ಬೆಂಗಳೂರಿನಲ್ಲಿ ಬಿಸಿ ದೋಸೆಯಂತೆ ಮಾರಾಟವಾದ ಬಿರ್ಲಾ ಎಸ್ಟೇಟ್ ಮನೆಗಳು; ಕೇವಲ 36 ಗಂಟೆಯಲ್ಲಿ ಬುಕ್ ಆದವು 500 ಕೋಟಿ ರೂ ಮೌಲ್ಯದ ವಸತಿಗಳು

Birla Trimaya Project In Devanahalli: ಬಿರ್ಲಾ ತ್ರಿಮಾಯ ಪ್ರಾಜೆಕ್ಟ್ ಅನ್ನು ದೇವನಹಳ್ಳಿಯಲ್ಲಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬುಕ್ ಆಗಿರುವ 556 ಮನೆಗಳು 52 ಎಕರೆ ಪ್ರದೇಶದಲ್ಲಿವೆ. ಎಂಟು ಅಪಾರ್ಟ್ಮೆಂಟ್​ಗಳನ್ನು ಒಳಗೊಂಡಿರುವ ಲಕ್ಷುರಿ ವಸತಿ ಸಮುಚ್ಚಯ ಇದು. 1 ಬಿಎಚ್​ಕೆ, 2 ಬಿಎಚ್​ಕೆ ಮತ್ತು 3 ಬಿಎಚ್​ಕೆಯ ಹಲವು ಮನೆಗಳು ಇಲ್ಲಿವೆ. ಬುಕಿಂಗ್ ಓಪನ್ ಆಗಿ 36 ಗಂಟೆಯಲ್ಲಿ ಎಲ್ಲಾ 556 ಮನೆಗಳೂ ಸೇಲ್ ಆಗಿವೆ. ಒಟ್ಟು ಬುಕಿಂಗ್ ಮೌಲ್ಯ 500 ಕೋಟಿ ರೂ ಎಂದು ಹೇಳಲಾಗಿದೆ. ಈ ಲಕ್ಷುರಿ ಲೇಔಟ್​ನಲ್ಲಿ ಬರೋಬ್ಬರಿ 35 ಎಕರೆಗಳಷ್ಟು ಬಹಿರಂಗ ಸ್ಥಳವೇ ಇದೆ. ಒಂದು ಕೆರೆಯೂ ಇದೆ. ಸಾಕಷ್ಟು ಹಸಿರಿನ ಪ್ರದೇಶವಿದೆ.

ಬೆಂಗಳೂರಿನಲ್ಲಿ ಬಿಸಿ ದೋಸೆಯಂತೆ ಮಾರಾಟವಾದ ಬಿರ್ಲಾ ಎಸ್ಟೇಟ್ ಮನೆಗಳು; ಕೇವಲ 36 ಗಂಟೆಯಲ್ಲಿ ಬುಕ್ ಆದವು 500 ಕೋಟಿ ರೂ ಮೌಲ್ಯದ ವಸತಿಗಳು
ಬಿರ್ಲಾ ತ್ರಿಮಾಯ ಪ್ರಾಜೆಕ್ಟ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2023 | 1:20 PM

ಬೆಂಗಳೂರು, ಸೆಪ್ಟೆಂಬರ್ 27: ಬಿರ್ಲಾ ಎಸ್ಟೇಟ್ಸ್ ಸಂಸ್ಥೆಯ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗೆ ಬೆಂಗಳೂರಿನಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ದೇವನಹಳ್ಳಿ ಬಳಿ ನಡೆಯುತ್ತಿರುವ ಬಿರ್ಲಾ ತ್ರಿಮಾಯದ (Birla Trimaya) ಮೊದಲ ಹಂತದ ಯೋಜನೆಯಲ್ಲಿ ನಿರ್ಮಿಸಲಾಗಿರುವ 556 ಮನೆಗಳು ಬಹಳ ತ್ವರಿತವಾಗಿ ಮಾರಾಟವಾಗಿವೆ. ಬಿರ್ಲಾ ಎಸ್ಟೇಟ್ಸ್ ನೀಡಿದ ಮಾಹಿತಿ ಪ್ರಕಾರ, ಬುಕಿಂಗ್ ಓಪನ್ ಆಗಿ 36 ಗಂಟೆಯಲ್ಲಿ ಎಲ್ಲಾ 556 ಮನೆಗಳೂ ಸೇಲ್ ಆಗಿವೆ. ಒಟ್ಟು ಬುಕಿಂಗ್ ಮೌಲ್ಯ 500 ಕೋಟಿ ರೂ ಎಂದು ಹೇಳಲಾಗಿದೆ.

ಆದಿತ್ಯ ಬಿರ್ಲಾ ಗ್ರೂಪ್​ನ ರಿಯಲ್ ಎಸ್ಟೇಟ್ ಅಂಗವಾದ ಸೆಂಚುರಿ ಟೆಕ್ಸ್​ಟೈಲ್ಸ್ ಅಂಡ್ ಇಂಡಸ್ಟ್ರೀಸ್ (Century Textiles and Industries) ಸಂಸ್ಥೆಯ ಮಾಲಕತ್ವದ ಕಂಪನಿ ಬಿರ್ಲಾ ಎಸ್ಟೇಟ್ಸ್. ದೇವನಹಳ್ಳಿಯಲ್ಲಿ ಬಿರ್ಲಾ ತ್ರಿಮಾಯ ಪ್ರಾಜೆಕ್ಟ್ ಅನ್ನು ಬಿರ್ಲಾ ಎಸ್ಟೇಟ್ ಮತ್ತು ಎಂಎಸ್ ರಾಮಯ್ಯ ರಿಯಾಲ್ಟಿ (MS Ramaiah Realty) ಸಂಸ್ಥೆ ಜಂಟಿಯಾಗಿ ನಡೆಸುತ್ತಿವೆ.

ಇದನ್ನೂ ಓದಿ: ಅಕ್ಟೋಬರ್ 14ರ ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್; ದುಬಾರಿ ಆಯ್ತು ಅಹ್ಮದಾಬಾದ್ ಫ್ಲೈಟ್ ಟಿಕೆಟ್

ಬಿರ್ಲಾ ತ್ರಿಮಾಯ ಪ್ರಾಜೆಕ್ಟ್ ಅನ್ನು ದೇವನಹಳ್ಳಿಯಲ್ಲಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬುಕ್ ಆಗಿರುವ 556 ಮನೆಗಳು 52 ಎಕರೆ ಪ್ರದೇಶದಲ್ಲಿವೆ. ಎಂಟು ಅಪಾರ್ಟ್ಮೆಂಟ್​ಗಳನ್ನು ಒಳಗೊಂಡಿರುವ ಲಕ್ಷುರಿ ವಸತಿ ಸಮುಚ್ಚಯ ಇದು. 1 ಬಿಎಚ್​ಕೆ, 2 ಬಿಎಚ್​ಕೆ ಮತ್ತು 3 ಬಿಎಚ್​ಕೆಯ ಹಲವು ಮನೆಗಳು ಇಲ್ಲಿವೆ. ಈ ಲಕ್ಷುರಿ ಲೇಔಟ್​ನಲ್ಲಿ ಬರೋಬ್ಬರಿ 35 ಎಕರೆಗಳಷ್ಟು ಬಹಿರಂಗ ಸ್ಥಳವೇ ಇದೆ. ಒಂದು ಕೆರೆಯೂ ಇದೆ. ಸಾಕಷ್ಟು ಹಸಿರಿನ ಪ್ರದೇಶವಿದೆ.

ಇದು ಬಿರ್ಲಾ ತ್ರಿಮಾಯ ಪ್ರಾಜೆಕ್ಟ್​ನ ಮೊದಲ ಭಾಗ ಮಾತ್ರ. ಇದರಿಂದ ಒಟ್ಟು 500 ಕೋಟಿ ರೂ ಆದಾಯ ಬಂದಿದೆ. ಈ ಪ್ರಾಜೆಕ್ಟ್ ಪೂರ್ಣವಾದ ಬಳಿಕ 3,000 ಕೋಟಿ ರೂ ಆದಾಯದ ನಿರೀಕ್ಷೆಯಲ್ಲಿ ಬಿರ್ಲಾ ಎಸ್ಟೇಟ್ ಇದೆ.

ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿದ ಡ್ರೋನ್ ಹಾರಾಟ: ತನಿಖೆ ಶುರು

ಸೆಂಚುರಿ ಟೆಕ್ಸ್​ಟೈಲ್ಸ್ ಷೇರಿಗೆ ಬೇಡಿಕೆ

ಬಿರ್ಲಾ ಎಸ್ಟೇಟ್ಸ್​ನ ಮಾಲಕ ಸಂಸ್ಥೆ ಸೆಂಚುರಿ ಟೆಕ್ಸ್​ಟೈಲ್ಸ್ ಅಂಡ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳಿಗೆ ಈಗ ಬೇಡಿಕೆ ಶುರುವಾಗಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಅದರ ಷೇರುಮೌಲ್ಯ ನಿನ್ನೆ (ಸೆ. 26ಕ್ಕೆ) 1,064 ರೂನಲ್ಲಿ ಅಂತ್ಯಗೊಂಡಿತ್ತು. ಇವತ್ತು ಬೆಳಗಿನ ವಹಿವಾಟಿನಲ್ಲಿ ಅದರ ಷೇರುಬೆಲೆ 1,113 ರೂವರೆಗೂ ಹೋಗಿತ್ತು. ಮಧ್ಯಾಹ್ನದ ವೇಳೆ ಅದರ ಬೆಲೆ 1,088ಕ್ಕೆ ಬಂದು ನಿಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್