ದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್‌ನಂತಹ ದೊಡ್ಡ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಗ್ರಾಹಕರ ಹಣಕಾಸು ಡೇಟಾವನ್ನು ಒಳಗೊಂಡಿರುವ ಬೃಹತ್ ಡೇಟಾ ಸೋರಿಕೆಯನ್ನು ಭದ್ರತಾ ಸಂಶೋಧಕರು ಕಂಡುಹಿಡಿದಿದ್ದಾರೆ. ಭದ್ರತಾ ಸಂಶೋಧಕರ ಪ್ರಕಾರ, ಒಂಬತ್ತು ಮಿಲಿಯನ್ ಕ್ರೆಡಿಟ್ ಕಾರ್ಡ್ ಹೊಂದಿರುವವರ ಆರ್ಥಿಕ ಮಾಹಿತಿ ಸೋರಿಕೆಯಾಗಿದೆ. ಎಐ ಚಾಲಿತ ಸಿಂಗಾಪುರದ ಪ್ರಧಾನ ಕಚೇರಿ ಕ್ಲೌಡ್ಎಸ್ಇಕೆಯ ಬೆದರಿಕೆ ಗುಪ್ತಚರ ತಂಡವು ರಷ್ಯನ್ ಮಾತನಾಡುವ ಡಾರ್ಕ್ ವೆಬ್ನಲ್ಲಿ 1.2 ಮಿಲಿಯನ್ ಕಾರ್ಡ್ಗಳ ಡೇಟಾಗಳನ್ನು ಉಚಿತವಾಗಿ ಜಾಹೀರಾತು ಮಾಡುವ ಬೆದರಿಕೆ ಹಾಕಿರುವುದನ್ನು ಪತ್ತೆಹಚ್ಚಲಾಗಿದೆ. ಹಿಂದಿನ ದಾಖಲೆಗಳಿಗಿಂತ ಭಿನ್ನವಾಗಿ ಈ ಬಾರಿ ಹ್ಯಾಕರ್ಗಳು ಎಸ್ಎಸ್ಎನ್, ಕಾರ್ಡ್ ವಿವರಗಳು ಮತ್ತು ಸಿವಿವಿಯಂತಹ ಸೂಕ್ಷ್ಮ ವೈಯಕ್ತಿಕ ಗುರುತಿಸಬಹುದಾದ ಮಾಹಿತಿ (PII) ಗಳು ಲೀಕ್ ಮಾಡಿದ್ದಾರೆ ಎಂದು ಸಂಶೋಧಕರ ತಂಡ ಬಹಿರಂಗಪಡಿಸಿದೆ.
“ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಫಿಸರ್ವ್ ಸೊಲ್ಯೂಷನ್ಸ್ ಎಲ್ಎಲ್ಸಿ, ಅಮೆರಿಕನ್ ಎಕ್ಸ್ಪ್ರೆಸ್ಗಳ ಕಾರ್ಡುದಾರರ ಡೇಟಾಗಳು ಸೋರಿಕೆಯಾಗಿವೆ. ಸುಮಾರು 5,08,000 ಡೆಬಿಟ್ ಕಾರ್ಡ್ಗಳನ್ನು ಉಲ್ಲಂಘಿಸಲಾಗಿದ್ದು, 414,000 ವೀಸಾ ಪಾವತಿ ಜಾಲದ ದಾಖಲೆಗಳು ಮತ್ತು ಮಾಸ್ಟರ್ ಕಾರ್ಡ್ ನಂತರದ ಸ್ಥಾನದಲ್ಲಿವೆ ಎಂದು ಭದ್ರತಾ ಸಂಶೋಧಕರು ತಿಳಿಸಿದ್ದಾರೆ.
“ಬೈಡನ್ ಕ್ಯಾಶ್ನಂತಹ ಮಾರುಕಟ್ಟೆಗಳಲ್ಲಿ ಹ್ಯಾಕರ್ಗಳು ಕಾರ್ಡ್ ಡೇಟಾವನ್ನು ವ್ಯಾಪಾರ ಮಾಡುತ್ತಾರೆ. ಆಧುನಿಕ ದಿನದ ಭದ್ರತಾ ಕಾರ್ಯವಿಧಾನಗಳು ಈ ಪರಿಸ್ಥಿತಿಯನ್ನು ಕಡಿಮೆ ಮಾಡಲು ಸಮರ್ಥವಾಗಿದ್ದರೂ ಹ್ಯಾಕರ್ಗಳು ಹೊಸ ವಿಧಾನವನ್ನು ಕಂಡುಹುಡುಕುತ್ತಾರೆ” ಎಂದು ಸೈಬರ್ ಬೆದರಿಕೆ ಸಂಶೋಧಕ ಕ್ಲೌಡ್ಎಸ್ಇಕೆ ರಿಷಿಕಾ ದೇಸಾಯಿ ಹೇಳಿದರು. “ಕಾರ್ಡ್ ಕಳ್ಳಸಾಗಣೆ, ಕಾರ್ಡ್ ಕ್ಲೋನಿಂಗ್ ಮತ್ತು ಕಾನೂನುಬಾಹಿರ ಖರೀದಿಗೆ ಅನುಕೂಲವಾಗುವಂತೆ ಅಧಿಕೃತವಲ್ಲದ ವಹಿವಾಟುಗಳಂತಹ ದಾಳಿಗಳನ್ನು ನಡೆಸಲು ಅವರು ಬಹಿರಂಗಪಡಿಸಿದ ಕಾರ್ಡ್ ವಿವರಗಳನ್ನು ಬಳಸಬಹುದು” ಎಂದು ಸಂಶೋಧಕರು ತಿಳಿಸಿದ್ದಾರೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:56 am, Thu, 13 October 22