ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿದ ಡ್ರೋನ್ ಹಾರಾಟ: ತನಿಖೆ ಶುರು
ವಿಮಾನಗಳ ಪಕ್ಕದಲ್ಲೆ ಡ್ರೋನ್ ಹಾರಿದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿದೆ. ಟೇಕ್ ಆಫ್ ಸ್ಥಳದಿಂದ 6 ನಾಟಿಕಲ್ ಮೈಲ್ ದೂರದಲ್ಲಿ ಡ್ರೋನ್ ಹಾರಿದ್ದು, ಡ್ರೊನ್ ಹಾರಾಟ ಕಂಡು ಎಟಿಸಿ ಕಂಟ್ರೋಲ್ಗೆ ಪೈಲೆಟ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಸೆ.27: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport)ದ ರನ್ ವೇ ಬಳಿ ಅನಾಮಿಕ ಡ್ರೋನ್ ಹಾರಾಟ ನಡೆಸಿದೆ. ಹೌದು, ವಿಮಾನಗಳ ಪಕ್ಕದಲ್ಲೆ ಡ್ರೋನ್(Drone) ಹಾರಿದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿದೆ. ಟೇಕ್ ಆಫ್ ಸ್ಥಳದಿಂದ 6 ನಾಟಿಕಲ್ ಮೈಲ್ ದೂರದಲ್ಲಿ ಡ್ರೋನ್ ಹಾರಿದ್ದು, ಡ್ರೊನ್ ಹಾರಾಟ ಕಂಡು ಎಟಿಸಿ ಕಂಟ್ರೋಲ್ಗೆ ಪೈಲೆಟ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಿಂದ ದೆಹಲಿ ಮತ್ತು ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನಗಳ ಹಾರಾಟ ಸ್ಥಳದಲ್ಲೆ ಆರೆಂಜ್ ಮತ್ತು ಹಳದಿ ಬಣ್ಣದ ಡ್ರೋನ್ ಹಾರಿದೆ.
ಅನಾಮಿಕ ಡ್ರೋನ್ಹಾರಾಟದ ಬಗ್ಗೆ ತನಿಖೆ ಶುರು
ಇನ್ನು ನಿಷೇದದ ನಡುವೆಯು ಡ್ರೋನ್ ಹಾರಿದ್ದು ಹೇಗೆ? ಎಂದು ಏರ್ಪೋಟ್ ಭದ್ರತಾ ಪಡೆ ಹಾಗೂ ಎಟಿಸಿ ಕಂಟ್ರೋಲ್ ಟೀಂ ನಿಂದ ತನಿಖೆ ಶುರುವಾಗಿದೆ. ಅನಾಮಿಕ ಡ್ರೋನ್ ಹಾರಾಟದ ಬಗ್ಗೆ ಪೊಲೀಸರಿಗೆ ಏರ್ಪೋಟ್ ಸಿಬ್ಬಂದಿ ದೂರು ನೀಡಿದ್ದು, ಕೂಡಲೇ ಡ್ರೋನ್ ಹಾರಾಟದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಷ್ಟೊಂದು ಸೆಕ್ಯೂರಿಟಿ ನಡುವೆಯೂ ಡ್ರೋನ್ ಹಾರಲು ಹೇಗೆ ಸಾಧ್ಯ ಎಂಬ ಅನುಮಾನ ಇದೀಗ ಶುರುವಾಗಿದೆ.
ಇದನ್ನೂ ಓದಿ:ಸಲೂನ್ವೊಂದರಲ್ಲಿ ಕೆಲಸ ಮಾಡಲು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ವಿಮಾನ ನಿಲ್ದಾಣದಿಂದ ನಾಪತ್ತೆ
ವಿದೇಶಿ ಮಹಿಳೆ ಬಳಿ ಕಂತೆ ಕಂತೆ ದೇಶಿ ಹಣ
ದೇವನಹಳ್ಳಿ: ಏರ್ಪೋಟ್ ಭದ್ರತಾ ಪಡೆ (CISF ) ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಏರ್ಪೋಟ್ ಗೆ ಬಂದಿದ್ದ ವಿದೇಶಿ ಮಹಿಳೆ ಬಳಿ ಕಂತೆ ಕಂತೆ ದೇಶಿ ಹಣ ಪತ್ತೆಯಾಗಿದೆ. ಅದನ್ನು ಕಂಡು ಅಧಿಕಾರಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಈ ಮಹಿಳೆ ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದಳು. ಈ ವೇಳೆ ಲಗೇಜ್ ಸ್ಕ್ಯಾನಿಂಗ್ ಮಾಡಿದ್ದು, ಮಹಿಳೆಯ ಬ್ಯಾಗ್ ನಲ್ಲಿ 15 ಲಕ್ಷ ನಗದು ಹಣ ಕಂಡು ಬಂದಿದೆ. ಹಣದ ಸಮೇತ ಮಹಿಳೆಯನ್ನು ಏರ್ಪೋಟ್ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ನಂತರ ಹಣ ಹಾಗೂ ಮಹಿಳೆಯನ್ನ ಆಧಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಹಿಳೆಯ ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:25 am, Wed, 27 September 23