
ನವದೆಹಲಿ, ಜೂನ್ 9: ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಆಪ್‌ಗಳು ಗ್ರಾಹಕರನ್ನು ಮರುಳು ಮಾಡಲು ಬಳಸುವ ಮೋಸದ ಜಾಲಗಳಿಗೆ (Dark Patterns) ಬಹಳಷ್ಟು ಭಾರತೀಯರು ಬಲಿಯಾಗುತ್ತಿದೆ ಎನ್ನುವ ಆತಂಕಕಾರಿ ವರದಿಯೊಂದು ಬಂದಿದೆ. ಡಾರ್ಕ್ ಪ್ಯಾಟರ್ನ್ ಮಾದರಿಯ ವಂಚನೆಗಳಿಂದಾಗಿ ಶೇ. 88ರಷ್ಟು ಆನ್ಲೈನ್ ಗ್ರಾಹಕರು ಹಣ ಕಳೆದುಕೊಳ್ಳುತ್ತಿದ್ದಾರೆನ್ನಲಾಗಿದೆ. ಅಂದರೆ, ಭಾರತದ ಒಟ್ಟು 30.4 ಕೋಟಿ ಆನ್‌ಲೈನ್ ಗ್ರಾಹಕರಲ್ಲಿ 27 ಕೋಟಿಗೂ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಮೋಸದ ಜಾಲದಿಂದಾಗಿ ಭಾರತೀಯ ಗ್ರಾಹಕರು ವಾರ್ಷಿಕವಾಗಿ ಅಂದಾಜು 25,000 ದಿಂದ 28,000 ಕೋಟಿ ರೂಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಗ್ರಾಹಕರು ತಿಂಗಳಿಗೆ ಸರಾಸರಿ 78 ರಿಂದ 87 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿದ್ದಾರೆ.
ಈ ರೀತಿಯ ಮೋಸದ ತಂತ್ರಗಳಿಂದಾಗಿ ಗ್ರಾಹಕರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದು ಒಟ್ಟಾರೆ ಆನ್‌ಲೈನ್ ಮಾರುಕಟ್ಟೆಯ ಸುಮಾರು 55,000 ಕೋಟಿ ರೂ ಮೌಲ್ಯದ ವ್ಯಾಪಾರವನ್ನು (GMV) ಅಪಾಯಕ್ಕೆ ದೂಡಿದೆ.
ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ
ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಆಪ್‌ಗಳು ಗ್ರಾಹಕರನ್ನು ಮರುಳು ಮಾಡಲು ಬಳಸುವ ಮೋಸದ ಜಾಲಗಳಿಗೆ ಡಾರ್ಕ್ ಪ್ಯಾಟರ್ನ್ ಎನ್ನುವುದು. ಆನ್‌ಲೈನ್ ಆಪ್‌ಗಳು ಪ್ರಮುಖವಾಗಿ ಮೂರು ರೀತಿಯ ಕುತಂತ್ರಗಳನ್ನು ಬಳಸುತ್ತವೆ:
ಡಾಟಮ್ ಇಂಟೆಲಿಜೆನ್ಸ್ನ ಈ ವರದಿ ಪ್ರಕಾರ, ಇ-ಕಾಮರ್ಸ್ ವಲಯದಲ್ಲಿ ಅಮೆಜಾನ್ (Amazon) ಸಂಸ್ಥೆಯು ಗ್ರಾಹಕರಲ್ಲಿ ಅತಿ ಹೆಚ್ಚು ನಂಬಿಕೆ (50%) ಗಳಿಸಿದೆ. ಆದರೆ ಫ್ಲಿಪ್‌ಕಾರ್ಟ್, ಮಿಂತ್ರಾ ಮತ್ತು ನೈಕಾ ಕಂಪನಿಗಳ ಮೇಲೆ ಗ್ರಾಹಕರು ಹೆಚ್ಚಿನ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ಟ್ರಾವೆಲ್ ಬುಕಿಂಗ್‌ನಲ್ಲಿ ‘ಮೇಕ್‌ಮೈಟ್ರಿಪ್’ (MakeMyTrip) ಸುರಕ್ಷಿತ ಎಂದು ಪರಿಣಾಮ ಬೀರಿದ್ದರೆ, ‘ಕ್ಲಿಯರ್‌ಟ್ರಿಪ್’ ಗ್ರಾಹಕರಿಗೆ ಹೆಚ್ಚು ಹಾನಿಕಾರಕವಾಗಿ ಕಂಡುಬಂದಿದೆ. ಕ್ವಿಕ್ ಕಾಮರ್ಸ್ (ತ್ವರಿತ ವಿತರಣೆ) ವಿಭಾಗದಲ್ಲಿ ‘ಬಿಗ್‌ಬಾಸ್ಕೆಟ್’ ಅತಿ ಹೆಚ್ಚು ಡಾರ್ಕ್ ಪ್ಯಾಟರ್ನ್ ತಂತ್ರಗಳನ್ನು ಬಳಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ಹೊಸ DL, ವಾಹನ ನಿಯಮ: ಪರವಾನಗಿ ಅವಧಿ ವಿಸ್ತರಣೆ, ಆನ್ಲೈನ್ನಲ್ಲೇ ವಾಹನ ಮಾಲಕತ್ವ ವರ್ಗಾವಣೆ
ವರದಿಯಲ್ಲಿ ಒಂದು ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ — ಶೇ. 81 ರಷ್ಟು ಗ್ರಾಹಕರಿಗೆ ಈ ಚೀಟಿಂಗ್ ಪ್ಯಾಟರ್ನ್ಗಳ ಬಗ್ಗೆ ಜಾಗೃತಿ ಇದ್ದರೂ, ಅವರಲ್ಲೇ ಶೇಕಡಾ 85 ರಷ್ಟು ಜನರು ಇವುಗಳಿಗೆ ಬಲಿಯಾಗುತ್ತಿದ್ದಾರೆ.
ಇದನ್ನು ತಡೆಯಲು ಮುಂದಿನ 36 ತಿಂಗಳುಗಳ ಕ್ರಿಯಾ ಯೋಜನೆಯನ್ನು ಈ ವರದಿ ಪ್ರಸ್ತಾಪಿಸಿದೆ. ಮೊದಲ ಹಂತವಾಗಿ, ಬುಕಿಂಗ್ ಅಥವಾ ಪಾವತಿ ಮಾಡುವಾಗ ಮೊದಲೇ ಟಿಕ್ ಆಗಿರುವ ಇನ್ಶೂರೆನ್ಸ್ ಆಪ್ಷನ್‌ಗಳನ್ನು ನಿಷೇಧಿಸುವುದು, ಸರ್ಚ್ ರಿಸಲ್ಟ್‌ನಲ್ಲೇ ಸಂಪೂರ್ಣ ಬೆಲೆಯನ್ನು ತೋರಿಸುವುದು ಮತ್ತು ದೂರುಗಳ ಶೀಘ್ರ ವಿಲೇವಾರಿಗೆ ಪ್ರತ್ಯೇಕ ಪೋರ್ಟಲ್ ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ