AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Scheme: ಎಸ್​ಬಿಐನಲ್ಲಿ ಎನ್​ಪಿಎಸ್ ಖಾತೆ ತೆರೆಯುವುದರಿಂದ ಹಲವು ಲಾಭಗಳು

Retirement Plan: ನ್ಯಾಷನಲ್ ಪೆನ್ಷನ್ ಸ್ಕೀಮ್ ಅನ್ನು ಕೇಂದ್ರ ಸರ್ಕಾರ ಮೊದಲಿಗೆ ತನ್ನ ಉದ್ಯೋಗಿಗಳಿಗೆಂದು ರೂಪಿಸಿದ್ದು. ಬಳಿಕ ಸಮಸ್ತ ನಾಗರಿಕರಿಗೂ ಈ ಸೌಲಭ್ಯ ವಿಸ್ತರಿಸಿದೆ. ಇದರಲ್ಲಿ ಸಿಗುವ ಲಾಭ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಟಯರ್ 1 ಖಾತೆಯಲ್ಲಿ ನೀವು ಹೂಡಿಕೆ ಮಾಡಿರುವ ಮೊತ್ತಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.

SBI Scheme: ಎಸ್​ಬಿಐನಲ್ಲಿ ಎನ್​ಪಿಎಸ್ ಖಾತೆ ತೆರೆಯುವುದರಿಂದ ಹಲವು ಲಾಭಗಳು
ನ್ಯಾಷನಲ್ ಪೆನ್ಷನ್ ಸ್ಕೀಮ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 24, 2023 | 6:21 PM

ನ್ಯಾಷನಲ್ ಪೆನ್ಷನ್ ಸ್ಕೀಮ್ ಬಗ್ಗೆ ನೀವು ಕೇಳಿರಬಹುದು. ಕೇಂದ್ರ ಸರ್ಕಾರ ಎಲ್ಲಾ ನಾಗರಿಕರ ಉಪಯೋಗಕ್ಕೆ ಮತ್ತು ಅವರ ಭವಿಷ್ಯದ ಭದ್ರತೆಗೆಂದು ರೂಪಿಸಿರುವ ಪಿಂಚಣಿ ವ್ಯವಸ್ಥೆಯಾಗಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಪೆನ್ಷನ್ ಫಂಡ್ ರೆಗ್ಯುಲೇಟರಿ ಡೆವಲಪ್ಮೆಂಟ್ ಅಥಾರಿಟಿ (PFRDA) ಈ ನ್ಯಾಷನಲ್ ಪೆನ್ಷನ್ ಸ್ಕೀಮ್ ಅನ್ನು ನಿರ್ವಹಿಸುತ್ತದೆ. ಈ ಯೋಜನೆಯನ್ನು ಹೊಂದಿರುವವರು ನಿಯಮಿತವಾಗಿ ಹಣ ಹೂಡಿಕೆ ಮಾಡಿ, ನಿವೃತ್ತರಾದ ಬಳಿಕ ಅದನ್ನು ಪಿಂಚಣಿಯಾಗಿ ಪಡೆದುಕೊಳ್ಳಬಹುದು. ನ್ಯಾಷನಲ್ ಪೆನ್ಷನ್ ಸ್ಕೀಮ್ (National Pension Scheme) ಅನ್ನು ವಿವಿಧ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ಒದಗಿಸುತ್ತವೆ. ಇದರಲ್ಲಿ ಎಸ್​ಬಿಐನ ನ್ಯಾಷನಲ್ ಪೆನ್ಷನ್ ಸ್ಕೀಮ್ ಬಹಳ ಮಂದಿಯ ನೆಚ್ಚಿನ ಯೋಜನೆ ಎನಿಸಿದೆ. ಇದರಲ್ಲಿ ತೆರಿಗೆ ವಿನಾಯಿತಿ ಮತ್ತು ಅಧಿಕ ಬಡ್ಡಿ ಸೇರಿದಂತೆ ಹಲವು ಲಾಭಗಳನ್ನು ಸದಸ್ಯರು ಪಡೆಯಬಹುದಾಗಿದೆ.

ಎಸ್​ಬಿಐನಲ್ಲಿಯಷ್ಟೇ ಅಲ್ಲ ಯಾವುದೇ ಎನ್​ಪಿಎಸ್ ಖಾತೆಯಾದರೂ ಎರಡು ವಿಧ ಇರುತ್ತದೆ. ಟಯರ್ 1 ಮತ್ತು ಟಯರ್ 2 ಇರುತ್ತದೆ. ಎಸ್​ಬಿಐನಲ್ಲಿ ಟಯರ್ 1 ಎನ್​ಪಿಎಸ್ ಖಾತೆ ತೆರೆದರೆ ತೆರಿಗೆ ಲಾಭ ಸಿಗುತ್ತದೆ. ಇಲ್ಲಿ ಖಾತೆ ತೆರೆಯಲು ಬೇಕಾದ ಕನಿಷ್ಠ ಮೊತ್ತ 500 ರೂ ಇದೆ. ಒಂದು ವರ್ಷದಲ್ಲಿ ಕನಿಷ್ಠ 1,000 ರೂ ಆದರೂ ಹೂಡಿಕೆ ಮಾಡಬೇಕು.

ಇದನ್ನೂ ಓದಿ: Hallmark Gold: ಏಪ್ರಿಲ್ 1ರಿಂದ HUID ಸಂಖ್ಯೆ ಇಲ್ಲದ ಒಡವೆಗಳ ಮಾರಾಟ ಇಲ್ಲ; ಏನಿದು ಹೊಸ ಹಾಲ್​ಮಾರ್ಕ್?

ಇನ್ನು ಎನ್​ಪಿಎಸ್​ನ ಟಯರ್ 2 ಖಾತೆ ಒಂದು ರೀತಿಯಲ್ಲಿ ಹೂಡಿಕೆಗೆಂದು ಮಾಡಿರುವ ವ್ಯವಸ್ಥೆ. ಇದು ತೆರಿಗೆ ಉಳಿತಾಯಕ್ಕೆ ಅವಕಾಶ ತರುವುದಿಲ್ಲ. ಈ ಟಯರ್ 2 ಎನ್​ಪಿಎಸ್ ಖಾತೆ ತೆರೆಯಲು ಕನಿಷ್ಠ 1,000 ರೂ ಬೇಕು. ಈ ಟಯರ್ 2ಖಾತೆಯ ಪ್ರಯೋಜನ ಎಂದರೆ ನಾವು ಯಾವಾಗ ಬೇಕಾದರೂ ನಮ್ಮ ಹೂಡಿಕೆಯನ್ನು ವಾಪಸ್ ಪಡೆಯಬಹುದು.

ಟಯರ್ 2 ಎನ್​ಪಿಎಸ್ ಖಾತೆಯ ತೆರಿಗೆ ಪ್ರಯೋಜನ ತಿಳಿದಿರಿ

ನ್ಯಾಷನಲ್ ಪೆನ್ಷನ್ ಸ್ಕೀಮ್ ಅನ್ನು ಕೇಂದ್ರ ಸರ್ಕಾರ ಮೊದಲಿಗೆ ತನ್ನ ಉದ್ಯೋಗಿಗಳಿಗೆಂದು ರೂಪಿಸಿದ್ದು. ಬಳಿಕ ಸಮಸ್ತ ನಾಗರಿಕರಿಗೂ ಈ ಸೌಲಭ್ಯ ವಿಸ್ತರಿಸಿದೆ. ಇದರಲ್ಲಿ ಸಿಗುವ ಲಾಭ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಟಯರ್ 1 ಖಾತೆಯಲ್ಲಿ ನೀವು ಹೂಡಿಕೆ ಮಾಡಿರುವ ಮೊತ್ತಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.

ಎಸ್​ಬಿಐನ ಟಯರ್ 1 ಎನ್​ಪಿಎಸ್ ಸ್ಕೀಮ್​ನಲ್ಲಿ ಶೇ. 8.70ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಇದು 5 ವರ್ಷದ ಅವಧಿಯಲ್ಲಿ ವರ್ಷವಾರು ಸಿಗುವ ಬಡ್ಡಿ.

ಎನ್​ಪಿಎಸ್ ಖಾತೆ ಯಾರು ತೆರೆಯಬಹುದು?

ಆಗಲೇ ಹೇಳಿದಂತೆ ನ್ಯಾಷನಲ್ ಪೆನ್ಷನ್ ಸ್ಕೀಮ್ ಎಲ್ಲಾ ನಾಗರಿಕರಿಗೂ ಇರುವ ಯೋಜನೆಯಾಗಿದೆ. ಭಾರತೀಯ ಪ್ರಜೆಗಳೆಲ್ಲರೂ ಈ ಖಾತೆ ತೆರೆಯಬಹುದು. ಎನ್​ಆರ್​ಐಗಳೂ ಕೂಡ ಎನ್​ಪಿಎಸ್ ಖಾತೆ ಹೊಂದರಬಹುದು. ವಯೋಮಿತಿ ಕನಿಷ್ಠ 18 ವರ್ಷ, ಗರಿಷ್ಠ 70 ವರ್ಷ ಇರಬೇಕು.

ಎನ್​ಪಿಎಸ್ ಖಾತೆ ಯಾವಾಗ ನಿಲ್ಲಿಸಬಹುದು?

ನ್ಯಾಷನಲ್ ಪೆನ್ಷನ್ ಸ್ಕೀಮ್​ನ ಸದಸ್ಯರು 60 ವರ್ಷ ವಯಸ್ಸಿನೊಳಗೆ ಎನ್​ಪಿಎಸ್ ಖಾತೆಯಿಂದ ಹಣ ಹಿಂಪಡೆಯಲು ಸಾಧ್ಯ. ಆದರೆ, ಎನ್​ಪಿಎಸ್ ಖಾತೆ ತೆರೆದು ಕನಿಷ್ಠ 5 ವರ್ಷ ಆಗಿರಬೇಕು. ನಿಧಿಯಲ್ಲಿರುವ ಒಟ್ಟು ಹಣದಲ್ಲಿ ಶೇ. 20ರಷ್ಟನ್ನು ಒಟ್ಟಿಗೆ ವಿತ್​ಡ್ರಾ ಮಾಡಿಕೊಳ್ಳಬಹುದು. ಉಳಿದವನ್ನು ವಾರ್ಷಿಕ ಯೋಜನೆಗೆ ಹೂಡಿಕೆಯಾಗುತ್ತದೆ. ಈ ನಿಧಿಯಲ್ಲಿ 2.5 ಲಕ್ಷಕ್ಕಿಂತ ಕಡಿಮೆ ಹಣ ಇದ್ದರೆ ಆಗ ಎಲ್ಲವನ್ನೂ ಒಟ್ಟಿಗೆ ಹಿಂಪಡೆಯುವ ಅವಕಾಶ ಇರುತ್ತದೆ.

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರಿಗೆ ಇನ್ನೊಂದು ವಾರಕ್ಕೆ ಖುಷಿ ಸುದ್ದಿ; ಕನಿಷ್ಠ ವೇತನದಲ್ಲಿ ಭರ್ಜರಿ ಏರಿಕೆ ಸಾಧ್ಯತೆ

ಇನ್ನು ಎನ್​ಪಿಎಸ್ ಖಾತೆದಾರರ ವಯಸ್ಸು 60 ವರ್ಷ ಮುಟ್ಟಿದ್ದರೆ ಆಗ ಶೇ. 40ರಷ್ಟು ಹಣವನ್ನು ಆ್ಯನುಟಿ ಸ್ಕೀಮ್​ಗೆ ಹೂಡಿಕೆ ಮಾಡಬೇಕಾಗುತ್ತದೆ. ಉಳಿದ ಹಣವನ್ನು ಬೇಕಿದ್ದರೆ ಒಟ್ಟಿಗೆ ವಿತ್​ಡ್ರಾ ಮಾಡಿಕೊಳ್ಳಬಹುದು. ಅಥವಾ 75 ವರ್ಷ ವಯಸ್ಸಿನ ತನಕ ಹಂತ ಹಂತವಾಗಿ ಹಿಂಪಡೆಯಲು ಅವಕಾಶ ಇರುತ್ತದೆ. ಇದ್ಯಾವುದಕ್ಕೂ ತೆರಿಗೆ ಅನ್ವಯ ಆಗುವುದಿಲ್ಲ.

ಒಂದು ವೇಳೆ 60 ವರ್ಷ ವಯಸ್ಸಿನ ಚಂದಾದಾರರ ಎನ್​ಪಿಎಸ್ ಖಾತೆಯಲ್ಲಿ 5 ಲಕ್ಷಕ್ಕಿಂತ ಕಡಿಮೆ ಹಣ ಇದ್ದರೆ ಅವರು ಆ ಇಡೀ ಮೊತ್ತವನ್ನು ಹಿಂಪಡೆಯಲು ಸಾಧ್ಯ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:21 pm, Fri, 24 March 23

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ