7th Pay Commission DA Hike: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಡಿಎ ಶೇ 4ರಷ್ಟು ಹೆಚ್ಚಳ

|

Updated on: Mar 24, 2023 | 10:17 PM

7th Pay Commission Latest Updates: ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಿರುವ ಸರ್ಕಾರ ತುಟ್ಟಿ ಭತ್ಯೆಯನ್ನು ಶೇ 4ರಷ್ಟು ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದೆ. ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದೀಗ ತುಟ್ಟಿ ಭತ್ಯೆ ಹಾಗೂ ಪರಿಹಾರ ಶೇ 42ಕ್ಕೆ ಏರಿಕೆ ಆಗಿದೆ.

7th Pay Commission DA Hike: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಡಿಎ ಶೇ 4ರಷ್ಟು ಹೆಚ್ಚಳ
Follow us on

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಿರುವ ಸರ್ಕಾರ ತುಟ್ಟಿ ಭತ್ಯೆಯನ್ನು (dearness allowance) ಹಾಗೂ ತುಟ್ಟಿ ಪರಿಹಾರವನ್ನು (Dearness Relief ) ಶೇ 4ರಷ್ಟು ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದೆ. ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದೀಗ ತುಟ್ಟಿ ಭತ್ಯೆ ಹಾಗೂ ಪರಿಹಾರ ಶೇ 42ಕ್ಕೆ ಏರಿಕೆ ಆಗಿದೆ. ಇದರಿಂದ 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ 69.76 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 12,815.60 ಕೋಟಿ ರೂ. ಹೊರೆಯಾಗಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಚಿವ ಸಂಪುಟದ ಆರ್ಥಿಕವ್ಯವಹಾರಗಳ ಸಮಿತಿಯ ಸಭೆಯ (CCEA) ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಜನವರಿಯಿಂದಲೇ ಪೂರ್ವಾನ್ವಯ

20203ರ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರ ಹೆಚ್ಚಳವು ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ದೊರೆಯಲಿದೆ. 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಈ ಹೆಚ್ಚಳ ಮಾಡಲಾಗಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಶೇಕಡಾ 31ರಷ್ಟಿದ್ದ ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರ 2022r ಮಾರ್ಚ್​ನಲ್ಲಿ ಶೇಕಡಾ 34ಕ್ಕೆ ಹೆಚ್ಚಿಸಿತ್ತು. 2022ರ ಸೆಪ್ಟೆಂಬರ್​ನಲ್ಲಿ ಶೇಕಡಾ 4ರಷ್ಟು ಹೆಚ್ಚಿಸಿ ಶೇಕಡಾ 38ಕ್ಕೆ ನಿಗದಿಪಡಿಸಿತ್ತು. ಇದೀಗ ಡಿಎ ಪ್ರಮಾಣ ಶೇ 42 ಆಗಿದೆ. ಬೆಲೆ ಏರಿಕೆ ಆಧಾರದ ಮೇಲೆ ನೌಕರರಿಗೆ ಡಿಎ ಅಥವಾ ತುಟ್ಟಿ ಭತ್ಯೆ (ಡಿಯರ್ನೆಸ್ ಅಲೋಯನ್ಸ್) ಕೊಡಲಾಗುತ್ತದೆ. ಎಷ್ಟು ಡಿಎ ಹೆಚ್ಚಿಸಬೇಕು ಎಂದು ನಿರ್ಧಾರಕ್ಕೆ ಬರಲು ಒಂದು ಸೂತ್ರವನ್ನು ಅನುಸರಿಸಲಾಗುತ್ತದೆ.

ಡಿಎ ಲೆಕ್ಕಾಚಾರ ಹೇಗೆ?

ಮಾರ್ಚ್​ ತಿಂಗಳ ವೇತನದೊಂದಿಗೇ ಹೆಚ್ಚಳವಾದ ಡಿಎ ಸರ್ಕಾರಿ ನೌಕರರ ಕೈಸೇರಲಿದೆ. ಮೂಲ ವೇತನದ ಆಧಾರದಲ್ಲಿ ಡಿಎ ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗೆ; ಕೇಂದ್ರ ಸರ್ಕಾರಿ ನೌಕರರೊಬ್ಬರ ಮೂಲ ವೇತನ 20,000 ರೂ. ಎಂದಿಟ್ಟುಕೊಳ್ಳೋಣ. ಶೇ 4ರ ಡಿಎ ಹೆಚ್ಚಳದಿಂದ ಅವರ ವೇತನದಲ್ಲಿ 800 ರೂ. ಹೆಚ್ಚಳವಾಗಲಿದೆ.

ಇದನ್ನೂ ಓದಿ: LIC: ಅದಾನಿ ಪ್ರಕರಣದಿಂದ ಎಚ್ಚೆತ್ತ ಎಲ್​ಐಸಿ; ಹೂಡಿಕೆ ನೀತಿಯಲ್ಲಿ ಬದಲಾವಣೆ? ಏನಿದೆ ಹೊಸ ಪಾಲಿಸಿ?

ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕ ಅಥವಾ AICPI ಯ 12 ತಿಂಗಳ ಸರಾಸರಿ – 115.76) /115.76 X 100 ಈ ರೀತಿಯಾಗಿ ಲೆಕ್ಕ ಹಾಕಲಾಗುತ್ತದೆ. ಇಲ್ಲಿ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕವು ಕಳೆದ 12 ತಿಂಗಳ ಸರಾಸರಿ ಬೆಲೆ ಏರಿಕೆಯನ್ನು ಸೂಚಿಸುತ್ತದೆ. ಸದ್ಯ ಕಳೆದ 12 ತಿಂಗಳ ಸರಾಸರಿ ಸಿಪಿಐ–ಐಡಬ್ಲ್ಯೂ 372.2 ಇದೆ. ಮೇಲಿನ ಸೂತ್ರಕ್ಕೆ ಇದನ್ನು ಸೇರಿಸಿದರೆ ಡಿಎ ಶೇ. 42.37 ಆಗುತ್ತದೆ. ಸರ್ಕಾರ ಡಿಎ ಹೆಚ್ಚಳವನ್ನು ಶೇ. 42ಕ್ಕೆ ನಿಗದಿ ಮಾಡಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ  ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Fri, 24 March 23