ಚಿನ್ನ-ಬೆಳ್ಳಿ ದರಗಳು ಮತ್ತಷ್ಟು ಏರಿಕೆಯಾಗಲಿದೆಯೇ? ದೀಪಾವಳಿ ವೇಳೆಗೆ ಎಷ್ಟು ತಲುಪುತ್ತದೆ?
ಈ ಬಾರಿ ದೀಪಾವಳಿ ನವೆಂಬರ್ 2ನೇ ವಾರದಲ್ಲಿ ಬರಲಿದ್ದು, ಎಲ್ಲರೂ ಚಿನ್ನದ ಬೆಲೆಗಳ ಚಲನೆಯಲ್ಲಿ ಬಹಳ ಆಸಕ್ತಿ ಹೊಂದಿದ್ದಾರೆ. ಈ ಹಬ್ಬಕ್ಕೆ ಚಿನ್ನ ಖರೀದಿಸಿ, ಸಂಗ್ರಹಿಸಿಡಬೇಕು ಎನ್ನುವವರಿಗೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ದೀಪಾವಳಿ ವೇಳೆಗೆ ಬೆಲೆ ಹೇಗಿರುತ್ತದೆ ಎಂಬ ಟೆನ್ಷನ್ ಇರುತ್ತದೆ. ದೀಪಾವಳಿ ವೇಳೆಗೆ ಚಿನ್ನದ ಬೆಲೆ ಹೆಚ್ಚಾಗಬಹುದು ಎಂದು ಮಾರುಕಟ್ಟೆ ತಜ್ಞರು ನುಡಿದಿದ್ದಾರೆ.
ನಮ್ಮ ದೇಶದಲ್ಲಿ ಚಿನ್ನ ಎಂದರೆ ಎಲ್ಲರಿಗೂ ತುಂಬಾ ಆಸಕ್ತಿ, ಮನೆಯಲ್ಲಿ ಸಣ್ಣಪುಟ್ಟ ಕಾರ್ಯಕ್ರಮವಿರಲಿ, ಮದುವೆ ಇರಲಿ, ಯಾವುದೇ ಹಬ್ಬವಿರಲಿ ಚಿನ್ನ ಖರೀದಿಸುವವರೇ ಹೆಚ್ಚು. ಅಲ್ಲದೆ ಹಲವರು ಚಿನ್ನದ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಏಕೆಂದರೆ ಹೆಚ್ಚಿನ ಜನರು ಚಿನ್ನದ ಹೂಡಿಕೆಯು ಇತರ ಎಲ್ಲಾ ಹೂಡಿಕೆಯ ಆಯ್ಕೆಗಳಿಗಿಂತ ಸುರಕ್ಷಿತವೆಂದು ನಂಬುತ್ತಾರೆ. ಅದರಂತೆ ಹಬ್ಬ ಹರಿದಿನಗಳು ಬಂದರೆ ಚಿನ್ನ ಖರೀದಿಸುತ್ತಾರೆ. ಚಿನ್ನದ ಮೇಲೆ ಹೂಡಿಕೆ ಮಾಡುವವರು ಬಹಳ ಮಂದಿ ಇದ್ದಾರೆ.
ಅದರಲ್ಲೂ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿನ್ನದ ಖರೀದಿ ಹೆಚ್ಚು. ದೀಪಾವಳಿಯಲ್ಲಿ ಚಿನ್ನವನ್ನು ಖರೀದಿಸುವುದು ಒಳ್ಳೆಯದು ಎಂದು ಹಲವರು ನಂಬುತ್ತಾರೆ. ಹಾಗಾಗಿಯೇ ಆ ಕಾಲದಲ್ಲಿ ಬಂಗಾರದ ಖರೀದಿ ಹೆಚ್ಚು. ಆ ಸಮಯದಲ್ಲಿ ಚಿನ್ನದ ಬೆಲೆಯು ಬೇಡಿಕೆಯೊಂದಿಗೆ ಚಲಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿಲ್ಲ. ಸಾಮಾನ್ಯವಾಗಿ ಚಿನ್ನದ ಬೆಲೆ ಏರುತ್ತದೆ ಮತ್ತು ಇಳಿಯುತ್ತದೆ. ಆದರೆ.. ಈ ಬಾರಿ ಚಿನ್ನದ ಬೆಲೆ ತುಂಬಾ ಹೆಚ್ಚಾಗಿದೆ. ಇಂದು ಕಡಿಮೆ ಎಂದು ಭಾವಿಸಲಾದ ಬೆಲೆಗಿಂತ ನಾಳೆಗೆ ಅದು ಹೆಚ್ಚಿನ ಬೆಲೆಯನ್ನು ಪಡೆಯುತ್ತದೆ. ಇನ್ನು ಕೆಲವೊಮ್ಮ ಏರಿದೆ ಎಂದುಕೊಂಡರೂ ಬೆಲೆ ಜಾರುತ್ತಿದೆ. ಚಿನ್ನ ಖರೀದಿಸುವವರು, ಹೂಡಿಕೆದಾರರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ವಾರದ ಅಂತ್ಯದಲ್ಲಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಈ ವಾರವೂ ಅದೇ ಟ್ರೆಂಡ್‌ನೊಂದಿಗೆ ಆರಂಭವಾಗಿದೆ. ವಾರವಿಡೀ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಿದ ನಂತರ, ಚಿನ್ನದ ಬೆಲೆಗಳು ಅಂತಿಮವಾಗಿ ಸ್ವಲ್ಪ ಕುಸಿತವನ್ನು ದಾಖಲಿಸಿದವು. ಈ ವಾರದ ಆರಂಭದಲ್ಲಿ ಸೆಪ್ಟೆಂಬರ್ 18 ರಂದು ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 60,080 ರೂ. ಇತ್ತು.
ಈ ವಾರ ಸುಂಟರಗಾಳಿಯಂತೆ ಅತ್ತಿತ್ತ ಸರಿಯುತ್ತಿದೆ. ಇನ್ನು ಸೆ. 19ರಂದು 140 ರೂ. ಏರಿಕೆ ಕಂಡಿದೆ. ನಂತರ ಒಂದು ದಿನದ ಮಟ್ಟಿಗೆ ಸ್ಥಿರವಾಗಿದ್ದ ಚಿನ್ನದ ಬೆಲೆ ಸೆ. 21 ಮತ್ತು 22ರಂದು ಎರಡೂ ದಿನ 390 ರೂ. ಕಡಿಮೆಯಾಗಿದೆ. ಅಂತಿಮವಾಗಿ ಸೆಪ್ಟೆಂಬರ್ 23 ರಂದು 110 ರೂ. ಏರಿಕೆಯೊಂದಿಗೆ 59,950 ರೂ.ಗೆ ವಾರವನ್ನು ಕೊನೆಗೊಳಿಸಿದೆ.
ಈ ಬಾರಿ ದೀಪಾವಳಿ ನವೆಂಬರ್ 2ನೇ ವಾರದಲ್ಲಿ ಬರಲಿದ್ದು, ಎಲ್ಲರೂ ಚಿನ್ನದ ಬೆಲೆಗಳ ಚಲನೆಯಲ್ಲಿ ಬಹಳ ಆಸಕ್ತಿ ಹೊಂದಿದ್ದಾರೆ. ಈ ಹಬ್ಬಕ್ಕೆ ಚಿನ್ನ ಖರೀದಿಸಿ, ಸಂಗ್ರಹಿಸಿಡಬೇಕು ಎನ್ನುವವರಿಗೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ದೀಪಾವಳಿ ವೇಳೆಗೆ ಬೆಲೆ ಹೇಗಿರುತ್ತದೆ ಎಂಬ ಟೆನ್ಷನ್ ಇರುತ್ತದೆ. ಈಗ ತಜ್ಞರು ಹೇಳುತ್ತಿರುವ ಪ್ರಕಾರ, ದೀಪಾವಳಿ ವೇಳೆಗೆ ಚಿನ್ನದ ಬೆಲೆ ಹೆಚ್ಚಾಗಬಹುದು ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 62 ಸಾವಿರ ತಲುಪಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷಾಂತ್ಯಕ್ಕೆ ಚಿನ್ನದ ಬೆಲೆ ರೂ. 65 ಸಾವಿರ ತಲುಪುವ ನಿರೀಕ್ಷೆ ಇದೆ.
ಇನ್ನು ಬೆಳ್ಳಿಯ ವಿಚಾರಕ್ಕೆ ಬಂದರೆ.. ಈ ವಾರದ ಆರಂಭದಲ್ಲಿ ಅಂದರೆ ಸೆಪ್ಟೆಂಬರ್ 18 ರಂದು ಕೆಜಿ ಬೆಳ್ಳಿಯ ಬೆಲೆ 78,200 ರೂ. ವಾರದ ಅಂತ್ಯದ ವೇಳೆಗೆ ಸುಮಾರು 1100 ರೂ. ಗಳಷ್ಟು ಏರಿಕೆಯಾಗಿ 79,300 ರೂ.ನಷ್ಟಿತ್ತು. ಸೆಪ್ಟೆಂಬರ್ 22 ರಂದು ಒಂದೇ ದಿನದಲ್ಲಿ ಬೆಳ್ಳಿ 1000 ರೂ. ಏರಿದ್ದು, ದೀಪಾವಳಿ ವೇಳೆಗೆ ಬೆಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ತಜ್ಞರು ಅಂದಾಜು ನುಡಿದಿದ್ದಾರೆ. ಒಂದು ಕೆಜಿ ಬೆಳ್ಳಿ ರೂ. 78-80 ಸಾವಿರ ತಲುಪುವ ಸಾಧ್ಯತೆ ಇದೆ. ಅಲ್ಲದೆ ಈ ವರ್ಷಾಂತ್ಯಕ್ಕೆ ಬೆಳ್ಳಿ ಬೆಲೆ ರೂ. 90 ಸಾವಿರ ತಲುಪುವ ನಿರೀಕ್ಷೆ ಇದೆ.
ಅಂತರರಾಷ್ಟ್ರೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಿನದಿಂದ ದಿನಕ್ಕೆ ಬದಲಾಗುತ್ತವೆ. ಅದಕ್ಕೆ ತಕ್ಕಂತೆ ಪದ್ರಚಲಿತ ವಿದ್ಯಮಾನಗಳು, ಅಂದಿನ ಷರತ್ತುಗಳನ್ನು ಪರಿಗಣಿಸಿ ಅವುಗಳನ್ನು ಖರೀದಿಸಲಾಗುತ್ತಿದೆ.
ಈ ಬಾರಿಯ ದೀಪಾವಳಿ 2023 ವೇಳಾಪಟ್ಟಿ ಹೀಗಿದೆ: ದೀಪಾವಳಿ 2023 ಭಾರತದಲ್ಲಿ ನವೆಂಬರ್ 12 ರ ಭಾನುವಾರದಂದು ಆರಂಭವಾಗುತ್ತದೆ. ದೀಪಾವಳಿಯು ಪ್ರತಿ ವರ್ಷ ಅಕ್ಟೋಬರ್‌ನಿಂದ ನವೆಂಬರ್ ನಡುವೆ ಬರುತ್ತದೆ . ಇದನ್ನು ಭಾರತದ ಕ್ಯಾಲೆಂಡರ್‌ನಲ್ಲಿ 8 ನೇ ತಿಂಗಳ (ಕಾರ್ತಿಕ ಮಾಸ) 15 ನೇ ದಿನದಂದು ಆಚರಿಸಲಾಗುತ್ತದೆ. ದಿನವು ಅಮವಾಸ್ಯೆ ಅಥವಾ ‘ಅಮಾವಾಸ್ಯೆ ದಿನ’. ಅಮವಾಸ್ಯೆ ತಿಥಿ ನವೆಂಬರ್ 12 ರಂದು ಮಧ್ಯಾಹ್ನ 02:44 ರಿಂದ 2023 ರಲ್ಲಿ ನವೆಂಬರ್ 13 ರಂದು ಮಧ್ಯಾಹ್ನ 02:56 ರವರೆಗೆ ಇರುತ್ತದೆ.
ಲಕ್ಷ್ಮಿ ದೇವಿಯನ್ನು (ಸಂಪತ್ತಿನ ಅಧಿದೇವತೆ) ಮುಖ್ಯವಾಗಿ ದೀಪಾವಳಿ ಪೂಜೆಯ ಸಮಯದಲ್ಲಿ ಸಂತೋಷ, ಸಮೃದ್ಧಿ ಮತ್ತು ಕೀರ್ತಿಗಾಗಿ ಪೂಜಿಸಲಾಗುತ್ತದೆ. 2023 ರ ದೀಪಾವಳಿಗೆ, ನವೆಂಬರ್ 12 ರಂದು ಸಂಜೆ 05:40 ರಿಂದ 07:36 ರವರೆಗೆ ಲಕ್ಷ್ಮಿ ಪೂಜೆ ಮುಹೂರ್ತ (ಲಕ್ಷ್ಮಿಯನ್ನು ಪೂಜಿಸಲು ಉತ್ತಮ ಸಮಯ) 1 ಗಂಟೆ 56 ನಿಮಿಷ.
ದೀಪಾವಳಿ ದಿನ 1 : ನವೆಂಬರ್ 10, 2023 ತ್ರಯೋದಶಿ – ಧನ್ತೇರಸ್ ದೀಪಾವಳಿ ದಿನ 2 : ನವೆಂಬರ್ 11, 2023 ಚತುರ್ದಶಿ – ಚೋಟಿ ದೀಪಾವಳಿ ದೀಪಾವಳಿ ದಿನ 3 : ನವೆಂಬರ್ 12, 2023 ಅಮವಾಸ್ಯೆ – ದೀಪಾವಳಿ ದೀಪಾವಳಿ ದಿನ 4 : ನವೆಂಬರ್ 13, 2023 ಪ್ರತಿಪದ – ಪಾಡ್ವಾ ದೀಪಾವಳಿ ದಿನ 5 : ನವೆಂಬರ್ 14, 2023 ದ್ವಿತೀಯಾ – ಭಾಯಿ ದುಜ್
Published On - 5:54 pm, Sat, 23 September 23