ನೀವು ಈ ಸಲ ಹೋಟೆಲ್ (Hotel) ಅಥವಾ ರೆಸ್ಟೋರೆಂಟ್ಗೆ ಹೋದಾಗ ಕಡ್ಡಾಯವಾಗಿ ಒಮ್ಮೆ ಬಿಲ್ ಪರೀಕ್ಷೆ ಮಾಡಿಕೊಳ್ಳಿ. ಏಕೆಂದರೆ, ಗುರುವಾರದಂದು ಗ್ರಾಹಕ ವ್ಯವಹಾರಗಳ ಸಚಿವಾಲಯವು ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳ ಒಕ್ಕೂಟಗಳಿಗೆ ತಿಳಿಸಿರುವ ಪ್ರಕಾರ ಕಡ್ಡಾಯವಾಗಿ “ಸೇವಾ ಶುಲ್ಕ” ವಿಧಿಸುವುದನ್ನು ನಿಲ್ಲಿದಬೇಕು. ಇದು ಕಾನೂನು ಬಾಹಿರ ಎಂದು ಹೇಳಲಾಗಿದೆ ಎಂಬುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಪದ್ಧತಿಯನ್ನು ಕೊನೆಗೊಳಿಸುವ ಸಲುವಾಗಿ ಕಾನೂನು ಚೌಕಟ್ಟು ರೂಪಿಸುವುದಕ್ಕೆ ಸಚಿವಾಲಯ ಮುಂದಾಗಿದೆ. ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವಂತೆ, ಗ್ರಾಹಕರಿಗೆ ವಿಧಿಸುವ ಸೇವಾ ಶುಲ್ಕಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಆದರೆ ಗ್ರಾಹಕರು ಇದನ್ನು ಸೇವಾ ತೆರಿಗೆ ಅಂದುಕೊಳ್ಳುತ್ತಾರೆ ಮತ್ತು ಅದನ್ನು ಪಾವತಿಸುತ್ತಾರೆ. ಇದರ ಜತೆಗೆ ವಿಭಿನ್ನವಾದ ಕಡೆ ಹೇಗೆ ವಿವಿಧ ದರದಲ್ಲಿ ಶುಲ್ಕಗಳನ್ನು ಬಿಲ್ನಲ್ಲಿ ಸೇರಿಸಲಾಗುತ್ತದೆ.
ಕಂದ್ರ ಗ್ರಾಹಕ ವ್ಯವಹಾರ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್ಆರ್ಎಐ), ಫೆಡರೇಷನ್ ಆಫ್ ಹೋಟೆಲ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಎಫ್ಎಚ್ಆರ್ಎಐ) ಮತ್ತು ಗ್ರಾಹಕ ಸಂಸ್ಥೆಗಳು ಭಾಗಿ ಆಗಿದ್ದವು. “ಈಗಿನ ನಿಯಮದಿಂದಾಗಿ ದಿನಕ್ಕೆ ಹತ್ತಾರು ಲಕ್ಷ ಗ್ರಾಹಕರ ಮೇಲೆ ಪರಿಣಾಮ ಆಗುತ್ತದೆ. ಸಂಬಂಧಪಟ್ಟವರು ನಿಯಮಾವಳಿಗಳಿಗೆ ಕಡ್ಡಾಯವಾಗಿ ಬದ್ಧರಾಗಿರಬೇಕು, ಅದಕ್ಕಾಗಿ ಚೌಕಟ್ಟು ರೂಪಿಸಲಾಗುವುದು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಧಿಕಾರಿಗಳು ಹೇಳುವಂತೆ, ಸೇವಾ ಶುಲ್ಕ ಅಥವಾ ಭಕ್ಷೀಸ್ ಎಂಬುದು ಸ್ವಯಂಪ್ರೇರಿತವೇ ಹೊರತು ಅದನ್ನು ಕಡ್ಡಾಯ ಮಾಡುವಂತಿಲ್ಲ.
ಮೆನುವಿನಲ್ಲಿ ಸೇವಾ ಶುಲ್ಕದ ಪ್ರಸ್ತಾವ ಇದ್ದಲ್ಲಿ ಗ್ರಾಹಕರು ಅದಕ್ಕೆ ಒಪ್ಪಿಕೊಂಡಂತೆಯೇ ಎಂಬ ವಾದವನ್ನು ಸಚಿವಾಲಯವು ನಿರಾಕರಿಸಿದೆ. ಒಂದು ಹೋಟೆಲ್ ಅಥವಾ ರೆಸ್ಟೋರೆಂಟ್ ಒಳಗೆ ಬಂದಾಕ್ಷಣ ಸೇವಾ ಶುಲ್ಕ ಪಾವತಿಸುವುದಕ್ಕೆ ಒಪ್ಪಿದ್ದಾರೆ ಅಂತಲ್ಲ. ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಇದು ನಿರ್ಬಂಧಿತ ವ್ಯವಹಾರ ಪದ್ಧತಿ. ಹೊಸ ನಿಯಮದ ಅಡಿಯಲ್ಲಿ ಈ ಪದ್ಧತಿ ಜತೆಗೆ ಹೇಗೆ ವ್ಯವಹರಿಸಬೇಕು ಎಂದು ತಿಳಿಸಲಾಗುತ್ತದೆ.
ಆದರೆ, ಮತ್ತೊಂದು ವಾದದ ಪ್ರಕಾರ ಸೇವಾ ಶುಲ್ಕ ಎಂಬುದು ಉದ್ಯೋಗಿಸ್ನೇಹಿ ಪದ್ಧತಿ. ಅದು ಕಾನೂನುಬಾಹಿರವೂ ಅಲ್ಲ. ಆರೋಪಿಸುತ್ತಿರುವಂತೆ ತಪ್ಪೂ ಅಲ್ಲ. ಈ ಸೇವಾ ಶುಲ್ಕದ ಮೇಲೆ ತೆರಿಗೆ ರೂಪದಲ್ಲಿ ಸರ್ಕಾರಕ್ಕೂ ಆದಾಯ ಇದೆ. ಈ ಸಂಬಂಧ ವಿವಿಧ ಕೋರ್ಟ್ ಆದೇಶಗಳು ಸಹ ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೋಟೆಲ್ ತಿಂಡಿ ದುಬಾರಿ: ಖಾದ್ಯತೈಲ, ಸಿಲಿಂಡರ್ ಬೆಲೆ ಏರಿಕೆಯ ಹೊರೆ ಗ್ರಾಹಕರಿಗೆ ವರ್ಗಾಯಿಸಲು ಚಿಂತನೆ