ಕೊವಿಡ್-19 ಬಿಕ್ಕಟ್ಟಿನ ಕಾರಣಕ್ಕೆ ಹೇರಿದ ಲಾಕ್ಡೌನ್ನಿಂದಾಗಿ ಕಳೆದ ವರ್ಷಗಳಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ ಅಥವಾ ವೇತನ ಕಡಿತವನ್ನು ಎದುರಿಸಿದ್ದಾರೆ. ಒಂದು ವೇಳೆ ಸಾಲದ ಮರು ಹೊಂದಾಣಿಕೆಗೆ ಬ್ಯಾಂಕ್ ಅವಕಾಶ ನೀಡದಿದ್ದರೆ ಕೆಲವರು ತಮ್ಮ ಸಾಲವನ್ನು ಸಹ ಪಾವತಿಸಲು ಸಾಧ್ಯವಾಗಿಲ್ಲ. ಹೀಗೆ ಸಾಲ ಮರುಪಾವತಿ ಮಾಡದಂಥ ವ್ಯಕ್ತಿಗೆ ನೀವು ಗ್ಯಾರಂಟಿಯಾಗಿ ಇದ್ದರೆ ನಿಮ್ಮ ಪಾಲಿಗೆ ತೊಂದರೆ ಎದುರಾಗಬಹುದು. ಸಾಲ ನೀಡುವ ಸಂಸ್ಥೆಗಳು ಸಾಮಾನ್ಯವಾಗಿ ಸಾಲದ ಮೊತ್ತವು ಅಧಿಕವಾಗಿದ್ದಾಗ ಅಥವಾ ಪ್ರಾಥಮಿಕ ಸಾಲಗಾರರ ಮರುಪಾವತಿ ಸಾಮರ್ಥ್ಯದೊಂದಿಗೆ ಬ್ಯಾಂಕ್ಗೆ ಅಗತ್ಯ ಇದೆ ಎನಿಸಿದಾಗ ಗ್ಯಾರಂಟರ್ ಅನ್ನು ಆ ಸಾಲಕ್ಕೆ ಜತೆಯಾಗಿಸಲು ಕೇಳುತ್ತಾರೆ. ಯಾವುದೇ ಸನ್ನಿವೇಶದಲ್ಲಿ, ಪ್ರಾಥಮಿಕ ಸಾಲಗಾರನು ಸಾಲದ ಇಎಂಐ ಪಾವತಿಸಲು ವಿಫಲವಾದರೆ, ಖಾತರಿದಾರರು ಅದರ ಸಂಪೂರ್ಣ ಮರುಪಾವತಿ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ.
ಪ್ರಾಥಮಿಕ ಸಾಲಗಾರರು ಸಾಲ ಮರುಪಾವತಿ ಮಾಡದಿದ್ದರೆ ಬಾಕಿ ಮೊತ್ತವನ್ನು ಪಾವತಿಸುವ ಹೊಣೆಗಾರಿಕೆ ಸಾಲಸ ಖಾತರಿದಾರರ ಮೇಲೆ ಬರುತ್ತದೆ. ಆತ ಪಾವತಿಸದಿದ್ದಲ್ಲಿ, ಖಾತರಿದಾರರು ಕಾನೂನು ಕ್ರಮಕ್ಕೆ ಹೊಣೆಗಾರನಾಗಿರುತ್ತಾರೆ. ಸಾಲಗಾರನ ವಿರುದ್ಧ ವಸೂಲಾತಿಯ ಪ್ರಕರಣವನ್ನು ಸಲ್ಲಿಸಿದರೆ, ಅದು ಸಾಲಗಾರ ಮತ್ತು ಖಾತರಿದಾರರ ವಿರುದ್ಧ ಪ್ರಕರಣ ದಾಖಲಿಸುತ್ತದೆ. ಸಾಲವನ್ನು ತೀರಿಸಲು ಆಸ್ತಿಗಳನ್ನು ಮಾರುವಂತೆ ನ್ಯಾಯಾಲಯವು ಗ್ಯಾರಂಟಿ ಆಗಿ ನಿಂತ ವ್ಯಕ್ತಿಯನ್ನು ಒತ್ತಾಯಿಸಬಹುದು. ಒಂದು ವೇಳೆ ವಿಷಯ ಇಷ್ಟು ಅತಿರೇಕಕ್ಕೆ ಹೋಗದಿದ್ದರೂ ಖಾತರಿದಾರರಾಗಿ ಇರುವುದಕ್ಕೆ ಸಂಬಂಧಿಸಿದಂತೆ ಇತರ ತೊಂದರೆಗಳಿವೆ.
ಗ್ಯಾರಂಟಿಯಾಗಿ (ಖಾತ್ರಿದಾರರಾಗಿ) ಸಹಿ ಮಾಡಿದ ಕ್ಷಣದಿಂದ ನಿಮ್ಮ ಸಾಲದ ಅರ್ಹತೆ ಕಡಿಮೆಯಾಗುತ್ತದೆ. ಒಂದು ವೇಳೆ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ, ಸಾಲದಾತರು ನೀವು ಖಾತರಿ ನೀಡಿದ ಸಾಲದ ಬಾಕಿ ಮೊತ್ತವನ್ನು ಅನಿಶ್ಚಿತ (ಕಂಟಿಂಜೆಂಟ್) ಹೊಣೆಗಾರಿಕೆ ಎಂದು ಪರಿಗಣಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ಆ ಸಾಲದ ಮೊತ್ತ ಜವಾಬ್ದಾರಿಯನ್ನು ನಿಮಗೂ ವಿಸ್ತರಿಸಬಹುದು. ಇದಲ್ಲದೆ, ನೀವು ಸಾಲಕ್ಕೆ ಖಾತರಿದಾರರಾಗಿದ್ದೀರಿ ಎಂಬುದು ಕ್ರೆಡಿಟ್ ರಿಪೋರ್ಟ್ನಲ್ಲಿಯೂ ಕಂಡುಬರುತ್ತದೆ. ಇದರರ್ಥ ಪ್ರಾಥಮಿಕ ಸಾಲಗಾರರು ಮರುಪಾವತಿಸದಿದ್ದರೂ ಅಥವಾ ನೀವು ಯಾವುದೇ ಸಾಲ ವಾಪಸ್ ಕೊಡದಿದ್ದರೂ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಮೊದಲನೆಯದಾಗಿ ನೀವು ಯಾರಿಗಾದರೂ ಸಾಲಕ್ಕೆ ಗ್ಯಾರಂಟಿ ಆಗದಿದ್ದರೆ ಉತ್ತಮ. ಒಂದು ವೇಳೆ ಹಾಗೇನಾದರೂ ಆದಲ್ಲಿ ಅವರು ಅದನ್ನು ಮರುಪಾವತಿಸದಿದ್ದಲ್ಲಿ ನಿಮಗಾದರೂ ಹಿಂತಿರುಗಿದುವ ಸಾಮರ್ಥ್ಯ ಇರಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಇದನ್ನೂ ಓದಿ: Credit Card EMI: ಕ್ರೆಡಿಟ್ ಕಾರ್ಡ್ ಬಿಲ್ ಯಾವಾಗ ಮತ್ತು ಯಾಕೆ ಇಎಂಐಗೆ ಕನ್ವರ್ಟ್ ಮಾಡಿಸಬೇಕು ಗೊತ್ತಾ?
(When primary borrower become default, here is the points to remember by guarantor)
Published On - 11:48 pm, Wed, 7 July 21