ಷರಿಯಾದಲ್ಲಿ ರಾಜಕೀಯ ಪಕ್ಷಗಳ ಪರಿಕಲ್ಪನೆ ಇಲ್ಲ: ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ನಿಷೇಧಿಸಿದ ತಾಲಿಬಾನ್

ಕನಿಷ್ಠ 70 ಪ್ರಮುಖ ಮತ್ತು ಸಣ್ಣ ರಾಜಕೀಯ ಪಕ್ಷಗಳು 2021 ರವರೆಗೆ ಅಫ್ಘಾನಿಸ್ತಾನ ನ್ಯಾಯ ಸಚಿವಾಲಯದಲ್ಲಿ ಔಪಚಾರಿಕವಾಗಿ ನೋಂದಾಯಿಸಲ್ಪಟ್ಟವು. ಆದರೆ ತಾಲಿಬಾನ್ ಯುದ್ಧದಿಂದ ಧ್ವಂಸಗೊಂಡ ಅಫ್ಘಾನಿಸ್ತಾನದ ನಿಯಂತ್ರಣವನ್ನು ಮರಳಿ ಪಡೆದ ನಂತರ ಮತ್ತು ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡ ನಂತರ, ರಾಷ್ಟ್ರದಲ್ಲಿನ ರಾಜಕೀಯ ವ್ಯವಸ್ಥೆಯು ಕುಸಿಯಿತು.

ಷರಿಯಾದಲ್ಲಿ ರಾಜಕೀಯ ಪಕ್ಷಗಳ ಪರಿಕಲ್ಪನೆ ಇಲ್ಲ: ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ನಿಷೇಧಿಸಿದ ತಾಲಿಬಾನ್
ಅಬ್ದುಲ್ ಹಕೀಮ್ ಶೇರಿ
Follow us
ರಶ್ಮಿ ಕಲ್ಲಕಟ್ಟ
|

Updated on: Aug 17, 2023 | 2:16 PM

ಕಾಬೂಲ್: ಅಫ್ಘಾನಿಸ್ತಾನದ (Afghanistan) ತಾಲಿಬಾನ್ (Taliban) ಷರಿಯಾವನ್ನು (Sharia) ಉಲ್ಲೇಖಿಸಿ ರಾಷ್ಟ್ರದ ಎಲ್ಲಾ ರಾಜಕೀಯ ಪಕ್ಷಗಳನ್ನು ನಿಷೇಧಿಸಿದ್ದು, ಅಂತಹ ಚಟುವಟಿಕೆಗಳು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದೆ. ತಾಲಿಬಾನ್ ಕಾಬೂಲ್ ಅನ್ನು ಸ್ವಾಧೀನಪಡಿಸಿಕೊಂಡ ಎರಡನೇ ವಾರ್ಷಿಕೋತ್ಸವವನ್ನು ಗುರುತಿಸಿದ ಒಂದು ದಿನದ ನಂತರ  ಈ ನಿರ್ಧಾರ ತೆಗೆದುಕೊಂಡಿದೆ. ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಿಷೇಧವನ್ನು ಘೋಷಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲಿಬಾನ್ ನ್ಯಾಯ ಮಂತ್ರಿ ಅಬ್ದುಲ್ ಹಕೀಮ್ ಶೇರಿ, ಷರಿಯಾ  ಮುಸ್ಲಿಂ ಜನರ ದೈನಂದಿನ ಜೀವನವನ್ನು ನಿಯಂತ್ರಿಸುವ ಕಾನೂನುಗಳು ಮತ್ತು ನಿಯಮಗಳು ಆಗಿದ್ದು,  ಇದರಲ್ಲಿ ರಾಜಕೀಯ ಪಕ್ಷಗಳ ಪರಿಕಲ್ಪನೆ ಇಲ್ಲ ಎಂದಿದ್ದಾರೆ.

ರಾಜಕೀಯ ಪಕ್ಷಗಳು ದೇಶದಲ್ಲಿ ಕಾರ್ಯನಿರ್ವಹಿಸಲು ಷರಿಯಾ ಆಧಾರವಿಲ್ಲ. ಅವರು ರಾಷ್ಟ್ರೀಯ ಹಿತಾಸಕ್ತಿಗಳನ್ನು ಪೂರೈಸುವುದಿಲ್ಲ ಅಥವಾ ರಾಷ್ಟ್ರವು ಅವರನ್ನು ಮೆಚ್ಚುವುದಿಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರದ ಉನ್ನತ ನಾಯಕತ್ವದ ಒಪ್ಪಿಗೆಯೊಂದಿಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಜನರು ಸಿಎನ್ಎನ್- ನ್ಯೂಸ್18ಗೆ ತಿಳಿಸಿದ್ದಾರೆ. ಶೇರಿ ಅವರು ಮುಲ್ಲಾ ಮೊಹಮ್ಮದ್ ಒಮರ್ ನೇತೃತ್ವದ ಕಂಧಾರಿ ಬಣಕ್ಕೆ ಸೇರಿದ್ದು, ಅಮೀರ್ ಖಾನ್ ಮುತ್ತಕಿ ಅವರಂತಹ ಹಿರಿಯ ನಾಯಕರನ್ನು ಸಹ ಒಳಗೊಂಡಿದ್ದಾರೆ

ಈ ಹೊಸ ಬೆಳವಣಿಗೆಯನ್ನು ಜಾಗತಿಕ ಸಮುದಾಯವು ಸ್ವೀಕರಿಸುವುದಿಲ್ಲವಾದ್ದರಿಂದ ಈಗ ವಿದೇಶಿ ಪರಿಹಾರ ಮತ್ತು ನೆರವು ಬರಲು ಕಷ್ಟವಾಗುತ್ತದೆ ಎಂದು ಮೂಲಗಳು ಹೇಳಿವೆ.

ಕನಿಷ್ಠ 70 ಪ್ರಮುಖ ಮತ್ತು ಸಣ್ಣ ರಾಜಕೀಯ ಪಕ್ಷಗಳು 2021 ರವರೆಗೆ ಅಫ್ಘಾನಿಸ್ತಾನ ನ್ಯಾಯ ಸಚಿವಾಲಯದಲ್ಲಿ ಔಪಚಾರಿಕವಾಗಿ ನೋಂದಾಯಿಸಲ್ಪಟ್ಟವು. ಆದರೆ ತಾಲಿಬಾನ್ ಯುದ್ಧದಿಂದ ಧ್ವಂಸಗೊಂಡ ಅಫ್ಘಾನಿಸ್ತಾನದ ನಿಯಂತ್ರಣವನ್ನು ಮರಳಿ ಪಡೆದ ನಂತರ ಮತ್ತು ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡ ನಂತರ, ರಾಷ್ಟ್ರದಲ್ಲಿನ ರಾಜಕೀಯ ವ್ಯವಸ್ಥೆಯು ಕುಸಿಯಿತು.

ತಾಲಿಬಾನ್ ಸರ್ಕಾರದ ವಿರುದ್ಧ ಟೀಕೆಗಳನ್ನು ನಿಗ್ರಹಿಸಲು ಸಂಘ, ಸಭೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಿದೆ. ಆದರೆ ಅದರ ಬೆಂಬಲಿಗರಿಗೆ ಈ ಹಕ್ಕುಗಳನ್ನು ಆನಂದಿಸಲು ಅವಕಾಶ ನೀಡುತ್ತದೆ.

ಇದನ್ನೂ ಓದಿ:Sharia Law: ಅಫ್ಘಾನಿಸ್ತಾನದಲ್ಲಿ ಷರಿಯಾ ಆಡಳಿತ ಜಾರಿಗೆ ಸಿದ್ಧತೆ; ಷರಿಯಾ ಕಾನೂನು ಎಂದರೇನು?

ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನವನ್ನು ಆಳಲು ಷರಿಯಾ ಕಾನೂನು ವಿಧಿಸಿದ್ದು ಇದರ ಪ್ರಕಾರ ಆರನೇ ತರಗತಿಯ ನಂತರ ಹುಡುಗಿಯರು ಶಾಲೆಗೆ ಹೋಗುವುದನ್ನು ನಿಷೇಧಿಸಲಾಗಿದೆ. ಮಹಿಳೆಯರಿಗೆ ಕೆಲಸ ಮತ್ತು ಸಾರ್ವಜನಿಕ ಜೀವನ ನಿಷೇಧಿಸಲಾಗಿದೆ. ಸಲೂನ್‌ಗಳನ್ನು ಮುಚ್ಚಿರುವುದರಿಂದ ಸ್ವಯಂ-ಆರೈಕೆ ಮತ್ತು ಸೌಂದರ್ಯದ ವಿಷಯದಲ್ಲೂ ಮಹಿಳೆಯರು ಈಗ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ.

ತಾಲಿಬಾನ್ ಆಳ್ವಿಕೆಯ ಎರಡು ವರ್ಷಗಳ ಅವಧಿಯಲ್ಲಿ ಪತ್ರಿಕಾ ಸ್ವಾತಂತ್ರ್ಯದ ಪರಿಕಲ್ಪನೆಯು ಸಹ ಸತ್ತುಹೋಯಿತು, ಭಯೋತ್ಪಾದಕರು ಹಲವಾರು ಸುದ್ದಿ ವಾಹಿನಿಗಳು ಮತ್ತು ಔಟ್‌ಲೆಟ್‌ಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದು ನೂರಾರು ಪತ್ರಕರ್ತರು ಯುದ್ಧ ಪೀಡಿತ ರಾಷ್ಟ್ರವನ್ನು ತೊರೆಯುವಂತೆ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ