Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಣ್ಣರ ಅಂಗಳ ಅಂಗನವಾಡಿಗಳಿಗೆ ಆಸರೆಯಾಗಲು ಮುಂದಾದ ಗುಂಡೂರಾವ್ ಪುತ್ರಿ ಅನನ್ಯ ರಾವ್

ರಾಜ್ಯದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದಲೇ ಅಂಗನವಾಡಿಳಿಗೆ ಕಾಯಕಲ್ಪ ನೀಡಲು ಯೋಜನೆ ರೂಪಿಸಿದ್ದಾರೆ. ಗಾಂಧಿನಗರದ 85 ಅಂಗನವಾಡಿಗಳನ್ನ ಗುರುತಿಸಲಾಗಿದ್ದು, ಪ್ರತಿಯೊಂದು ಅಂಗನವಾಡಿಗಳನ್ನ ಸುವ್ಯವಸ್ಥೆಗೆ ತರಲು ನಿರ್ಧರಿಸಲಾಗಿದೆ.‌

ಚಿಣ್ಣರ ಅಂಗಳ ಅಂಗನವಾಡಿಗಳಿಗೆ ಆಸರೆಯಾಗಲು ಮುಂದಾದ ಗುಂಡೂರಾವ್ ಪುತ್ರಿ ಅನನ್ಯ ರಾವ್
ಸಚಿವ ದಿನೇಶ್ ಗುಂಡೂರಾವ್, ಪುತ್ರಿ ಅನನ್ಯ ರಾವ್
Follow us
ಗಂಗಾಧರ​ ಬ. ಸಾಬೋಜಿ
|

Updated on:Aug 23, 2023 | 7:20 PM

ಬೆಂಗಳೂರು, ಆಗಸ್ಟ್​ 23: ಬಡ ಮಕ್ಕಳ ನಲಿ ಕಲಿ ತಾಣ. ಚಿಣ್ಣರ ಅಂಗನವಾಡಿಗಳಿಗೆ ಚೆಂದದ ರೂಪ ನೀಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರ ಪುತ್ರಿ ಅನನ್ಯ ರಾವ್ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.‌ ರಾಜ್ಯದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದಲೇ ಅಂಗನವಾಡಿಳಿಗೆ ಕಾಯಕಲ್ಪ ನೀಡಲು ಯೋಜನೆ ರೂಪಿಸಿದ್ದಾರೆ. ಗಾಂಧಿನಗರದ 85 ಅಂಗನವಾಡಿಗಳನ್ನ ಗುರುತಿಸಲಾಗಿದ್ದು, ಪ್ರತಿಯೊಂದು ಅಂಗನವಾಡಿಗಳನ್ನ ಸುವ್ಯವಸ್ಥೆಗೆ ತರಲು ನಿರ್ಧರಿಸಲಾಗಿದೆ.‌

ದುಸ್ಥಿಯಲ್ಲಿರುವ ಅಂಗನವಾಡಿಗಳನ್ನ ಆದ್ಯತೆಯ ಮೇರೆಗೆ ಮೊದಲು ಪುನಶ್ಚೇತನಗೊಳಿಸಲು ಯೋಜಿಸಲಾಗಿದೆ. ಅದಕ್ಕಾಗಿ ಪ್ರತಿ ಅಂಗನವಾಡಿಗೆ ತಗುಲುವ 2 ಲಕ್ಷ ರೂ. ವರೆಗಿನ ವೆಚ್ಚವನ್ನ ಆರ್ ಗುಂಡೂರಾವ್ ಫೌಂಡೇಶನ್ ವತಿಯಿಂದಲೇ ಭರಿಸಲು ಅನನ್ಯ ರಾವ್ ಮುಂದಾಗಿದ್ದಾರೆ.

ಆರ್. ಗುಂಡೂರಾವ್ ಫೌಂಡೇಶನ್ ಕಾರ್ಯಗಳನ್ನ ನೋಡಿಕೊಳ್ಳುತ್ತಿರುವ ಅನನ್ಯ ರಾವ್, ಅಂಗನವಾಡಿಗಳಿಗೆ ಆಸರೆಯಾಗಬೇಕು ಎಂಬ ಆಲೋಚನೆಯನ್ನ ತಮ್ಮ ತಂದೆ ದಿನೇಶ್ ಗುಂಡೂರಾವ್ ಬಳಿ ವ್ಯಕ್ತಪಡಿಸಿದ್ದರು. ಅಲ್ಲದೇ ಆರ್. ಗುಂಡೂರಾವ್ ಅವರ 30 ನೇ ಪುಣ್ಯ ಸ್ಮರಣೆಯ ಅಂಗವಾಗಿ ಮಾದರಿ ಅಂಗನವಾಡಿಯನ್ನೂ ದಿನೇಶ್ ಗುಂಡೂರಾವ್ ಅವರಿಂದ ಲೋಕಾರ್ಪಣೆಗೊಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿಯೂ ಆರಂಭವಾಗಲಿವೆ ಎಲ್​​ಕೆಜಿ, ಯುಕೆಜಿ; 262 ಶಾಲೆಗಳಲ್ಲಿ ಆರಂಭಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ಚಿಣ್ಣರ ಅಂಗಳ ಅಂಗನವಾಡಿಗಳು ಚೆಂದವಾಗಿರಬೇಕು. ಅಂಗನವಾಡಿಗಳು ಉತ್ತಮಗೊಂಡಷ್ಟೂ, ಮಕ್ಕಳಲ್ಲಿ ಆರಂಭದಲ್ಲಿಯೇ ಕಲಿಕಾ ಮನೋಭಾವ ಬೆಳೆಸಬಹುದು ಎಂಬ ಅಭಿಪ್ರಾಯವನ್ನ ಅನನ್ಯ ಅವರು ದಿನೇಶ್ ಗುಂಡೂರಾವ್ ಅವರ ಬಳಿ ವ್ಯಕ್ತಪಡಿಸಿದ್ದರು.

ಅಲ್ಲದೇ ಈ ಕಾರ್ಯಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಕೂಡ ಪ್ರೇರಣೆಯಾಗಿದ್ದಾರೆ. ಸಾಮಾನ್ಯ ಶಿಕ್ಷಕ ಕುಟುಂಬದಲ್ಲಿ ಜನಿಸಿದ್ದ ಆರ್. ಗುಂಡೂರಾವ್ ಶಿಕ್ಷಣದ ವಿಚಾರಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಅವರ ಸ್ಮರಣೆಯಲ್ಲಿ ಅಂಗನವಾಡಿಗಳಿಂದಲೇ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನ ಅವರ ಹೆಸರಿನ ಫೌಂಡೇಷನ್​ನಿಂದ ನೆರವೇರಿಸಬೇಕು ಎಂಬ ಅನನ್ಯ ಅವರ ಆಶಯಕ್ಕೆ ಸಚಿವ ದಿನೇಶ್ ಗುಂಡೂರಾವ್ ಬೆನ್ನುತಟ್ಟಿ ಬೆಂಬಲಿಸಿದ್ದಾರೆ.

ಅಂಗನವಾಡಿಗಳ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳುವುದರ ಜೊತೆಗೆ, ಗೋಡೆಗಳಿಗೆ ಬಣ್ಣದರ್ಪಣ, ಚೆಂದದ ಚಿತ್ತಾರಗಳನ್ನ ಬಿಡಿಸಲು ಸಲಹೆ ನೀಡಿದ್ದಾರೆ.‌ ಪ್ರತಿ ಅಂಗನವಾಡಿಗಳಿಗೂ ಅಗತ್ಯ ಪರಿಕರಗಳು, ಆಟೋಪಕರಣಗಳನ್ನ ಫೌಂಡೇಶನ್ ವತಿಯಿಂದ ನೀಡಲು ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಕೈ ಕೊಟ್ಟ ಮುಂಗಾರು, ನೀರಿಗಾಗಿ ಬೀದಿಗಿಳಿದು ರೈತರ ಹೋರಾಟ

ವಿಶೇಷವಾಗಿ ಸೃಜನಾತ್ಮಕ ಗುಣಮಟ್ಟದ ಶಿಕ್ಷಣ ಅಗತ್ಯ. ಅಂಗನವಾಡಿಗಳಿಗೆ 15 ರಿಂದ 20 ಮಕ್ಕಳು ಬಂದರು, ಅವರು ಬಡ ಕುಟುಂಬಗಳಿಂದ ಬಂದವರಾಗಿದ್ದು, ಗುಣಮಟ್ಟದ ಶಿಕ್ಷಣದಿಂದ ಹಿಂದುಳಿಯಬಾರದು. ವಿಭಿನ್ನ ತಂತ್ರಗಳ ಮೂಲಕ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವ ಶಿಕ್ಷಣ ಬಡ ಮಕ್ಕಳಿಗೂ ಸಿಗಬೇಕು.

ಈ ನಿಟ್ಟಿನಲ್ಲಿ ಅಗತ್ಯ ಪಾಠೋಪಕರಣಗಳನ್ನ ನೀಡುವುದರ ಜೊತೆಗೆ, ಶಿಕ್ಷಕರಿಗೂ ತರಬೇತಿ ನೀಡುವಂತೆ ದಿನೇಶ್ ಗುಂಡೂರಾವ್ ಫೌಂಡೇಷನ್​ಗೆ ಸಲಹೆ ನೀಡಿದ್ದಾರೆ. ನೂರಿತ ತಜ್ಞರನ್ನ ಕರೆಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮಗಳನ್ನೂ ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲು ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:19 pm, Wed, 23 August 23

ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?
ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು