FD Account: ಒಂದೇ ದಿನದಲ್ಲಿ ಎಫ್‌ಡಿ ದರಗಳನ್ನು ಹೆಚ್ಚಿಸಿದ ಈ ನಾಲ್ಕು ಬ್ಯಾಂಕುಗಳು
ರೆಪೋ ದರ ಹೆಚ್ಚಳದ ನಂತರ ನಿಶ್ಚಿತ ಠೇವಣಿಗಳ ಬಡ್ಡಿದರಗಳನ್ನು ಹೆಚ್ಚಿಸುವ ಪ್ರಕ್ರಿಯೆಯು ಮುಂದುವರಿಯುತ್ತಿದ್ದು, ಎಚ್‌ಡಿಎಫ್‌ಸಿ ಸೇರಿದಂತೆ ಒಟ್ಟು ಐದು ಬ್ಯಾಂಕ್‌ಗಳು ಎಫ್‌ಡಿ ದರವನ್ನು ಹೆಚ್ಚಿಸಿದೆ.
Updated on:Oct 13, 2022 | 12:30 PM

Personal finance savings tips Four banks hike FD rates

Personal finance savings tips Four banks hike FD rates

ಖಾಸಗಿ ವಲಯದ ಬ್ಯಾಂಕ್ ಐಡಿಬಿಐ ಬ್ಯಾಂಕ್ ತನ್ನ ಎರಡು ವಿಶೇಷ ಎಫ್‌ಡಿ ಯೋಜನೆ (ಐಡಿಬಿಐ ನಮನ್ ಹಿರಿಯ ನಾಗರಿಕ ಠೇವಣಿ ಮತ್ತು ಅಮೃತ್ ಮಹೋತ್ಸವ ಎಫ್‌ಡಿ ಯೋಜನೆ)ಗಳ ಅವಧಿಯನ್ನು 2022ರ ಅಕ್ಟೋಬರ್ 31ರಿಂದ 2022ರ ಡಿಸೆಂಬರ್ 31ರ ವರೆಗೆ ವಿಸ್ತರಿಸಿದೆ. ಇದಲ್ಲದೇ ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್‌ಡಿಗಳ ಮೇಲಿನ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಐಡಿಬಿಐ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಹೊಸ ಎಫ್‌ಡಿ ಬಡ್ಡಿದರಗಳು 2022ರ ಅಕ್ಟೋಬರ್ 11 ರಿಂದ ಜಾರಿಗೆ ಬರುತ್ತವೆ. ಒಂದು ವರ್ಷದ ಎಫ್‌ಡಿ ಬಡ್ಡಿ ಶೇ 5.60ರಿಂದ ಶೇ 5.70ಕ್ಕೆ ಏರಿಕೆಯಾಗಿದೆ.

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಮಹಾರಾಷ್ಟ್ರ, 2 ಕೋಟಿ ರೂ.ಗಿಂತ ಕಡಿಮೆ ಚಿಲ್ಲರೆ ಎಫ್‌ಡಿ ಯೋಜನೆಗಳ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಹೊಸ ದರಗಳು ಇದೇ ತಿಂಗಳ 10ರಿಂದ ಜಾರಿಗೆ ಬರುತ್ತವೆ. ಬದಲಾವಣೆಯ ನಂತರ ಬ್ಯಾಂಕ್ ಬಹು ಅವಧಿಗಳ ಎಫ್‌ಡಿಗಳ ಮೇಲಿನ ಬಡ್ಡಿ ದರಗಳನ್ನು 85 ಬೇಸಿಕ್ ಪಾಯಿಂಟ್ಸ್ವರೆಗೆ ಹೆಚ್ಚಿಸಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಈಗ 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಎಫ್‌ಡಿಗಳ ಮೇಲೆ ಶೇ 2.75 ರಿಂದ ಶೇ 5.50 ವರೆಗೆ ಬಡ್ಡಿದರವನ್ನು ನೀಡುತ್ತದೆ.

ಖಾಸಗಿ ವಲಯದ ಬ್ಯಾಂಕ್ ಧನಲಕ್ಷ್ಮಿ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಚಿಲ್ಲರೆ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಹೊಸ ದರಗಳು ಅಕ್ಟೋಬರ್ 12 ರಿಂದ ಜಾರಿಗೆ ಬರುತ್ತವೆ. ಬಡ್ಡಿದರದ ಬದಲಾವಣೆಯ ನಂತರ ಧನಲಕ್ಷ್ಮಿ ಬ್ಯಾಂಕ್ 555 ದಿನಗಳಲ್ಲಿ ಪಕ್ವವಾಗುವ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು 40 ಮೂಲಾಂಶಗಳವರೆಗೆ ಹೆಚ್ಚಿಸಿದೆ. ಧನಲಕ್ಷ್ಮಿ ಬ್ಯಾಂಕ್ ಈಗ 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಎಫ್‌ಡಿಗಳ ಮೇಲೆ ಶೇ 3.25 ರಿಂದ ಶೇ 6.10 ವರೆಗೆ ಬಡ್ಡಿಯನ್ನು ನೀಡುತ್ತಿದೆ.
Published On - 12:30 pm, Thu, 13 October 22



















