AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs China: ಅಮೆರಿಕಕ್ಕೆ ಫೋನ್ ಸರಬರಾಜು; ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದ ಭಾರತ

India overtakes China for first time in history in exporting smartphones to US: ಕಳೆದ ಕ್ವಾರ್ಟರ್​ನಲ್ಲಿ ಅಮೆರಿಕಕ್ಕೆ ಅತಿಹೆಚ್ಚು ಸ್ಮಾರ್ಟ್​ಫೋನ್ ರಫ್ತು ಮಾಡಿದ ದೇಶವೆನ್ನುವ ದಾಖಲೆ ಭಾರತದ್ದಾಗಿದೆ. ಅಮೆರಿಕಕ್ಕೆ ರಫ್ತಾದ ಫೋನ್​ನಲ್ಲಿ ಮೇಡ್ ಇನ್ ಇಂಡಿಯಾ ಫೋನ್​ಗಳು ಶೇ. 44ರಷ್ಟಿದೆ. ಚೀನಾಗಿಂತಲೂ ಹೆಚ್ಚು ಫೋನ್​ಗಳನ್ನು ಭಾರತ ರಫ್ತು ಮಾಡಿದೆ.

India vs China: ಅಮೆರಿಕಕ್ಕೆ ಫೋನ್ ಸರಬರಾಜು; ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದ ಭಾರತ
ಸ್ಮಾರ್ಟ್​ಫೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 29, 2025 | 9:09 PM

Share

ನವದೆಹಲಿ, ಜುಲೈ 29: ಭಾರತದಿಂದ ಅಮೆರಿಕಕ್ಕೆ ಸ್ಮಾರ್ಟ್​ಫೋನ್​ಗಳು ಸರಬರಾಜಾಗುತ್ತಿರುವುದು ದಿನೇದಿನೇ ಹೆಚ್ಚುತ್ತಿದೆ. ಕೆನಾಲಿಸ್ ಎನ್ನುವ ರಿಸರ್ಚ್ ಕಂಪನಿಯ ವರದಿ ಪ್ರಕಾರ ಅಮೆರಿಕಕ್ಕೆ ಸ್ಮಾರ್ಟ್​ಫೋನ್​ಗಳನ್ನು ಸರಬರಾಜು ಮಾಡುವುದರಲ್ಲಿ ಚೀನಾವನ್ನು (China) ಭಾರತ ಹಿಂದಿಕ್ಕಿದೆ. 2025ರ ಜೂನ್ ಕ್ವಾರ್ಟರ್​ನಲ್ಲಿ ಈ ದಾಖಲೆ ಆಗಿದೆ. ಇದರೊಂದಿಗೆ ಭಾರತವು ಅಮೆರಿಕಕ್ಕೆ ಅತಿಹೆಚ್ಚು ಸ್ಮಾರ್ಟ್​ಫೋನ್ ರಫ್ತು ಮಾಡುವ ದೇಶ ಎನಿಸಿದೆ.

ಆ್ಯಪಲ್ ಕಂಪನಿಯ ಐಫೋನ್​ಗಳು ಭಾರತದಲ್ಲಿ ಹೆಚ್ಚೆಚ್ಚು ತಯಾರಾಗುತ್ತಿದ್ದು, ಅಮೆರಿಕದ ಮಾರುಕಟ್ಟೆಗಳಿಗೆ ಮೇಡ್ ಇನ್ ಇಂಡಿಯಾ ಐಫೋನ್​ಗಳನ್ನು ಆ್ಯಪಲ್ ಒದಗಿಸುತ್ತಿದೆ.

ಇದನ್ನೂ ಓದಿ: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್​ಗಳ ಮ್ಯಾಜಿಕ್

ಕೆನಾಲಿಸ್ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2025ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಅಮೆರಿಕ ಆಮದು ಮಾಡಿಕೊಂಡ ಸ್ಮಾರ್ಟ್​ಫೋನ್​ಗಳಲ್ಲಿ ಭಾರತದ ಪಾಲು ಶೇ. 44ರಷ್ಟಿದೆ. ಇದೇ ಅವಧಿಯಲ್ಲಿ ಮೇಡ್ ಇನ್ ಚೀನಾ ಫೋನ್​ಗಳ ಪಾಲು ಶೇ. 25 ಮಾತ್ರವೇ. ಹಿಂದಿನ ವರ್ಷದ ಇದೇ ಕ್ವಾರ್ಟರ್​ನಲ್ಲಿ ಅಮೆರಿಕಕ್ಕೆ ಸರಬರಾಜಾದ ಫೋನ್​ಗಳಲ್ಲಿ ಚೀನಾ ಪಾಲು ಶೇ. 61 ಇತ್ತು. ಭಾರತದ ಪಾಲು ಶೇ. 13 ಮಾತ್ರವೇ ಇತ್ತು. ಈಗ ಒಂದು ವರ್ಷದ ಅಂತರದಲ್ಲಿ ಗಣನೀಯ ಬದಲಾವಣೆ ಆಗಿದೆ.

ಆ್ಯಪಲ್ ಕಂಪನಿ ಭಾರತದಲ್ಲಿ ಐಫೋನ್ ತಯಾರಿಕೆಯನ್ನು ಗಣನೀಯವಾಗಿ ಹೆಚ್ಚಿಸಿದೆಯಾದರೂ ಅದರ ಹೊಚ್ಚಹೊಸ ಪ್ರೀಮಿಯಮ್ ಮಾಡಲ್ ಐಫೋನ್ 16 ಪ್ರೋ ಫೋನ್​ಗಳನ್ನು ಈಗಲೂ ಚೀನಾದಲ್ಲೇ ತಯಾರಿಸಲಾಗುತ್ತಿದೆ. ಆದರೆ, ಐಫೋನ್-16ನ ಬೇಸ್ ಮಾಡಲ್​ಗಳನ್ನು ಹೆಚ್ಚಾಗಿ ಭಾರತದಲ್ಲಿ ಅಸೆಂಬಲ್ ಮಾಡಿ ರಫ್ತು ಮಾಡಲಾಗುತ್ತಿದೆ. ಅಮೆರಿಕ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವುದು ಈ ಬೇಸ್ ಮಾಡಲ್​ಗಳನ್ನೇ.

ಇದನ್ನೂ ಓದಿ: ಷೇರು vs ಚಿನ್ನ vs ರಿಯಲ್ ಎಸ್ಟೇಟ್; ಕಳೆದ 20 ವರ್ಷದಲ್ಲಿ ಯಾವುದರಿಂದ ಸಿಕ್ಕಿದೆ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ಆ್ಯಪಲ್ ಮಾತ್ರವಲ್ಲ, ಸ್ಯಾಮ್ಸುಂಗ್ ಮತ್ತು ಮೋಟೊರೋಲಾ ಮೊದಲಾದ ಸ್ಮಾರ್ಟ್​​ಫೋನ್ ಕಂಪನಿಗಳೂ ಕೂಡ ಭಾರತದಲ್ಲಿ ತಯಾರಿಕೆ ಹೆಚ್ಚಿಸಿವೆ. ಮೊಟೊರೋಲಾದ ಪ್ರಮುಖ ಮ್ಯಾನುಫ್ಯಾಕ್ಚರಿಂಗ್ ಯೂನಿಟ್​ಗಳು ಇರುವುದು ಚೀನಾದಲ್ಲಿ. ಸ್ಯಾಮ್ಸಂಗ್​ನ ಹೆಚ್ಚಿನ ಫೋನ್​ಗಳು ವಿಯೆಟ್ನಾಂನಲ್ಲಿ ತಯಾರಾಗುತ್ತವೆ. ಇದರ ಮಧ್ಯೆ ಭಾರತದಲ್ಲಿ ಇವು ನಿಧಾನವಾಗಿ ತಮ್ಮ ತಯಾರಿಕೆಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ