AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

AMFI data: ಮಾರ್ಚ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು

Mutual Fund industry data in 2026 March: ಫೆಬ್ರುವರಿಗೆ ಹೋಲಿಸಿದರೆ ಮಾರ್ಚ್ ತಿಂಗಳಲ್ಲಿ ಮ್ಯೂಚುವಲ್ ಫಂಡ್​ಗಳಿಗೆ ಬಂದಿರುವ ಹೂಡಿಕೆಗಳು ಶೇ. 10ರಷ್ಟು ಕಡಿಮೆಗೊಂಡಿವೆ. ಮಾರ್ಚ್ ಅಂತ್ಯದಲ್ಲಿ ಮ್ಯುಚುವಲ್ ಫಂಡ್​ಗಳ ಒಟ್ಟಾರೆ ನಿರ್ವಹಿತ ಆಸ್ತಿಯು 73.73 ಲಕ್ಷ ಕೋಟಿ ರೂ ಇದೆ. ಆದರೆ, ಈಕ್ವಿಟಿ ಫಂಡ್​ಗಳಿಗೆ ಹರಿದುಬರುವ ಹೂಡಿಕೆಗಳು ಶೇ. 55ರಷ್ಟು ಹೆಚ್ಚಿದೆ.

AMFI data: ಮಾರ್ಚ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು
ಮ್ಯೂಚುವಲ್ ಫಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 10, 2026 | 2:36 PM

Share

ನವದೆಹಲಿ, ಏಪ್ರಿಲ್ 10: ಕಳೆದ ಒಂದು ಒಂದೂವರೆ ವರ್ಷದಿಂದ ಭಾರತದ ಈಕ್ವಿಟಿ ಮಾರುಕಟ್ಟೆ (stock market) ಹಿನ್ನಡೆಯಲ್ಲಿದ್ದರೂ ಹೂಡಿಕೆ ಆಕರ್ಷಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಮ್ಯೂಚುವಲ್ ಫಂಡ್​ನ ಒಟ್ಟಾರೆ ಅಸೆಟ್​ಗಳು (Mutual Fund AUMs) ಕಡಿಮೆಗೊಂಡರೂ ಈಕ್ವಿಟಿ ಸ್ಕೀಮ್​ಗಳು ಭರ್ಜರಿ ಹೂಡಿಕೆ ಪಡೆದಿವೆ. ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಯಾದ ಎಎಂಎಫ್​ಐ ಇಂದು (ಏ. 10) ಬಿಡುಗಡೆ ಮಾಡಿದ ಮಾರ್ಚ್ ತಿಂಗಳ ದತ್ತಾಂಶದಲ್ಲಿ ಕೆಲ ಕುತೂಹಲಕಾರಿ ಅಂಶಗಳನ್ನು ಗಮನಿಸಬಹುದು.

ಮಾರ್ಚ್ ತಿಂಗಳಲ್ಲಿ ಮ್ಯೂಚುವಲ್ ಫಂಡ್ ಉದ್ಯಮದ ಒಟ್ಟು ಎಯುಎಂ ಅಥವಾ ನಿರ್ವಹಿತ ಆಸ್ತಿ 73.73 ಲಕ್ಷ ಕೋಟಿ ರೂ ಇದೆ. ಫೆಬ್ರುವರಿಯಲ್ಲಿ ಈ ಎಯುಎಂ 82.03 ಲಕ್ಷ ಕೋಟಿ ರೂನಷ್ಟು ಇತ್ತು. ಫೆಬ್​ರುವರಿಗೆ ಹೋಲಿಸಿದರೆ ಮಾರ್ಚ್​ನಲ್ಲಿ ಮ್ಯೂಚುವಲ್ ಫಂಡ್​ನ ಒಟ್ಟು ನಿರ್ವಹಿತ ಆಸ್ತಿಯಲ್ಲಿ ಶೇ. 10ರಷ್ಟು ಇಳಿಕೆಯಾಗಿದೆ.

ಇದನ್ನೂ ಓದಿ: ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು

ಒಟ್ಟಾರೆ ಎಯುಎಂ ಕುಸಿತ ಕಂಡರೂ ಈಕ್ವಿಟಿ ಸ್ಕೀಮ್​ಗಳಿಗೆ ಭರ್ಜರಿ ಒಳಹರಿವು ಬಂದಿದೆ. ಫೆಬ್ರುವರಿಗಿಂತ ಮಾರ್ಚ್​ನಲ್ಲಿ ಶೇ. 55ರಷ್ಟು ಹೂಡಿಕೆ ಜಂಪ್ ಆಗಿದೆ. ಫೆಬ್ರುವರಿಯಲ್ಲಿ ಮ್ಯುಚುವಲ್ ಫಂಡ್​ನ ಈಕ್ವಿಟಿ ಸ್ಕೀಮ್​ಗಳಿಗೆ 25,965 ಕೋಟಿ ರೂ ಹೂಡಿಕೆ ಬಂದಿತ್ತು. ಮಾರ್ಚ್​ನಲ್ಲಿ ಅದು 40,366 ಕೋಟಿ ರೂಗೆ ಏರಿದೆ.

ಈಕ್ವಿಟಿ ಸೆಗ್ಮೆಂಟ್​ಗೆ ಬಂದರೆ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್, ಹೀಗೆ ಎಲ್ಲಾ ಗಾತ್ರದ ಈಕ್ವಿಟಿಗಳಿಗೂ ಒಳಹರಿವು ಏರಿಳಿತದಲ್ಲಿ ಹೆಚ್ಚಿನ ಅಂತರ ಕಾಣುತ್ತಿಲ್ಲ. ಲಾರ್ಜ್ ಕ್ಯಾಪ್ ಫಂಡ್​ಗಳಿಗೆ ಬಂದ ಹೂಡಿಕೆ 2,111.7 ಕೋಟಿ ರೂನಿಂದ 2,997.8 ಕೋಟಿ ರೂಗೆ ಏರಿದೆ. ಮಿಡ್​ಕ್ಯಾಪ್ ಫಂಡ್​ಗಳಿಗೆ ಹೂಡಿಕೆ 4,003 ಕೋಟಿ ರೂನಿಂದ 6,063.5 ಕೋಟಿ ರೂಗೆ ಏರಿದೆ. ಸ್ಮಾಲ್ ಕ್ಯಾಪ್ ಫಂಡ್​ಗಳು ಮಾರ್ಚ್​ನಲ್ಲಿ 6,263.6 ಕೋಟಿ ರೂ ಹೂಡಿಕೆ ಆಕರ್ಷಿಸಿವೆ.

ಇದನ್ನೂ ಓದಿ: ಭಾರತ ಶೇ 7.8, ಅಮೆರಿಕ ಶೇ. 0.5; ಆರ್ಥಿಕ ಬೆಳವಣಿಗೆ ವೇಗದಲ್ಲಿ ಅಜಗಜಾಂತರ

ಮ್ಯುಚುವಲ್ ಫಂಡ್​ಗಳಿಗೆ ಹೂಡಿಕೆಗಳು ಎಸ್​ಐಪಿ ಮೂಲಕ ಹರಿದುಬರುವುದು ಹೆಚ್ಚುತ್ತಿದೆ. ಫೆಬ್ರುವರಿಯಲ್ಲಿ 29,845 ಕೋಟಿ ರೂ ಹೂಡಿಕೆಗಳು ಎಸ್​ಐಪಿ ಮೂಲಕ ಆಗಿದ್ದವು. ಮಾರ್ಚ್​ನಲ್ಲಿ ಅದು 32,087 ಕೋಟಿ ರೂಗೆ ಏರಿದೆ.

ನಿರ್ಗಮನ ಕಂಡ ಫಂಡ್​ಗಳು

ಲಿಕ್ವಿಡ್ ಫಂಡ್​ಗಳಲ್ಲಿ ಹೊರಹರಿವು ಹೆಚ್ಚಿದೆ. ಗೋಲ್ಡ್ ಇಟಿಎಫ್​ಗಳಲ್ಲಿ ಹೂಡಿಕೆ ಕಡಿಮೆಗೊಂಡಿದೆ. ಅಚ್ಚರಿಯ ಸಂಗತಿ ಎಂದರೆ ಹೈಬ್ರಿಡ್ ಫಂಡ್​ಗಳಿಂದ 16,538.5 ಕೋಟಿ ರೂ ಮೊತ್ತದ ಹೂಡಿಕೆಗಳು ನಿರ್ಗಮಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ