18 ವರ್ಷದ ನಂತರ ಭರ್ಜರಿ ಒತ್ತುವರಿ ತೆರವು ಕಾರ್ಯಾಚರಣೆ, ಒಂದೇ ದಿನದಲ್ಲಿ 120 ಎಕರೆ ಅರಣ್ಯ ಭೂಮಿ ಸರ್ಕಾರಕ್ಕೆ ವಾಪಸ್​!

ಕೋಲಾರ ಬರೋಬ್ಬರಿ ಹದಿನೆಂಟು ವರ್ಷಗಳ ನಂತರ ಅರಣ್ಯ ಇಲಾಖೆಯಿಂದ ಭರ್ಜರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ, ಅದೂ ಬೆಳಗಿನ ಜಾವ ಸುಮಾರು 3 ಗಂಟೆಯಲ್ಲಿ ಈ ಬೃಹತ್​ ಕಾರ್ಯ ನಡೆದಿದೆ. ಒಂದೇ ದಿನದಲ್ಲಿ 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು..! ಹೌದು ಕೋಲಾರ ಜಿಲ್ಲೆ ಶ್ರೀನಿವಾಸಪುರದ ಹಲವು ಗ್ರಾಮಗಳಲ್ಲಿ ಹೀಗೆ ಅರಣ್ಯ ಇಲಾಖೆಯ ಜೆಸಿಬಿಗಳು ಜೋರಾಗಿ ಅಬ್ಬರಿಸಿವೆ.

18 ವರ್ಷದ ನಂತರ ಭರ್ಜರಿ ಒತ್ತುವರಿ ತೆರವು ಕಾರ್ಯಾಚರಣೆ, ಒಂದೇ ದಿನದಲ್ಲಿ 120 ಎಕರೆ ಅರಣ್ಯ ಭೂಮಿ ಸರ್ಕಾರಕ್ಕೆ ವಾಪಸ್​!
ಬೆಳ್ಳಂಬೆಳಿಗ್ಗೆ ಭರ್ಜರಿ ಕಾರ್ಯಾಚರಣೆ ನೂರಾರು ಎಕರೆ ಭೂಮಿ ಒತ್ತುವರಿ ತೆರವು..!
Follow us
| Updated By: ಸಾಧು ಶ್ರೀನಾಥ್​

Updated on: Aug 23, 2023 | 3:29 PM

ಇವತ್ತು ಕೋಲಾರ ಜಿಲ್ಲೆ ಶ್ರೀನಿವಾಸಪುರದ ಹಲವು ಗ್ರಾಮಗಳಲ್ಲಿ (Srinivaspur in Kolar district) ಸೂರ್ಯ ಉದಯಕ್ಕೂ ಮುನ್ನವೇ ಜೆಸಿಬಿಗಳ ಅಬ್ಬರ ಜೋರಾಗಿತ್ತು, ಸುಮಾರು 25 ಕ್ಕೂ ಹೆಚ್ಚು ಜೆಸಿಬಿಗಳ ಮೂಲಕ 200 ಕ್ಕೂ ಹೆಚ್ಚು ಪೊಲೀಸ್​ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಫೀಲ್ಡಿಗಿಳಿದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಅರಣ್ಯ ಭೂಮಿಯನ್ನು (Forest Land Encroachment) ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ,ಇಷ್ಟು ವರ್ಷಗಳಿಂದ ಅರಣ್ಯ ಇಲಾಖೆಯ ಉಸಿರುಗಟ್ಟುವಂತೆ ಮಾಡಿದ್ದ ಒತ್ತುವರಿದಾರರ ಸೊಕ್ಕು ಅಡಗಿಸಿದ್ದಾರೆ..

ಕೋಲಾರ: ಬೆಳ್ಳಂಬೆಳಿಗ್ಗೆ ಭರ್ಜರಿ ಕಾರ್ಯಾಚರಣೆ ನೂರಾರು ಎಕರೆ ಭೂಮಿ ಒತ್ತುವರಿ ತೆರವು..!

ಸಾಲು ಸಾಲಾಗಿ ಕಾರ್ಯಾಚರಣೆಗೆ ಇಳಿಯುತ್ತಿರುವ ಜೆಸಿಬಿಗಳು, ಮುರಿದು ಬಿದ್ದಿರುವ ಬೃಹತ್​ ಮಾವಿನ ಮರಗಳು, ನೆಲಸಮವಾಗಿರುವ ಕಟ್ಟಡಗಳು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಬಿಗಿ ಬಂದೋಬಸ್ತ್​, ಈ ಎಲ್ಲಾ ದೃಷ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ. ಹೌದು ಇವತ್ತು ಶ್ರೀನಿವಾಸಪುರ ತಾಲ್ಲೂಕು ಹೊಗಳಗೆರೆ, ಯಲ್ದೂರು ಅರಣ್ಯ ಪ್ರದೇಶದಲ್ಲಿ ಸೂರ್ಯ ಹುಟ್ಟುವ ಮೊದಲೇ ಜೆಸಿಬಿಗಳ ಅಬ್ಬರ ಅಲ್ಲಿ ಜೋರಾಗಿತ್ತು, ಸುಮಾರು 25ಕ್ಕೂ ಹೆಚ್ಚು ಜೆಸಿಬಿಗಳು ಕಾರ್ಯಾಚರಣೆಗೆ ಇಳಿದಿದ್ದವು, ಸುಮಾರು 200ಕ್ಕೂ ಹೆಚ್ಚು ಪೊಲೀಸ್​ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಬಿಗಿ ಬಂದೋಬಸ್ತ್​ನಲ್ಲಿ ಕಾರ್ಯಾಚರಣೆ ಆರಂಭವಾಗಿತ್ತು. ಕೋಲಾರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 120ಕ್ಕೂ ಹೆಚ್ಚು ಎಕರೆಯಷ್ಟು ಒತ್ತುವರಿಯಾಗಿದ್ದ ಅರಣ್ಯ ಭೂಮಿಯನ್ನು ತೆರವುಗೊಳಿಸಲಾಗಿದೆ.

ಕೋಲಾರ: ಹದಿನೆಂಟು ವರ್ಷಗಳಿಂದ ತೆರವು ಕಾರ್ಯಾಚರಣೆಗೆ ನಡೆಯುತ್ತಿದ್ದ ಹಗ್ಗ ಜಗ್ಗಾಟ..!

2006-2007ರಿಂದಲೂ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಹಗ್ಗಜಗ್ಗಾಟ ನಡೆಯುತ್ತಲೇ ಇತ್ತು, ಅದರಲ್ಲೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಒಂದರಲ್ಲೇ ಸುಮಾರು 3000 ಎಕರೆಯಷ್ಟು ಅರಣ್ಯ ಭೂಮಿ ಒತ್ತುವರಿಯಾಗಿದೆ ಅನ್ನೋ ಮಾಹಿತಿ ಅರಣ್ಯ ಇಲಾಖೆಯ ಬಳಿ ಇತ್ತು ಆದರೂ ತೆರವು ಕಾರ್ಯಾಚರಣೆ ಮಾತ್ರ ಅಷ್ಟು ಸುಲಭದ್ದಾಗಿರಲಿಲ್ಲ, 450ಕ್ಕೂ ಹೆಚ್ಚು ಜನ ಒತ್ತುವರಿದಾರರು ನಕಲಿ ದಾಖಲೆಗಳನ್ನು ಹಿಡಿದು ಕೋರ್ಟ್​ ಮೆಟ್ಟಿಲೇರಿದ್ದರು, ಹಲವು ಬಾರಿ ತೆರವಿಗೆ ತಡೆಯಾಜ್ಞೆ ತರುತ್ತಿದ್ದರು.

Also Read: ಕೋಲಾರ ಜಿಲ್ಲೆಯಲ್ಲೂ ಸರ್ಕಾರಿ ಭೂ ಅಕ್ರಮಗಳ ತನಿಖೆಗಿಳಿದ ತಹಶೀಲ್ದಾರುಗಳ​ ತಂಡ

ಸರ್ಕಾರದ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸಿ ಕಾರ್ಯಾಚರಣೆ ನಡೆಯದಂತೆ ನೋಡಿಕೊಳ್ಳುತ್ತಿದ್ದರು, ಇದೆಲ್ಲವನ್ನೂ ಮೀರಿ ಕೋರ್ಟ್​ನಲ್ಲಿ ಅರಣ್ಯ ಇಲಾಖೆ ಪರವಾಗಿ ಆದೇಶ ಬಂದಿದ್ದರು ಕೂಡಾ ಕೆಲವು ರಾಜಕೀಯ ಪ್ರಭಾವಗಳು ಕಳೆದ ಹದಿನೆಂಟು ವರ್ಷಗಳಿಂದ ಒತ್ತುವರಿ ತೆರವು ಮಾಡಲು ಅಧಿಕಾರಿಗಳ ಕೈ ಕಟ್ಟಿಹಾಕಿದ್ದವು. ಆದರೆ ಇವತ್ತು ಯಾವುದೇ ಪ್ರಭಾವಕ್ಕೆ ಜಗ್ಗದೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು, ಕಾರ್ಯಾಚರಣೆ ಮಾಡುವ ಮೂಲಕ ಸುಮಾರು ನುರಾರು ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿದ್ದಾರೆ.

ಕೋಲಾರ: ಒತ್ತುವರಿ ತೆರವಿಗೆ ಅಡ್ಡಿ ಜೆಸಿಬಿ ಮೇಲೆ ಕಲ್ಲೂ ತೂರಾಟ..!

ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು, ಆರಂಭದಲ್ಲಿ ಕೆಲವು ಸ್ಥಳೀಯರು ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ್ದಾರೆ. ಜೆಸಿಬಿ ಮೇಲೆ ಕಲ್ಲುತೂರಾಟ ಕೂಡಾ ನಡೆಸಿದ್ದಾರೆ. ಆದರೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದ್ದಿಗಳ ನೆರವಿನಿಂದ ಕಾರ್ಯಾಚರಣೆಯನ್ನು ನಡೆಸಿದೆ. ಒತ್ತುವರಿಯಾಗಿದ್ದ ಜಮೀನನಲ್ಲಿ ಮಾವಿನ ತೋಟ, ಕೋಳಿ ಫಾರಂ, ಮನೆ, ಶೆಡ್​ ಗಳನ್ನು ನಿರ್ಮಾಣ ಮಾಡಲಾಗಿತ್ತು.

ಎಲ್ಲವನ್ನೂ ಕೂಡಾ ಸುಮಾರು 25ಕ್ಕೂ ಹೆಚ್ಚು ಜೆಸಿಬಿಗಳ ಮೂಲಕ ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುತ್ತಿದೆ. ಇಂದು ಯಾವುದೇ ಪ್ರಭಾವಕ್ಕೆ ಜಗ್ಗದೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮಾಡುವ ಮೂಲಕ ನೂರಾರು ಎಕರೆ ಭೂಮಿಯನ್ನು ಹಂತ ಹಂತವಾಗಿ ತೆರವು ಮಾಡುತ್ತಿದ್ದಾರೆ. ಸದ್ಯ ಮೊದಲ ಹಂತದಲ್ಲಿ ಇಂದು 120 ಎರಕೆ ತೆರವು ಮಾಡಿದ್ದು ಮುಂದಿನ ಹಂತದಲ್ಲಿ ಮತ್ತಷ್ಟು ತೆರವು ಕಾರ್ಯಾಚರಣೆ ಮಾಡಲಾಗುತ್ತದೆ ಅನ್ನೋದು ಅಧಿಕಾರಿಗಳ ಮಾತು.

Also Read: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂದಾಯ ಭೂಮಿ ಹಗರಣ -60 ರೆವೆನ್ಯೂ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆ

ಒಟ್ಟಾರೆ ನಸುಕಿನ ಜಾವದಲ್ಲೇ ಇವತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇಲಾಖೆಯ ಭೂಮಿ ಕಬಳಿಕೆ ಮಾಡಿ ದರ್ಪ ಮೆರೆಯುತ್ತಿದ್ದ ಒತ್ತುವರಿದಾರರಿಗೆ ತಮ್ಮ ಖಡಕ್​ ಕಾರ್ಯಾಚರಣೆ ಮೂಲಕ ಚಳಿ ಬಿಡಿಸಿದ್ದಾರೆ. ನಮ್ಮನ್ನು ಯಾರೂ ಏನು ಮಾಡೋದಕ್ಕೆ ಆಗೋದಿಲ್ಲ ಎಂದುಕೊಂಡು ಅರಣ್ಯ ಭೂಮಿಯಲ್ಲಿದ್ದ ಅಕ್ರಮ ನಿರ್ಮಾಣ ನೆಲಸಮ ಮಾಡಿ ಅರಣ್ಯ ಇಲಾಖೆ ಜಾಗದಲ್ಲಿ ಸಸಿಗಳನ್ನು ನೆಟ್ಟು ಸುಂದರ ಅರಣ್ಯ ಬೆಳೆಸಲು ಶ್ರೀಕಾರ ಹಾಡಿದ್ದಾರೆ.

ಕೋಲಾರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ