Turkey: ಟರ್ಕಿ ಭೂಕಂಪದಿಂದ ಚಿಂತೆಗೊಳಗಾದ ಭಾರತದ ಹತ್ತಿ ಗಿರಣಿ ಉದ್ಯಮಿಗಳು

Indian Yarn Businesses Shocked By Turkey Earthquake: ಟರ್ಕಿ ಭೂಕಂಪದಿಂದಾಗಿ ಭಾರತದ ಹಲವು ಹತ್ತಿ ಗಿರಣಿ ಉದ್ಯಮಿಗಳು ಚಿಂತಿತರಾಗಿದ್ದಾರೆ. ಟರ್ಕಿಗೆ ಹತ್ತಿ ನೂಲು ಮತ್ತು ಫೈಬರ್ ಅನ್ನು ರಫ್ತು ಮಾಡುವ ಭಾರತೀಯ ಕಂಪನಿಗಳಿಗೆ ತಲೆನೋವಾಗಿದೆ.

Turkey: ಟರ್ಕಿ ಭೂಕಂಪದಿಂದ ಚಿಂತೆಗೊಳಗಾದ ಭಾರತದ ಹತ್ತಿ ಗಿರಣಿ ಉದ್ಯಮಿಗಳು
ಟರ್ಕಿ ಭೂಕಂಪ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 12, 2023 | 12:13 PM

ಲಂಡನ್: ಟರ್ಕಿಯ ಭಯಾನಕ ಭೂಕಂಪ (Turkey Earthquake 2023) ಬಹಳ ತೀವ್ರ ಸ್ವರೂಪದಲ್ಲಿ ಸಾವು ನೋವುಗಳನ್ನು ತಂದಿದ್ದು, ಸಾವಿನ ಸಂಖ್ಯೆ ಭಾನುವಾರ ಬೆಳಗ್ಗೆ 30 ಸಾವಿರ ಗಡಿ ತಲುಪಿದೆ. ಕ್ಷಣಕ್ಷಣವೂ ಸಾವಿನ ಸಂಖ್ಯೆ ಏರುವುದು ಕಳೆದ ಕೆಲ ದಿನಗಳಿಂದ ನಿಂತೇ ಇಲ್ಲ. ಭೂಕಂಪದಿಂದ ಕೇವಲ ಸಾವು ಮಾತ್ರವಲ್ಲ ಬಹಳಷ್ಟು ರೀತಿಯಲ್ಲಿ ನೋವು, ಹಾನಿಗಳಾಗಿವೆ. ಟರ್ಕಿ ಭೂಕಂಪದಿಂದಾಗಿ ಭಾರತದ ಹಲವು ಹತ್ತಿ ಗಿರಣಿ ಉದ್ಯಮಿಗಳು (Cotton Yarn Exporters) ಚಿಂತಿತರಾಗಿದ್ದಾರೆ. ಟರ್ಕಿಗೆ ಹತ್ತಿ ನೂಲು (Cotton Yarn) ಮತ್ತು ಫೈಬರ್ ಅನ್ನು ರಫ್ತು ಮಾಡುವ ಭಾರತೀಯ ಕಂಪನಿಗಳಿಗೆ ತಲೆನೋವಾಗಿದೆ.

ಟರ್ಕಿಯ ಗಾಜಿಯಾನ್​ಟೆಪ್, ಕಹ್ರಾಮನ್ಮಾರಸ್ ಮೊದಲಾದ ಪ್ರದೇಶಗಳಲ್ಲಿ ಹಲವು ಜವಳಿ ಕೇಂದ್ರಗಳಿವೆ. ಇಲ್ಲಿಗೆಲ್ಲಾ ಭಾರತದಿಂದ ಹತ್ತಿ ನೂಲುಗಳಿ ಸರಬರಾಜಾಗುತ್ತವೆ. ಆದರೆ, ಟರ್ಕಿಯಲ್ಲಿ ಸಂಭವಿಸಿದ ಮೊದಲೆರಡು ಅತಿಶಕ್ತಿಶಾಲಿ ಭೂಕಂಪಗಳು ಆಗಿದ್ದು ಇವೆರಡು ಪ್ರಾಂತ್ಯಗಳಲ್ಲೇ. ಇಲ್ಲಿ ಬಹಳಷ್ಟು ಹಾನಿಯಾಗಿದೆ. ಇಲ್ಲಿ ಸಾವಿರಾರು ಕಟ್ಟಡಗಳು ನೆಲಸಮಗೊಂಡಿದೆ. ಅದರಲ್ಲಿ ಜವಳಿ ಉದ್ದಿಮೆಗಳ ಕಟ್ಟಡಗಳೂ ಸೇರಿರಬಹುದು ಎನ್ನುವ ಶಂಕೆ ಇದೆ.

ಈ ಪ್ರದೇಶದಿಂದ ನಮಗೆ 18 ಕ್ಲಯಂಟ್​ಗಳಿದ್ದಾರೆ. ಅವರ ಪೈಕಿ ಒಂದನ್ನು ಮಾತ್ರ ನಮಗೆ ಸಂಪರ್ಕಿಸಲು ಸಾಧ್ಯವಾಗಿದೆ. ಅಲ್ಲಿಯ ಫ್ಯಾಕ್ಟರಿ ಕಟ್ಟಡಗಳು ಸುರಕ್ಷಿತವಾಗಿದೆಯಾ ಎಂಬುದು ಇನ್ನೂ ಖಾತ್ರಿ ಆಗಿಲ್ಲ. ನಮ್ಮ ಸಂಪರ್ಕಕ್ಕೆ ಸಿಕ್ಕ ಒಬ್ಬ ಕ್ಲೈಂಟ್ ನೀಡಿದ ಮಾಹಿತಿ ಪ್ರಕಾರ ಭೂಕಂಪದಿಂದ ಅವರ ಅತ್ತೆ ಮಾವ ಇಬ್ಬರೂ ಮೃತಪಟ್ಟಿದ್ದಾರೆ. ತಾನು ಮಾತ್ರ ಫ್ಯಾಕ್ಟರಿಯಿಂದ ಹೊರಗೇ ಕಾಲಿಟ್ಟಿಲ್ಲ. ಕೆಲ ಜವಳಿ ಕಾರ್ಖಾನೆಗಳು ಕೆಳಗುರುಳಿವಿರುವ ಮಾಹಿತಿ ಇದೆ. ಇದರಿಂದ ಭಾರತೀಯ ವ್ಯವಹಾರ ಸಂಸ್ಥೆಗಳಿಗೆ ಪರಿಣಾಮ ಬೀರಬಹುದು ಎಂದು ಶಾರ್ದಾ ಗ್ರೂಪ್ ಸಂಸ್ಥೆಯ ಸಿಇಒ ಅಮಿತ್ ಲಾತ್ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತದ ಮೇಲಿನ ಲೆಕ್ಕಾಚಾರ ಹಾಕಿ ನಡೆಸಿದ ದಾಳಿ: ಹಿಂಡನ್‌ಬರ್ಗ್‌ ವರದಿಗೆ ಅದಾನಿ ಗ್ರೂಪ್‌ನಿಂದ 413 ಪುಟಗಳ ಪ್ರತಿಕ್ರಿಯೆ

ಟರ್ಕಿಯ ಜವಳಿ ಉದ್ಯಮಕ್ಕೆ ಹತ್ತಿ ನೂಲು ಸರಬರಾಜು ಮಾಡುವ ಭಾರತೀಯ ಕಂಪನಿಗಳಿಗೆ ಈಗ ಉಭಯಸಂಕಟದ ಪರಿಸ್ಥಿತಿ ಇದೆ. ಒಂದು ಕಡೆ ತಮ್ಮ ಹೊಟ್ಟೆಪಾಡು ನಡೆಯಲು ಟರ್ಕಿಯಿಂದ ಆರ್ಡರ್​ಗಳು ಸಿಗಬೇಕು. ಇನ್ನೊಂದು ಕಡೆ ಟರ್ಕಿಯ ಜವಳಿ ಕಂಪನಿಗಳಿಗೆ ನೇರವಾಗಿ ಕೇಳಲು ಆಗದು. ಭೂಕಂಪದಿಂದ ಸಂಕಷ್ಟದ ಪರಿಸ್ಥಿತಿ ಇರುವಾಗ ಕಾರ್ಖಾನೆ ನಡೆಸುತ್ತೀರೋ ಇಲ್ಲವೋ ಎಂದು ಕೇಳುವುದು ಮನುಷ್ಯತ್ವವಲ್ಲ ಎಂದು ಭಾರತೀಯ ಉದ್ಯಮಿಗಳು ಒದ್ದಾಡುತ್ತಿದ್ದಾರೆ. ಆದರೆ, ಕೆಲ ಉದ್ಯಮಿಗಳು ಮಾತ್ರ ಮುಂದಿನ ದಿನಗಳಲ್ಲಿ ಟರ್ಕಿಯ ಜವಳಿ ಉದ್ಯಮಗಳಿಂದ ತಮಗೆ ಬ್ಯುಸಿನೆಸ್ ಯಥಾರೀತಿಯಲ್ಲಿ ಮುಂದುವರಿಯುವ ವಿಶ್ವಾಸದಲ್ಲಿದ್ದಾರೆ.

Published On - 12:13 pm, Sun, 12 February 23