ಘಾಸಿಗೊಂಡಿದ್ದ ಅಫ್ಘಾನಿಸ್ತಾನ ಬದಲಾಗುತ್ತಿದೆ, ತಾಲಿಬಾನ್​ನ ಖಡಕ್​​ ಆಳ್ವಿಕೆಯಲ್ಲಿ Afghani ಕರೆನ್ಸಿ ಜಾದೂ ಮಾಡುತ್ತಿದೆ! ವಿಶ್ವದ ಅತ್ಯುತ್ತಮ ಕರೆನ್ಸಿಯಾಗಿದೆ: ಆದರೆ ಎಷ್ಟು ಕಾಲ?

Afghan Afghani $ AFN : ತಾಲಿಬಾನ್ ಆಡಳಿತದ ಎರಡನೆಯ ಕಾಲಘಟ್ಟದಲ್ಲಿ ಕಠಿಣ ಕರೆನ್ಸಿ ನಿಯಂತ್ರಣಗಳು ಫಲ ನೀಡುತ್ತಿವೆ. ಆದರೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಸ್ಥಿರತೆಯು ಕರೆನ್ಸಿಯ ಈ ಮೇಲಾಟವನ್ನು ಅಲ್ಪಕಾಲದ ವಿದ್ಯಮಾನವಾಗಿ ಪರಿವರ್ತಿಸಿಬಿಡುತ್ತದಾ? ಎಂಬ ಆತಂಕ ಮನೆ ಮಾಡಿದೆ. ವಾಷಿಂಗ್ಟನ್​​​ನಲ್ಲಿ ನೆಲೆಸಿರುವ ಮಧ್ಯಪ್ರಾಚ್ಯ, ಮಧ್ಯ ಮತ್ತು ದಕ್ಷಿಣ ಏಷ್ಯಾ ವ್ಯವಹಾರಗಳ ತಜ್ಞ ಕಮ್ರಾನ್ ಬೊಖಾರಿ ಅವರೇ ಸ್ವತಃ ಈ ಆತಂಕ ಹೊರಹಾಕಿರುವುದು ಮಾರ್ಮಿಕವಾಗಿದೆ.

ಘಾಸಿಗೊಂಡಿದ್ದ ಅಫ್ಘಾನಿಸ್ತಾನ ಬದಲಾಗುತ್ತಿದೆ, ತಾಲಿಬಾನ್​ನ ಖಡಕ್​​ ಆಳ್ವಿಕೆಯಲ್ಲಿ Afghani ಕರೆನ್ಸಿ ಜಾದೂ ಮಾಡುತ್ತಿದೆ! ವಿಶ್ವದ ಅತ್ಯುತ್ತಮ ಕರೆನ್ಸಿಯಾಗಿದೆ: ಆದರೆ ಎಷ್ಟು ಕಾಲ?
Afghan Afghani $ AFN : ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನದ ಕರೆನ್ಸಿ ವಿಶ್ವದ ಅತ್ಯುತ್ತಮ ಕರೆನ್ಸಿಯಾಗಿದೆ!
Follow us
ಸಾಧು ಶ್ರೀನಾಥ್​
|

Updated on: Sep 26, 2023 | 8:24 PM

ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದ (Taliban-ruled Afghanistan) ಕರೆನ್ಸಿ ಈ ತ್ರೈಮಾಸಿಕದಲ್ಲಿ ವಿಶ್ವದ ಅತ್ಯುತ್ತಮ-ಕಾರ್ಯನಿರ್ವಹಣೆಯ ಕರೆನ್ಸಿಯಾಗಿದೆ ಎಂದು ಬ್ಲೂಮ್‌ಬರ್ಗ್ ಸಂಗ್ರಹಿಸಿದ ಮಾಹಿತಿ ಹೇಳಿದೆ. ಈ ತ್ರೈಮಾಸಿಕದಲ್ಲಿ ಅಫ್ಘಾನಿಸ್ತಾನದ ಅಫ್ಘನಿ ಕರೆನ್ಸಿಯು (currency) ಸುಮಾರು 9 % ರಷ್ಟು ಏರಿದೆ. ಇದು ಮಾನವೀಯತೆಯ ಆರ್ಥಿಕ ನೆರವು ಮತ್ತು ಏಷ್ಯಾದ ನೆರೆಹೊರೆಯವರೊಂದಿಗೆ ಹೆಚ್ಚುತ್ತಿರುವ ವ್ಯಾಪಾರದಿಂದ ಶತಕೋಟಿ ಡಾಲರ್‌ಗಳನ್ನು ಮುನ್ನಡೆಸಿದೆ. ಸ್ಥಳೀಯ ವಹಿವಾಟುಗಳಲ್ಲಿ ಡಾಲರ್ (dollars) ಮತ್ತು ಪಾಕಿಸ್ತಾನಿ (Pakistan) ರೂಪಾಯಿಗಳ ಬಳಕೆಯನ್ನು ನಿಷೇಧಿಸುವ ತಾಲಿಬಾನ್ ಕ್ರಮವೂ ಕರೆನ್ಸಿಯ ಕಾರ್ಯಕ್ಷಮತೆಯ ಹೆಚ್ಚಳಕ್ಕೆ ಸಹಾಯ ಮಾಡಿದೆ! ಅಂದಹಾಗೆ, ಅಫ್ಘಾನಿಸ್ತಾನದ ಹೊಸ ಕರೆನ್ಸಿಯಾಗಿ ಅಫ್ಘನ್​​ ಅಫ್ಘನಿ (Afghan Afghani -AFN) 2003 ರಿಂದ ಚಾಲ್ತಿಯಲ್ಲಿದೆ.

ಅಫ್ಘಾನಿಸ್ತಾನದ ಅಫ್ಘನಿ ಕರೆನ್ಸಿಯ ಏರಿಕೆ ಹಿಂದಿನ ಪ್ರಮುಖ ಅಂಶಗಳು

ಇದು ನಿಜಕ್ಕೂ ವಿಶ್ವದ ಅದ್ಭುತವೇ ಸರಿ. ಜಾಗತಿಕವಾಗಿ ಕೆಟ್ಟದಾಗಿರುವ ಇಲ್ಲಿನ ಮಾನವ ಹಕ್ಕುಗಳ ಶೋಚನೀಯ ದಾಖಲೆಗಳ ಸಮ್ಮುಖದಲ್ಲಿ ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿರುವ ದೇಶದಲ್ಲಿ ಈ ಬದಲಾವಣೆ ನಂಬಲಾಗದ ವಾಸ್ತವ ಸಂಗತಿಯಾಗಿದೆ. ಅಫ್ಘಾನಿಸ್ತಾನ ಕರೆನ್ಸಿಯ ಈ ಆಶಾವಾದಿ, ಸಕಾರಾತ್ಮಕ ಬೆಳವಣಿಗೆಯ ಹಿಂದಿನ ಪ್ರಮುಖ ಅಂಶಗಳೆಂದರೆ, ಬ್ಲೂಮ್‌ಬರ್ಗ್ ಡೇಟಾ ಸೂಚಿಸುವಂತೆ, ಶತಕೋಟಿ ಡಾಲರ್‌ಗಳಲ್ಲಿ ಏಷ್ಯಾದ ನೆರೆಹೊರೆಯ ರಾಷ್ಟ್ರಗಳಿಂದ ಹರಿದುಬರುತ್ತಿರುವ ಮಾನವೀಯ ನೆರವು ಮತ್ತು ಹೆಚ್ಚುತ್ತಿರುವ ವ್ಯಾಪಾರ ಈ ತ್ರೈಮಾಸಿಕದಲ್ಲಿ ಅಫ್ಘಾನಿಸ್ತಾನದ ಕರೆನ್ಸಿಯನ್ನು ಜಾಗತಿಕ ಶ್ರೇಯಾಂಕಗಳಲ್ಲಿ ಅಗ್ರಸ್ಥಾನಕ್ಕೆ ತಂದಿದೆಯಂತೆ.

ತಾಲಿಬಾನ್ ಆಳ್ವಿಕೆಯು ಅಳವಡಿಸಿಕೊಂಡ ಕಟ್ಟುನಿಟ್ಟಾದ ಅಫ್ಘನಿ ಕರೆನ್ಸಿ ನಿಯಂತ್ರಣಗಳು, ನಗದು ಒಳಹರಿವು ಮತ್ತು ಇತರೆ ಪಾವತಿಗಳೊಂದಿಗೆ ಈ ಉತ್ತೇಜನಕಾರಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆಯಂತೆ. ಇದರಿಂದ ಈ ತ್ರೈಮಾಸಿಕದಲ್ಲಿ ಶೇ. 9 ರಷ್ಟು ಏರಿಕೆ ಕಾಣಲು ಸಹಾಯ ಮಾಡಿತು. ಕೊಲಂಬಿಯಾದ ಪಿಸೊ ಕರೆನ್ಸಿಯ ಶೇ. 3 ರಷ್ಟು ಏರಿಕೆಯನ್ನೂ ಇದು ಮೀರಿಸಿದೆ.

ಅಫ್ಘನ್ ಅಫ್ಘನಿ ಕರೆನ್ಸಿಯು ಈ ಆರ್ಥಿಕ ವರ್ಷದಲ್ಲಿ ಶೇ. 14 ರಷ್ಟು ಏರಿಕೆ ಕಂಡಿದೆ. ಇದು ಜಾಗತಿಕ ಪಟ್ಟಿಯಲ್ಲಿ, ಕೊಲಂಬಿಯಾ ಮತ್ತು ಶ್ರೀಲಂಕಾದ ಕರೆನ್ಸಿಗಳ ನಂತರ ಮೂರನೆಯ ಸ್ಥಾನದಲ್ಲಿರಿಸಿದೆ ಎನ್ನುತ್ತಿದೆ ಬ್ಲೂಮ್‌ಬರ್ಗ್ ದತ್ತಾಂಶ.

Also read: ಷರಿಯಾದಲ್ಲಿ ರಾಜಕೀಯ ಪಕ್ಷಗಳ ಪರಿಕಲ್ಪನೆ ಇಲ್ಲ: ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ನಿಷೇಧಿಸಿದ ತಾಲಿಬಾನ್

ಗಮನಾರ್ಹ ಸಂಗತಿಹಯೆಂದರೆ ತಾಲಿಬಾನ್​ ಆಡಳಿತವು ಕರೆನ್ಸಿ ನಷ್ಟಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ಜಾಗತಿಕ ಹಣಕಾಸು ವ್ಯವಸ್ಥೆಗಳು ವಿಧಿಸುತ್ತಿರುವ ನಿರ್ಬಂಧಗಳ ಕಾರಣದಿಂದಾಗಿ ವಿಶ್ವದ ಆರ್ಥಿಕತೆಗಳಿಂದ ದೂರವೇ ಉಳಿಯುವ ದುಸ್ಥಿತಿ ತಾಲಿಬಾನ್​ ಆಡಳಿತದ ಆಫ್ಘಾನಿಸ್ತಾನದ್ದಾಗಿದೆ. ಇಲ್ಲಿ ನಡೆಯುತ್ತಿರುವ ನಾಟಕೀಯ ಕ್ರಾಂತಿಗಳ ನಡುವೆಯೂ ಇದು ಸಾಧ್ಯವಾಗಿರುವುದು ಚೇತೋಹಾರಿಯಾಗಿದೆ.

ಪಾಕಿಸ್ತಾನದಿಂದ ಅಫ್ಘಾನಿಸ್ತಾನದೊಳಕ್ಕೆ ಕಳ್ಳಸಾಗಣೆಯಾಗುತ್ತಿರುವ ಡಾಲರ್​​ಗಳು ಪರೋಕ್ಷವಾಗಿ ನೆರವಾಗುತ್ತಿದೆ. ಹೌದು ಈ ಹಿಂದಿನ ತಿಂಗಳುಗಳಲ್ಲಿ ಪಾಕಿಸ್ತಾನದಿಂದ ಅಫ್ಘಾನಿಸ್ತಾನದೊಳಕ್ಕೆ ಕಳ್ಳಸಾಗಣೆಯಾಗುತ್ತಿರುವ ಡಾಲರ್‌ಗಳು ತಾಲಿಬಾನ್‌ ಆಡಳಿತಕ್ಕೆ ಜೀವಸೆಲೆಯಾಗಿದೆ. ದೇಶದ ಸೆಂಟ್ರಲ್ ಬ್ಯಾಂಕ್ ಆಗಿರುವ ಡಾ ಅಫ್ಘಾನಿಸ್ತಾನ್ ಬ್ಯಾಂಕ್ ತನ್ನ ಕರೆನ್ಸಿಯನ್ನು ಮಾತ್ರವೇ ಬೆಂಬಲಿಸುತ್ತಿದೆ. ಹಾಗಾಗಿ ಅಫ್ಘಾನಿಸ್ತಾನದೊಳಕ್ಕೆ ನುಸುಳಿಬರುತ್ತಿರುವ 16 ಮಿಲಿಯನ್ ಡಾಲರ್​​​ ಅನ್ನು ಹರಾಜು ಮಾಡಿದೆ ಎಂದು ಬ್ಯಾಂಕ್​​ ವಕ್ತಾರ ಹಸ್ಸಿಬುಲ್ಲಾ ನೂರಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ಅಫ್ಘನಿ ಕರೆನ್ಸಿಯ ಮೇಲಿನ ಒತ್ತಡ ಕಡಿಮೆಯಾದಂತೆ, ಕೇಂದ್ರೀಯ ಬ್ಯಾಂಕ್ (Da Afghanistan Bank) ಪ್ರತಿ ತಿಂಗಳಿಗೆ ಡಾಲರ್ ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸಿದೆ. ಎರಡು ವರ್ಷಗಳ ಹಿಂದೆ ಜಾರಿಯಲ್ಲಿದ್ದ ಮಿತಿಯನ್ನು ವ್ಯಕ್ತಿಗಳಿಗೆ 200 ಡಾಲರ್​​ನಿಂದ 600 ಡಾಲರ್​ಗೆ, ಮತ್ತು ವ್ಯವಹಾರಗಳಿಗೆ 25,000 ಡಾಲರ್​​ನಿಂದ 40,000 ಡಾಲರ್​ಗೆ ಏರಿಸಿದೆ. ಅಫ್ಘಾನಿಸ್ತಾನದ ಅಫ್ಘನಿ ಕರೆನ್ಸಿಯು ಮೊನ್ನೆ ಸೋಮವಾರ ಪ್ರತಿ ಡಾಲರ್‌ಗೆ ಸುಮಾರು 78.50 ನಷ್ಟು ವ್ಯಾಪಾರವಾಗಿದೆ.

ಅಫ್ಘಾನಿಸ್ತಾನಕ್ಕೆ ಅದರ ಭೂತಕಾಲ ಅತ್ಯಂತ ಕೆಟ್ಟಕಾಲವಾಗಿದ್ದಾಗ…

ಈ ಹಿಂದೆ ತಾಲಿಬಾನ್‌ ಆಡಳಿತವು 1996 ರಿಂದ 2001 ರವರೆಗೆ ಅಧಿಕಾರದಲ್ಲಿದ್ದಾಗ ವಿವಾದಗಳು, ಹಿಂಸಾಚಾರ, ಅಂತರರಾಜ್ಯ ಕಿತ್ತಾಟಗಳು, ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್-ಖೈದಾಕ್ಕೆ ಬೆಂಬಲ ನೀಡಿದ್ದು, ಅದರಲ್ಲೂ ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕ ದಾಳಿಯ ಪ್ರಧಾನ ಸೂತ್ರಧಾರಿಗಳಾದ ಒಸಾಮಾ ಬಿನ್ ಲಾಡೆನ್ ಮತ್ತು ಅಯ್ಮನ್ ಅಲ್-ಜವಾಹಿರಿ ಸೇರಿದಂತೆ ಅಲ್-ಖೈದಾದ ಉನ್ನತ ನಾಯಕತ್ವಕ್ಕೆ ಸುರಕ್ಷಿತ ಆಶ್ರಯವನ್ನು ಒದಗಿಸಿದ್ದು ಮಾರಕವಾಗಿತ್ತು. ತತ್ಫಲವಾಗಿ ಅಮೆರಿಕಾ ಸೇನಾ ಪಡೆಗಳು ತಾಲಿಬಾನ್ ದುರಾಡಳಿತವನ್ನು ಕಿತ್ತೊಗೆದಿತ್ತು.

Also read: ಚಿನ್ನ-ಬೆಳ್ಳಿ ದರಗಳು ಮತ್ತಷ್ಟು ಏರಿಕೆಯಾಗಲಿದೆಯೇ? ದೀಪಾವಳಿ ವೇಳೆಗೆ ಎಷ್ಟು ತಲುಪುತ್ತದೆ? 

ತಾಲಿಬಾನ್ ಆಡಳಿತದ ಎರಡನೆಯ ಕಾಲಘಟ್ಟದಲ್ಲಿ USA ನೇತೃತ್ವದ NATO ಪಡೆಗಳ ಹಿಮ್ಮೆಟ್ಟುವಿಕೆ ಮತ್ತು ನಂತರದ ಹಿಂತೆಗೆದುಕೊಳ್ಳುವಿಕೆಯ ಪರಿಣಾಮವಾಗಿ ಅಮೆರಿಕ ಸೇನಾಪಡೆಗಳು 2021 ರಲ್ಲಿ ಅಫ್ಘಾನಿಸ್ತಾನದ ನೆಲೆಯಿಂದ ವಾಪಸಾದವು. ತಾಲಿಬಾನ್ ಈ ಬಾರಿಯೂ ದೇಶದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡಿತು. ಮತ್ತು ಅಫ್ಘಾನಿಸ್ತಾನದ ಕರೆನ್ಸಿಯಾದ ಅಫ್ಘನ್ ಅಫ್ಘನಿಯನ್ನು ಭದ್ರಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿತು. ಸ್ಥಳೀಯ ವಹಿವಾಟುಗಳಲ್ಲಿ ಡಾಲರ್‌ಗಳು ಮತ್ತು ಪಾಕಿಸ್ತಾನಿ ರೂಪಾಯಿಗಳ ಬಳಕೆಯನ್ನು ನಿಷೇಧಿಸುವುದು ಮೊದಲ ಆದ್ಯತೆಯಾಗಿತ್ತು. ಮತ್ತೊಂದು ಕಟ್ಟುನಿಟ್ಟಿನ ಕ್ರಮವೆಂದರೆ ಆನ್‌ಲೈನ್ ವಹಿವಾಟನ್ನು ಕಾನೂನುಬಾಹಿರಗೊಳಿಸಿದೆ. ಮತ್ತು ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಜೈಲು ಶಿಕ್ಷೆ ವಿಧಿಸುವುದಾಗಿಯೂ ಎಚ್ಚರಿಸಿದೆ ಹಾಲಿ ಖಡಕ್ ತಾಲಿಬಾನ್​ ಆಡಳಿತ.

ಅಫ್ಘಾನಿಸ್ತಾನ ಕುರಿತು ವಿಶ್ವ ಬ್ಯಾಂಕ್ ವರದಿ:

ತಾಲಿಬಾನ್ ಆಡಳಿತದ ಎರಡನೆಯ ಕಾಲಘಟ್ಟದಲ್ಲಿ ನಿರುದ್ಯೋಗವು ಅತಿರೇಕವಾಗಿದೆ, ಮೂರನೇ ಎರಡರಷ್ಟು ಕುಟುಂಬಗಳು ಮೂಲಭೂತ ವಸ್ತುಗಳನ್ನು ಪಡೆಯಲು ಹೆಣಗಾಡುತ್ತಿವೆ ಮತ್ತು ಹಣದುಬ್ಬರವು ಹಣದುಬ್ಬರ ಇಳಿಕೆಯತ್ತ ತಿರುಗಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳುತ್ತದೆ. ವಿಶ್ವಸಂಸ್ಥೆಯು ತನ್ನ ವತಿಯಿಂದ ಅಫ್ಘಾನಿಸ್ತಾನದಲ್ಲಿ ಬಡವರನ್ನು ಬೆಂಬಲಿಸಲು US ಡಾಲರ್‌ಗಳಿಂದ ತುಂಬಿದ ವಿಮಾನಗಳಲ್ಲಿ ವಾರಕ್ಕೊಮ್ಮೆ ಕಂತೆಕಂತೆ ಹಣವನ್ನು ತುಂಬಿ 18 ತಿಂಗಳುಗಳ ಕಾಲ, ಸುಮಾರು 40 ಮಿಲಿಯನ್‌ ಡಾಲರ್​ನಷ್ಟು 2021 ರವರೆಗೂ ಕಳುಹಿಸಿದೆಯಂತೆ.

ತಾಲಿಬಾನ್ ಆಡಳಿತದ ಎರಡನೆಯ ಕಾಲಘಟ್ಟದಲ್ಲಿ ಕಠಿಣ ಕರೆನ್ಸಿ ನಿಯಂತ್ರಣಗಳು ಫಲ ನೀಡುತ್ತಿವೆ. ಆದರೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಸ್ಥಿರತೆಯು ಕರೆನ್ಸಿಯ ಈ ಮೇಲಾಟವನ್ನು ಅಲ್ಪಕಾಲದ ವಿದ್ಯಮಾನವಾಗಿ ಪರಿವರ್ತಿಸಿಬಿಡುತ್ತದಾ? ಎಂಬ ಆತಂಕ ಮನೆ ಮಾಡಿದೆ. ವಾಷಿಂಗ್ಟನ್​​​ನಲ್ಲಿ ನೆಲೆಸಿರುವ ಮಧ್ಯಪ್ರಾಚ್ಯ, ಮಧ್ಯ ಮತ್ತು ದಕ್ಷಿಣ ಏಷ್ಯಾ ವ್ಯವಹಾರಗಳ ತಜ್ಞ ಕಮ್ರಾನ್ ಬೊಖಾರಿ ಅವರೇ ಸ್ವತಃ ಈ ಆತಂಕ ಹೊರಹಾಕಿರುವುದು ಮಾರ್ಮಿಕವಾಗಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ