AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿ ವಾರ್ಡ್ ಮರುವಿಂಗಡಣೆ: ಯಾವೆಲ್ಲ ವಾರ್ಡ್​ಗಳ ಹೆಸರು ಬದಲಾವಣೆ? ಇಲ್ಲಿದೆ ವಿವರ

ಈ ಹಿಂದೆ ಬಿಜೆಪಿ ಸರ್ಕಾರ 198 ವಾರ್ಡ್​ಗಳನ್ನ 243 ವಾರ್ಡ್​ಗಳನ್ನಾಗಿ ವಿಂಗಡಣೆ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ 243 ವಾರ್ಡ್‌ಗಳನ್ನ 225 ವಾರ್ಡ್‌ಗಳಿಗೆ ಇಳಿಸಿದೆ. ಆಗಸ್ಟ್ 18 ರಂದು, 225 ವಾರ್ಡ್‌ಗಳ ಪುನರ್ ವಿಂಗಡಣೆಯ ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ ಕೆಲ ವಾರ್ಡ್ ಹೆಸರುಗಳನ್ನು ಬದಲಾಯಿಸಲಾಗಿದೆ. 

ಬಿಬಿಎಂಪಿ ವಾರ್ಡ್ ಮರುವಿಂಗಡಣೆ: ಯಾವೆಲ್ಲ ವಾರ್ಡ್​ಗಳ ಹೆಸರು ಬದಲಾವಣೆ? ಇಲ್ಲಿದೆ ವಿವರ
ಬಿಬಿಎಂಪಿ
ಗಂಗಾಧರ​ ಬ. ಸಾಬೋಜಿ
|

Updated on:Sep 27, 2023 | 9:54 PM

Share

ಬೆಂಗಳೂರು, ಸೆಪ್ಟೆಂಬರ್​ 27: ಈ ಹಿಂದೆ ಬಿಜೆಪಿ ಸರ್ಕಾರ 198 ವಾರ್ಡ್​ಗಳನ್ನ 243 ವಾರ್ಡ್​ಗಳನ್ನಾಗಿ ವಿಂಗಡಣೆ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ 243 ವಾರ್ಡ್‌ಗಳನ್ನ 225 ವಾರ್ಡ್‌ಗಳಿಗೆ ಇಳಿಸಿದೆ. 2011ರ ಜನಗಣತಿ ಆಧಾರದ ಮೇಲೆ ವಾರ್ಡ್​ಗಳನ್ನ ಪುನರ್ ವಿಂಗಡಣೆ (ward reorganisation) ಮಾಡಿ ಅಂತಿಮಗೊಳಿಸಿದೆ. ಆಗಸ್ಟ್ 18 ರಂದು, 225 ವಾರ್ಡ್‌ಗಳ ಪುನರ್ ವಿಂಗಡಣೆಯ ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿತ್ತು. 15 ದಿನಗಳ ಒಳಗಾಗಿ ಆಕ್ಷೇಪಣೆ, ಸಲಹೆ ನೀಡುವಂತೆ ಸಾರ್ವಜನಿಕರನ್ನು ಕೋರಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ ಕೆಲ ವಾರ್ಡ್ ಹೆಸರುಗಳನ್ನು ಬದಲಾಯಿಸಲಾಗಿದೆ.

ಬದಲಾದ ವಾರ್ಡ್​ಗಳು ಹೀಗಿವೆ

  • ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬ್ಯಾಡರಹಳ್ಳಿ ವಾರ್ಡ್​ನ್ನು ಲಿಂಗಧೀರನಹಳ್ಳಿ.
  • ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್​ ಅನ್ನು ರಾಜೀವ್​ ನಗರ.
  • ನಂದಿನಿ ಲೇಔಟ್ ವಾರ್ಡ್​ ಅನ್ನು ಡಾ. ಪುನೀತ್ ರಾಜ್​ಕುಮಾರ್​ ವಾರ್ಡ್​.
  •  ಡಾ. ಪುನೀತ್ ರಾಜ್​ಕುಮಾರ್ ವಾರ್ಡ್​ ಅನ್ನು ನಾಲ್ವಡಿ ಕೃಷ್ಣರಾಜ ಒಡೆಯರ್.
  • ಸರ್ವಜ್ಞನಗರ ಕ್ಷೇತ್ರದ ಕೆಎಸ್ಎಲ್​ ಲೇಔಟ್ ವಾರ್ಡ್​ ಅನ್ನು ಸುಬ್ಬಯ್ಯನಪಾಳ್ಯ.
  • ಶಿವಾಜಿನಗರ ಕ್ಷೇತ್ರದ ಎಸ್.ಆರ್.ನಗರ ವಾರ್ಡ್​ ಅನ್ನು ಸಂಪಂಗಿರಾಮನಗರ.
  • ಶಾಂತಿನಗರ ಕ್ಷೇತ್ರದ ಶಾಂತಲಾನಗರ ವಾರ್ಡ್​ ಅನ್ನು ಅಶೋಕನಗರ.
  • ರಾಜಾಜಿನಗರ ಕ್ಷೇತ್ರ ಹಾಗೂ ಬಸವನಗುಡಿ ಕ್ಷೇತ್ರಗಳಲ್ಲಿ ತಲಾ ಮೂರು ವಾರ್ಡ್​ಗಳ ಹೆಸರನ್ನು ಬದಲಿಸಲಾಗಿದೆ.
  • ರಾಜಾಜಿನಗರ ಕ್ಷೇತ್ರದ ಪ್ರಕಾಶನಗರ ವಾರ್ಡ್​ ಅನ್ನು ಶ್ರೀರಾಮಮಂದಿರ.
  • ಶ್ರೀರಾಮಮಂದಿರ ವಾರ್ಡ್​ ಅನ್ನು ಶಿವನಗರ ಹಾಗೂ ಶಿವನಗರ ವಾರ್ಡ್​ ಅನ್ನು ರಾಜಾಜಿನಗರ.
  • ಬಸವನಗುಡಿ ಕ್ಷೇತ್ರದಲ್ಲಿ ಹನುಮಂತನಗರ ವಾರ್ಡ್​ ಅನ್ನು ಗವಿಗಂಗಾಧರೇಶ್ವರ, ಬಸವನಗುಡಿ ವಾರ್ಡ್​ ಅನ್ನು ದೊಡ್ಡ ಗಣಪತಿ ಹಾಗೂ ಗಿರಿನಗರ ವಾರ್ಡ್ ಸ್ವಾಮಿ ವಿವೇಕಾನಂದ ವಾರ್ಡ್.
  • ಚಿಕ್ಕಪೇಟೆ ಕ್ಷೇತ್ರದ ಸೋಮೇಶ್ವರನಗರ ವಾರ್ಡ್ ಅನ್ನು ಬಿ.ವೆಂಕಟರೆಡ್ಡಿ ಎಂದು ಹೆಸರು ಬದಲಾವಣೆ ಮಾಡಲಾಗಿದೆ.

ಬಿಬಿಎಂಪಿ ಚುನಾವಣೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್​ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:52 pm, Wed, 27 September 23

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?