
ನವದೆಹಲಿ, ಡಿಸೆಂಬರ್ 2: ಕಂಪನಿ ಕಾನೂನು ಕಾಯ್ದೆಯಡಿ (Companies Act) ಸಣ್ಣ ಕಂಪನಿಗಳ ಮಾನದಂಡದಲ್ಲಿ (Definition of Small Company) ಮತ್ತೆ ಮಾರ್ಪಾಡು ತರಲಾಗಿದೆ. ಸಣ್ಣ ಕಂಪನಿ ಎನಿಸಿಕೊಳ್ಳಲು ಇದ್ದ ಕೆಲ ಮಿತಿಗಳನ್ನು ಈಗ ಹಿಗ್ಗಿಸಲಾಗಿದೆ. ಕಂಪನಿಯ ಫಂಡ್ ಮಿತಿ 10 ಕೋಟಿ ರೂ, ಹಾಗೂ ಟರ್ನೋವರ್ ಮಿತಿ 100 ಕೋಟಿ ರೂಗೆ ಏರಿಸಲಾಗಿದೆ. ಪ್ರಸಕ್ತ ಉದ್ಯಮ ವಾತಾವರಣ ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಮಾಡಲಾಗಿದೆ.
ಈ ಮೊದಲು ಪೇಯ್ಡ್ ಅಪ್ ಕ್ಯಾಪಿಟಲ್ ಅಥವಾ ಷೇರುದಾರರ ಫಂಡ್ಗೆ 4 ಕೋಟಿ ರೂ ಮಿತಿ ಇತ್ತು. ಬ್ಯುಸಿನೆಸ್ ಟರ್ನೋವರ್ ಮಿತಿ 40 ಕೋಟಿ ರೂ ಇತ್ತು. ಈ ಮಿತಿ ದಾಟಿದರೆ ಅದನ್ನು ಸಣ್ಣ ಕಂಪನಿ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಈಗ ಮಿತಿಯನ್ನು ಏರಿಸಲಾಗಿರುವುದರಿಂದ ಸಣ್ಣ ಕಂಪನಿಗಳಿಗೆ ಅನುಕೂಲವಾಗಲಿದೆ.
ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನಿನ್ನೆ ಸೋಮವಾರ (ಡಿ. 1) ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಸಣ್ಣ ಕಂಪನಿಯ ಪೇಯ್ಡ್ ಅಪ್ ಕ್ಯಾಪಿಟಲ್ ಮತ್ತು ಟರ್ನೋವರ್ ಕ್ರಮವಾಗಿ 10 ಕೋಟಿ ರೂ ಹಾಗೂ 100 ಕೋಟಿ ರೂ ಮೀರುವಂತಿಲ್ಲ ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಧಾನಿಗಳ ಆರ್ಥಿಕ ಸಲಹೆಗಾರರ ಮಂಡಳಿಯ ಸದಸ್ಯ ಹಾಗೂ ಆರ್ಥಿಕ ತಜ್ಞರಾದ ಸಂಜೀವ್ ಸಾನ್ಯಾಲ್ ಅವರು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಸರ್ಕಾರದ ಈ ಸುಧಾರಣಾ ಕ್ರಮವು ದೊಡ್ಡ ಸಂಖ್ಯೆಯ ಎಂಎಸ್ಎಂಇಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಸಂಜೀವ್ ಸಾನ್ಯಾಲ್ ಅವರ ಎಕ್ಸ್ ಪೋಸ್ಟ್
The definition of “small” company has been revised up (up to Rs10 cr for paid up capital, and Rs100 cr for turnover). This will allow a larger number of MSMEs to take advantage of various benefits, including lower compliance requirements, for small business. https://t.co/QyvZUEpQmp
— Sanjeev Sanyal (@sanjeevsanyal) December 2, 2025
ಇದನ್ನೂ ಓದಿ: 22 ವರ್ಷದ ಕನ್ನಡಿಗ ಆದರ್ಶ್ ಹಿರೇಮಠ ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್
ದೊಡ್ಡ ಕಂಪನಿಗಳಿಗೆ ನಾಡಿನ ಕಾನೂನು ಕಟ್ಟಳೆಗಳು ಸಂಕೀರ್ಣವಾಗಿವೆ. ಅದಕ್ಕೆ ಹೋಲಿಸಿದರೆ ಸಣ್ಣ ಉದ್ದಿಮೆಗಳಿಗೆ ಕಟ್ಟಳೆಗಳು, ನಿರ್ಬಂಧಗಳು ಕಡಿಮೆ. ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದಲೂ ವಿವಿಧ ಉತ್ತೇಜನಗಳು ಸಿಗುತ್ತವೆ. ಹೀಗಾಗಿ, ಸಣ್ಣ ಕಂಪನಿಯ ಕೆಟಗರಿಯಲ್ಲಿ ಉಳಿಯಲು ಬಹಳ ಸಂಸ್ಥೆಗಳು ಪ್ರಯತ್ನಿಸುವುದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ