
ನವದೆಹಲಿ, ಜೂನ್ 24: ಯಾವುದೇ ಸಂದರ್ಭ ಎದುರಿಸಲು ಸಜ್ಜಾಗಲು ರಕ್ಷಣಾ ಸಚಿವಾಲಯವು (Defence Ministry) ತುರ್ತಾಗಿ ಹಲವು ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ತುರ್ತು ಸಂಗ್ರಹಣೆ ಅಥವಾ ಎಮರ್ಜೆನ್ಸಿ ಪ್ರೊಕ್ಯೂರ್ಮೆಂಟ್ ವ್ಯವಸ್ಥೆ (Emergency Procurement mechanism) ಅಡಿಯಲ್ಲಿ 13 ಒಪ್ಪಂದಗಳನ್ನು ಪೂರ್ಣಗೊಳಿಸಲಾಗಿದೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ಪೂರ್ಣವಾಗಿ ಅಣಿಗೊಳ್ಳುವ ನಿಟ್ಟಿನಲ್ಲಿ (operational ready) ಈ ಹೆಜ್ಜೆ ಇಡಲಾಗಿದೆ. ಈ 13 ಗುತ್ತಿಗೆಗಳ ಒಟ್ಟು ಮೌಲ್ಯವು 1,981.90 ಕೋಟಿ ರೂ ಆಗಿದೆ. ತುರ್ತು ಖರೀದಿಗಾಗೆಂದೇ ಬಜೆಟ್ನಲ್ಲಿ 2,000 ಕೋಟಿ ರೂ ಮೀಸಲಾಗಿರಿಸಲಾಗಿತ್ತು. ಬಹುತೇಕ ಎಲ್ಲಾ ಹಣವನ್ನೂ ವಿನಿಯೋಗಿಸಲಾಗಿದೆ.
ಎಮರ್ಜೆನ್ಸಿ ಪ್ರೊಕ್ಯೂರ್ಮೆಂಟ್ ಮೆಕ್ಯಾನಿಸಂ ಅಡಿಯಲ್ಲಿ ತುರ್ತಾಗಿ ಖರೀದಿಸಲಾಗುತ್ತಿರುವ ಶಸ್ತ್ರಾಗಳಲ್ಲಿ, ಡ್ರೋನ್ಗಳನ್ನು ಗುರುತಿಸಿ ಭೇದಿಸಬಲ್ಲಂತಹ ವಿವಿಧ ವ್ಯವಸ್ಥೆಗಳ ಏಕೀಕೃತ ಪ್ಲಾಟ್ಫಾರ್ಮ್ ಆದ ಐಡಿಡಿಐಎಸ್, ಹಗುರ ತೂಕದ ರಾಡಾರ್ (ಎಲ್ಎಲ್ಎಲ್ಆರ್), ಕಿರು ಶ್ರೇಣಿಯ ಏರ್ ಡಿಫೆನ್ಸ್ ಸಿಸ್ಟಂ ಇತ್ಯಾದಿ ಸೇರಿವೆ.
ಇದನ್ನೂ ಓದಿ: ಮಧ್ಯಪ್ರಾಚ್ಯ ಬಿಕ್ಕಟ್ಟು: ಎಲ್ಪಿಜಿ ನಿಂತುಹೋದರೆ ಏನು ಗತಿ? ಭಾರತದಲ್ಲಿ LPG ಸಂಗ್ರಹ ಎಷ್ಟು ದಿನಗಳಿಗಿದೆ?
ಇದನ್ನೂ ಓದಿ: Hormuz Strait: ಇರಾನ್ಗೆ ಹಾರ್ಮೂಜ್ ಜಲಮಾರ್ಗ ಬಂದ್ ಮಾಡಲು ಆಗುತ್ತಾ? ತಡೆದುಬಿಟ್ಟರೆ ಯಾರಿಗೆಷ್ಟು ಹಾನಿ?
ಪಾಕಿಸ್ತಾನದ ವಿರುದ್ಧ ನಡೆಸಲಾದ ಆಪರೇಷನ್ ಸಿಂದೂರದ ಬಳಿಕ ಕೆಲ ಮಿಲಿಟರಿ ಉಪಕರಣಗಳು ಬಹಳ ಮಹತ್ವದ್ದೆಂಬುದು ಸಾಬೀತಾಗಿದೆ. ಯಾವುದೇ ರೀತಿಯ ಕಾರ್ಯಾಚರಣೆಗೆ ಸದಾ ಸಜ್ಜಾಗಿರಲು ಅಗತ್ಯವಾದ ಮಿಲಿಟರಿ ವಸ್ತುಗಳನ್ನು ಸೇನೆ ಈಗ ಖರೀದಿ ಮಾಡಿದೆ. ಈ ವಿಶೇಷ ವ್ಯವಸ್ಥೆಯಲ್ಲಿ ಖರೀದಿ ಪ್ರಕ್ರಿಯೆಗಳೆಲ್ಲವೂ ವೇಗವಾಗಿ ನಡೆಯುವಂತೆ ನಿಯಮಗಳನ್ನು ಸಡಿಲಿಸಲಾಗಿರುತ್ತದೆ. ನಿರೀಕ್ಷೆಯಂತೆ ಅಂದುಕೊಂಡ ಸಮಯಕ್ಕೆ ಎಲ್ಲಾ ಖರೀದಿ ನಡೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Tue, 24 June 25