
ವಾಷಿಂಗ್ಟನ್, ಸೆಪ್ಟೆಂಬರ್ 29: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಮತ್ತೆ ಮತ್ತೆ ಟ್ಯಾರಿಫ್ ವರಸೆ ತೆಗೆಯುತ್ತಲೇ ಇದ್ದಾರೆ. ಅಮೆರಿಕದ ಹೊರಗೆ ನಿರ್ಮಾಣವಾದ ಯಾವುದೇ ಸಿನಿಮಾಗೂ (movies) ನೂರಕ್ಕೆ ನೂರು ಸುಂಕವನ್ನು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ, ಅಮೆರಿಕದಲ್ಲಿ ನಿರ್ಮಾಣವಾಗದ ಪೀಠೋಪಕರಣಗಳಿಗೂ (Furniture) ಸಾಕಷ್ಟು ಟ್ಯಾರಿಫ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್ನಲ್ಲಿ ಈ ಹೊಸ ಟ್ಯಾರಿಫ್ ಬಾಂಬ್ಗಳನ್ನು ಸಿಡಿಸಿದ್ದಾರೆ.
‘ಅಮೆರಿಕದ ಸಿನಿಮಾ ಬ್ಯುಸಿನೆಸ್ ಅನ್ನು ಇತರ ದೇಶಗಳು ಬಹಳ ಸುಲಭವಾಗಿ ಕದಿಯುತ್ತಿವೆ. ಬಹಳ ಅಸಮರ್ಥ ಗವರ್ನರ್ ಇರುವ ಕ್ಯಾಲಿಫೋರ್ನಿಯಾಗೆ ಇದರಿಂದ ಹೊಡೆತ ಬಿದ್ದಿದೆ. ಬಹಳ ದಿನಗಳಿಂದ ಬಗೆಹರಿಯದೇ ಉಳಿದಿದ್ದ ಈ ಸಮಸ್ಯೆಗೆ ಪರಿಹಾರ ಹುಡುಕಿದ್ದೇನೆ. ಅಮೆರಿಕದ ಹೊರಗೆ ನಿರ್ಮಾಣವಾದ ಯಾವುದೇ ಸಿನಿಮಾ ಮೇಲೂ ಶೇ. 100ರಷ್ಟು ಟ್ಯಾರಿಫ್ ಹಾಕುತ್ತಿದ್ದೇನೆ’ ಎಂದು ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಆರ್ಬಿಐ ಎಂಪಿಸಿ ಸಭೆ; ಅ. 1ಕ್ಕೆ ಪ್ರಮುಖ ನಿರ್ಧಾರಗಳ ಪ್ರಕಟ
ವಿದೇಶಗಳಲ್ಲಿ ಶೂಟಿಂಗ್ ಮಾಡಲಾದ ಹಾಲಿವುಡ್ ಸಿನಿಮಾಗಳಿಗೂ ಈ ಟ್ಯಾರಿಫ್ ಅನ್ವಯ ಆಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಹಾಲಿವುಡ್ ಸದ್ಯ ಸಂಕಷ್ಟದಲ್ಲಿದೆ. ಜನರು ಸಿನಿಮಾ ಮಂದಿರಗಳತ್ತ ಬರುವುದು ಕಡಿಮೆ ಆಗಿದೆ. ಹೀಗಾಗಿ, ಸಿನಿಮಾಗಳ ಬಾಕ್ಸಾಫೀಸ್ ಮಾರಾಟ ಕಡಿಎಮ ಆಗಿದೆ. ಹೆಚ್ಚಿನ ಜನರು ಥಿಯೇಟರ್ಗೆ ಹೋಗಿ ಸಿನಿಮಾ ನೋಡುವುದಕ್ಕಿಂತ ಒಟಿಟಿ, ಟಿವಿಯಲ್ಲೇ ನೋಡುತ್ತಿರುವ ಟ್ರೆಂಡ್ ಇದೆ. ಹೀಗಾಗಿ, ಕ್ಯಾಲಿಫೋರ್ನಿಯಾದಲ್ಲಿರುವ ಹಾಲಿವುಡ್ ಸಿನಿರಂಗ ಸದ್ಯ ಕಳೆಗುಂದಿದ ಸ್ಥಿತಿಯಲ್ಲಿದೆ.
ಅಮೆರಿಕದಲ್ಲಿ ನಿರ್ಮಾಣವಾಗದ ಪೀಠೋಪಕರಣಗಳ ಮೇಲೆ ಸಾಕಷ್ಟು ಟ್ಯಾರಿಫ್ ಹಾಕುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ನಾರ್ತ್ ಕರೋಲಿನಾ ರಾಜ್ಯದಲ್ಲಿ ಫರ್ನಿಚರ್ ಉದ್ಯಮ ಹುಲುಸಾಗಿ ಬೆಳೆದಿದೆ. ವಿಶ್ವದ ಫರ್ನಿಚರ್ ರಾಜಧಾನಿ ಎಂದು ಹೆಸರಾಗಿದೆ. ಸೆಂಚುರಿ ಫರ್ನಿಚರ್, ಇಜೆ ವಿಕ್ಟರ್, ಆಶ್ಲೀ ಫರ್ನಿಚರ್, ಬರ್ನ್ಹಾಟ್ ಇತ್ಯಾದಿ ಪೀಠೋಪಕರಣ ತಯಾರಕ ಸಂಸ್ಥೆಗಳು ಇದೇ ರಾಜ್ಯದಲ್ಲಿ ಇರುವುದು.
ಇದನ್ನೂ ಓದಿ: ಭಾರತಕ್ಕೆ ತನ್ನ ರೇಟಿಂಗ್ ಉಳಿಸಿದ ಮೂಡೀಸ್; ಭಾರತದ ಮೇಲೆ ಅಮೆರಿಕದ ಸುಂಕದ ಪರಿಣಾಮ ಸೀಮಿತ ಎಂದ ಏಜೆನ್ಸಿ
‘ನಾರ್ತ್ ಕರೋಲಿನಾ ರಾಜ್ಯವು ತನ್ನ ಫರ್ನಿಚರ್ ಬ್ಯುಸಿನೆಸ್ ಅನ್ನು ಚೀನಾ ಹಾಗೂ ಇತರ ದೇಶಗಳಿಗೆ ಬಿಟ್ಟುಕೊಟ್ಟಿದೆ. ಈಗ ನಾರ್ತ್ ಕರೋಲಿನಾವನ್ನು ಮತ್ತೆ ಗ್ರೇಟ್ ಆಗಿಸಬೇಕಿದೆ’ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ