Bengaluru Power Cut: ಇಂದಿನಿಂದ ಶನಿವಾರದವರೆಗೆ ಬೆಂಗಳೂರು ನಗರ, ಗ್ರಾಮಾಂತರದ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ವಿದ್ಯುತ್ ಸರಬರಾಜು ಕಂಪನಿಗಳು ನಿರ್ವಹಣಾ ನಿರ್ವಹಿಸುವುದರಿಂದ ಬೆಂಗಳೂರಿನಲ್ಲಿ ಶನಿವಾರದವರೆಗೆ ನಿಗದಿತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಯಾವ, ಯಾವ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ, ಸಮಯ ಮತ್ತು ಇತರ ವಿವರ ಇಲ್ಲಿದೆ ಓದಿ
ಬೆಂಗಳೂರು ಸೆ.28: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (BESCOM) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಮಾಹಿತಿಯ ಪ್ರಕಾರ, ವಿದ್ಯುತ್ ಸರಬರಾಜು ಕಂಪನಿಗಳು (KPTCL) ಹಲವಾರು ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿರುವುದರಿಂದ ಬೆಂಗಳೂರು ನಗರ (Bengaluru) ಮತ್ತು ಗ್ರಾಮಾಂತರ (Bengaluru Rural) ಜಿಲ್ಲೆಯ ಈ ಪ್ರದೇಶಗಳಲ್ಲಿ ತಿಂಗಳ ಅಂತ್ಯದಲ್ಲಿ ಈ ಕೆಳಗಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇಂದಿನಿಂದ ಶನಿವಾರದವರೆಗೂ ವಿದ್ಯುತ್ ಕಡಿತವಾಗುವ ಪ್ರದೇಶಗಳು
ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್.ಎಚ್.ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದೊಡ್ಡಸೀಬಿ, ತಿರಗದಹಳ್ಳಿ, ದುರ್ಗದಹಳ್ಳಿ, ದುರ್ಗದಹಳ್ಳಿ ಹಟ್ಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್ ಮತ್ತು ಬ್ಯಾಡರಹಳ್ಳಿ.
ಸೆಪ್ಟೆಂಬರ್ 28, ಗುರುವಾರ
ಬಿಲಂಕೋಟೆ ಪ್ರದೇಶ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ, ಕುಲವನಹಳ್ಳಿ ಗ್ರಾಮ ಪಂಚಾಯತ್, ಹರೇಬೋಮನಹಳ್ಳಿ ಗ್ರಾಮ ಪಂಚಾಯತ್, ಗುಂಡೇನಹಳ್ಳಿ, ಕುಲವನಹಳ್ಳಿ ಗ್ರಾಪಂ ಹಾಗೂ ಹರೇಬೋಮನಹಳ್ಳಿ ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಅಕ್ರಮ ಕೇಬಲ್ಗಳ ತೆರವಿಗೆ ಮುಂದಾದ ಬೆಸ್ಕಾಂ: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಇಂಟರ್ನೆಟ್ ಸ್ಥಗಿತ ಸಾಧ್ಯತೆ
ಸೆಪ್ಟೆಂಬರ್ 30, ಶನಿವಾರ
ಬೂದಿಹಾಳ್, ಕಾಚನಹಳ್ಳಿ, ವೀರರಂಜಿಪುರ, ಭುವನೇಶ್ವರಿ, ಯರಮಂಚನಹಳ್ಳಿ, ಫಿಡೆಲಿಟಿ, ಫಿಲಿಪ್ಸ್, ಐಕ್ಯುಬೇಟರ್, ಐಬಿಎಮ್ ಡಿ4 ಬ್ಲಾಕ್, ಐಬಿಎಮ್ ಡಿ1 ಮತ್ತು ಡಿ2 ಬ್ಲಾಕ್, ಐಬಿಎಮ್ ಡಿ3 ಬ್ಲಾಕ್, ಎಫ್2 ಬ್ಲಾಕ್, ಎಲ್6 ಸೀಮೆನ್ಸ್, ಮಾನ್ಯತಾ ರೆಸಿಡೆನ್ಸಿ, ಬಿಟಿಎಸ್ ಲ್ಯೂಸೆಂಟ್, ಸಿಜೆ4 ಹೆಚ್ ಬ್ಲಾಕ್, ಗಾಡ್ರೆ ಅಪಾರ್ಟ್‌ಮೆಂಟ್, ಹೆಬ್ಬಾಳ ಕೆಂಪಾಪುರ, ವಿನಾಯಕ ಲೇಔಟ್, ಚಿರಂಜೀವಿ ಲೇಔಟ್, ವೆಂಕಟೇಗೌಡ ಲೇಔಟ್, ಜೆಎನ್‌ಸಿ, ಎಲ್ 5 ನೋಕಿಯಾ ಬ್ಲಾಕ್, ಜಿ1 ಬ್ಲಾಕ್, ಎಂಫಾರ್, ಮಧುವನ ಎಂ2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್‌ಕ್ಲೇವ್, ಮೇಸ್ತ್ರಿ ಕರ್ನಾಟಕ, ಮೇಸ್ತ್ರಿ ಪಾಳ್ಯ, ಬಿ.ನಾರಾಯಣಪುರ ಕ್ರಾಸ್, ಬಿಡಿಎಸ್ ಲೇಔಟ್, ಮಂತ್ರಿ ಲಿಥೋಸ್, ಕಾಫಿ ಬೋರ್ಡ್ ಲೇಔಟ್, ಫಾತಿಮಾ ಲೇಔಟ್, ಅಮರಜೋತಿ ಲೇಔಟ್ ಮತ್ತು ಮರಿಯಣ್ಣ ಪಾಳ್ಯಗಳಲ್ಲಿ ಪವರ್ ಕಟ್ ಆಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ