Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಬಿಐ ಸೇರಿದಂತೆ 9 ಮಿಲಿಯನ್ ಕಾರ್ಡುದಾರರ ಹಣಕಾಸು ಮಾಹಿತಿ ಸೋರಿಕೆ

ಎಸ್​ಬಿಐ ಸೇರಿದಂತೆ ವಿವಿಧ ಬ್ಯಾಂಕ್​ಗಳ 9 ಲಕ್ಷ ಕಾರ್ಡುದಾರರ ಹಣಕಾಸು ಮಾಹಿತಿ ಸೋರಿಕೆಯಾಗಿದೆ. ಈ ಬಗ್ಗೆ ಸೈಬರ್-ಸೆಕ್ಯುರಿಟಿ ಸಂಶೋಧಕರು ಹೇಳಿದ್ದಾರೆ.

ಎಸ್​ಬಿಐ ಸೇರಿದಂತೆ 9 ಮಿಲಿಯನ್ ಕಾರ್ಡುದಾರರ ಹಣಕಾಸು ಮಾಹಿತಿ ಸೋರಿಕೆ
ಎಸ್​ಬಿಐ ಸೇರಿದಂತೆ 9 ಮಿಲಿಯನ್ ಕಾರ್ಡುದಾರರ ಹಣಕಾಸು ಮಾಹಿತಿ ಸೋರಿಕೆ Image Credit source: istock
Follow us
TV9 Web
| Updated By: Rakesh Nayak Manchi

Updated on:Oct 13, 2022 | 10:59 AM

ದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್‌ನಂತಹ ದೊಡ್ಡ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಗ್ರಾಹಕರ ಹಣಕಾಸು ಡೇಟಾವನ್ನು ಒಳಗೊಂಡಿರುವ ಬೃಹತ್ ಡೇಟಾ ಸೋರಿಕೆಯನ್ನು ಭದ್ರತಾ ಸಂಶೋಧಕರು ಕಂಡುಹಿಡಿದಿದ್ದಾರೆ. ಭದ್ರತಾ ಸಂಶೋಧಕರ ಪ್ರಕಾರ, ಒಂಬತ್ತು ಮಿಲಿಯನ್ ಕ್ರೆಡಿಟ್ ಕಾರ್ಡ್ ಹೊಂದಿರುವವರ ಆರ್ಥಿಕ ಮಾಹಿತಿ ಸೋರಿಕೆಯಾಗಿದೆ. ಎಐ ಚಾಲಿತ ಸಿಂಗಾಪುರದ ಪ್ರಧಾನ ಕಚೇರಿ ಕ್ಲೌಡ್ಎಸ್ಇಕೆಯ ಬೆದರಿಕೆ ಗುಪ್ತಚರ ತಂಡವು ರಷ್ಯನ್ ಮಾತನಾಡುವ ಡಾರ್ಕ್ ವೆಬ್​ನಲ್ಲಿ 1.2 ಮಿಲಿಯನ್ ಕಾರ್ಡ್​​ಗಳ ಡೇಟಾಗಳನ್ನು ಉಚಿತವಾಗಿ ಜಾಹೀರಾತು ಮಾಡುವ ಬೆದರಿಕೆ ಹಾಕಿರುವುದನ್ನು ಪತ್ತೆಹಚ್ಚಲಾಗಿದೆ. ಹಿಂದಿನ ದಾಖಲೆಗಳಿಗಿಂತ ಭಿನ್ನವಾಗಿ ಈ ಬಾರಿ ಹ್ಯಾಕರ್​ಗಳು ಎಸ್ಎಸ್ಎನ್, ಕಾರ್ಡ್ ವಿವರಗಳು ಮತ್ತು ಸಿವಿವಿಯಂತಹ ಸೂಕ್ಷ್ಮ ವೈಯಕ್ತಿಕ ಗುರುತಿಸಬಹುದಾದ ಮಾಹಿತಿ (PII) ಗಳು ಲೀಕ್ ಮಾಡಿದ್ದಾರೆ ಎಂದು ಸಂಶೋಧಕರ ತಂಡ ಬಹಿರಂಗಪಡಿಸಿದೆ.

“ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಫಿಸರ್ವ್ ಸೊಲ್ಯೂಷನ್ಸ್ ಎಲ್ಎಲ್​ಸಿ, ಅಮೆರಿಕನ್ ಎಕ್ಸ್ಪ್ರೆಸ್​ಗಳ ಕಾರ್ಡುದಾರರ ಡೇಟಾಗಳು ಸೋರಿಕೆಯಾಗಿವೆ. ಸುಮಾರು 5,08,000 ಡೆಬಿಟ್ ಕಾರ್ಡ್​ಗಳನ್ನು ಉಲ್ಲಂಘಿಸಲಾಗಿದ್ದು, 414,000 ವೀಸಾ ಪಾವತಿ ಜಾಲದ ದಾಖಲೆಗಳು ಮತ್ತು ಮಾಸ್ಟರ್ ಕಾರ್ಡ್​​ ನಂತರದ ಸ್ಥಾನದಲ್ಲಿವೆ ಎಂದು ಭದ್ರತಾ ಸಂಶೋಧಕರು ತಿಳಿಸಿದ್ದಾರೆ.

“ಬೈಡನ್ ಕ್ಯಾಶ್​ನಂತಹ ಮಾರುಕಟ್ಟೆಗಳಲ್ಲಿ ಹ್ಯಾಕರ್​ಗಳು ಕಾರ್ಡ್ ಡೇಟಾವನ್ನು ವ್ಯಾಪಾರ ಮಾಡುತ್ತಾರೆ. ಆಧುನಿಕ ದಿನದ ಭದ್ರತಾ ಕಾರ್ಯವಿಧಾನಗಳು ಈ ಪರಿಸ್ಥಿತಿಯನ್ನು ಕಡಿಮೆ ಮಾಡಲು ಸಮರ್ಥವಾಗಿದ್ದರೂ ಹ್ಯಾಕರ್​​ಗಳು ಹೊಸ ವಿಧಾನವನ್ನು ಕಂಡುಹುಡುಕುತ್ತಾರೆ” ಎಂದು ಸೈಬರ್ ಬೆದರಿಕೆ ಸಂಶೋಧಕ ಕ್ಲೌಡ್ಎಸ್ಇಕೆ ರಿಷಿಕಾ ದೇಸಾಯಿ ಹೇಳಿದರು. “ಕಾರ್ಡ್ ಕಳ್ಳಸಾಗಣೆ, ಕಾರ್ಡ್ ಕ್ಲೋನಿಂಗ್ ಮತ್ತು ಕಾನೂನುಬಾಹಿರ ಖರೀದಿಗೆ ಅನುಕೂಲವಾಗುವಂತೆ ಅಧಿಕೃತವಲ್ಲದ ವಹಿವಾಟುಗಳಂತಹ ದಾಳಿಗಳನ್ನು ನಡೆಸಲು ಅವರು ಬಹಿರಂಗಪಡಿಸಿದ ಕಾರ್ಡ್ ವಿವರಗಳನ್ನು ಬಳಸಬಹುದು” ಎಂದು ಸಂಶೋಧಕರು ತಿಳಿಸಿದ್ದಾರೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:56 am, Thu, 13 October 22

ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?