ಕೋವಿಡ್- 19 ಬಿಕ್ಕಟ್ಟು ಇರುವುದರಿಂದ ತಂತಮ್ಮ ಇಪಿಎಫ್ ಖಾತೆಯಿಂದ ಹಣ ವಿಥ್ ಡ್ರಾ ಮಾಡಿಕೊಳ್ಳುವುದಕ್ಕೆ ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್ಒ) ತನ್ನ ಚಂದಾದಾದರಿಗೆ ಅವಕಾಶ ನೀಡಿದೆ. ಆದರೆ ಈ ಬಗ್ಗೆ ಖಾತೆದಾರರಲ್ಲಿ ಹಲವು ಪ್ರಶ್ನೆಗಳಿವೆ. ಅವುಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಇದರಿಂದ ಹಣದ ತುರ್ತು ಅಗತ್ಯ ಇರುವವರಿಗೆ ಅನುಕೂಲ ಆಗಬಹುದು.
* ಇಪಿಎಫ್ನಿಂದ ಗರಿಷ್ಠ ಎಷ್ಟು ಹಣ ವಿಥ್ ಡ್ರಾ ಮಾಡಬಹುದು?
ಕೋವಿಡ್- 19ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಹಣ ವಿಥ್ ಡ್ರಾ ಮಾಡುವಂತಿದ್ದರೆ ಮೂರು ತಿಂಗಳ ಮೂಲ ವೇತನ (ಬೇಸಿಕ್ ಪೇ) ಮತ್ತು ತುಟ್ಟಿ ಭತ್ಯೆ (ಡಿಎ) ಅಥವಾ ಖಾತೆಯಲ್ಲಿ ಇರುವಂಥ ಒಟ್ಟು ಮೊತ್ತದ ಶೇ 75ರಷ್ಟನ್ನು ತೆಗೆದುಕೊಳ್ಳಬಹುದು. ಒಂದು ಉದಾಹರಣೆ ನೋಡುವುದಾದರೆ ಬ್ಯಾಲೆನ್ಸ್ 3 ಲಕ್ಷ ರೂಪಾಯಿ ಇದೆ. ಬೇಸಿಕ್ ಹಾಗೂ ಡಿಎ ಸೇರಿ ತಿಂಗಳಿಗೆ 25 ಸಾವಿರ ರೂ. ಆಗುತ್ತದೆ. ಆಗ ಮೂರು ತಿಂಗಳ ಬೇಸಿಕ್ ಹಾಗೂ ಡಿಎ ಸೇರಿ 75 ಸಾವಿರ ರೂಪಾಯಿ ಹಾಗೂ ಪಿಎಫ್ ಬಾಕಿಯಲ್ಲಿ ಶೇ 75ರಷ್ಟು ಅಂದರೆ 2.25 ಲಕ್ಷ ರೂ. ಆಗುತ್ತದೆ. ಆದ್ದರಿಂದ ಗರಿಷ್ಠ ಮೊತ್ತ 75 ಸಾವಿರ ರೂ. ಡ್ರಾ ಮಾಡಬಹುದು. ವಿಥ್ ಡ್ರಾ ಮಾಡಬೇಕು ಅಂದುಕೊಂಡಾಗ ಯುನುವರ್ಸಲ್ ಅಕೌಂಟ್ ನಂಬರ್ (ಯುಎಎನ್), ಆಧಾರ್ ಕಾರ್ಡ್ ಸಂಖ್ಯೆ ಮತ್ತು ಚೆಕ್ನ ಸ್ಕ್ಯಾನ್ಡ್ ಕಾಪಿ ಇಟ್ಟುಕೊಂಡಿರಬೇಕು.
ಇಪಿಎಫ್ ವಿಥ್ ಡ್ರಾ ಮಾಡುವ ಹಂತಗಳಾವುವು?
ಹಣಕಾಸಿನ ತುರ್ತು ಎಂಬುದು ಕುತ್ತಿಗೆ ತನಕ ಬಂದಾಗ ಪರ್ಸನಲ್ ಲೋನ್ನಂಥ ದುಬಾರಿ ಸಾಲಗಳಿಗೆ ತೆರಳುವ ಬದಲಿಗೆ ಇಪಿಎಫ್ನಿಂದ ವಿಥ್ಡ್ರಾ ಮಾಡವುದು ಉತ್ತಮ ಆಯ್ಕೆಯಾಗುತ್ತದೆ. ಕೋವಿಡ್ಗೆ ಸಂಬಂಧಿಸಿದ ಹಣಕಾಸು ತುರ್ತಿನ ಸಂದರ್ಭದಲ್ಲಿ ಇಪಿಎಫ್ ಹಣ ವಿಥ್ ಡ್ರಾ ಮಾಡುವ ನಿಯಮಾವಳಿಗಳು ಹೀಗಿವೆ.
ಹಂತ 1: https://unifiedportal-mem.epfindia.gov.in/memberinterface/ ಈ ವೆಬ್ಸೈಟ್ಗೆ ಲಾಗಿನ್ ಆಗಿ.
ಹಂತ 2: ಲಾಗಿನ್ ಆದ ಮೇಲೆ UAN ಸಂಖ್ಯೆ ನಮೂದಿಸಿ, ಅದು ನಿಮ್ಮ ಪೇ ಸ್ಲಿಪ್ನಲ್ಲಿ ಇರುತ್ತದೆ. ಒಂದು ವೇಳೆ ನೋಂದಣಿ ಆಗಿದ್ದಲ್ಲಿ ಪಾಸ್ವರ್ಡ್ ಹಾಕಿ ಮತ್ತು Captchaವನ್ನು ಸಹ ನಮೂದಿಸಿ.
ಹಂತ 3: ಮೇಲ್ಭಾಗದ ಟಾಪ್ನಲ್ಲಿ “ಆನ್ಲೈನ್ ಸರ್ವೀಸ್” ಎಂಬುದು ಇರುತ್ತದೆ. ONLINE CLAIM (FORM 31, 19, 10C ಮತ್ತು 10D). ಅದರ ಮೇಲೆ ಕ್ಲಿಕ್ ಮಾಡಿ.
ಹಂತ 4: ಹೊಸ ವೆಬ್ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ಹೆಸರು, ಜನ್ಮ ದಿನಾಂಕ, ಆಧಾರ್ನ ಕೊನೆಯ ನಾಲ್ಕು ಸಂಖ್ಯೆ ಇರುತ್ತದೆ. ವೆಬ್ ಪೇಜ್ನಲ್ಲಿ ಬ್ಯಾಂಕ್ ಖಾತೆಯನ್ನು ನಮೂದಿಸಬೇಕು. ಒಂದು ಸಲ ಭರ್ತಿ ಮಾಡಿದ ಮೇಲೆ Verify ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ವೆರಿಫೈ ಆದ ಮೇಲೆ “Certificate Of Undertaking” ಕೇಳಿ ಪಾಪ್- ಅಪ್ ಒಂದು ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ.
ಹಂತ 5: ಆ ನಂತರ Proceed for online claim ಮೇಲೆ ಕ್ಲಿಕ್ ಮಾಡಿ.
ಹಂತ 6: ಡ್ರಾಪ್ – ಡೌನ್ ಮೆನುದಲ್ಲಿ EPF advance (Form 31) ಅಂತ ಇದ್ದು, ಅದರ ಮೇಲೆ ಕ್ಲಿಕ್ ಮಾಡಬೇಕು.
ಹಂತ 7: ಹಣ ಡ್ರಾ ಮಾಡುವ ಉದ್ದೇಶ ತಿಳಿಸಬೇಕು ಮತ್ತು ಅಲ್ಲಿ ಕೋವಿಡ್-19 ಎಂಬುದನ್ನು ನಮೂದಿಸಬೇಕು.
ಹಂತ 8: ವಿಥ್ಡ್ರಾ ಮೊತ್ತವನ್ನು ನಮೂದಿಸಬೇಕು ಮತ್ತು ಚೆಕ್ನ ಸ್ಕ್ಯಾನ್ಡ್ ಕಾಪಿಯನ್ನು ಅಪ್ಲೋಡ್ ಮಾಡಬೇಕು.
ಹಂತ 9: ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಕಳುಹಿಸಲಾಗುತ್ತದೆ. ಅದನ್ನು ಭರ್ತಿ ಮಾಡಿ, ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.
ಅರ್ಜಿಯನ್ನು ಹಾಕಿದ ಮೇಲೆ ಅದರ ಸ್ಥಿತಿಗತಿಯನ್ನು ತಿಳಿಯಬಹುದು. ಅದೇ ಪುಟದಲ್ಲಿ ಆನ್ಲೈನ್ ಸರ್ವೀಸ್ ಇದ್ದು, ಅಲ್ಲಿ ಸರ್ವೀಸ್ ಟ್ರಾಕ್ ಮಾಡಬಹುದು. ಟ್ರಾಕ್ ಸರ್ವೀಸಸ್ ಎಂಬುದರ ಮೇಲೆ ಕ್ಲಿಕ್ ಮಾಡಿ, ಅರ್ಜಿಯ ಸ್ಥಿತಿಗತಿ ತಿಳಿಯಬಹುದು. ಅಂದಹಾಗೆ ಬಹಳ ವೇಗವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಏಕೆಂದರೆ, ಕೋವಿಡ್- 19 ಆರ್ಥಿಕ ಬಿಕ್ಕಟ್ಟು ಇರುವುದರಿಂದ ಬೇಗ ವಿಲೇವಾರಿ ಆಗುತ್ತದೆ.
ಇದನ್ನೂ ಓದಿ: EPF account: ಇಪಿಎಫ್ ಖಾತೆ ವರ್ಗಾವಣೆ, ವಿಥ್ಡ್ರಾ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿಗಳಿವು
(Here is the step by step details for money withdraw and amount limit that can be withdrawn from EPFO for Covid- 19 crisis)
Published On - 1:35 pm, Mon, 24 May 21