Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಬ್ಬದ ಸೀಸನ್ ಅಕ್ಟೋಬರ್ 2023ರಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ಬ್ಯಾಂಕ್ ಬಂದ್? ಇಲ್ಲಿದೆ ವಿವರ

Bank Holidays In 2023 October, November, December: ಆರ್​ಬಿಐ ವೇಳಾಪಟ್ಟಿ ಪ್ರಕಾರ ಭಾರತದ ವಿವಿಧೆಡೆ ಗಾಂಧಿ ಜಯಂತಿ ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ 15 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಆದರೆ ಎಲ್ಲಾ ಬ್ಯಾಂಕುಗಳಿಗೂ 15 ದಿನ ಇರೊಲ್ಲ. ಒಂದೊಂದು ಪ್ರದೇಶದಲ್ಲಿ ರಜಾ ದಿನಗಳು ವ್ಯತ್ಯಾಸವಾಗುತ್ತದೆ. ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರ ಸೇರಿ 10 ದಿನಗಳ ಕಾಲ ರಜೆ ಇದೆ. ನವೆಂಬರ್​ನಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 12 ದಿನಗಳ ಕಾಲ ರಜೆ ಇದೆ.

ಹಬ್ಬದ ಸೀಸನ್ ಅಕ್ಟೋಬರ್ 2023ರಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ಬ್ಯಾಂಕ್ ಬಂದ್? ಇಲ್ಲಿದೆ ವಿವರ
ಬ್ಯಾಂಕ್ ರಜೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2023 | 12:00 PM

ನವದೆಹಲಿ, ಸೆಪ್ಟೆಂಬರ್ 27: ಸೆಪ್ಟೆಂಬರ್​ನಿಂದ ನವೆಂಬರ್​ವರೆಗೆ ಮೂರು ತಿಂಗಳು ಭಾರತದಲ್ಲಿ ಹಬ್ಬದ ಸೀಸನ್. ಈಗ ಸೆಪ್ಟೆಂಬರ್ ಮುಗಿಯುತ್ತಿದ್ದು ಅಕ್ಟೋಬರ್ ಶುರುವಾಗುತ್ತಿದೆ. ಈ ತಿಂಗಳು ದಸರಾ ಹಬ್ಬದ (dasara festival) ಸಡಗರ. ಶಾಲಾ ಕಾಲೇಜುಗಳಲ್ಲಿ ದಸರಾ ರಜೆ. ಬ್ಯಾಂಕುಗಳಿಗೂ ಸ್ವಲ್ಪ ಹೆಚ್ಚೇ ರಜೆಗಳು ಅಕ್ಟೋಬರ್ ಮತ್ತು ನವೆಂಬರ್​ನಲ್ಲಿ ಇವೆ. ಆರ್​ಬಿಐ ವೇಳಾಪಟ್ಟಿ (RBI holiday schedule) ಪ್ರಕಾರ ಗಾಂಧಿ ಜಯಂತಿ ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ 15 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಆದರೆ ಎಲ್ಲಾ ಬ್ಯಾಂಕುಗಳಿಗೂ 15 ದಿನ ಇರೊಲ್ಲ. ಒಂದೊಂದು ಪ್ರದೇಶದಲ್ಲಿ ರಜಾ ದಿನಗಳು ವ್ಯತ್ಯಾಸವಾಗುತ್ತದೆ. ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರ ಸೇರಿ 10 ದಿನಗಳ ಕಾಲ ರಜೆ ಇದೆ. ನವೆಂಬರ್​ನಲ್ಲಿ ರಾಜ್ಯದಲ್ಲಿ ರಜಾ ದಿನಗಳ ಸಂಖ್ಯೆ ಇನ್ನೂ ಎರಡು ಹೆಚ್ಚು.

ಅಕ್ಟೋಬರ್ 2023ರಲ್ಲಿ ಬ್ಯಾಂಕ್ ರಜಾ ದಿನಗಳು

  • ಅಕ್ಟೋಬರ್ 1: ಭಾನುವಾರ
  • ಅಕ್ಟೋಬರ್ 2: ಗಾಂಧಿ ಜಯಂತಿ
  • ಅಕ್ಟೋಬರ್ 8: ಭಾನುವಾರ
  • ಅಕ್ಟೋಬರ್ 12: ನರಕ ಚತುರ್ದಶಿ
  • ಅಕ್ಟೋಬರ್ 14: ಎರಡನೇ ಶನಿವಾರ ಮತ್ತು ಮಹಾಲಯ ಅಮಾವಾಸ್ಯ (ಕರ್ನಾಟಕ, ಒಡಿಶಾ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ರಜೆ)
  • ಅಕ್ಟೋಬರ್ 15: ಭಾನುವಾರ (ಘಟಸ್ಥಾಪನಾ)
  • ಅಕ್ಟೋಬರ್ 18: ಕಾಟಿ ಭಿಯು (ಅಸ್ಸಾಮ್)
  • ಅಕ್ಟೋಬರ್ 19: ಸಂವತ್ಸರಿ ಉತ್ಸವ (ಗುಜರಾತ್)
  • ಅಕ್ಟೋಬರ್ 21: ದುರ್ಗಾ ಪೂಜಾ, ಮಹಾಸಪ್ತಮಿ
  • ಅಕ್ಟೋಬರ್ 22: ಭಾನುವಾರ
  • ಅಕ್ಟೋಬರ್ 23: ಮಹಾನವಮಿ (ಆಯುಧ ಪೂಜೆ)
  • ಅಕ್ಟೋಬರ್ 24: ವಿಜಯದಶಮಿ
  • ಅಕ್ಟೋಬರ್ 28: ನಾಲ್ಕನೇ ಶನಿವಾರ
  • ಅಕ್ಟೋಬರ್ 29: ಭಾನುವಾರ
  • ಅಕ್ಟೋಬರ್ 31: ಸರ್ದಾರ್ ವಲ್ಲಭಭಾಯ್ ಪಟೇಲ್ (ಗುಜರಾತ್​ನಲ್ಲಿ ರಜೆ)

ಇದನ್ನೂ ಓದಿ: Google 25th Birthday:: ಗೂಗಲ್ ಜನ್ಮದಿನ ಇಂದು; ಗೂಗಲ್ ಹೆಸರಿನ ಅರ್ಥ ಏನು? ಗ್ಯಾರೇಜ್​ನಿಂದ ಶುರುವಾಗಿ ಇವತ್ತದು ಎಷ್ಟು ಅಗಾಧವಾಗಿ ಬೆಳೆದಿದೆ ನೋಡಿ..!

ಕರ್ನಾಟಕದಲ್ಲಿ ಅಕ್ಟೋಬರ್ 2023ರಲ್ಲಿ ಬ್ಯಾಂಕ್ ರಜೆ ಇರುವ ದಿನಗಳು

  • ಅಕ್ಟೋಬರ್ 1: ಭಾನುವಾರ
  • ಅಕ್ಟೋಬರ್ 2: ಗಾಂಧಿ ಜಯಂತಿ
  • ಅಕ್ಟೋಬರ್ 8: ಭಾನುವಾರ
  • ಅಕ್ಟೋಬರ್ 14: ಎರಡನೇ ಶನಿವಾರ ಮತ್ತು ಮಹಾಲಯ ಅಮಾವಾಸ್ಯ
  • ಅಕ್ಟೋಬರ್ 15: ಭಾನುವಾರ
  • ಅಕ್ಟೋಬರ್ 22: ಭಾನುವಾರ
  • ಅಕ್ಟೋಬರ್ 23: ಮಹಾನವಮಿ
  • ಅಕ್ಟೋಬರ್ 24: ವಿಜಯದಶಮಿ
  • ಅಕ್ಟೋಬರ್ 28: ನಾಲ್ಕನೇ ಶನಿವಾರ, ವಾಲ್ಮೀಕಿ ಜಯಂತಿ
  • ಅಕ್ಟೋಬರ್ 29: ಭಾನುವಾರ

ಇದನ್ನೂ ಓದಿ: ಸೆಪ್ಟೆಂಬರ್ 30ರವರೆಗೂ ಡೆಡ್​ಲೈನ್ ಇರುವ ಹಣಕಾಸು ಕಾರ್ಯಗಳಿವು; ತಪ್ಪದೇ ಮಾಡಿ

2023ರ ನವೆಂಬರ್ ಮತ್ತು ಡಿಸೆಂಬರ್​ನಲ್ಲಿರುವ ಸಾರ್ವತ್ರಿಕ ರಜೆಗಳು

ಕರ್ನಾಟಕದಲ್ಲಿ ಭಾನುವಾರ ಹೊರತುಪಡಿಸಿ ಬ್ಯಾಂಕುಗಳಿಗೆ ಇರುವ ಇತರ ಸಾರ್ವತ್ರಿಕ ರಜೆಗಳ ವಿವರ ಇಂತಿದೆ…

  • ನವೆಂಬರ್ 1: ಕನ್ನಡ ರಾಜ್ಯೋತ್ಸವ
  • ನವೆಂಬರ್ 11: ಎರಡನೇ ಶನಿವಾರ
  • ನವೆಂಬರ್ 12: ದೀಪಾವಳಿ
  • ನವೆಂಬರ್ 25: ನಾಲ್ಕನೇ ಶನಿವಾರ
  • ನವೆಂಬರ್ 30: ಕನಕದಾಸ ಜಯಂತಿ
  • ಡಿಸೆಂಬರ್ 9: ಎರಡನೇ ಶನಿವಾರ
  • ಡಿಸೆಂಬರ್ 23: ನಾಲ್ಕನೇ ಶನಿವಾರ
  • ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ

ಇದೇ ವೇಳೆ, ಸೆಪ್ಟೆಂಬರ್ 27 ಮತ್ತು 28ರಂದು ದೇಶಾದ್ಯಂತ ಈದ್ ಮಿಲಾದ್ ಹಬ್ಬ ಆಚರಿಸಲಾಗುತ್ತಿದೆ. ಇದರಲ್ಲಿ ಸೆಪ್ಟೆಂಬರ್ 28ರಂದು ಭಾರತದ ಬಹುತೇಕ ಕಡೆ ಸಾರ್ವತ್ರಿಕ ರಜೆ ಇರುತ್ತದೆ. ಕರ್ನಾಟಕದಲ್ಲೂ ಸೆಪ್ಟೆಂಬರ್ 28ರಂದು ಈದ್ ಮಿಲಾದ್ ಪ್ರಯುಕ್ತ ರಜೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್