ಕೇವಲ 31 ಪೈಸೆ ಸಾಲ ಉಳಿಸಿಕೊಂಡಿದ್ದ ಗುಜರಾತ್ ರೈತನಿಗೆ ಸಾಲ ತೀರಿಸಿದ ಪತ್ರ ನೀಡಲು ನಿರಾಕರಿಸಿದ SBI, ಛೀಮಾರಿ ಹಾಕಿದ ಹೈಕೋರ್ಟ್​

State Bank of India: ಒಂದು ಕಡೆ ನಮ್ಮದೇ ಬೆಂಗಳೂರಿನ ಕೆನರಾ ಬ್ಯಾಂಕ್ 1,29,000 ಕೋಟಿ ಸಾಲ ವಸೂಲು ಮಾಡಲಾಗದೆ, ಸುಸ್ತಿದಾರರ ಹೆಸರೂ ಬಹಿರಂಗಪಡಿಸಲು ನಿರಾಕರಿಸಿರುವಾಗ ದೂರದ ಗುಜರಾತಿನಲ್ಲಿ ಕೇವಲ 31 ಪೈಸೆ ಬಾಕಿ ಉಳಿಸಿಕೊಂಡಿರುವ ರೈತನಿಗೆ ಸಾಲ ತೀರುವಳಿ ಪ್ರಮಾಣಪತ್ರ ನೀಡಲು ಎಸ್‌ಬಿಐ ಬ್ಯಾಂಕ್ ನಿರಾಕರಿಸಿದೆ.

ಕೇವಲ 31 ಪೈಸೆ ಸಾಲ ಉಳಿಸಿಕೊಂಡಿದ್ದ ಗುಜರಾತ್ ರೈತನಿಗೆ ಸಾಲ ತೀರಿಸಿದ ಪತ್ರ ನೀಡಲು ನಿರಾಕರಿಸಿದ SBI, ಛೀಮಾರಿ ಹಾಕಿದ ಹೈಕೋರ್ಟ್​
ಸಾಂದರ್ಭಿಕ ಚಿತ್ರ
Follow us
| Updated By: ಸಾಧು ಶ್ರೀನಾಥ್​

Updated on: Oct 12, 2022 | 4:51 PM

ಒಂದು ಕಡೆ ನಮ್ಮದೇ ಬೆಂಗಳೂರಿನ ಕೆನರಾ ಬ್ಯಾಂಕ್ 1,29,000 ಕೋಟಿ ಸಾಲ ವಸೂಲು ಮಾಡಲಾಗದೆ, ಸುಸ್ತಿದಾರರ ಹೆಸರೂ ಬಹಿರಂಗಪಡಿಸಲು ನಿರಾಕರಿಸಿರುವಾಗ ದೂರದ ಗುಜರಾತಿನಲ್ಲಿ ಕೇವಲ 31 ಪೈಸೆ ಬಾಕಿ ಉಳಿಸಿಕೊಂಡಿರುವ ರೈತನಿಗೆ ಸಾಲ ತೀರುವಳಿ ಪ್ರಮಾಣಪತ್ರ ನೀಡಲು ಎಸ್‌ಬಿಐ ಬ್ಯಾಂಕ್ ನಿರಾಕರಿಸಿದೆ. ಪ್ರಕರಣವನ್ನು ಆಲಿಸಿದ ಹೈಕೋರ್ಟ್ ಬ್ಯಾಂಕಿಗೆ ಛೀಮಾರಿ ಹಾಕಿದೆ. ಇದೊಂದು ರೀತಿಯ ಕಿರುಕುಳವೇ ಸರಿ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಭೂಮಿ ಮಾರಾಟದ ವಿಷಯದಲ್ಲಿ ಕೇವಲ 31 ಪೈಸೆ ಬಾಕಿ ಉಳಿಸಿಕೊಂಡಿದ್ದ ಗುಜರಾತ್ ರೈತನಿಗೆ ಸಾಲ ತೀರುವಳಿ ಪ್ರಮಾಣಪತ್ರ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ SBI ) ನಿರಾಕರಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ (Gujarat High Court), ಬ್ಯಾಂಕಿಗೆ ಛೀಮಾರಿ ಹಾಕಿದೆ. ಇದೊಂದು ರೀತಿಯ ಕಿರುಕುಳವೇ ಸರಿ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಪ್ರಕರಣ ತುಸು ಹಳೆಯದ್ದಾಗಿದ್ದು, ನ್ಯಾಯಮೂರ್ತಿ ಭಾರ್ಗವ್ ಕರಿಯಾ (Justice Bhargav Karia) ಅವರಿದ್ದ ಹೈಕೋರ್ಟ್​ ನ್ಯಾಯಪೀಠ ಏಪ್ರಿಲ್​ ನಲ್ಲಿ ಅರ್ಜಿಯ ವಿಚಾರಣೆ ನಡೆಸಿತ್ತು. ಭೂ ವ್ಯವಹಾರವನ್ನು ತೆರವುಗೊಳಿಸಲು ರೈತರಿಗೆ ಸಂಬಂಧಪಟ್ಟ ಬ್ಯಾಂಕಿನಿಂದ ‘ಯಾವುದೆ ರೀತಿಯ ಬಾಕಿ ಇಲ್ಲ’ ಎಂಬ (no-dues certificate) ಪ್ರಮಾಣಪತ್ರದ ಅಗತ್ಯವಿರುತ್ತದೆ. ಆದರೆ ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್ ಎಸ್‌ಬಿಐ, ಸದರಿ ರೈತನಿಗೆ ಅಂತಹ ಪ್ರಮಾಣಪತ್ರ ನೀಡದೆ ತಡೆಹಿಡಿದಿತ್ತು. ಮತ್ತು ನೀಡುವುದಿಲ್ವೆಂದು ಸತಾಯಿಸುತ್ತಿತ್ತು. ಇದನ್ನು ಆಲಿಸಿದ ಹೈಕೋರ್ಟ್​, ಬ್ಯಾಂಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇದು ತುಂಬಾ ಅತಿಯಾಯ್ತು. ರಾಷ್ಟ್ರೀಕೃತ ಬ್ಯಾಂಕ್ ಕೇವಲ 31 ಪೈಸೆಗೆ ನೋ ಡ್ಯೂ ಪ್ರಮಾಣಪತ್ರವನ್ನು ನೀಡುವುದಿಲ್ಲ ಎಂದು ಹೇಳುತ್ತಿರುವುದು ದುರದೃಷ್ಟಕರ ಎಂದು ನ್ಯಾಯಾಧೀಶರು ಹೇಳಿದರು.

ಪ್ರಕರಣದ ವಿವರಗಳ ಪ್ರಕಾರ, ರಾಕೇಶ್ ವರ್ಮಾ ಮತ್ತು ಮನೋಜ್ ವರ್ಮಾ ಎಂಬಿಬ್ಬರು ರೈತಾಪಿ ಅರ್ಜಿದಾರರು 2020 ರಲ್ಲಿ ಅಹಮದಾಬಾದ್ ನಗರದ ಸಮೀಪ ಖೋರಾಜ್ ಗ್ರಾಮದಲ್ಲಿ ರೈತ ಶಾಮ್​ಜಿ ಭಾಯಿ ಮತ್ತು ಅವರ ಕುಟುಂಬದಿಂದ ತುಂಡು ಭೂಮಿಯನ್ನು ಖರೀದಿಸಿದ್ದರು.

ಶ್ಯಾಮ್‌ಜಿ ಭಾಯಿ ಅವರು ಎಸ್‌ಬಿಐನಿಂದ ಪಡೆದಿದ್ದ 3 ಲಕ್ಷ ರೂ.ಗಳ ಬೆಳೆ ಸಾಲವನ್ನು ಮರುಪಾವತಿಸುವ ಮೊದಲು ಅರ್ಜಿದಾರರಿಗೆ ಭೂಮಿಯನ್ನು ಮಾರಾಟ ಮಾಡಿದ್ದರಿಂದ, ಅರ್ಜಿದಾರರು (ಹೊಸ ಜಮೀನಿನ ಮಾಲೀಕರು) ತಮ್ಮ ಹೆಸರನ್ನು ಕಂದಾಯದಲ್ಲಿ ನಮೂದಿಸಲು ಸಾಧ್ಯವಾಗಲಿಲ್ಲ – ಇದು ಪ್ರಕರಣದ ತಿರುಳು.

ರೈತ ಶ್ಯಾಮ್‌ಜಿ ಭಾಯಿ ಅವರು ಸಂಪೂರ್ಣ ಸಾಲ ಮರುಪಾವತಿ ಹಣವನ್ನು ಬ್ಯಾಂಕ್‌ಗೆ ತಲುಪಿಸಿದ್ದರೂ, ಕೆಲವು ಕಾರಣಗಳಿಂದ ಎಸ್‌ಬಿಐ ಸಾಲ ತೀರುವಳಿ ಪ್ರಮಾಣಪತ್ರವನ್ನು ನೀಡಿರಲಿಲ್ಲ. ಇದನ್ನು ಮನಗಂಡು ಹೊಸ ಮಾಲೀಕರು ಎರಡು ವರ್ಷಗಳ ಹಿಂದೆ ಹೈಕೋರ್ಟ್‌ನ ಮೊರೆ ಹೋಗಿದ್ದರು.

ಪ್ಕರಣದ ವಿಚಾರಣೆಯ ವೇಳೆ, ನ್ಯಾಯಮೂರ್ತಿ ಕರಿಯಾ ಅವರು ನ್ಯಾಯಾಲಯದಲ್ಲಿ ನೋ ಡ್ಯೂ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಬ್ಯಾಂಕ್‌ಗೆ ಕೇಳಿದಾಗ, ಎಸ್‌ಬಿಐ ಪರ ವಕೀಲ ಆನಂದ್ ಗೋಗಿಯಾ, “31 ಪೈಸೆ ಬಾಕಿ ಇರುವ ಕಾರಣ ಅದು ಸಾಧ್ಯವಿಲ್ಲ. ಇದು ಕಂಪ್ಯೂಟರ್​​ ವ್ಯವಸ್ಥೆಯಿಂದ (system generated) ರಚಿತವಾಗಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಎಸ್‌ಬಿಐ ಮ್ಯಾನೇಜರ್ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಗೋಗಿಯಾ ಹೇಳಿದಾಗ, ನ್ಯಾಯಾಧೀಶರು ಕೋಪಗೊಂಡರು. ಮತ್ತು ನ್ಯಾಯಾಲಯಕ್ಕೆ ಹಾಜರಾಗುವಂತೆ ವ್ಯವಸ್ಥಾಪಕರಿಗೆ ಸೂಚಿಸುವಂತೆ ವಕೀಲರಿಗೆ ಹೇಳಿದರು.

ಇದಕ್ಕೆ ನ್ಯಾಯಮೂರ್ತಿ ಕರಿಯಾ ಅವರು 50 ಪೈಸೆಗಿಂತ ಕಡಿಮೆ ಇರುವ ಯಾವುದನ್ನಾದರೂ ನಿರ್ಲಕ್ಷಿಸಬೇಕು ಮತ್ತು ಪ್ರಮಾಣಪತ್ರವನ್ನು ನೀಡಬೇಕು. ಏಕೆಂದರೆ ಮೂಲ ಸಾಲಗಾರ ಈಗಾಗಲೇ ಬೆಳೆ ಸಾಲದ ಸಂಪೂರ್ಣ ಬಾಕಿಯನ್ನು ಪಾವತಿಸಿದ್ದಾರೆ.

“ನೀವು ಜನರಿಗೆ ಏಕೆ ಕಿರುಕುಳ ಕೊಡುತ್ತಿದ್ದೀರಿ? ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯು 50 ಪೈಸೆಗಿಂತ ಕಡಿಮೆ ಹಣವನ್ನು ಎಣಿಕೆ ಮಾಡಬಾರದು ಎಂದು ಹೇಳುತ್ತದೆ. ಇದು ನಿಮ್ಮ ಮ್ಯಾನೇಜರ್‌ನಿಂದ ಕಿರುಕುಳವಲ್ಲದೆ ಬೇರೇನೂ ಅಲ್ಲ” ಎಂದು ನ್ಯಾಯಮೂರ್ತಿ ಕರಿಯಾ ಹೇಳಿದರು ಎಂದು tribuneindia ವರದಿ ಮಾಡಿದೆ.

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ