ಅಕ್ರಮ ಕೇಬಲ್​ಗಳ ತೆರವಿಗೆ ಮುಂದಾದ ಬೆಸ್ಕಾಂ: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಇಂಟರ್ನೆಟ್ ಸ್ಥಗಿತ ಸಾಧ್ಯತೆ

ನಗರದಲ್ಲಿ ಅಕ್ರಮವಾಗಿ ವಿದ್ಯುತ್ ಕಂಬಗಳಿಗೆ ಹಾಕಲಾಗಿರುವ ಆಪ್ಟಿಕಲ್ ಫೈಬರ್, ಡೇಟಾ ಮತ್ತು ಡಿಶ್ ಕೇಬಲ್‌ಗಳನ್ನು ತೆಗೆದುಹಾಕಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮುಂದಾಗಿದ್ದು, ಹಾಗಾಗಿ ಸಿಲಿಕಾನ್​ ಸಿಟಿಯಲ್ಲಿ ಶೀಘ್ರದಲ್ಲೇ ಇಂಟರ್ನೆಟ್ ಸ್ಥಗಿತ ಉಂಟಾಗಲಿದೆ.

ಅಕ್ರಮ ಕೇಬಲ್​ಗಳ ತೆರವಿಗೆ ಮುಂದಾದ ಬೆಸ್ಕಾಂ: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಇಂಟರ್ನೆಟ್ ಸ್ಥಗಿತ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Aug 23, 2023 | 8:28 PM

ಬೆಂಗಳೂರು, ಆಗಸ್ಟ್​ 23: ಅಕ್ರಮವಾಗಿ ವಿದ್ಯುತ್ ಕಂಬಗಳಿಗೆ ಹಾಕಲಾಗಿರುವ ಆಪ್ಟಿಕಲ್ ಫೈಬರ್ ಕೇಬಲ್‌ಗಳು, ಡೇಟಾ ಕೇಬಲ್‌ಗಳು ಮತ್ತು ಡಿಶ್ ಕೇಬಲ್‌ಗಳನ್ನು ತೆಗೆದುಹಾಕಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮುಂದಾಗಿದ್ದು, ಹಾಗಾಗಿ ಸಿಲಿಕಾನ್​ ಸಿಟಿ ಶೀಘ್ರದಲ್ಲೇ ಇಂಟರ್ನೆಟ್ ಸ್ಥಗಿತ ಉಂಟಾಗಲಿದೆ. ಇತ್ತೀಚೆಗೆ ಪಾದಚಾರಿಗಳ ಮೇಲೆ ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ಅವಘಡಗಳು ಸಂಭವಿಸಿತ್ತು. ಹಾಗಾಗಿ ಅಕ್ರಮವಾಗಿ ಹಾಕಲಾದ ಕೇಬಲ್‌ಗಳನ್ನು ತೆಗೆದುಹಾಕಲು ಬೆಸ್ಕಾಂ ಮುಂದಾಗಿದೆ.

ಸದ್ಯ ಅಕ್ರಮವಾಗಿ ಹಾಕಿರುವ ಕೇಬಲ್‌ಗಳನ್ನು ಒಂದು ವಾರದೊಳಗೆ ತೆಗೆಯುವಂತೆ ಸಂಬಂಧಪಟ್ಟ ನಿರ್ವಾಹಕರಿಗೆ ಬೆಸ್ಕಾಂ ಸೂಚನೆ ನೀಡಿದೆ. ಒಂದು ವೇಳೆ ಕೇಬಲ್​ಗಳನ್ನು ತೆಗೆಯದಿದ್ದಲ್ಲಿ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಬೆಸ್ಕಾಂ ತಿಳಿಸಿದೆ.

ಇದನ್ನೂ ಓದಿ: ಚಿಣ್ಣರ ಅಂಗಳ ಅಂಗನವಾಡಿಗಳಿಗೆ ಆಸರೆಯಾಗಲು ಮುಂದಾದ ಗುಂಡೂರಾವ್ ಪುತ್ರಿ ಅನನ್ಯ ರಾವ್

ನಗರದಲ್ಲಿ ಅಕ್ರಮವಾಗಿ ಹಾಕಲಾಗಿರುವ ಇಂಟರ್ನೆಟ್ ಕೇಬಲ್‌ಗಳನ್ನು ತೆಗೆಯುವುದರಿಂದ ಮನೆಯಿಂದ ಕೆಲಸ ಮಾಡುತ್ತಿರುವ ಜನರು ಮತ್ತು ನಗರದಲ್ಲಿನ ಕಂಪನಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆಆರ್ ಪುರಂ ನಡುವೆ ಇರುವ ಕಂಪನಿಗಳನ್ನು ಪ್ರತಿನಿಧಿಸುವ ಔಟರ್ ರಿಂಗ್ ರೋಡ್ ಕಂಪನಿಗಳ ಅಸೋಸಿಯೇಷನ್​ ಈ ಕುರಿತು ಟ್ವೀಟ್​ ಮಾಡಿದ್ದು, ಇಂಟರ್ನೆಟ್​ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸುವಂತೆ ಬೆಸ್ಕಾಂಗೆ ವಿನಂತಿಸಿದೆ.

2019 ರಲ್ಲಿ ಅಕ್ರಮವಾಗಿ ಹಾಕಲಾದ ಇಂಟರ್ನೆಟ್ ಕೇಬಲ್‌ಗಳನ್ನು ಬಿಬಿಎಂಪಿ ತೆಗೆದ ನಂತರ ನಗರದ ಹೊರ ವರ್ತುಲ ರಸ್ತೆ, ಸರ್ಜಾಪುರ, ವೈಟ್‌ಫೀಲ್ಡ್ ಮತ್ತು ಮಾರತ್ತಹಳ್ಳಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಇಂಟರ್ನೆಟ್ ಸ್ಥಗಿತಗೊಂಡಿತ್ತು ಎಂದು ನ್ಯೂಸ್​ 9 ವರದಿ ಮಾಡಿದೆ.

ಇದನ್ನೂ ಓದಿ: Bengaluru Traffic: ಕೆಟ್ಟು ನಿಂತ ವಾಹನದಿಂದ ಬೆಂಗಳೂರಿನ ಸೀಗೇಹಳ್ಳಿ ಬಳಿ ಟ್ರಾಫಿಕ್ ಜಾಮ್

ಆಗಸ್ಟ್ 21 ರಂದು ಬೆಳ್ಳಂದೂರು ಸಮೀಪದ ದೇವರಬೀಸನಹಳ್ಳಿಯಲ್ಲಿ ಎಂಎನ್‌ಸಿ ಉದ್ಯೋಗಿ ಆಗಿರುವ 23 ವರ್ಷದ ಕೆವಿನ್ ವರ್ಗೀಸ್​ ಎಂಬುವವರ ಮೇಲೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಗಾಯಗೊಂಡಿದ್ದರು. ಅದೇ ರೀತಿಯಾಗಿ ನಿನ್ನೆ ಸುದ್ದುಗುಂಟೆಪಾಳ್ಯ ಬಳಿ ವಿದ್ಯುತ್ ತಂತಿ ತಗುಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಗೆ ಸುಟ್ಟ ಗಾಯಗಳಾಗಿದ್ದವು. ಇನ್ನು ಕಂಬಕ್ಕೆ ಹಾಕಿದ್ದ ಕೇಬಲ್​ ನೀರಿನ ಟ್ಯಾಂಕರ್​​ಗೆ ಸಿಲುಕಿದ ಪರಿಣಾಮ ವಿದ್ಯುತ್ ಕಂಬ ನೆಲಕ್ಕೆ ಅಪ್ಪಳಿಸಿದ ಘಟನೆ ನಡೆದಿತ್ತು.

ಅಕ್ರಮವಾಗಿ ನೇತುಹಾಕಿರುವ ಕೇಬಲ್‌ಗಳಿಂದ ಅನೇಕ ಸಂದರ್ಭಗಳಲ್ಲಿ, ಪಾದಚಾರಿಗಳು ತೊಂದರೆಗೆ ಒಳಗಾಗಿದ್ದಾರೆ. ಹಾಗಾಗಿ ವಿದ್ಯುತ್ ಕಂಬಗಳಿಂದ ಕೇಬಲ್‌ಗಳನ್ನು ನೇತುಹಾಕಿರುವ ಬಗ್ಗೆ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ