ವೈಮಾನಿಕ ಕ್ಷೇತ್ರಕ್ಕೆ ಹೋಗುವ ಒಂದು ರೂ ಹಣದಿಂದ ಆರ್ಥಿಕತೆಗೆ 3 ಪಟ್ಟು ಲಾಭವಾ? ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ವಿಶ್ಲೇಷಣೆ

Indigo CEO Pieter Elbers Speaks: ಎಐಎಂಎನ 50ನೇ ನ್ಯಾಷನಲ್ ಮ್ಯಾನೇಜ್ಮೆಂಟ್ ಕನ್ವೆನ್ಷನ್​ನಲ್ಲಿ ಮಾತನಾಡುತ್ತಿದ್ದ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್, ಚೀನಾ ಮತ್ತು ಭಾರತದ ವೈಮಾನಿಕ ಪ್ರಮಾಣವನ್ನು ಹೋಲಿಕೆ ಮಾಡಿದ್ದಾರೆ. 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ 750 ವಿಮಾನಗಳು ಮಾತ್ರವೇ ಇದೆ. ಇಷ್ಟೇ ಜನಸಂಖ್ಯೆ ಇರುವ ಚೀನಾ ಬಳಿ 3,500 ವಿಮಾನಗಳಿವೆ ಎಂದು ಅವರು ಹೇಳಿದ್ದಾರೆ. ಇಂಡಿಗೋ ಸಿಇಒ ಅವರು ದೇಶದ ಪ್ರಗತಿ ಮತ್ತು ವೈಮಾನಿಕ ಕ್ಷೇತ್ರದ ಪ್ರಗತಿ ನಡುವೆ ನೇರ ಸಂಬಂಧ ಇರುವುದನ್ನು ತಿಳಿಸಿದ್ದಾರೆ. ಹಾಗೆಯೇ, ಏವಿಯೇಶನ್ ಉದ್ಯಮದಿಂದ ಆರ್ಥಿಕತೆಗೆ ಹೇಗೆ ಲಾಭ ಆಗುತ್ತದೆ ಎಂಬುದನ್ನೂ ವಿವರಿಸಿದ್ದಾರೆ.

ವೈಮಾನಿಕ ಕ್ಷೇತ್ರಕ್ಕೆ ಹೋಗುವ ಒಂದು ರೂ ಹಣದಿಂದ ಆರ್ಥಿಕತೆಗೆ 3 ಪಟ್ಟು ಲಾಭವಾ? ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ವಿಶ್ಲೇಷಣೆ
ವಿಮಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 26, 2023 | 6:03 PM

ನವದೆಹಲಿ, ಸೆಪ್ಟೆಂಬರ್ 26: ಭಾರತದ ವೈಮಾನಿಕ ಕಂಪನಿಗಳು ಹಣಕಾಸು ಸಂಕಷ್ಟಕ್ಕೆ ಸಿಲುಕಿದ್ದರೂ ಆ ಕ್ಷೇತ್ರ ಮಾತ್ರ ಉಜ್ವಲವಾಗಿ ಬೆಳೆಯುತ್ತಿದೆ. ಇತ್ತೀಚೆಗೆ ಭಾರತದ ಎರಡು ಏರ್​ಲೈನ್ ಸಂಸ್ಥೆಗಳು ಭರಪೂರವಾಗಿ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿವೆ. ಭಾರತದ ಅತಿದೊಡ್ಡ ಏರ್​ಲೈನ್ ಕಂಪನಿಗಳಲ್ಲಿ ಒಂದಾದ ಇಂಡಿಗೋ ಏರ್​ಲೈನ್ಸ್​ನ ಸಿಇಒ ಪೀಟರ್ ಎಲ್ಬರ್ಸ್ (Indigo CEO Pieter Elbers) ಈ ವೇಳೆ ಕೆಲ ಕುತೂಹಲ ವಿಚಾರಗಳನ್ನು ತಿಳಿಸಿದ್ದಾರೆ. ಅವರ ಪ್ರಕಾರ ಭಾರತದ ವೈಮಾನಿಕ ಕ್ಷೇತ್ರಕ್ಕೆ (aviation sector) ಉಜ್ವಲ ಭವಿಷ್ಯ ಇದೆ. ಹಾಗೆಯೇ, ವೈಮಾನಿಕ ಉದ್ಯಮದ ಏಳಿಗೆಗೂ ದೇಶದ ಆರ್ಥಿಕ ಬೆಳವಣಿಗೆಗೂ ನೇರ ಲಿಂಕ್ ಇದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಐಎಂಎನ 50ನೇ ನ್ಯಾಷನಲ್ ಮ್ಯಾನೇಜ್ಮೆಂಟ್ ಕನ್ವೆನ್ಷನ್​ನಲ್ಲಿ ಮಾತನಾಡುತ್ತಿದ್ದ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್, ಚೀನಾ ಮತ್ತು ಭಾರತದ ವೈಮಾನಿಕ ಪ್ರಮಾಣವನ್ನು ಹೋಲಿಕೆ ಮಾಡಿದ್ದಾರೆ. 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ 750 ವಿಮಾನಗಳು ಮಾತ್ರವೇ ಇದೆ. ಇಷ್ಟೇ ಜನಸಂಖ್ಯೆ ಇರುವ ಚೀನಾ ಬಳಿ 3,500 ವಿಮಾನಗಳಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್ 30ರವರೆಗೂ ಡೆಡ್​ಲೈನ್ ಇರುವ ಹಣಕಾಸು ಕಾರ್ಯಗಳಿವು; ತಪ್ಪದೇ ಮಾಡಿ

ಕುತೂಹಲ ಎಂದರೆ ಸುಮಾರು 30 ಕೋಟಿಗಿಂತ ತುಸು ಹೆಚ್ಚು ಜನಸಂಖ್ಯೆ ಇರುವ ಅಮೆರಿಕದಲ್ಲಿ ಕಮರ್ಷಿಯಲ್ ವಿಮಾನಗಳ ಸಂಖ್ಯೆ 5,000 ಕ್ಕಿಂತಲೂ ಹೆಚ್ಚು. ಇನ್ನು, ಪಾಕಿಸ್ತಾನದಲ್ಲಿ ಸಂಖ್ಯೆ 100 ದಾಟಿಲ್ಲ.

ವೈಮಾನಿಕ ಶಕ್ತಿ ಬಲವಾದರೆ ಆರ್ಥಿಕತೆಗೆ ಬಲ

ಇಂಡಿಗೋ ಸಿಇಒ ಅವರು ದೇಶದ ಪ್ರಗತಿ ಮತ್ತು ವೈಮಾನಿಕ ಕ್ಷೇತ್ರದ ಪ್ರಗತಿ ನಡುವೆ ನೇರ ಸಂಬಂಧ ಇರುವುದನ್ನು ತಿಳಿಸಿದ್ದಾರೆ. ಹಾಗೆಯೇ, ಏವಿಯೇಶನ್ ಉದ್ಯಮದಿಂದ ಆರ್ಥಿಕತೆಗೆ ಹೇಗೆ ಲಾಭ ಆಗುತ್ತದೆ ಎಂಬುದನ್ನೂ ವಿವರಿಸಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್ 14ರ ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್; ದುಬಾರಿ ಆಯ್ತು ಅಹ್ಮದಾಬಾದ್ ಫ್ಲೈಟ್ ಟಿಕೆಟ್

ವೈಮಾನಿಕ ಕ್ಷೇತ್ರಕ್ಕೆ ಮಾಡುವ ಒಂದೊಂದು ರುಪಾಯಿ ಹೂಡಿಕೆಯಿಂದಲೂ ಒಟ್ಟಾರೆ ಆರ್ಥಿಕತೆಗೆ 3.1 ರೂನಷ್ಟು ರಿಟರ್ನ್ ನೀಡುತ್ತದೆ ಎಂದು ಹೇಳುವ ಪೀಟರ್ ಎಲ್ಬರ್ಸ್, ಇದೆ ಕಾರಣಕ್ಕೆ ಭಾರತ ಸರ್ಕಾರ ವೈಮಾನಿಕ ಉದ್ಯಮವನ್ನು ಬೆಳೆಸಲು ಆಸಕ್ತಿ ತೋರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವೈಮಾನಿಕ ಕ್ಷೇತ್ರದಿಂದ ಆರ್ಥಿಕತೆಗೆ ಹೇಗೆ ಲಾಭ ಆಗುತ್ತದೆ ಎಂದು ವಿವರಿಸಿದ ಅವರು, ಒಂದು ವಿಮಾನದಿಂದ 100 ನೇರ ಉದ್ಯೋಗ ಹಾಗೂ ಇತರ 600 ಸಂಬಂಧಿತ ಉದ್ಯೋಗಗಳು ಸೃಷ್ಟಿ ಆಗುತ್ತವೆ. ಭಾರತದಲ್ಲಿ ಶೇ. 8-9ರಷ್ಟು ಮಂದಿ ಪಾಸ್​ಪೋರ್ಟ್ ಹೊಂದಿದ್ದು, ಇವರೆಲ್ಲರೂ ಕೂಡ ವಿದೇಶಗಳಿಗೆ ಪ್ರಯಾಣ ಮಾಡುವ ಆಸೆಯಲ್ಲಿದ್ದಾರೆ. ಭಾರತವು ಜಾಗತಿಕ ಏವಿಯೇಶನ್ ಹಬ್ ಆಗುವ ಅವಕಾಶ ಇದೆ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್