ಸಾಮಾಜಿಕ ಮಾಧ್ಯಮ ಕಂಪನಿಯು ಸ್ಪ್ಯಾಮ್ ಖಾತೆಗಳನ್ನು ಹೇಗೆ ಅಳೆಯುತ್ತದೆ ಎಂಬುದರ ಕುರಿತು ದಾಖಲೆಗಳನ್ನು ಕೋರಿ ವಿಷಲ್ಬ್ಲೋವರ್ಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಸಮನ್ಸ್ ನೀಡಿದ ನಂತರ ಒಪ್ಪಂದದ ಮುಕ್ತಾಯದ ಬಗ್ಗೆ ಪತ್ರವನ್ನು ಟ್ವಿಟರ್‌ಗೆ (Twitter Inc)ಗೆ ಕಳುಹಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿನ ನಿಜವಾದ ಸಂಖ್ಯೆಯ ಸ್ಪ್ಯಾಮ್ ಅಥವಾ ಬೋಟ್ ಖಾತೆಗಳ ಬಗ್ಗೆ ಕಂಪನಿಯು ತಾನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿಯಂತ್ರಕರಿಗೆ ತಪ್ಪು ಮಾಹಿತಿ ನೀಡಿ ಅವುಗಳ ದಾರಿ ತಪ್ಪಿಸಿದೆ ಎಂದು ಟ್ವಿಟರ್‌ನ ಭದ್ರತಾ ಮಾಜಿ ಮುಖ್ಯಸ್ಥ ಪೀಟರ್ ಜಾಟ್ಕೊ ಆರೋಪಿಸಿದ್ದರು. ಈ ಸಮಸ್ಯೆಗಳನ್ನು ಮನಗದಂಡ ಮಸ್ಕ್ ಜುಲೈನಲ್ಲಿ ಟ್ವಿಟರ್ ಖರೀದಿಸುವ $44 ಬಿಲಿಯನ್ ಡಾಲರ್ ಒಪ್ಪಂದದಿಂದ ಹಿಂದೆ ಸರಿದಿದ್ದರು.ನ್ಯಾಯಾಲಯಕ್ಕೆ ಸಲ್ಲಿಕೆ ಪ್ರಕಾರ, ಮೈಕ್ರೋಬ್ಲಾಗಿಂಗ್ ಸೈಟ್ ಸ್ಪ್ಯಾಮ್ ಖಾತೆಯನ್ನು ಅಳೆಯುವ ವಿಧಾನದ ಬಗ್ಗೆ ಮಸ್ಕ್, ವಿಸ್ಲ್‌ಬ್ಲೋವರ್ ಮತ್ತು ಟ್ವಿಟರ್‌ನ ಭದ್ರತಾ ಮಾಜಿ ಮುಖ್ಯಸ್ಥ ಪೀಟರ್ ಜಾಟ್ಕೊ ಅವರಿಂದ ಮಾಹಿತಿಯನ್ನು ಕೇಳಿದ್ದಾರೆ.
“ಮುಡ್ಜ್” ಎಂದು ಕರೆಯಲ್ಪಡುವ ಪ್ರಸಿದ್ಧ ಹ್ಯಾಕರ್, ಜಾಟ್ಕೊ ಕಳೆದ ವಾರ ಸಾರ್ವಜನಿಕವಾಗಿ ಪ್ರಕಟವಾದ ದೂರಿನಲ್ಲಿ ಕಂಪನಿಯು ಬಿಗಿ ಭದ್ರತಾ ಯೋಜನೆಯನ್ನು ಹೊಂದಿದೆ ಎಂದು ತಪ್ಪಾಗಿ ಹೇಳಿಕೊಂಡಿದೆ. ಸ್ಪ್ಯಾಮ್ ಕಡಿಮೆ ಮಾಡುವಲ್ಲಿ ಬಳಕೆದಾರರ ಬೆಳವಣಿಗೆಗೆ ಆದ್ಯತೆ ನೀಡಿದೆ ಎಂದು ಹೇಳಿದರು.
ಇದಾದ ನಂತರ ಮಸ್ಕ್ ಅವರ ಕಾನೂನು ತಂಡವು ಜುಲೈ 8 ರ ಮೊದಲು ಟ್ವಿಟರ್‌ಗೆ ತಿಳಿದಿರುವ ಆದರೆ ಅವರಿಗೆ ಬಹಿರಂಗಪಡಿಸದ ಕೆಲವು ಸಂಗತಿಗಳ ಮೇಲಿನ ಆರೋಪಗಳು ಬೆಳಕಿಗೆ ಬಂದಿದ್ದು, ಅದು ಒಪ್ಪಂದವನ್ನು ಕೊನೆಗೊಳಿಸಲು ಹೆಚ್ಚುವರಿ ಮತ್ತು ವಿಭಿನ್ನ ಆಧಾರಗಳನ್ನು ಒದಗಿಸುತ್ತದೆ ಎಂದು ಹೇಳಿದರು.
ಅಕ್ಟೋಬರ್ 17 ರಂದು ಪ್ರಾರಂಭವಾಗಲಿರುವ ಡೆಲವೇರ್ ಕೋರ್ಟ್ ಆಫ್ ಚಾನ್ಸೆರಿಯಲ್ಲಿ ಐದು ದಿನಗಳ ವಿಚಾರಣೆಯ ವೇಳೆಯಲ್ಲಿ ಜಾಟ್ಕೊಗೆ ಈ ಸಮನ್ಸ್ ಬಂದಿದೆ. ಮಸ್ಕ್ ಒಪ್ಪಂದವನ್ನು ಅಂತ್ಯಗೊಳಿಸಲು ಬಯಸುತ್ತಿರುವಾಗ, ಟ್ವಿಟರ್ ಪ್ರತಿ ಷೇರಿಗೆ ಒಪ್ಪಿದ $54.20 ಕ್ಕೆ ಅದನ್ನು ಖರೀದಿಸಲು ಆದೇಶಿಸುವಂತೆ ಚಾನ್ಸೆಲರ್ ಕ್ಯಾಥಲೀನ್ ಮೆಕ್‌ಕಾರ್ಮಿಕ್ ಅವರನ್ನು ಕೇಳುತ್ತಿದೆ.
ಏತನ್ಮಧ್ಯೆ, ಮಂಗಳವಾರ ಮಸ್ಕ್ ಅವರ ನಿಯಂತ್ರಕ ಫೈಲಿಂಗ್ ಪ್ರಕಾರ ಜುಲೈ 8 ರ ಸೂಚನೆಯು ಯಾವುದೇ ಕಾರಣಕ್ಕಾಗಿ ಅಮಾನ್ಯವಾಗಿದೆ ಎಂದು ನಿರ್ಧರಿಸಿದರೆ ಆಗಸ್ಟ್ 29 ರಂದು ಹೆಚ್ಚುವರಿ ಮುಕ್ತಾಯದ ಸೂಚನೆಯನ್ನು ವಿತರಿಸಲಾಯಿತು ಎಂದಿದೆ.ಟ್ವಿಟರ್ ಷೇರುಗಳು ಈಗ $39.02 ನಲ್ಲಿ 2.5 ಶೇಕಡಾ ಕಡಿಮೆಯಾಗಿದೆ.
Published On - 7:31 pm, Tue, 30 August 22