ಬೆಸ್ಕಾಂ ಗ್ರಾಹಕರೇ ಎಚ್ಚರ! ವಿದ್ಯುತ್​​ ಬಿಲ್​ ಬಾಕಿ ಇದೆ ಎಂದು ಕರೆ ಮಾಡುತ್ತಾರೆ ಸೈಬರ್ ಕಳ್ಳರು; ಅಕೌಂಟ್​​ನಿಂದ ಹಣ ಮಾಯ

ಬೆಂಗಳೂರಲ್ಲಿ ಸೈಬರ್ ಕಳ್ಳರು ಬೆಸ್ಕಾಂ ಗ್ರಾಹಕರಿಗೆ ಕರೆ ಮಾಡಿ ಬಿಲ್ ಬಾಕಿ ಇದೆ ಬೇಗ ಬಿಲ್ ಕಟ್ಟಿ ಇಲ್ಲವಾದರೆ ಕನೆಕ್ಷನ್ ಕಟ್ ಆಗುತ್ತದೆ ಎಂದು ಸಾವಿರಾರು ರೂಪಾಯಿ ದೋಚಿರುವ ಆರೋಪ ಕೇಳಿಬಂದಿದೆ.

ಬೆಸ್ಕಾಂ ಗ್ರಾಹಕರೇ ಎಚ್ಚರ! ವಿದ್ಯುತ್​​ ಬಿಲ್​ ಬಾಕಿ ಇದೆ ಎಂದು ಕರೆ ಮಾಡುತ್ತಾರೆ ಸೈಬರ್ ಕಳ್ಳರು; ಅಕೌಂಟ್​​ನಿಂದ ಹಣ ಮಾಯ
ಸಾಂದರ್ಭಿಕ ಚಿತ್ರ
Follow us
| Updated By: ವಿವೇಕ ಬಿರಾದಾರ

Updated on:Jul 08, 2023 | 8:42 AM

ಬೆಂಗಳೂರು: ಕರ್ನಾಟಕ ಸರ್ಕಾರ (Karnataka Government) ಮಹತ್ವದ 5 ಗ್ಯಾರಂಟಿ (5 Guarantee) ಯೋಜನೆಗಳಲ್ಲಿ ಒಂದಾದ “ಗೃಹ ಜ್ಯೋತಿ”ಗೆ (Gruha Jyothi) ಅಭೂತಪೂರ್ವ ರೆಸ್ಪಾನ್ಸ್​ ದೊರೆತಿದೆ. ಆದರೆ ಆರಂಭದ ವೇಳೆಯೇ ಸೈಬರ್ ಕಳ್ಳರ (Cyber thieves) ಕೈಚಳಕ ಆತಂಕ ಮೂಡಿಸಿದೆ. ಆರೋಪಿಗಳು ಬೆಸ್ಕಾಂ (BESCOM) ಗ್ರಾಹಕರಿಗೆ ಕರೆ ಮಾಡಿ ​ಬಿಲ್ ಬಾಕಿ ಇದೆ ಬೇಗ ಬಿಲ್ ಕಟ್ಟಿ ಇಲ್ಲವಾದರೆ ಕನೆಕ್ಷನ್ ಕಟ್ ಆಗುತ್ತದೆ ಎಂದು ಸಾವಿರಾರು ರೂಪಾಯಿ ದೋಚಿರುವ ಆರೋಪ ಕೇಳಿಬಂದಿದೆ. ಹೀಗೆ ನಗರದ ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್​ ಅವರಿಗೆ ಕರೆ ಮಾಡಿ ಸುಳ್ಳು ಹೇಳಿ ಅಕೌಂಟ್​ನಿಂದ 53 ಸಾವಿರ ರೂ. ವಂಚಿಸಿದ್ದಾರೆ.

ಸೈಬರ್ ಕಳ್ಳರು ಮೊದಲಿಗೆ ನಾರಾಯಣ್ ಅವರ ಮೊಬೈಲ್ ನಂಬರ್​ಗೆ ಒಂದು ಲಿಂಕ್ ಕಳಿಸಿದ್ದಾರೆ. ಬಳಿಕ ಕರೆ ಮಾಡಿ ಬೆಸ್ಕಾಂ ಬಿಲ್ ಬಾಕಿ ಇದೆ ಎಂದು ಹೇಳಿದ್ದಾರೆ. ನೀವು ಇಂದೇ ಬೆಸ್ಕಾಂ ಬಿಲ್ ಕಟ್ಟಬೇಕು ಇಲ್ಲವಾದರೇ ಕನೆಕ್ಷನ್ ಕಟ್ ಆಗುತ್ತೆ ಎಂದು ಹೇಳಿದ್ದಾರೆ. ಅದಕ್ಕೆ ನಾರಾಯಣ್ ಪ್ರಸಾದ್ ಗಾಬರಿಯಾಗಿ ಹೇಗೆ ತುಂಬುವುದು ಎಂದಿದ್ದಾರೆ.

ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ಅಧಿಕೃತ ಫೋನ್ ಸಂಖ್ಯೆ ದುರ್ಬಳಕೆ: ಎಫ್​​ಐಆರ್​ ದಾಖಲು

ಆರೋಪಿಗಳು ನಾವು ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ಫಾಲೋ ಮಾಡಿ ಎಂದಿದ್ದಾರೆ. ಸೈಬರ್ ಕಳ್ಳರ ಮಾತು ಕೇಳಿ ನಾರಾಯಣ್ ಪ್ರಸಾದ್​ ಲಿಂಕ್ ಕ್ಲಿಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಈ ವೇಳೆ ನಾರಾಯಣ್ ಪ್ರಸಾದ್​ ಮೊದಲು ಒಂದು ರೂಪಾಯಿ ಕಳುಹಿಸಿದ್ದಾರೆ. ಬಳಿಕ ಹಂತ ಹಂತವಾಗಿ 9 ಸಾವಿರ 10 ಸಾವಿರ ಹಣ ಅಕೌಂಟ್​​​ನಿಂದ ಕಟ್ ಆಗಿತ್ತು. ಬಳಿಕ ನಾರಾಯಣ್​ ಪ್ರಸಾದ್​​ ಅಕೌಂಟ್​ ಚೆಕ್​​ ಮಾಡಿದಾಗ 53 ಸಾವಿರ ರೂ. ಕಟ್​​ ಆಗಿರುವುದು ತಿಳಿದಿದೆ. ಸದ್ಯ ನಾರಾಯಣ್ ಪ್ರಸಾದ್ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್​ಐಆರ್​ ದಾಖಲಾಗಿದೆ. ಪೊಲೀಸರು 420 ವಂಚನೆ ಅಡಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:41 am, Sat, 8 July 23

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್