Rs 2000 Note: 2000 ರೂಪಾಯಿಯ ಒಂದು ನೋಟು ಮುದ್ರಿಸಲು ಎಷ್ಟು ಖರ್ಚಾಗುತ್ತದೆ ಗೊತ್ತೇ?

|

Updated on: May 20, 2023 | 11:08 AM

2000 ಸಾವಿರ ರೂಪಾಯಿ ನೋಟು ಪ್ರಿಂಟ್ ಮಾಡಲು ಆರ್​ಬಿಐಗೆ ತಗಲುವ ಖರ್ಚು ಎಷ್ಟು ಗೊತ್ತೇ? ಇಲ್ಲಿದೆ ನೋಡಿ ವಿವರ.

Rs 2000 Note: 2000 ರೂಪಾಯಿಯ ಒಂದು ನೋಟು ಮುದ್ರಿಸಲು ಎಷ್ಟು ಖರ್ಚಾಗುತ್ತದೆ ಗೊತ್ತೇ?
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ದೇಶದಲ್ಲಿ ಮತ್ತೊಮ್ಮೆ ನೋಟು ಅಮಾನ್ಯೀಕರಣ ನಡೆದಿದೆ. ಚಲಾವಣೆಯಲ್ಲಿರುವ ಎಲ್ಲಾ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಧರಿಸಿದೆ. ಅಂದರೆ, 2000 ರೂಪಾಯಿ ನೋಟುಗಳನ್ನು ಈಗ ಚಲಾವಣೆಯಿಂದ ಹಿಂಪಡೆಯಲಾಗುತ್ತದೆ. ಆದರೆ, 2000 ರೂಪಾಯಿ ನೋಟುಗಳ ಸಿಂಧುತ್ವವು ಹಾಗೆಯೇ ಉಳಿಯುತ್ತದೆ. ಅಂದರೆ ನಿಮ್ಮ ಬಳಿ 2000 ರೂಪಾಯಿ ನೋಟು ಇದ್ದರೆ ಗಾಬರಿ ಪಡುವ ಅಗತ್ಯವಿಲ್ಲ. ನೀವು ಅವುಗಳನ್ನು ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬಹುದು.

2016 ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಘೋಷಣೆ ಮಾಡಿದ್ದರು. ಈ ನೋಟು ಅಮಾನ್ಯೀಕರಣದ ಉದ್ದೇಶವು ಮನಿ ಲಾಂಡರಿಂಗ್ ಮತ್ತು ಕಪ್ಪುಹಣವನ್ನು ತೊಡೆದುಹಾಕುವುದಾಗಿತ್ತು. ಇದಾದ ಬಳಿಕ ಸರ್ಕಾರ ಹೊಸ 500 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ತಕ್ಷಣಕ್ಕೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು. 2000 ಸಾವಿರ ರೂಪಾಯಿ ನೋಟು ಪ್ರಿಂಟ್ ಮಾಡಲು ಆರ್​ಬಿಐಗೆ ತಗಲುವ ಖರ್ಚು ಎಷ್ಟು ಗೊತ್ತೇ?

ಇದನ್ನೂ ಓದಿ: Rs. 2,000 ನೋಟು ಹಿಂಪಡೆದ ಆರ್​ಬಿಐ; ನಿಮ್ಮಲ್ಲಿ ಆ ನೋಟಿದ್ದರೆ ಏನು ಏನು ಕಥೆ? ಇಲ್ಲಿದೆ ಡೀಟೇಲ್ಸ್

ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ (BRBNMPL) ಪ್ರಕಾರ 2000 ಸಾವಿರ ರೂಪಾಯಿ ಮುಖಬೆಲೆಯ ಒಂದು ನೋಟು ಮುದ್ರಿಸಲು 3.54 ರೂ., 500 ರೂಪಾಯಿ ಮುಖಬೆಲೆಯ ನೋಟು ಮುದ್ರಿಸಲು 3.09 ರೂ. ಖರ್ಚಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿದೆ.

2000 ರೂಪಾಯಿ ಮುಖಬೆಲೆಯ 1000 ನೋಟುಗಳಿಗೆ ಆರ್​ಬಿಐ 3540 ರೂಪಾಯಿ ಪಾವತಿಸಿದೆ ಎಂದು ತಿಳಿಸಿದೆ. 1000 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳಿಗೂ ಅಷ್ಟೇ ಮೊತ್ತವನ್ನು ಖರ್ಚು ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Fri, 19 May 23