ಇಲ್ಲಿ ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಜಾತ್ರೆ ಮುಗಿಯುತ್ತೆ, ಚರ್ಮ ಸಮಸ್ಯೆ ಇರುವವರು ದರ್ಶನ ಮಾಡದೆ ಹೋಗಲ್ಲ

Sri Siddeshwara Jatre: ಗುಡ್ಡದ ಮೇಲೊಂದು ಪುಟ್ಟ ಗುಡಿಯಿದೆ. ಶ್ರಾವಣ ಮಾಸದ ಕೊನೆಯ ದಿನ ಅಲ್ಲಿ ಜಾತ್ರೆ ನಡಯುತ್ತೆ. ಅದು ನಾಲ್ಕು ಗಂಟೆಗಳ ಜಾತ್ರೆ. ಹೀಗಾಗಿ, ಜನರೆಲ್ಲ ನಿನ್ನೆ ಅಲ್ಲಿಗೆ ದೌಡಾಯಿಸಿದ್ರು. ಮಳೆಯ ನಡುವೆ ದೇವರ ದರ್ಶನ ಪಡೆದರು.

ಇಲ್ಲಿ ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಜಾತ್ರೆ ಮುಗಿಯುತ್ತೆ, ಚರ್ಮ ಸಮಸ್ಯೆ ಇರುವವರು ದರ್ಶನ ಮಾಡದೆ ಹೋಗಲ್ಲ
ಶ್ರೀ ಸಿದ್ದರಾಮೇಶ್ವರ ಜಾತ್ರೆ
Follow us
TV9 Web
| Updated By: ಆಯೇಷಾ ಬಾನು

Updated on:Sep 08, 2021 | 9:56 AM

ವಿಜಯಪುರ: ಈ ಜಿಲ್ಲೆಯಲೊಂದು ವಿಶೇಷವಾದ ದೇವಸ್ಥಾನವಿದೆ. ಇಲ್ಲಿ ನಡೆಯುವ ಜಾತ್ರೆ ವಿಭಿನ್ನದಲ್ಲಿ ವಿಭಿನ್ನ. ಕೇವಲ ನಾಲ್ಕು ಗಂಟೆಯಲ್ಲಿ ಜಾತ್ರೆನೇ ಮುಗಿದು ಹೋಗುತ್ತೆ. ಆದ್ರೆ ಈ ದೇವರ ಪವಾಡ ಮಾತ್ರ ಅಧಿಕ. ಹೀಗಾಗಿ ಜಾತ್ರೆಗೆ ಭಕ್ತ ಸಾಗರವೇ ಹರಿದು ಬರುತ್ತೆ.

ಮೆರವಣಿಗೆ ಇಲ್ಲ.. ರಥೋತ್ಸವವೂ ಇಲ್ಲ.. ಬಾಜಾ ಭಜಂತ್ರಿ ಇಲ್ಲ.. ಮನರಂಜನಾ ಕಾರ್ಯಕ್ರಮವೂ ಇಲ್ಲ.. ಜಸ್ಟ್ ನಾಲ್ಕೇ ಗಂಟೆಯೊಳಗೆ, ವಿಜಯಪುರದ ಬಸವನಬಾಗೇವಾಡಿಯ ನಾಗವಾಡದಲ್ಲಿ ಜಾತ್ರೆಯೇ ಮುಗಿದು ಹೋಗುತ್ತೆ. ನಿನ್ನೆ(ಸೆಪ್ಟೆಂಬರ್ -7) ಗ್ರಾಮದ ಹೊರ ಭಾಗದ ಗುಡ್ಡದಲ್ಲಿ ನಡೆದ ಶ್ರೀ ಸಿದ್ದರಾಮೇಶ್ವರ ಜಾತ್ರೆಗೆ ಜನರು ಆಗಮಿಸಿದ್ರು. ಅಂದಹಾಗೇ, ಶ್ರಾವಣ ಮಾಸದ ಕೊನೆಯ ದಿನ ಜಾತ್ರೆ ನಡೆಯುತ್ತೆ. ಆದ್ರೆ, ಈವರೆಗೂ ನಾಲ್ಕು ಗಂಟೆ ಮೀರಿ ಇಲ್ಲಿ ಜಾತ್ರೆ ನಡೆದೇ ಇಲ್ಲ. ನಿನ್ನೆಯೂ ಅಷ್ಟೇ, ನಾಲ್ಕು ಗಂಟೆಯೊಳಗೆ ಜಾತ್ರೆ ಅಂತ್ಯವಾಯ್ತು. ಸಾವಿರಾರು ಜನರು ಸಿದ್ದರಾಮೇಶ್ವರ ದೇವರ ದರ್ಶನ ಪಡೆದ್ರು.

Sri siddeshwara jatre

ಶ್ರೀ ಸಿದ್ದರಾಮೇಶ್ವರ ಜಾತ್ರೆ

ವಿಶೇಷ ಅಂದ್ರೆ, ಈ ಗುಡಿಗೆ ಬಂದ್ರೆ ಚರ್ಮ ಸಮಸ್ಯೆಯಾದ ನರುಳ್ಳಿ ಅಥವಾ ನರಲೆ ವಾಸಿಯಾಗುತ್ತಂತೆ. ಇದಕ್ಕಾಗೆ, ಅನೇಕ ಊರುಗಳ ಜನರು ಆಗಮಿಸ್ತಾರೆ. ಸತತ ಐದು ಸೋಮವಾರ ದೇವರ ದರ್ಶನ ಮಾಡ್ತಾರೆ. ಹೀಗೆ ಮಾಡಿದ ಅನೇಕರಿಗೆ ನರಲಿ ರೋಗ ಮಾಯವಾಗಿ ಹೋಗಿದೆ ಅಂತೆ.

ಒಟ್ನಲ್ಲಿ, ನಾಲ್ಕೇ ಗಂಟೆಯೊಳಗೆ ಮುಗಿದ ಜಾತ್ರೆಗಾಗಿ, ನೆರೆಯ ಮಹಾರಾಷ್ಟ್ರ, ತೆಲಂಗಾಣ ರಾಜ್ಯದಿಂದಲೂ ಜನ ಆಗಮಿಸಿದ್ರು. ಜಿಟಿ ಜಿಟಿ ಮಳೆಯಲ್ಲಿ, ಗುಡ್ಡದ ಮೇಲಿದ್ದ ಸಿದ್ದರಾಮೇಶ್ವರನಿಗೆ ನಮಿಸಿ ಖುಷಿ ಪಟ್ರು. ಹಾಗೆ, ಹಲವು ತಿಂಗಳುಗಳ ಬಳಿಕ ಕುಟುಂಬಸ್ಥರ ಜತೆ ಖುಷಿಯಿಂದ ಕಾಲ ಕಳೆದ್ರು.

Sri siddeshwara jatre

ಜಾತ್ರೆಗೆ ಹರಿದು ಬರುತ್ತಿರುವ ಭಕ್ತ ಸಾಗರ

ಇದನ್ನೂ ಓದಿ: ಮತ್ಸ್ಯಪ್ರಿಯರಿಗೆ ಸುಗ್ಗಿ; ತಾಜಾ ಮೀನು ತಿನ್ನುವ ಸಂಭ್ರಮಕ್ಕೆ ಮೀನಿನ ದರ ಇಳಿಕೆ ಸಾಥ್

Ganesha Chaturthi 2021: ಗಣಪತಿಯ ವಾಹನವಾದ ಇಲಿ; ಮೂಷಿಕ ಗಣೇಶನ ಹೊತ್ತು ಸವಾರಿ ಮಾಡಿದ ಹಿಂದಿದೆ ಒಂದು ಅಪರೂಪದ ಕಥೆ

Published On - 9:56 am, Wed, 8 September 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್