಬಾನಿ ಅವರಿಗೆ ಹೊಸ ಇಂಧನ ವ್ಯವಹಾರಗಳ ಜವಾಬ್ದಾರಿ ಕೊಡಲಾಗಿದೆ.

ಈ ಮೂವರಿಗೆ ಷೇರು ಆಸ್ತಿಗಳಿವೆ. ಒಂದು ವೇಳೆ ಆರ್​ಐಎಲ್ ಬೋರ್ಡ್​ಗೆ ಡೈರೆಕ್ಟರ್ ಆಗಿ ನೇಮಕವಾದರೆ, ಮಂಡಳಿ ಸಭೆಗಳಲ್ಲಿ ಪಾಲ್ಗೊಂಡರೆ ಸಂಭಾವನೆ, ಭತ್ಯೆ ಸಿಗುತ್ತದೆ. ಕಂಪನಿಗೆ ಲಾಭವಾದರೆ ಕಮಿಷನ್ ಸಿಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಸಿ ದೋಸೆಯಂತೆ ಮಾರಾಟವಾದ ಬಿರ್ಲಾ ಎಸ್ಟೇಟ್ ಮನೆಗಳು; ಕೇವಲ 36 ಗಂಟೆಯಲ್ಲಿ ಬುಕ್ ಆದವು 500 ಕೋಟಿ ರೂ ಮೌಲ್ಯದ ವಸತಿಗಳು

ಇವರ ತಾಯಿ ನೀತಾ ಅಂಬಾನಿ 2014ರಲ್ಲಿ ಆರ್​ಐಎಲ್​ನ ಬೋರ್ಡ್​ಗೆ ನೇಮಕವಾಗಿದ್ದರು. ಅವರಿಗೂ ಕೂಡ ಸಂಬಳ ಇಲ್ಲ. 2022-23ರ ಹಣಕಾಸು ವರ್ಷದಲ್ಲಿ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕೆ ನೀತಾ ಅಂಬಾನಿಗೆ 6 ಲಕ್ಷ ರೂ ಸಂಭಾವನೆ, ಹಾಗೂ 2 ಕೋಟಿ ರೂ ಕಮಿಷನ್ ರೂಪದಲ್ಲಿ ಹಣ ಕೊಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ