ATM ಪಿನ್ ನಂಬರ್ ಕೇವಲ 4 ಅಂಕೆಯಷ್ಟೇ ಇರುತ್ತದೆ ಏಕೆ? ಇದಕ್ಕಿರುವ ಅಸಲಿ ಕಾರಣವೇನು? ಇದಕ್ಕಿದೆ ಭಾರತೀಯ ಲಿಂಕ್​! ಇಂಟರೆಸ್ಟಿಂಗ್​ ಆಗಿದೆ ಓದಿ ನೋಡಿ

|

Updated on: May 19, 2023 | 2:44 PM

Adrian Shepherd Barron: ಅಚ್ಚರಿಯ ಸಂಗತಿಯೆಂದರೆ ಅಡ್ರಿಯನ್ ಶೆಫರ್ಡ್ ಜನಿಸಿದ ಮೇಘಾಲಯದ ಆಸ್ಪತ್ರೆಯಲ್ಲಿ ಬರೋಬ್ಬರಿ 53 ವರ್ಷಗಳ ನಂತರ ಮೊದಲ ಬಾರಿಗೆ ATM ಯಂತ್ರವನ್ನು ಅಳವಡಿಸಲಾಗಿದೆ!

ATM ಪಿನ್ ನಂಬರ್ ಕೇವಲ 4 ಅಂಕೆಯಷ್ಟೇ ಇರುತ್ತದೆ ಏಕೆ? ಇದಕ್ಕಿರುವ ಅಸಲಿ ಕಾರಣವೇನು? ಇದಕ್ಕಿದೆ ಭಾರತೀಯ ಲಿಂಕ್​! ಇಂಟರೆಸ್ಟಿಂಗ್​ ಆಗಿದೆ ಓದಿ ನೋಡಿ
ATM ಪಿನ್ ನಂಬರ್ ಕೇವಲ ನಾಲ್ಕು ಅಂಕೆಯಷ್ಟೇ ಏಕೆ?
Follow us on

ಬ್ಯಾಂಕ್​​ ಗ್ರಾಹಕರು ಈ ಹಿಂದೆ ತಮ್ಮ ಹಣವನ್ನು ಹಿಂತೆಗೆಯಲು ಬ್ಯಾಂಕ್‌ಗೆ ಹೋಗಿ ವಿತ್​​ಡ್ರಾವಲ್​​ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿತ್ತು. ಆ ಫಾರಂ ಕೈಯಲ್ಲಿ ಹಿಡಿದುಕೊಂಡು ಬ್ಯಾಂಕ್ ನೌಕರನಿಗೆ ಕೊಟ್ಟು ಹಣ ಪಡೆಯಲು ಸರದಿ ಸಾಲಿನಲ್ಲಿ ನಿಂತು ಕಾಯಬೇಕಾಗಿತ್ತು. ಆದರೆ ಎಟಿಎಂ ಸೌಲಭ್ಯದಿಂದ ಹಣ ಡ್ರಾ ಮಾಡುವ ಸೌಲಭ್ಯ ಲಭ್ಯವಾಗಿದೆ. ಈಗ ಜನರು ತಮ್ಮ ಮನೆಯ ಸಮೀಪವಿರುವ ಯಾವುದೇ ಬ್ಯಾಂಕ್ ಎಟಿಎಂ ಯಂತ್ರಕ್ಕೆ ಹೋಗಿ ಸುಲಭವಾಗಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಎಟಿಎಂನಿಂದ ಹಣ ತೆಗೆಯಲು ನಾಲ್ಕು ಅಂಕಿಗಳ ಪಿನ್ ಕೋಡ್ ಅಗತ್ಯವಿದೆ. ಎಟಿಎಂ ಯಂತ್ರದಲ್ಲಿ ಎಟಿಎಂ ಕಾರ್ಡ್ ಅನ್ನು ಸೇರಿಸಿದ ನಂತರ, ನಾವು ನಾಲ್ಕು ಅಂಕಿಗಳ ಪಿನ್ ಕೋಡ್ ಅನ್ನು (ATM Pin) ನಮೂದಿಸುವ ಮೂಲಕ ಹಣವನ್ನು ಹಿಂಪಡೆಯಬಹುದು.

ಅಂದಹಾಗೆ ಎಟಿಎಂ ಯಂತ್ರವನ್ನು ಕಂಡುಹಿಡಿದಿದ್ದು ಸ್ಕಾಟಿಷ್ ವಿಜ್ಞಾನಿ ಜಾನ್ ಆಡ್ರಿಯನ್ ಶೆಫರ್ಡ್ ಬ್ಯಾರನ್ ಎಂಬ ಮಹಾನುಭಾವ! ಇಲ್ಲಿ ಮತ್ತೊಂದು ಅಚ್ಚರಿಯ ವಿಷಯವೆಂದರೆ ಹಾಗೆ 1969 ರಲ್ಲಿ ಎಟಿಎಂ ಕಂಡುಹಿಡಿದವರು ಭಾರತದಲ್ಲಿ ಜನಿಸಿದ ವ್ಯಕ್ತಿಯಾಗಿದ್ದರು. ಆಡ್ರಿಯನ್ ಶೆಫರ್ಡ್ ಬ್ಯಾರನ್ (Adrian Shepherd Barron) ಈಶಾನ್ಯ ಭಾರತದ ಶಿಲ್ಲಾಂಗ್ ನಗರದಲ್ಲಿ ಜನಿಸಿದವರು. ಭಾರತದಲ್ಲಿ ಬ್ರಿಟಿಷರ ಆಡಳಿತವಿದ್ದಾಗ ಬ್ಯಾರನ್ ಇಲ್ಲೇ ಜನಿಸಿದರು. (23 June 1925 – 15 May 2010).

ಅವರ ಆವಿಷ್ಕಾರವು ಇಂದು ಬಹುಜನ ಉಪಯೋಗಿ ಯಂತ್ರವಾಗಿದೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಅಡ್ರಿಯನ್ ಶೆಫರ್ಡ್ ಜನಿಸಿದ ಮೇಘಾಲಯದ ಆಸ್ಪತ್ರೆಯಲ್ಲಿ ಬರೋಬ್ಬರಿ 53 ವರ್ಷಗಳ ನಂತರ ಮೊದಲ ಬಾರಿಗೆ ಆ ಯಂತ್ರವನ್ನು ಅಳವಡಿಸಲಾಗಿದೆ! ಈ ವ್ಯಕ್ತಿ ನಮ್ಮ ಭಾರತೀಯ ಎಂಬುದು ವಿಶೇಷ.

ಆದು ಒತ್ತಟ್ಟಿಗಿರಲಿ ಇಲ್ಲಿ ಹೇಳಹೊರಟಿರುವುದು ಎಟಿಎಂ ಪಿನ್ ಬಗ್ಗೆ ಅಲ್ಲವಾ!? ಆರಂಭದಲ್ಲಿ ಎಟಿಎಂ ಪಿನ್ 6 ಸಂಖ್ಯೆಗಳನ್ನು ಹೊಂದಿತ್ತು! ಆದರೆ ಈ ವಿಧಾನದಿಂದಾಗಿ ಹಲವರು ಪಿನ್ ನಂಬರ್ ಅನ್ನು ಮರೆತುಬಿಡುತ್ತಿದ್ದರು. ಈ ಬಗ್ಗೆ ಹಲವರಿಂದ ದೂರು ಬಂದಿದ್ದರಿಂದ ಎಲ್ಲವನ್ನೂ ಸುಲಭವಾಗಿ ನೆನಪಿಟ್ಟುಕೊಳ್ಳಲು ನಾಲ್ಕು ಸಂಖ್ಯೆಗಳಿಗೆ ಇಳಿಸಲಾಯಿತು ಅಷ್ಟೇ! ಆದರೆ ಗಮನಿಸಿ, ಆರು ಸಂಖ್ಯೆಗಳಿದ್ದಾಗ ಅದನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾದರೂ ಈ ಸಂಖ್ಯೆಯನ್ನು ಹ್ಯಾಕ್ ಮಾಡುವುದು ತುಂಬಾ ಕಷ್ಟವಾಗಿತ್ತು.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಅಧಿಕ ಭದ್ರತಾ ದೃಷ್ಟಿಯಿಂದ ಕೆಲ ದೇಶಗಳಲ್ಲಿ 6 ಸಂಖ್ಯೆಯ ಪಿನ್​ ಸಂಖ್ಯೆ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಯುರೋಪ್ ರಾಷ್ಟ್ರಗಳಾದ ಸ್ವಿಟ್ಸಲ್ಯಾಂಡ್, ಜರ್ಮನಿ, ಇಟಲಿ, ಫಿನ್​ಲ್ಯಾಂಡ್ ಮತ್ತಿರ ರಾಷ್ಟ್ರಗಳಲ್ಲಿ ಗ್ರಾಹಕರು ತಮ್ಮ ಇಚ್ಛೆಯನುಸಾರ ​​6 ಸಂಖ್ಯೆಯ ಪಿನ್​ ಸಂಖ್ಯೆಯನ್ನೇ ಬಳಕೆ ಮಾಡಬಹುದಾಗಿದೆ.

ಯಾವುದೇ ಎಟಿಎಂ ನಾಲ್ಕು ಅಂಕಿಗಳ ಪಿನ್‌ಕೋಡ್ 0000, 9999 ರ ನಡುವೆಯೇ ಹಾದುಹೋಗುತ್ತದೆ. ಇದನ್ನು 10,000 ವರೆಗಿನ ವಿವಿಧ ಪಿನ್ ಸಂಖ್ಯೆಗಳೊಂದಿಗೆ ಹೊಂದಿಸಬಹುದು. ಇದರಿಂದ ಶೇ 20 ರಷ್ಟು ಗ್ರಾಹಕರ ಎಟಿಎಂ ಪಿನ್ ಹ್ಯಾಕ್ ಆಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ, ಆರು-ಅಂಕಿಯ ಪಿನ್ ನಾಲ್ಕು ಅಂಕಿಯ ಪಿನ್‌ಗಿಂತ ಹೆಚ್ಚು ಸುರಕ್ಷಿತವಾಗಿದೆ ಎನ್ನಬಹುದು.