ಒಂದು ಎಕರೆಯಲ್ಲಿ ಈ ಮರಗಳನ್ನು ನೆಟ್ಟರೆ 12 ಲಕ್ಷ ರೂ ಆದಾಯ; ನಿಮ್ಮಲ್ಲಿ ಜಮೀನಿದ್ದರೆ ಈ ಮರದ ತೋಪು ನಿರ್ಮಿಸಿ

Cash Tree Eucalyptus: ಬಹೂಪಯೋಗಿ ಎನಿಸಿರುವ ನೀಲಗಿರಿ ಮರಗಳಿಗೆ ಹೆಚ್ಚು ಬೇಡಿಕೆ ಇದೆ. ಬಹಳ ವೇಗವಾಗಿ ಇವು ಬೆಳೆಯುವುದರಿಂದ ಬಹಳ ಜನರು ಈ ಮರಕ್ಕೆ ಆದ್ಯತೆ ಕೊಡುತ್ತಾರೆ. ಇದರ ಖರ್ಚುವೆಚ್ಚವೂ ಕಡಿಮೆ ಇದೆ. ನಿಮ್ಮಲ್ಲಿ ಅಗತ್ಯ ಜಮೀನು ಇದ್ದರೆ ತುಸುವೇ ಬಂಡವಾಳದಲ್ಲಿ ಭಾರೀ ಆದಾಯ ತಂದುಕೊಡುತ್ತದೆ ನೀಲಗಿರಿ. ಕಟ್ಟಿಗೆ, ಪೀಠೋಪಕರಣ, ಹಲಗೆ ಇತ್ಯಾದಿಗೆ ಈ ಮರವನ್ನು ಉಪಯೋಗಿಸಲಾಗುತ್ತದೆ. ಇದರಿಂದ ತೈಲ ಪಡೆಯಬಹುದು. ಆಯುರ್ವೇದ ತೈಲಗಳಿಗೆ ಇದನ್ನೂ ಬಳಸಲಾಗುತ್ತದೆ. ಒಂದು ಎಕರೆ ಪ್ರದೇಶದಲ್ಲಿ ಈ ಮರಗಳಿಂದ 12 ಲಕ್ಷ ರೂ ಆದಾಯ ಪಡೆಯಬಹುದು.

ಒಂದು ಎಕರೆಯಲ್ಲಿ ಈ ಮರಗಳನ್ನು ನೆಟ್ಟರೆ 12 ಲಕ್ಷ ರೂ ಆದಾಯ; ನಿಮ್ಮಲ್ಲಿ ಜಮೀನಿದ್ದರೆ ಈ ಮರದ ತೋಪು ನಿರ್ಮಿಸಿ
ನೀಲಗಿರಿ ಮರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2023 | 5:54 PM

ನಿಮ್ಮಲ್ಲಿ ನಿರುಪಯುಕ್ತವಾಗಿರುವ ಜಮೀನು ಇದ್ದರೆ ನೀಲಗಿರಿ ಮರಗಳ ತೋಪು (Eucalyptus Trees) ನಿರ್ಮಿಸಿ ಲಕ್ಷಾಂತರ ರೂ ಆದಾಯ ಗಳಿಸಬಹುದು. ಮರಗಳಿಗೆ ಬಹಳ ದೊಡ್ಡ ಬೇಡಿಕೆ ಇದೆ. ಬಹೂಪಯೋಗಿ ಎನಿಸಿರುವ ನೀಲಗಿರಿ ಮರಗಳಿಗೆ ಹೆಚ್ಚು ಬೇಡಿಕೆ ಇದೆ. ಬಹಳ ವೇಗವಾಗಿ ಇವು ಬೆಳೆಯುವುದರಿಂದ ಬಹಳ ಜನರು ಈ ಮರಕ್ಕೆ ಆದ್ಯತೆ ಕೊಡುತ್ತಾರೆ. ಇದರ ಖರ್ಚುವೆಚ್ಚವೂ ಕಡಿಮೆ ಇದೆ. ನಿಮ್ಮಲ್ಲಿ ಅಗತ್ಯ ಜಮೀನು ಇದ್ದರೆ ತುಸುವೇ ಬಂಡವಾಳದಲ್ಲಿ ಭಾರೀ ಆದಾಯ ತಂದುಕೊಡುತ್ತದೆ ನೀಲಗಿರಿ.

ನೀಲಗಿರಿ ಮರದ ಉಪಯೋಗಗಳು

ಕಟ್ಟಿಗೆ, ಪೀಠೋಪಕರಣ, ಹಲಗೆ ಇತ್ಯಾದಿಗೆ ಈ ಮರವನ್ನು ಉಪಯೋಗಿಸಲಾಗುತ್ತದೆ. ಇದರಿಂದ ತೈಲ ಪಡೆಯಬಹುದು. ಆಯುರ್ವೇದ ತೈಲಗಳಿಗೆ ಇದನ್ನೂ ಬಳಸಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಸಿ ದೋಸೆಯಂತೆ ಮಾರಾಟವಾದ ಬಿರ್ಲಾ ಎಸ್ಟೇಟ್ ಮನೆಗಳು; ಕೇವಲ 36 ಗಂಟೆಯಲ್ಲಿ ಬುಕ್ ಆದವು 500 ಕೋಟಿ ರೂ ಮೌಲ್ಯದ ವಸತಿಗಳು

ನೀಲಗಿರಿ ಮರದ ಕೃಷಿ ಹೇಗೆ?

ನೀಲಗಿರಿ ಮರದ ಬೇರು ನೇರವಾಗಿ ಭೂಮಿಯೊಳಗೆ ಹೋಗುವುದರಿಂದ ಒತ್ತೊತ್ತಾಗಿ ಇವುಗಳನ್ನು ನೆಡಬಹುದು. ಒಂದು ಎಕರೆ ಪ್ರದೇಶದಲ್ಲಿ 700 ಗಿಡಗಳನ್ನು ನೆಡಬಹುದು. ಇವುಗಳಿಂದ 2,800 ಟನ್​ಗಳಷ್ಟು ಇಳುವರಿ ಸಿಗುತ್ತದೆ. ಒಂದು ಟನ್​ಗೆ 450 ರೂ ಬೆಲೆ ಇದ್ದು, ಒಟ್ಟು 12 ಲಕ್ಷ ರೂ ಆದಾಯ ನಿಮ್ಮದಾಗುತ್ತದೆ.

ಸಾಮಾನ್ಯವಾಗಿ ನೀಲಗಿರಿ ಗಿಡ ಐದರಿಂದ ಏಳು ವರ್ಷಕ್ಕೆ ಇವು ಪೂರ್ಣ ಕಟಾವಿಗೆ ಸಿದ್ಧವಾಗುತ್ತವೆ. ನೀವು ಬುಡದಲ್ಲಿ ಮರ ಕತ್ತರಿಸಿದ ಬಳಿಕ ಮತ್ತೆ ಹೊಸದಾಗಿ ಚಿಗುರತೊಡಗುತ್ತದೆ.

ಇದನ್ನೂ ಓದಿ: ವೈಮಾನಿಕ ಕ್ಷೇತ್ರಕ್ಕೆ ಹೋಗುವ ಒಂದು ರೂ ಹಣದಿಂದ ಆರ್ಥಿಕತೆಗೆ 3 ಪಟ್ಟು ಲಾಭವಾ? ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ವಿಶ್ಲೇಷಣೆ

ನೀಲಗಿರಿ ಗಿಡ ನಡೆಲು ಎಷ್ಟು ವೆಚ್ಚ?

ಒಂದು ನೀಲಗಿರಿ ಗಿಡದ ಬೆಲೆ 7 ಅಥವಾ 8 ರುಪಾಯಿ ಇದೆ. ಒಂದು ಎಕರೆಯಲ್ಲಿ 700 ಗಿಡ ನೆಡಲು ನಿಮಗೆ 5,000 ರಿಂದ 6,000 ರೂ ವೆಚ್ಚವಾಗುತ್ತದೆ. ಒಟ್ಟು ನೀವು ಒಂದು ಎಕರೆಗೆ 25,000 ರೂ ಖರ್ಚು ಮಾಡಿದರೆ ಐದಾರು ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುವುದು ನಿಶ್ಚಿತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ