’ಇನ್ಮುಂದೆ ಅಫ್ಘಾನ್​​ನಲ್ಲಿ ಪ್ರತಿಯೊಂದು ವಿಚಾರದಲ್ಲೂ ಪವಿತ್ರ ಷರಿಯಾ ಕಾನೂನು ಅನ್ವಯ..‘-ತಾಲಿಬಾನಿಗಳಿಂದ ಅಧಿಕೃತ ಪ್ರಕಟಣೆ

ಈ ದೇಶದಲ್ಲಿ ಎಲ್ಲ ಬುದ್ಧಿವಂತ, ವೃತ್ತಿಪರ ಜನರು, ವಿದ್ವಾಂಸರು, ಪ್ರಾಧ್ಯಾಪಕರು, ವೈದ್ಯರು, ಇಂಜನಿಯರ್​ಗಳು, ವಿಜ್ಞಾನಿಗಳು, ರಾಷ್ಟ್ರದ ಉದ್ಯಮಿಗಳಿಗೆ ನಮ್ಮ ಇಸ್ಲಾಮಿಕ್​ ಎಮಿರೇಟ್​ನಿಂದ ಏನೇನೂ ಸಮಸ್ಯೆ ಮಾಡುವುದಿಲ್ಲ ಎಂದು ತಾಲಿಬಾನಿಗಳು ಭರವಸೆ ನೀಡಿದ್ದಾರೆ.

’ಇನ್ಮುಂದೆ ಅಫ್ಘಾನ್​​ನಲ್ಲಿ ಪ್ರತಿಯೊಂದು ವಿಚಾರದಲ್ಲೂ ಪವಿತ್ರ ಷರಿಯಾ ಕಾನೂನು ಅನ್ವಯ..‘-ತಾಲಿಬಾನಿಗಳಿಂದ ಅಧಿಕೃತ ಪ್ರಕಟಣೆ
ತಾಲಿಬಾನ್​ ಪ್ರಮಖ ನಾಯಕರು
Follow us
TV9 Web
| Updated By: Lakshmi Hegde

Updated on:Sep 08, 2021 | 10:03 AM

ಅಫ್ಘಾನಿಸ್ತಾನ (Afghanistan)ದಲ್ಲಿ ತಾಲಿಬಾನಿಗಳು ಅಂತೂ ಸರ್ಕಾರ ರಚನೆ ಮಾಡಿದ್ದು, ಮುಲ್ಲಾ ಮೊಹಮ್ಮದ್​ ಹಸನ್​ ಅಕುಂದ್​ (Mullah Mohammad Hasan Akhund) ನೂತನ ಪ್ರಧಾನಿಯಾಗಿ ಅಧಿಕಾರಕ್ಕೆ ಏರಲಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಈ ಹಿಂದೆ ವಿಶ್ವಸಂಸ್ಥೆ (United Nations) ಯಾರನ್ನೆಲ್ಲ ಜಾಗತಿಕ ಉಗ್ರರು ಎಂದು ಘೋಷಿಸಿತ್ತೋ ಅವರೆಲ್ಲ ಸೇರಿ ಒಂದು ಸರ್ಕಾರವನ್ನು ರಚಿಸಿದ್ದಾರೆ.  ಸರ್ಕಾರ ರಚನೆ ಬೆನ್ನಲ್ಲೇ ತಮ್ಮ ನೀತಿ ಹೇಗಿರಲಿದೆ ಎಂಬ ಬಗ್ಗೆಯೂ ಅವರು ಪ್ರಕಟಣೆ ಹೊರಡಿಸಿದ್ದಾರೆ.  ಇಲ್ಲಿನ ಎಲ್ಲ ಸಮಸ್ಯೆಗಳನ್ನೂ ನ್ಯಾಯ ಸಮ್ಮತವಾಗಿ ಮತ್ತು ಸಮಂಜಸವಾದ, ಸೂಕ್ತವಾದ ವಿಧಾನಗಳ ಮೂಲಕ ಬಗೆಹರಿಸುವುದೇ ನಮ್ಮ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ.  

ನಾವು ಕಳೆದ 20ವರ್ಷಗಳಿಂದ ಎರಡು ಬಹುದೊಡ್ಡ ಗುರಿಯನ್ನು ಇಟ್ಟುಕೊಂಡು ಹೋರಾಟ ನಡೆಸಿದ್ದೆವು. ಅದರಲ್ಲಿ ಮೊದಲನೇಯದು, ಈ ದೇಶ ಅಫ್ಘಾನಿಸ್ತಾನವನ್ನು ವಿದೇಶಿ ಅತಿಕ್ರಮಣ, ಆಕ್ರಮಣದಿಂದ ಮುಕ್ತಗೊಳಿಸಿ, ಸ್ವತಂತ್ರಗೊಳಿಸುವುದು ಮತ್ತು ಎರಡನೇಯದು, ದೇಶವನ್ನು ಸಂಪೂರ್ಣ, ಸ್ವತಂತ್ರ ಮತ್ತು ಸ್ಥಿರವಾದ ಇಸ್ಲಾಂ ಕೇಂದ್ರವನ್ನಾಗಿ ಪರಿವರ್ತಿಸುವುದು ಎಂದು ತಮ್ಮ ಪ್ರಕಟಣೆಯಲ್ಲಿ ತಾಲಿಬಾನಿಗಳು ಉಲ್ಲೇಖಿಸಿದ್ದಾರೆ.

ಪವಿತ್ರ ಷರಿಯಾ ಕಾನೂನು ಜಾರಿ ಎಲ್ಲದಕ್ಕೂ ಮಿಗಿಲಾಗಿ, ಅಫ್ಘಾನಿಸ್ತಾನದಲ್ಲಿ ನಮ್ಮ ಆಡಳಿತಕ್ಕೆ ಸಂಬಂಧಪಟ್ಟ ಎಲ್ಲ ವಿಚಾರಗಳು, ವಿಧಾನಗಳೂ, ಜನರ ಜೀವನ ಕ್ರಮಗಳು ಎಲ್ಲವೂ ಪವಿತ್ರ ಷರಿಯಾ ಕಾನೂನಿನಂತೆಯೇ ನಡೆಯಲಿವೆ. ಇನ್ನುಮುಂದೆ ಇಡೀ ಅಫ್ಘಾನಿಸ್ತಾವನ್ನು ಷರಿಯಾ ಕಾನೂನೇ ಮುನ್ನಡೆಸಲಿದೆ ಎಂದು ತಾಲಿಬಾನ್​ನ ಸುಪ್ರೀಂ ನಾಯಕನಾಗಿರುವ ಮೌಲವಿ ಹಿಬತುಲ್ಲಾ ಅಕುಂದಜಾದ ಹೊರಡಿಸಿರುವ ಈ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ.

ಹಾಗೇ, ಈ ದೇಶದಲ್ಲಿ ಎಲ್ಲ ಬುದ್ಧಿವಂತ, ವೃತ್ತಿಪರ ಜನರು, ವಿದ್ವಾಂಸರು, ಪ್ರಾಧ್ಯಾಪಕರು, ವೈದ್ಯರು, ಇಂಜನಿಯರ್​ಗಳು, ವಿಜ್ಞಾನಿಗಳು, ರಾಷ್ಟ್ರದ ಉದ್ಯಮಿಗಳಿಗೆ ನಮ್ಮ ಇಸ್ಲಾಮಿಕ್​ ಎಮಿರೇಟ್​ನಿಂದ ಏನೇನೂ ಸಮಸ್ಯೆ ಮಾಡುವುದಿಲ್ಲ. ಅವರ ಅಗತ್ಯಗಳನ್ನು ಪೂರೈಸಿ, ಅವಕಾಶ ಒದಗಿಸಲಾಗುವುದು. ಖಂಡಿತ ಅಂಥವರಿಗೆ ಗೌರವ ಇದ್ದೇ ಇದೆ ಎಂದೂ ಭರವಸೆ ನೀಡಲಾಗಿದೆ. ಅಷ್ಟೇ ಅಲ್ಲ, ಈ ಪ್ರತಿಭಾವಂತರು ಬೇರೆಲ್ಲೂ ಪಲಾಯನ ಮಾಡದೆ, ಈ ದೇಶಕ್ಕಾಗಿಯೇ ದುಡಿಯಬೇಕು. ಅವರ ಮಾರ್ಗದರ್ಶನ, ಕೆಲಸ ನಮಗೆ ಬೇಕು ಎಂದೂ ಹೇಳಿದ್ದಾರೆ.

ಏನಿದು ಷರಿಯಾ ಕಾನೂನು? ಹೇಗಿರಲಿದೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ..

ಇದನ್ನೂ ಓದಿ: ಇಲ್ಲಿ ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಜಾತ್ರೆ ಮುಗಿಯುತ್ತೆ, ಚರ್ಮ ಸಮಸ್ಯೆ ಇರುವವರು ದರ್ಶನ ಮಾಡದೆ ಹೋಗಲ್ಲ

Drug Case: ಸಿಸಿಬಿ ಚಾರ್ಜ್​ಶೀಟ್​ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ; ಅವರು ಡ್ರಗ್ಸ್ ಸೇವಿಸುತ್ತಿದ್ದರು ಎಂದು ಆರೋಪಿ ಹೇಳಿಕೆ

(Will follow Sharia law for all matters says Taliban New government)

Published On - 9:55 am, Wed, 8 September 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್