IDBI Bank Privatisation: ಐಡಿಬಿಐ ಬ್ಯಾಂಕ್ ಖಾಸಗೀಕರಣಕ್ಕೆ ಜುಲೈ ಕೊನೆ ಹೊತ್ತಿಗೆ ಆಸಕ್ತಿ ವ್ಯಕ್ತಪಡಿಸುವಿಕೆ ಆಹ್ವಾನ ಸಾಧ್ಯತೆ

| Updated By: Srinivas Mata

Updated on: Jun 11, 2022 | 4:19 PM

ಐಡಿಬಿಐ ಬ್ಯಾಂಕ್ ಖಾಸಗೀಕರಣಕ್ಕೆ ಜುಲೈ ಕೊನೆಗೆ ಆಸಕ್ತಿ ವ್ಯಕ್ತಪಡಿಸುವಿಕೆ ಆಹ್ವಾನಿಸುವ ಸಾಧ್ಯತೆ ಇದೆ ಎಂದು ವರದಿಗಳಾಗಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

IDBI Bank Privatisation: ಐಡಿಬಿಐ ಬ್ಯಾಂಕ್ ಖಾಸಗೀಕರಣಕ್ಕೆ ಜುಲೈ ಕೊನೆ ಹೊತ್ತಿಗೆ ಆಸಕ್ತಿ ವ್ಯಕ್ತಪಡಿಸುವಿಕೆ ಆಹ್ವಾನ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us on

ಕಳೆದ ಕೆಲ ಸಮಯದಿಂದಲೂ ಐಡಿಬಿಐ ಬ್ಯಾಂಕ್​ನ ಖಾಸಗೀಕರಣಕ್ಕಾಗಿ (Privatisation) ಕೇಂದ್ರ ಸರ್ಕಾರದಿಂದ ಪ್ರಯತ್ನ ನಡೆಯುತ್ತಿದೆ. ಅದರ ಹೂಡಿಕೆ ಹಿಂತೆಗೆತಕ್ಕಾಗಿ ತನ್ನ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ಸದ್ಯಕ್ಕೆ ಈ ಬ್ಯಾಂಕ್​ನ ಮಾರಾಟಕ್ಕಾಗಿ ರೋಡ್​ ಶೋ ನಡೆಸಲಾಗುತ್ತದೆ. ಭಾರತದ ಬಂಡವಾಳ ಹಿಂತೆಗೆತ ಗುರಿಯ ವಿಚಾರದಲ್ಲಿ ಇದು ಮತ್ತೊಂದು ಮೈಲುಗಲ್ಲು ಆಗಲಿದೆ. ಸರ್ಕಾರವು ಯಾವ ಪ್ರಮಾಣದ ಷೇರನ್ನು ಮಾರಾಟ ಮಾಡುತ್ತದೆ ಎಂಬುದು ರೋಡ್ ಶೋ ಮುಗಿದ ಮೇಲೆ ತಿಳಿಯುತ್ತದೆ.

ಈ ಬಗ್ಗೆ ಏಪ್ರಿಲ್​ನಲ್ಲಿ ಕೇಂದ್ರ ಹೇಳಿತ್ತು. ಸದ್ಯಕ್ಕೆ ಅಮೆರಿಕದಲ್ಲಿ ರೋಡ್​ ಶೋಗೆ ಸಿದ್ಧತೆಯನ್ನು ಸರ್ಕಾರವು ನಡೆಸುತ್ತಿದೆ ಎಂದು ಪಿಟಿಐ ಜೂನ್​ 10ನೇ ತಾರೀಕು ವರದಿ ಮಾಡಿದೆ. ಈ ರೀತಿಯಾಗಿ ಇನ್ನೂ ಹೂಡಿಕೆದಾರರ ಇಂಥ ಹಲವು ಸಭೆಗಳನ್ನು ನಡೆಸಿದ ನಂತರ ಐಡಿಬಿಐ ಬ್ಯಾಂಕ್​ ಷೇರಿನ ಮಾರಾಟದ ವಗ್ಗೆ ಅಂತಿಮಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಐಡಿಬಿಐ ಸ್ಟ್ರಾಟೆಜಿಕ್ ಮಾರಾಟದ ಬಗ್ಗೆ ಆರ್​ಬಿಐ ಜತೆ ಇನ್ನೂ ಒಂದು ಸುತ್ತಿನ ಚರ್ಚೆ ನಡೆಸಬೇಕಾಗಬಹುದು. ಆಸಕ್ತಿ ವ್ಯಕ್ತಪಡಿಸುವಿಕೆ (EoI) ಜುಲೈ ಕೊನೆಗೆ ಆಹ್ವಾನಿಸಬಹುದು,” ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಮೂಲಗಳ ಪ್ರಕಾರ, ಮೇ ತಿಂಗಳಲ್ಲಿ ಸರ್ಕಾರದಿಂದ ಆಸಕ್ತಿ ವ್ಯಕ್ತಪಡಿಸುವಿಕೆ ಆಹ್ವಾನಿಸಿ, ಪ್ರಸಕ್ತ ಹಣಕಾಸು ವರ್ಷ 2022-23ರಲ್ಲಿ ಪೂರ್ಣಗೊಳಿಸಲು ಬಯಸಿತ್ತು.

ಅಧಿಕಾರಿಗಳು ಹೇಳುವ ಪ್ರಕಾರ, ಸರ್ಕಾರ ಮತ್ತು ಎಲ್ಐಸಿಯಿಂದ ಐಡಿಬಿಐ ಬ್ಯಾಂಕ್ ಷೇರಿನ ಮಾರಾಟ ಎಷ್ಟು ಪ್ರಮಾಣದಲ್ಲಿ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು. ಐಡಿಬಿಐ ಬ್ಯಾಂಕ್ ಮ್ಯಾನೇಜ್​ಮೆಂಟ್​ ಹತೋಟಿಯಷ್ಟನ್ನು ಸ್ಟ್ರಾಟೆಜಿಕ್ ಪ್ರಮಾಣದಲ್ಲಿ ವರ್ಗಾಯಿಸಲಾಗುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: BPCL Privatisation: ಬಿಪಿಸಿಎಲ್ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಟ್ಟ ಸರ್ಕಾರ

Published On - 3:14 pm, Sat, 11 June 22