ಆಹಾರ ಉದ್ಯಮದಲ್ಲಿ ಸಮಾನ ಅವಕಾಶಕ್ಕೆ ಎಫ್ಎಸ್ಎಸ್ಎಐ ತಂತ್ರ; ಮಹಿಳೆಯರು, ತೃತೀಯ ಲಿಂಗಿಗಳಿಗೆ ವಿಶೇಷ ವ್ಯವಸ್ಥೆ
FSSAI Supports Women and Transgender Food Entrepreneurs: ಆಹಾರ ಉದ್ಯಮದಲ್ಲಿ ಪುರುಷ ಉದ್ಯಮಿಗಳ ಪ್ರಾಬಲ್ಯ ಹೆಚ್ಚಿದೆ. ಈ ಉದ್ಯಮದಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳನ್ನೂ ಪಾಲ್ಗೊಳ್ಳುವಂತೆ ಉತ್ತೇಜಿಸಲು ಎಫ್ಎಸ್ಎಸ್ಎಐ ತನ್ನ ಆಹಾರ ಸುರಕ್ಷಾ ಪೋರ್ಟಲ್ನಲ್ಲಿ ವಿಶೇಷ ಕೆಟಗರಿ ರೂಪಿಸಿದೆ. ಈ ಸ್ಪೆಷಲ್ ಕೆಟಗರಿಯಲ್ಲಿ ದಾಖಲಾದ ಅರ್ಜಿಗಳನ್ನು ಬೇಗ ವಿಲೇವಾರಿ ಮಾಡಿ ಲೈಸೆನ್ಸ್ ವಿತರಿಸುವುದು ಸುಲಭವಾಗಲಿದೆ. ಅರ್ಜಿ ಸಲ್ಲಿಕೆ ವೇಳೆಯೇ ಆಧಾರ್ ಅಥವಾ ಪ್ಯಾನ್ ಮೂಲಕ ಸ್ಪೆಷಲ್ ಕೆಟಗರಿ ವ್ಯಕ್ತಿಗಳನ್ನು ಗುರುತಿಸಿ ವಿಭಾಗಿಸಲಾಗುತ್ತದೆ. ಆದ್ಯತೆ ಮೇರೆಗೆ ಈ ಕೆಟಗರಿಯ ಅರ್ಜಿಗಳನ್ನು ಬೇಗನೇ ಪ್ರೋಸಸ್ ಮಾಡಿ ಪರವಾನಿಗೆ ನೀಡುವ ಉದ್ದೇಶ ಇದೆ.
ನವದೆಹಲಿ, ಸೆಪ್ಟೆಂಬರ್ 26: ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣಗಳ ಪ್ರಾಧಿಕಾರವಾದ ಎಫ್ಎಸ್ಎಸ್ಎಐ (FSSAI- Food Safety and Standards Authority of India) ಇದೀಗ ತನ್ನ ಆಹಾರ ಸುರಕ್ಷತೆ ಅನುಸರಣೆ ವ್ಯವಸ್ಥೆಯ ಪೋರ್ಟಲ್ನಲ್ಲಿ (FoSCoS- food safety compliance system) ಸ್ಪೆಷನ್ ಕೆಟಗರಿ ರಚಿಸಿದೆ. ಆಹಾರ ಉದ್ಯಮದಲ್ಲಿರುವ ಮಹಿಳೆಯರು ಮತ್ತು ತೃತೀಯ ಲಿಂಗಿಗಳನ್ನು ಈ ವಿಶೇಷ ವರ್ಗಕ್ಕೆ ಪರಿಗಣಿಸಲಾಗಿದೆ. ಪರವಾನಿಗೆ ಪ್ರಕ್ರಿಯೆಯಲ್ಲಿ ಇವರಿಗೆ ಹೆಚ್ಚು ಅನುಕೂಲ ಸಿಗಲಿದೆ. ಅಂದರೆ ಇವರಿಗೆ ಬೇಗ ಪರವಾನಿಗೆ ಸಿಗುವಂತೆ ಈ ಸ್ಪೆಷಲ್ ಕೆಟಗರಿ ಮಾಡಲಾಗಿದೆ.
ಆಹಾರ ಉದ್ಯಮದಲ್ಲಿ ಪುರುಷ ಉದ್ಯಮಿಗಳ ಪ್ರಾಬಲ್ಯ ಹೆಚ್ಚಿದೆ. ಈ ಉದ್ಯಮದಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳನ್ನೂ ಪಾಲ್ಗೊಳ್ಳುವಂತೆ ಉತ್ತೇಜಿಸಲು ಎಫ್ಎಸ್ಎಸ್ಎಐ ಈ ಕ್ರಮ ಕೈಗೊಂಡಿದೆ. ಸ್ಪೆಷಲ್ ಕೆಟಗರಿಯಲ್ಲಿ ದಾಖಲಾದ ಅರ್ಜಿಗಳನ್ನು ಬೇಗ ವಿಲೇವಾರಿ ಮಾಡಿ ಲೈಸೆನ್ಸ್ ವಿತರಿಸುವುದು ಸುಲಭವಾಗಲಿದೆ. ಅರ್ಜಿ ಸಲ್ಲಿಕೆ ವೇಳೆಯೇ ಆಧಾರ್ ಅಥವಾ ಪ್ಯಾನ್ ಮೂಲಕ ಸ್ಪೆಷಲ್ ಕೆಟಗರಿ ವ್ಯಕ್ತಿಗಳನ್ನು ಗುರುತಿಸಿ ವಿಭಾಗಿಸಲಾಗುತ್ತದೆ. ಆದ್ಯತೆ ಮೇರೆಗೆ ಈ ಕೆಟಗರಿಯ ಅರ್ಜಿಗಳನ್ನು ಬೇಗನೇ ಪ್ರೋಸಸ್ ಮಾಡಿ ಪರವಾನಿಗೆ ನೀಡುವ ಉದ್ದೇಶ ಇದೆ.
The Food Safety and Standards Authority of India (FSSAI) has introduced a new provision of ‘Special Category’ in the online Food Safety Compliance System (FoSCoS) portal. The newly launched provision aims at promoting gender equality and equal opportunities for women and… pic.twitter.com/q6AJULZcHp
— ANI (@ANI) September 26, 2023
ಇದನ್ನೂ ಓದಿ: ವೈಮಾನಿಕ ಕ್ಷೇತ್ರಕ್ಕೆ ಹೋಗುವ ಒಂದು ರೂ ಹಣದಿಂದ ಆರ್ಥಿಕತೆಗೆ 3 ಪಟ್ಟು ಲಾಭವಾ? ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ವಿಶ್ಲೇಷಣೆ
ಹೊರಗೆ ಅಡುಗೆ ಮಾಡುವುದನ್ನು ತಪ್ಪಿಸಿ: ಸಿಹಿ ತಯಾರಕರಿಗೆ ಎಫ್ಎಸ್ಎಸ್ಎಐ ಸೂಚನೆ
ಇದೇ ವೇಳೆ ಹಬ್ಬದ ಸೀಸನ್ನಲ್ಲಿ ಆಹಾರ ಸುರಕ್ಷತೆ ಕಾಯ್ದುಕೊಳ್ಳಲು ಸಾಧ್ಯವಾಗುವಂತೆ ಎಫ್ಎಸ್ಎಸ್ಎಐ ಸಂಸ್ಥೆ ನಿನ್ನೆ ಆಹಾರ ಉದ್ದಿಮೆದಾರರಿಗೆ ಅಡ್ವೈಸರಿ ಹೊರಡಿಸಿದೆ. ಬಹಿರಂಗ ಸ್ಥಳದಲ್ಲಿ ಆಹಾರ ತಯಾರಿಸದಂತೆ ಸಿಹಿ ತಯಾರಕರಿಗೆ ನೀಡಿರುವ ಸೂಚನೆಯು ಅಡ್ವೈಸರಿಯಲ್ಲಿ ಒಳಗೊಂಡಿದೆ. ಬಹಿರಂಗ ಸ್ಥಳದಲ್ಲಿ ಅಡುಗೆ ಮಾಡಿದಾಗ ವಾತಾವರಣದ ಕಲುಷ ವಸ್ತುಗಳು ಆಹಾರಕ್ಕೆ ಬೆರೆಯಬಹುದಾದ್ದರಿಂದ ಈ ಎಚ್ಚರಿಕೆ ನೀಡಲಾಗಿದೆ.
ಇನ್ನು, ಹಾಲು ಮತ್ತು ಹಾಲಿನ ಪದಾರ್ಥಗಳಾದ ಖೊವಾ, ಪನೀರ್, ತುಪ್ಪ ಇತ್ಯಾದಿಯ ಕಲಬೆರೆಕೆ ಸಾಧ್ಯತೆ ಹೆಚ್ಚಿರುವುದನ್ನು ಎಫ್ಎಸ್ಎಸ್ಎಐ ಗುರುತಿಸಿದ್ದು, ಅದನ್ನು ತಡೆಯುವಂತೆ ಎಫ್ಬಿಒಗಳಿಗೆ (ಫುಡ್ ಬಿಸಿನೆಸ್ ಆಪರೇಟರ್ಸ್) ಸೂಚಿಸಲಾಗಿದೆ.
ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಕಡಿಮೆ ಆಗುತ್ತಿದ್ದಂತೆಯೇ ಭಾರತದಲ್ಲಿ ಸಿಗರೇಟ್ ಮಾರಾಟ ಹೆಚ್ಚಳ
ಇನ್ನು ಹೋಟೆಲ್ಗಳಲ್ಲಿ ಆಹಾರ ಕರೆಯಲಾಗುವ ಎಣ್ಣೆಯ ಗುಣಮಟ್ಟವನ್ನು ಪರಿಶೀಲಿಸುವಂತೆಯೂ ನಿನ್ನೆಯ ಸಭೆಯಲ್ಲಿ ಎಫ್ಬಿಒಗಳಿಗೆ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:42 pm, Tue, 26 September 23