AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಟ್ಟಿನ ಬಾಕ್ಸ್ ತಯಾರಿಸುತ್ತಿದ್ದ ಹಸನ್ ಮೊಹಮ್ಮದ್ ಸರ್ದಾರ್ ಇಂದು ಯಶಸ್ವಿ ಉದ್ಯಮಿ, ಇವರು ಬೆಳೆದು ಬಂದ ಹಾದಿ ಹೇಗಿತ್ತು?

ಕೈಯಲ್ಲೇ ರಟ್ಟಿನ ಬಾಕ್ಸ್ ತಯಾರಿಕೆಯಿಂದ ಹಿಡಿದು, ಪೂರ್ಣ ಪ್ರಮಾಣದಲ್ಲಿ ಬಟ್ಟೆ ಪ್ಯಾಕೇಜಿಂಗ್ ಬಾಕ್ಸ್ ಉದ್ಯಮಕ್ಕೆ ಕೈ ಹಾಕಿ ಯಶಸ್ಸು ಕಂಡವರು ಪಶ್ಚಿಮ ಬಂಗಾಳದ ಡೊಮ್ಜೂರಿನ ಹಸನ್ ಮೊಹಮ್ಮದ್ ಸರ್ದಾರ್. ಇವರ ಸಾಧನೆ ಹಾದಿ ಎಲ್ಲರಿಗೂ ಸ್ಫೂರ್ತಿ, ಇವರ ದಿಟ್ಟ ಹೆಜ್ಜೆಗೆ ಟಾಟಾ ಏಸ್ ಜೊತೆಯಾಗಿತ್ತು. ಈ ಇವರ ಯಶಸ್ಸಿನ ಸ್ಟೋರಿ ಇಲ್ಲಿದೆ.

ಸಾಯಿನಂದಾ
|

Updated on:Aug 01, 2025 | 7:59 PM

Share

ಯಶಸ್ಸಿಗೆ ವಿಭಿನ್ನ ಚಿಂತನೆ ಮಾತ್ರವಲ್ಲ, ಛಲ ಮತ್ತು ಉತ್ಸಾಹವೂ ಅತ್ಯಗತ್ಯ. ಈ ಮನೋಭಾವವೇ ಪಶ್ಚಿಮ ಬಂಗಾಳದ ಡೊಮ್ಜೂರ್‌ನ ಉದ್ಯಮಿ ಹಸನ್ ಮೊಹಮ್ಮದ್ ಸರ್ದಾರ್ ಅವರ ಯಶಸ್ಸಿನ ಗುಟ್ಟಾಗಿದೆ. ಹಸನ್ ಮೊಹಮ್ಮದ್ (Hasan Mohammad Sardar) ಪ್ರಾರಂಭದ ದಿನಗಳಲ್ಲಿ ಕೈಯಲ್ಲೇ ರಟ್ಟಿನ ಬಾಕ್ಸ್ ತಯಾರಿಕೆಯಿಂದ ತೊಡಗಿಕೊಂಡರು ಇದು ಪ್ರಾಮಾಣಿಕ ಹಾಗೂ ಜೀವನೋಪಾಯ ಕಂಡುಕೊಳ್ಳುವ ಪ್ರಯತ್ನವಾಗಿತ್ತು. ಕಣ್ಣ ತುಂಬಾ ಕನಸುಗಳನ್ನು ತುಂಬಿಕೊಂಡಿದ್ದ ಹಸನ್ ಅವರು 2004 ರಲ್ಲಿ ಬಟ್ಟೆ ಪ್ಯಾಕೇಜಿಂಗ್ ಬಾಕ್ಸ್ ತಯಾರಿಸುವ ಬಗ್ಗೆ ಗಮನಹರಿಸಿದ್ದು, ಜಿ ಬಿ ಸೆಂಟರ್‌ನ್ನು ಸ್ಥಾಪಿಸಿದರು. ಈ ವೇಳೆಯಲ್ಲಿ ಬಟ್ಟೆ ಪ್ಯಾಕೇಜಿಂಗ್ ಬಾಕ್ಸ್ ಆರ್ಡರ್‌ಗಳು ಹೆಚ್ಚಾದಂತೆ, ವಿಶ್ವಾಸಾರ್ಹ ಲಾಜಿಸ್ಟಿಕ್ಸ್‌ನ ಅಗತ್ಯವೂ ಹೆಚ್ಚಾಯಿತು. ಆ ವೇಳೆಯಲ್ಲಿ ಟಾಟಾ ಏಸ್ ಅವರ ಜೊತೆಯಾಯಿತು.

2006 ರಲ್ಲಿ ಹಣಕಾಸಿನ ಸಹಾಯದಿಂದ, ಹಸನ್ ತಮ್ಮ ಮೊದಲ ಟಾಟಾ ಏಸ್‌ನ್ನು ಖರೀದಿಸಿದರು. ಇದು ಭಾರತದ ಮೊದಲ ಮಿನಿ-ಟ್ರಕ್. ಹಸನ್ ಪಾಲಿಗೆ ಇದೊಂದು ವಾಹನ ಮಾತ್ರವಾಗಿರದೇ, ಇವರ ಉದ್ಯಮಕ್ಕೆ ಮಹತ್ವದ ತಿರುವು ತಂದು ಕೊಡುವ ಭರವಸೆ ನೀಡಿತು. ವಿಶ್ವಾಸಾರ್ಹತೆ ಮತ್ತು ವೆಚ್ಚ-ದಕ್ಷತೆಯೊಂದಿಗೆ, ಏಸ್ ಅವರ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ ಕ್ಲೈಂಟ್ ಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಲು ಸಹಾಯ ಮಾಡಿತು.

ಇಂದು, ಹಸನ್ ಟಾಟಾ ಇಂಟ್ರಾ ಮತ್ತು ಹಲವಾರು ಟಾಟಾ ಎಸಿಇಗಳು ಸೇರಿದಂತೆ 12 ವಾಣಿಜ್ಯ ವಾಹನಗಳನ್ನು ಹೊಂದಿದ್ದಾರೆ. ಸಣ್ಣ ಪ್ಯಾಕೇಜಿಂಗ್ ಕೆಲಸದಿಂದ ಪ್ರಾರಂಭವಾದದ್ದು ಈಗ ಯಶಸ್ವಿ ಉದ್ಯಮವಾಗಿ ಬೆಳೆದಿದೆ. ಅಬ್ ಮೇರಿ ಬಾರಿ” ಕೇವಲ ಘೋಷಣೆಯಲ್ಲ, ಅದು ವಾಸ್ತವ ಎನ್ನುವುದನ್ನು ಪ್ರತಿ ಮೈಲಿಗಲ್ಲಿನೊಂದಿಗೆ, ಹಸನ್ ಸಾಬೀತುಪಡಿಸುತ್ತಾರೆ.

ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ`

Published On - 7:58 pm, Fri, 1 August 25