ಬೆಂಗಳೂರು, ಸೆಪ್ಟೆಂಬರ್ 26: ಮುಸ್ಲಿಮರ ಪವಿತ್ರ ಈದ್ ಮಿಲಾದ್ ಹಬ್ಬ (Eid Milad festival) ಬಂದಿದೆ. ಇದು ಪ್ರವಾದಿ ಮೊಹಮ್ಮದರ (prophet mohammad) ಜನ್ಮದಿನವಾಗಿದೆ. ಈ ಬಾರಿ ಹಬ್ಬವು ಸೆಪ್ಟೆಂಬರ್ 27 ಮತ್ತು ಸೆಪ್ಟೆಂಬರ್ 28 ರಂದು ಇದೆ. ಸೆಪ್ಟೆಂಬರ್ 16ರಂದು ಶುರುವಾದ ರಬಿ ಉಲ್ ಅವಲ್, 12 ದಿನಗಳ ಕಾಲ ನಡೆಯುತ್ತದೆ. ಸೆಪ್ಟೆಂಬರ್ 27ರಿಂದ 28ರವರೆಗೆ ಈದ್ ಮುಕ್ತಾಯಗೊಳ್ಳುತ್ತದೆ. ದೇಶದಾದ್ಯಂತ ಆಚರಿಸಲಾಗುವ ಈ ಹಬ್ಬಕ್ಕೆ ಸೆಪ್ಟೆಂಬರ್ 28ರಂದು ಸಾರ್ವತ್ರಿಕ ರಜೆ ಇದೆ. ಕೆಲ ರಾಜ್ಯಗಳಲ್ಲಿ ಸೆಪ್ಟೆಂಬರ್ 27, ಮತ್ತಿನ್ನು ಕೆಲ ರಾಜ್ಯಗಳಲ್ಲಿ ಸೆಪ್ಟೆಂಬರ್ 28ರಂದು ಬ್ಯಾಂಕುಗಳಿಗೆ ರಜೆ ಇದೆ. ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಸೆಪ್ಟೆಂಬರ್ 28ರಂದು ಬ್ಯಾಂಕ್ ರಜೆ ಇದೆ.
ಸೆಪ್ಟಂಬರ್ 27: ಜಮ್ಮು ಕಾಶ್ಮೀರ ಮತ್ತು ಕೇರಳದಲ್ಲಿ ಬ್ಯಾಂಕುಗಳಿಗೆ ರಜೆ
ಸೆಪ್ಟೆಂಬರ್ 28: ಕರ್ನಾಟಕ, ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ತಮಿಳುನಾಡು, ಉತ್ತರಾಖಂಡ್, ತೆಲಂಗಾಣ, ಉತ್ತರಪ್ರದೇಶ, ನವದೆಹಲಿ, ಛತ್ತೀಸ್ಗಡ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇದೆ.
ಇದನ್ನೂ ಓದಿ: ನೂರು ಕೋಟಿ ಜನರ ವಿಶ್ವಾಸ ಗಳಿಸಿರುವ ಆಧಾರ್ ಬಗ್ಗೆ… ಮೂಡೀಸ್ ಆರೋಪಗಳನ್ನು ತಳ್ಳಿಹಾಕಿದ ಸರ್ಕಾರ
ಇದಾದ ಬಳಿಕ ಸೆಪ್ಟೆಂಬರ್ 29ರದು ಇಂದ್ರಜಾತ್ರ ಹಬ್ಬದ ಪ್ರಯುಕ್ತ ಸಿಕ್ಕಿಂ, ಜಮ್ಮು, ಶ್ರೀನಗರದಲ್ಲಿ ಬ್ಯಾಂಕುಗಳು ಬಾಗಿಲು ಹಾಕಿರಲಿವೆ. ಈ ಸೆಪ್ಟೆಂಬರ್ ತಿಂಗಳಲ್ಲಿ ಸಾಕಷ್ಟು ರಜೆಗಳು ಸಿಕ್ಕಿವೆ. ಕೃಷ್ಣ ಜನ್ಮಾಷ್ಟಮಿ, ವಿನಾಯಕ ಚತುರ್ಥಿಯಂದು ಸಾರ್ವತ್ರಿಕ ರಜೆಗಳಿದ್ದವು. ಕೆಲವೆಡೆ ನಾರಾಯಣಗುರು ಸಮಾಧಿ ದಿನ, ಮಹಾರಾಜ ಹರಿಸಿಂಗ್ ಜಯಂತಿ ಮೊದಲಾದ ದಿನಗಳಿಗೆ ರಜೆ ನೀಡಲಾಗಿತ್ತು.
ಅಕ್ಟೋಬರ್ ತಿಂಗಳಲ್ಲೂ ಹಬ್ಬದ ಸೀಸನ್ ಇರುವುದರಿಂದ ಹಲವು ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಇದ್ದು ಅಂದು ಸಾರ್ವತ್ರಿಕ ರಜೆ ಇರುತ್ತದೆ.
ಇದನ್ನೂ ಓದಿ: ಗೃಹಸಾಲಗಳ ಬಡ್ಡಿಗೆ ಸಬ್ಸಿಡಿ; ಕೇಂದ್ರದಿಂದ 60,000 ಕೋಟಿ ರೂ ಮೊತ್ತದ ಯೋಜನೆ ಶೀಘ್ರದಲ್ಲೇ?
ಬ್ಯಾಂಕುಗಳಿಗೆ ರಜೆ ಇದ್ದರೂ ಬ್ಯಾಂಕಿಂಗ್ ಚಟುವಟಿಕೆಗಳಿಗೆ ಹೆಚ್ಚಿನ ನಿರ್ಬಂಧ ಇರುವುದಿಲ್ಲ. ಈಗಂತೂ ಯುಪಿಐ ಬಂದ ಬಳಿಕ ಡಿಜಿಟಲ್ ವಹಿವಾಟು ಬಹಳ ಹೆಚ್ಚಾಗಿದೆ. ನಗದು ಹಣ ಪಡೆಯಲು ಎಟಿಎಂ ಸೆಂಟರ್ಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ