LIC: ಅದಾನಿ ಪ್ರಕರಣದಿಂದ ಎಚ್ಚೆತ್ತ ಎಲ್​ಐಸಿ; ಹೂಡಿಕೆ ನೀತಿಯಲ್ಲಿ ಬದಲಾವಣೆ? ಏನಿದೆ ಹೊಸ ಪಾಲಿಸಿ?

Investment Plans of LIC: ಅದಾನಿ ಕಂಪನಿಗಳ ಷೇರುಗಳಲ್ಲಿ ಎಲ್​ಐಸಿ ಸುಮಾರು 30,000 ಕೋಟಿ ರುಪಾಯಿ ಹಣ ಹೂಡಿಕೆ ಮಾಡಿದೆ. ಇದೀಗ ಅದಾನಿ ಷೇರು ಕುಸಿತದೊಂದಿಗೆ ಎಲ್​ಐಸಿಯ 6,200 ಕೋಟಿ ರುಪಾಯಿಯಷ್ಟು ಹಣ ಸಂಕಷ್ಟಕ್ಕೆ ಸಿಲುಕಿಕೊಂಡಂತೆ ಆಗಿದೆ.

LIC: ಅದಾನಿ ಪ್ರಕರಣದಿಂದ ಎಚ್ಚೆತ್ತ ಎಲ್​ಐಸಿ; ಹೂಡಿಕೆ ನೀತಿಯಲ್ಲಿ ಬದಲಾವಣೆ? ಏನಿದೆ ಹೊಸ ಪಾಲಿಸಿ?
ಎಲ್​​ಐಸಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 24, 2023 | 7:43 PM

ನವದೆಹಲಿ: ಗೌತಮ್ ಅದಾನಿ ಮಾಲಿಕತ್ವದ ಅದಾನಿ ಗ್ರೂಪ್​ನ ಕಂಪನಿಗಳ ಷೇರುಗಳು (Adani Group companies shares) ಪ್ರಪಾತಕ್ಕೆ ಬಿದ್ದಿರುವುದು ಗೊತ್ತೇ ಇದೆ. ಈ ಕಂಪನಿಗಳ ಷೇರುಗಳ ಮೇಲೆ ಎಲ್​ಐಸಿ ಸಂಸ್ಥೆ ಅಪಾರ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದೆ. ಇದರಿಂದ ಎಲ್​ಐಸಿ (LIC) ಬಗ್ಗೆ ಜನರಿಗಿರುವ ವಿಶ್ವಾಸ ಕಡಿಮೆ ಆಗಬಹುದು ಎಂದು ಅನೇಕರು ಶಂಕಿಸಿದ್ದಾರೆ. ಹಿಂಡನ್ಬರ್ಗ್ ರಿಸರ್ಚ್ ತನಿಖಾ ವರದಿ ಪ್ರಕಟವಾದ ಬಳಿಕ ಅದಾನಿ ಗ್ರೂಪ್​ನ ಸಂಪತ್ತು 100 ಬಿಲಿಯನ್ ಡಾಲರ್ (ಸುಮಾರು 8.2 ಲಕ್ಷ ಕೋಟಿ ರುಪಾಯಿ) ಮೌಲ್ಯದಷ್ಟು ಕರಗಿದೆ. ಅದಾನಿ ಕಂಪನಿಗಳ ಷೇರುಗಳಲ್ಲಿ ಎಲ್​ಐಸಿ ಸುಮಾರು 30,000 ಕೋಟಿ ರುಪಾಯಿ ಹಣ ಹೂಡಿಕೆ ಮಾಡಿದೆ. ಇದೀಗ ಅದಾನಿ ಷೇರು ಕುಸಿತದೊಂದಿಗೆ ಎಲ್​ಐಸಿಯ 6,200 ಕೋಟಿ ರುಪಾಯಿಯಷ್ಟು ಹಣ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಅಂದಾಜಿದೆ.

ದೇಶದ ಮೂಲೆ ಮೂಲೆಯಲ್ಲೂ ಜನರು ಎಲ್​ಐಸಿ ಪಾಲಿಸಿಗಳನ್ನು ಖರೀದಿಸುತ್ತಾರೆ. ಇದರಿಂದ ಎಲ್​ಐಸಿ ಬಳಿ ಹೇರಳ ಹೂಡಿಕೆ ಹಣವಿದೆ. ಅಂತೆಯೇ ಎಲ್​ಐಸಿಯು ಭಾರತದ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರನೂ ಹೌದು. ಅದರ ಬಳಿ 539 ಬಿಲಿಯನ್ ಡಾಲರ್ (ಸುಮಾರು 44 ಲಕ್ಷ ಕೋಟಿ ರುಪಾಯಿ) ಮೊತ್ತದಷ್ಟು ಹೂಡಿಕೆದಾರರ ಹಣವಿದೆ. ಇದನ್ನು ವಿವಿಧ ಕಂಪನಿಗಳ ಷೇರುಗಳು ಮತ್ತಿತರ ಕಡೆ ಹೂಡಿಕೆ ಮಾಡಿ ಅದರಿಂದ ಲಾಭ ಮಾಡಿಕೊಳ್ಳುತ್ತದೆ ಎಲ್​ಐಸಿ. ಇದೀಗ ಅದಾನಿ ಗ್ರೂಪ್ ಕಂಪನಿಗೆ ಹಾಕಿದ ದುಡ್ಡು ನಷ್ಟ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ತನ್ನ ಹೂಡಿಕೆ ನೀತಿಯಲ್ಲಿ ಎಲ್​ಐಸಿ ಬದಲಾವಣೆ ತರಲು ಹೊರಟಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಇದನ್ನೂ ಓದಿ7th Pay Commission: ಸರ್ಕಾರಿ ನೌಕರರಿಗೆ ಇನ್ನೊಂದು ವಾರಕ್ಕೆ ಖುಷಿ ಸುದ್ದಿ; ಕನಿಷ್ಠ ವೇತನದಲ್ಲಿ ಭರ್ಜರಿ ಏರಿಕೆ ಸಾಧ್ಯತೆ

ಒಬ್ಬರೇ ಪ್ರೊಮೋಟರ್​ಗಳಿರುವ ವೈಯಕ್ತಿಕ ಸಂಸ್ಥೆಗಳು, ಗ್ರಪ್ ಕಂಪನಿಗಳ ಮೇಲೆ ಮಾಡಲಾಗುವ ಹೂಡಿಕೆಗೆ ಇನ್ನಷ್ಟು ಮಿತಿ ಹಾಕಲು ಎಲ್​ಐಸಿ ಯೋಜಿಸಿದೆ. ಈಗ ಇರುವ ಎಲ್​ಐಸಿ ಹೂಡಿಕೆ ನೀತಿ ಪ್ರಕಾರ, ಒಂದೇ ಕಂಪನಿಯಲ್ಲಿ ಶೇ. 10ಕ್ಕಿಂತ ಹೆಚ್ಚು ಔಟ್​ಸ್ಟ್ಯಾಡಿಂಗ್ ಈಕ್ವಿಟಿ ಹೂಡುವಂತಿಲ್ಲ. ಶೇ. 10 ಔಟ್​ಸ್ಟ್ಯಾಂಡಿಂಗ್ ಡೆಬ್ಟ್ ಹೂಡುವಂತಿಲ್ಲ. ಇಲ್ಲಿ ಔಟ್​ಸ್ಟ್ಯಾಂಡಿಂಗ್ ಈಕ್ವಿಟಿ ಎಂದರೆ ಇದು ಎಲ್​ಐಸಿಯ ಪಾಲಿಸಿಯ ಹಣವಲ್ಲ. ಇನ್ನು ಔಟ್​ಸ್ಟ್ಯಾಂಡಿಂಗ್ ಡೆಬ್ಟ್ ಎಂಬುದು ಎಲ್​ಐಸಿ ಪಾಲಿಸಿದಾರರ ಹಣವಾಗಿದ್ದು, ಇದನ್ನು ನಿಗದಿತ ಅವಧಿಯಲ್ಲಿ ಮರಳಿಸಬೇಕಾಗುತ್ತದೆ. ಈಗ ಶೇ. 10ಕ್ಕಿಂತಲೂ ಕಡಿಮೆಗೆ ಎಲ್​ಐಸಿ ಒಂದು ಕಂಪನಿಯಲ್ಲಿ ತನ್ನ ಹೂಡಿಕೆಗೆ ಮಿತಿ ಹಾಕಬಹುದು.

ಇದನ್ನೂ ಓದಿJack Dorsey: ಅದಾನಿ ಆಯ್ತು, ಜ್ಯಾಕ್ ಡಾಸೀ ಮೇಲೆ ಹಿಂಡನ್ಬರ್ಗ್ ದಾಳಿ; 4,300 ಕೋಟಿ ಸಂಪತ್ತು ಕಳೆದುಕೊಂಡ ಟ್ವಿಟ್ಟರ್ ಸ್ಥಾಪಕ

ವಿಮಾ ಪ್ರಾಧಿಕಾರ ಸಂಸ್ಥೆ ಐಆರ್​ಡಿಎಐ ಕೂಡ ಈ ವಿಚಾರದಲ್ಲಿ ಸ್ಪಷ್ಟ ಗೆರೆ ಹಾಕಿದೆ. ಇನ್ಷೂರೆನ್ಸ್ ಕಂಪನಿಗಳು ತಮ್ಮ ಶೇ. 15ಕ್ಕಿಂತ ಹೆಚ್ಚು ನಿಧಿಯನ್ನು ಒಂದು ಕಂಪನಿಯ ಷೇರುಗಳಲ್ಲಿ ಹಾಕುವಂತಿಲ್ಲ ಎಂದು ಅದು ನಿರ್ಬಂಧ ಹಾಕಿದೆ. ಒಂದೇ ಕಂಪನಿಯಲ್ಲಿ ಹೆಚ್ಚು ಮೊತ್ತದ ಹೂಡಿಕೆ ಮಾಡಿದರೆ ನಷ್ಟದ ಅಪಾಯ ಹೆಚ್ಚಿರುತ್ತದೆ. ಕಡಿಮೆ ಮೊತ್ತದ ಹೂಡಿಕೆಯನ್ನು ಹಲವಾರು ಕಂಪನಿಗಳಲ್ಲಿ ಹೂಡಿದರೆ ಲಾಭ ನಷ್ಟಗಳ ಸಮತೋಲನ ಮಾಡಬಹುದು ಎಂಬುದು ಲೆಕ್ಕಾಚಾರ. ಇಲ್ಲದಿದ್ದರೆ ವಿಮಾ ಪಾಲಿಸಿದಾರರ ಹಣ ಅಪಾಯಕ್ಕೆ ಸಿಲುಕುತ್ತದೆ.

ಈಗ ಎಲ್​​ಐಸಿ ಇನ್ನೂ ಕಠಿಣ ನಿರ್ಬಂಧಗಳನ್ನು ಹಾಕುವ ಹಾದಿಯಲ್ಲಿದೆ. ಎಲ್​ಐಸಿಯ ಹೂಡಿಕೆ ಸಮಿತಿ ಮೊದಲು ಈ ಬಗ್ಗೆ ಒಂದು ನಿರ್ಧಾರಕ್ಕೆ ಬಂದು ಆ ಬಳಿಕ ಜೀವ ವಿಮಾ ನಿಗಮದ ಮಂಡಳಿಯ ಅನುಮೋದನೆ ಪಡೆಯಬೇಕಾಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್