AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇಲ್ಸ್ ಎಕ್ಸಿಕ್ಯೂಟಿವ್‌ನಿಂದ ಲಾಜಿಸ್ಟಿಕ್ಸ್ ಲೀಡರ್: ಟಾಟಾ ಏಸ್ ಜೊತೆ ಗೌರವ್ ಶರ್ಮಾ ಅವರ ಪಯಣ ಹೇಗಿತ್ತು?

ಟಾಟಾ ಎಸಿಇ ಬೆಂಬಲದೊಂದಿಗೆ ಟ್ರಕ್ಸ್ ಕಾರ್ಗೋ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ಸಂಸ್ಥಾಪಕ ಗೌರವ್ ಶರ್ಮಾ ಅವರು ತಮ್ಮ ದ್ರಷ್ಟಿಕೋನವನ್ನು ಅಭಿವೃದ್ಧಿ ಹೊಂದುತ್ತಿರುವ ಲಾಜಿಸ್ಟಿಕ್ಸ್ ವ್ಯವಹಾರವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಗೌರವ್ ಶರ್ಮಾ ಅವರ ಸಾಧನೆ ಹಾದಿ ಹೇಗಿತ್ತು? ಉದ್ಯಮ ವಿಸ್ತರಣೆಗೆ ಟಾಟಾ ಎಸಿಇ ಹೇಗೆ ನೆರವಾಯಿತು? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಯಿನಂದಾ
|

Updated on:Jul 30, 2025 | 11:11 AM

Share

ವೇಗ ಮತ್ತು ನಿರ್ದೇಶನ ಎರಡೂ ಸರಿಯಾಗಿದ್ದಾಗ ಮಾತ್ರ ಆ ಪ್ರಯಾಣ ಯಶಸ್ವಿಯಾಗುತ್ತದೆ. ಈ ನಂಬಿಕೆಯಲ್ಲಿ ಉದ್ಯಮದತ್ತ ಹೆಜ್ಜೆ ಹಾಕಿದವರು ಗೌರವ್ ಶರ್ಮಾ. ಪ್ರಾರಂಭದ ದಿಣಗಳಲ್ಲಿ ದೆಹಲಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟರ್‌ ಆಗಿ ಕೆಲಸ ಮಾಡಿದ ಗೌರವ್ ಶರ್ಮಾ (Gaurav Sharma) ಅವರ ಪ್ರಾರಂಭದ ದಿನಗಳು ಹೇಗಿತ್ತು ಎನ್ನುವುದನ್ನು ತಿಳಿಸುತ್ತದೆ. ವಿವಿಧ ವ್ಯಾಪಾರ ಮಾಲೀಕರೊಂದಿಗಿನ ಅವರ ಸಂಪರ್ಕವು ಉದ್ಯಮಶೀಲತೆಯತ್ತ ಮುಖ ಮಾಡಲು ಕಾರಣವಾಯಿತು.

2018 ರಲ್ಲಿ, ಗೌರವ್ ಟ್ರಕ್ಸ್ ಕಾರ್ಗೋ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಸಾಂಪ್ರದಾಯಿಕ ಲಾಜಿಸ್ಟಿಕ್ಸ್ ಅನ್ನು ತಂತ್ರಜ್ಞಾನ ಮುಂದುವರೆದ ವಿಧಾನದೊಂದಿಗೆ ಕ್ರಾಂತಿಗೊಳಿಸಿದರು. ಪ್ರಾರಂಭದ ದಿನಗಳಲ್ಲಿ ಅವರ ಈ ಉದ್ಯಮವು ಆರಂಭದಲ್ಲಿ ಇ-ಕಾಮರ್ಸ್ ವಿತರಣೆಗಳಲ್ಲಿ ಬೇರೂರಿತ್ತು. ಕ್ರಮೇಣವಾಗಿ ಅಂದರೆ 2021 ರ ವೇಳೆಗೆ ತಮ್ಮ ಉದ್ಯಮದಲ್ಲಿ ಕೆಲವು ಬದಲಾವಣೆ ತಂದರು. ಈ ಕಾರ್ಯಾಚರಣೆಗಳಲ್ಲಿ ಟಾಟಾ ಎಸಿಇ ಟ್ರಕ್‌ಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ವಿಸ್ತರಿಸಿದರು.

ಕೇವಲ ಎರಡು ಟಾಟಾ ಎಸಿಇಗಳೊಂದಿಗೆ ಪ್ರಾರಂಭವಾದ ಲಾಜಿಸ್ಟಿಕ್ಸ್ ಫ್ಲೀಟ್ ವೇಗವಾಗಿ ವಿಸ್ತರಣೆ ಕಂಡಿತು. ಇಂದು, ಅವರು 280 ವಾಹನಗಳನ್ನು ನಿರ್ವಹಿಸುತ್ತಾರೆ. ಅದಲ್ಲದೇ, 250 ಟಾಟಾ ಎಸಿಇಗಳು ಅವರ ವ್ಯವಹಾರದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ. ಅಮೆಜಾನ್, ಡೆಲ್ಲಿವರಿ, ಎಕಾರ್ಟ್ ಮತ್ತು ಬ್ಲೂ ಡಾರ್ಟ್‌ನಂತಹ ಉನ್ನತ-ಶ್ರೇಣಿಯ ಕಂಪನಿಗಳಿಂದ ವಿಶ್ವಾಸಕ್ಕೆ ಪಾತ್ರವಾಗಲು ಕಾರಣವೇ ಅಬ್ ಮೇರಿ ಬಾರಿ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:06 pm, Tue, 29 July 25