New Tax Regime: ಮಧ್ಯಮ ವರ್ಗದ ಹೊರೆ ಕಡಿಮೆ ಮಾಡುವುದೇ ಹೊಸ ತೆರಿಗೆ ಪದ್ಧತಿಯ ಉದ್ದೇಶ; ನಿರ್ಮಲಾ ಸೀತಾರಾಮನ್

|

Updated on: Feb 11, 2023 | 6:31 PM

ಹೊಸ ತೆರಿಗೆ ಪದ್ಧತಿಯಿಂದ ಜನರ ಕೈಯಲ್ಲಿ ಹೆಚ್ಚು ಹಣ ಉಳಿತಾಯವಾಗಲಿದೆ. ಮಧ್ಯಮ ವರ್ಗದವರ ಮೇಲಿನ ತೆರಿಗೆ ಹೊರೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

New Tax Regime: ಮಧ್ಯಮ ವರ್ಗದ ಹೊರೆ ಕಡಿಮೆ ಮಾಡುವುದೇ ಹೊಸ ತೆರಿಗೆ ಪದ್ಧತಿಯ ಉದ್ದೇಶ; ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ನವದೆಹಲಿ: ಮಧ್ಯಮ ವರ್ಗದ ಹೊರೆ ಕಡಿಮೆ ಮಾಡುವುದೇ ಹೊಸ ತೆರಿಗೆ ಪದ್ಧತಿಯ (New Tax Regime) ಉದ್ದೇಶ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ತೆರಿಗೆ ಪದ್ಧತಿಯಿಂದ ಜನರ ಕೈಯಲ್ಲಿ ಹೆಚ್ಚು ಹಣ ಉಳಿತಾಯವಾಗಲಿದೆ. ಮಧ್ಯಮ ವರ್ಗದವರ ಮೇಲಿನ ತೆರಿಗೆ ಹೊರೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಇದಕ್ಕೆ ಪೂರಕವಾಗಿ ಹೊಸ ತೆರಿಗೆ ಪದ್ಧತಿಯನ್ನು ಬಜೆಟ್​ನಲ್ಲಿ ಘೊಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನೇರ ತೆರಿಗೆಯನ್ನು ಸರಳೀಕರಿಸುವುದು ಮತ್ತು ದರಗಳನ್ನು ಇಳಿಕೆ ಮಾಡುವ ಮೂಲಕ ಮಧ್ಯಮವರ್ಗದ ಜನರಿಗೆ ಸರ್ಕಾರ ಭರವಸೆ ನೀಡಿದೆ ಎಂದು ಅವರು ಹೇಳಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 2ರಂದು ಬಜೆಟ್​​ ಮಂಡಿಸಿದ್ದು, ಹೊಸ ತೆರಿಗೆ ಪದ್ಧತಿಯನ್ನು ಘೋಷಿಸಿದ್ದರು.

ಹೊಸ ತೆರಿಗೆ ಪದ್ಧತಿಯೇ ಇನ್ನು ಮುಂದೆ ಡಿಫಾಲ್ಟ್ ತೆರಿಗೆ ಪದ್ಧತಿ ಆಗಿರುತ್ತದೆ. ಹಳೆಯ ತೆರಿಗೆ ಸ್ಲ್ಯಾಬ್​ಗಳನ್ನು 6 ಹಂತಗಳಿಂದ 5 ಹಂತಗಳಿಗೆ ಕಡಿಮೆ ಮಾಡಲಾಗಿದೆ ಎಂದು ಬಜೆಟ್​ನಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: Income Tax Slabs: ಆದಾಯ ತೆರಿಗೆ ಸ್ಲ್ಯಾಬ್​ ಬದಲಾವಣೆ; ಗೊಂದಲವಿದೆಯಾ? ಇಲ್ಲಿದೆ ಹಳೆದು, ಹೊಸದರ ನಡುವಣ ಪೂರ್ಣ ವ್ಯತ್ಯಾಸ

ಹೊಸ ತೆರಿಗೆ ಪದ್ಧತಿಯನ್ನು ಆಯ್ದುಕೊಳ್ಳುವುದರಿಂದ 7 ಲಕ್ಷ ರೂ. ವರೆಗೆ ತೆರಿಗೆ ಇರುವುದಿಲ್ಲ. ಹೀಗಾಗಿ ಸೆಕ್ಷನ್ 80ಸಿ ಹಾಗೂ ಇತರ ಉಳಿತಾಯ ಯೋಜನೆಗಳ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ನೀಡುವ ಅಗತ್ಯ ಇರುವುದಿಲ್ಲ. ಪರಿಣಾಮವಾಗಿ ಕಡ್ಡಾಯ ಉಳಿತಾಯ ಮಾಡಬೇಕಾದ ಅನಿವಾರ್ಯತೆ ಜನರಿಗಿರುವುದಿಲ್ಲ. ಇದರಿಂದ ವೇತನದಾರ ಮಧ್ಯಮರ್ವಗದವರ ಕೈಯಲ್ಲಿ ಹೆಚ್ಚು ಹಣ ಉಳಿಯಲಿದೆ. ಜನರ ವ್ಯಯಿಸುವ ಸಾಮರ್ಥ್ಯವೂ ಹೆಚ್ಚಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ ಎನ್ನಲಾಗಿದೆ.

ಬಜೆಟ್​ ಕುರಿತ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ